ಮುಖಪುಟ /ನಮ್ಮದೇವಾಲಯಗಳು   

ಅನಂತಶಯನಗುಡಿ ಗ್ರಾಮದ ಅನಂತಪದ್ಮನಾಭ ದೇವಾಲಯ

*ಚಿತ್ರ ಲೇಖನ : ಪಿ. ಸತ್ಯನಾರಾಯಣ

ಅನಂತಶಯನಗುಡಿ ಗ್ರಾಮದ ಅನಂತಪದ್ಮನಾಭ, Anantha Padmanagha, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕ ದೇವಾಲಯಗಳು.ಕನ್ನಡದ ಹೆಮ್ಮೆಯ ಸಾಮ್ರಾಜ್ಯ ಹಂಪಿಯನ್ನಾಳಿದ ವಿಜಯನಗರದ ಅರಸು ಶ್ರೀಕೃಷ್ಣದೇವರಾಯರು ನಿರ್ಮಿಸಿದ್ದ ಅನಂತಶಯನಗುಡಿ ಗ್ರಾಮದ ಅನಂತಪದ್ಮನಾಭ ದೇವಸ್ಥಾನದ ಶಿಥಿಲವಾಗಿತ್ತು. ಕುಸಿದಿತ್ತು.

ಬಿದ್ದ ಪುರಾತನ ಕಲ್ಲಿನ ಅವಶೇಷಗಳನ್ನು ಮರು ಜೋಡಣೆ ಮಾಡುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಲವು ತಿಂಗಳುಗಳ ಕಾಲ ಶ್ರಮಪಟ್ಟು ಕಾಮಗಾರಿ ಪೂರ್ಣಗೊಳಿಸಿದೆ.

ಅನಂತಶಯನಗುಡಿ ಗ್ರಾಮದ ಅನಂತಪದ್ಮನಾಭ, Anantha Padmanagha, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕ ದೇವಾಲಯಗಳು.ಅನಂತಪದ್ಮನಾಭ ದೇವರಿಗಾಗಿ ಕ್ರಿಸ್ತಶಕ 1524ರಲ್ಲಿ ಶ್ರೀಕೃಷ್ಣದೇವರಾಯ ಈ ದೇವಾಲಯ ನಿರ್ಮಿಸಿದ್ದಾಗಿ ಶಾಸನಗಳಿಂದ ತಿಳಿದು ಬರುತ್ತದೆ. ಗತಿಸಿದ ತನ್ನ ಮಗ ತಿರುಮಲರಾಯನಿಗಾಗಿ ಶಾಲೆ, ತಿರುಮಲ ಮಹರಾಯಪುರ ಎಂಬ ಅಭಿಮಾನದಿಂದ ಕರೆಯಲ್ಪಡುವ ಪ್ರಸ್ತುತ ಅನಂತಶಯನಗುಡಿ ಗ್ರಾಮವನ್ನು ನಿರ್ಮಿಸಿ ವೈಖಾನಸ ಅಗಮ ಶಾಸ್ತ್ರವನ್ನು ಬಲ್ಲ ಅರ್ಚಕರ ಸಮೂಹವನ್ನು ನೈಮಿತ್ತಿಕ ವೈಖಾಸದ ಪೂಜೆಗಳಿಗಾಗಿ ರಾಜನು ಈ ಗ್ರಾಮವನ್ನು ನಿರ್ಮಿಸಿರುವುದಾಗಿ ಶಾಸನ ಸಾರುತ್ತದೆ.

ಉತ್ತರಾಭಿಮುಖವಾಗಿರುವ ಈ ಬೃಹತ್ ದೇವಾಲಯವು ಆಯತಾಕಾರದ ಗರ್ಭಗೃಹವನ್ನು ಹೊಂದಿದ್ದು, ಮೂಲಮೂರ್ತಿಯ ದರ್ಶನಕ್ಕಾಗಿ ಮೂರು ದ್ವಾರಗಳಿವೆ. ಗರ್ಭಗೃಹದಲ್ಲಿರುವ ಬಹುಅನಂತಶಯನಗುಡಿ ಗ್ರಾಮದ ಅನಂತಪದ್ಮನಾಭ, Anantha Padmanagha, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕ ದೇವಾಲಯಗಳು. ದೊಡ್ಡದಾಗಿರುವ ಪೀಠವು ಶಯನ ರೂಪಿ ವಿಷ್ಣವಿನ ಮೂರ್ತಿಗಾಗಿ ಮಾಡಿರುವುದು ಕಂಡು ಬರುತ್ತದೆ. ಗರ್ಭಗೃಹದಲ್ಲಿರುವ ಶಾಲ ಶಿಖರವು 10.ಮೀಟರ್ ಎತ್ತರವಾಗಿದ್ದು, ವಿಜಯನಗರ ವಾಸ್ತು ಶಿಲ್ಪಗಳ ಕಟ್ಟಡ ವಿನ್ಯಾಸದ ಪರಿಣಿತಿಯನ್ನು ಸೂಚಿಸುವ ವಾಸ್ತು ವಿನ್ಯಾಸವಾಗಿದೆ. ದೇಗುಲದ ಪೂರ್ವಭಾಗದಲ್ಲಿ ಒಂದು ಉತ್ಸವ ಮಂಟಪವು ಮತ್ತು ನೈಋತ್ಯ ಭಾಗದಲ್ಲಿ ಸರಸ್ವತಿ ದೇವಿಯ ದೇವಾಲಯವಿದೆ. ಮುಖ್ಯ ದೇಗುಲದ ಗರ್ಭಗೃಹದ ಉತ್ತರ ದಿಕ್ಕಿನಲ್ಲಿ ನೀಳ್ ಸ್ತಂಭಗಳ ಸಭಾಮಂಟಪವಿದೆ.

ಈ ಸುಂದರವಾದ ದೇಗುಲಕ್ಕೆ ಹೆಚ್ಚಿನ ರಕ್ಷಣೆ ಒದಗಿಸಬೇಕಿಗಿದ್ದುಈ ಬೃಹತ್ ದೇಗುಲವನ್ನು ಸರಕಾರ ಕಾಪಾಡಿಕೊಂಡು ಹೋಗಬೇಕಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು