ಮುಖಪುಟ /ನಮ್ಮದೇವಾಲಯಗಳು   

ಆವನಿಯ ಶ್ರೀರಾಮಲಿಂಗೇಶ್ವರ ದೇವಾಲಯ

ಶ್ರೀರಾಮ, ಲಕ್ಷ್ಮಣ, ಭರತ, ಶತ್ರುಘ್ನರು ಸ್ಥಾಪಿಸಿದ ಲಿಂಗವಿರುವ ಪುಣ್ಯಭೂಮಿ

*ಟಿ.ಎಂ. ಸತೀಶ್

 Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  Avani Ramalingeshwara Temple, Lakshmana Lingeshwara, ರಾಮಲಿಂಗೇಶ್ವರ ದೇವಸ್ಥಾನ, ಆವನಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಪುಣ್ಯಕ್ಷೇತ್ರ  ಆವನಿ. ರಾಮಾಯಣ ಬರೆದ ಆದಿ ಕವಿ ವಾಲ್ಮೀಕಿ ಮಹರ್ಷಿಗಳ ತಪೋಭೂಮಿ. ಅವಣ್ಯ, ಅವಣೆ ಎಂದೂ ಕರೆಸಿಕೊಂಡಿದ್ದ  ಈ ಊರು ಕಾಲಾನಂತರದಲ್ಲಿ ಆವನಿಯಾಯಿತು ಎನ್ನಲಾಗುತ್ತದೆ. ಆದರೆ ಹಿಂದೆ ಈ ಕ್ಷೇತ್ರದಲ್ಲಿ ರುದ್ರಭಟ್ಟಾರಕರು ಅಹವನೀಯ ಯಾಗ ಮಾಡಿದ ಕಾರಣ ಈ ಕ್ಷೇತ್ರ ಆಹವನೀಯ ಕ್ಷೇತ್ರ ಎಂದು ಕರೆಸಿಕೊಂಡಿತ್ತು. ಕಾಲಾನಂತರದಲ್ಲಿ ಜನರ ಬಾಯಲ್ಲಿ ಆವನಿಯಾಯಿತು ಎಂದೂ ಹೇಳುತ್ತಾರೆ.

ಪ್ರಸ್ತುತ ಆವನಿ ಎಂದು ಕರೆಸಿಕೊಳ್ಳುವ ಈ ಕ್ಷೇತ್ರದಲ್ಲಿ ತ್ರೇತಾಯುಗಪುರುಷ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನೇ ಪಾಪ ಪ್ರಾಯಶ್ಚಿತ್ತಾರ್ಥವಾಗಿ ಸ್ವತಃ ಪ್ರತಿಷ್ಠಾಪಿಸಿ, ಪೂಜಿಸಿದ ಬೃಹತ್ ರಾಮೇಶ್ವರ ಲಿಂಗವಿದೆ.  ಶ್ರೀರಾಮ ಇಲ್ಲಿ  ಲಿಂಗ ಪ್ರತಿಷ್ಠಾಪಿಸಿ ಪರಮೇಶ್ವರನ ಪೂಜಿಸಿದ ಬಗ್ಗೆ ಸ್ಥಳ ಪುರಾಣವೂ ಇದೆ.

ಪುರಾತನ ಕಾಲದಲ್ಲಿ ಈ ಪ್ರದೇಶಕ್ಕೆ ಆವಂತಿಕಾ ಪುರ ಎಂಬ ಹೆಸರಿತ್ತಂತೆ. ಇಲ್ಲಿ ವಾಲ್ಮೀಕಿ ಮಹರ್ಷಿಗಳು ಆಶ್ರಮ ನಿರ್ಮಿಸಿ, ತಪವನ್ನಾಚರಿಸುತ್ತಿದ್ದರಂತೆ. ಅಗ್ನಿ ಪರೀಕ್ಷೆ ಮಾಡಿ ಸ್ವೀಕರಿಸಿದ ಸೀತೆಯ ಬಗ್ಗೆ  Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  Avani Ramalingeshwara Temple, Lakshmana Lingeshwara, ರಾಮಲಿಂಗೇಶ್ವರ ದೇವಸ್ಥಾನ, ಆವನಿ ಪುರಜನನೊಬ್ಬ ಅನುಮಾನದ ಮಾತನಾಡಿದ ಎಂದು ಮತ್ತೆ ರಾಮನಿಂದ ಪರಿತ್ಯಕ್ತೆಯಾದ ಸೀತಾಮಾತೆ ಇಲ್ಲಿ ಬಂದು ವಾಲ್ಮೀಕಿ ಮಹರ್ಷಿಗಳ ಆಶ್ರಯ ಪಡೆದರು. ಗರ್ಭಿಣಿಯಾಗಿದ್ದ ಸೀತಾಮಾತೆ ಆಶ್ರಮದಲ್ಲಿ ಲವನಿಗೆ ಜನ್ಮನೀಡಿದಳು. ಒಮ್ಮೆ ಲವ ಕಾಣದೇ ಇದ್ದಾಗ, ಕುಶ ಅಂದರೆ ದರ್ಭೆಯಿಂದ ಲವನ ಪ್ರತಿರೂಪ ಸೃಷ್ಟಿಸಿದಳಂತೆ. ಅವನೇ ಕುಶ. ಈ ಇಬ್ಬರು ಅವಳಿ ಸೋದರರು ಶ್ರೀರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದರಂತೆ. ಅಶ್ವರಕ್ಷಣೆಗೆ ಬಂದ ಎಲ್ಲರೂ ಲವಕುಶರೊಂದಿಗೆ ಯುದ್ಧಮಾಡಿ ಸೋತಾಗ, ಸ್ವತಃ ಶ್ರೀರಾಮನೇ ಯುದ್ಧಕ್ಕೆ ಬಂದನಂತೆ. ವಾಲ್ಮೀಕಿ ಮಹರ್ಷಿಗಳ ಆಶ್ರಮ ಪ್ರವೇಶಿಸಿ ಅವರೊಂದಿಗೆ ಏಕಾಂತದಲ್ಲಿ ಮಾತನಾಡಿ, ನಿಜ ವೃತ್ತಾಂತ ತಿಳಿದಾಗ ಮತ್ತೆ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಲೆತ್ನಿಸಿದಾಗ, ಭೂಮಿಯ ಮಗಳಾದ ಸೀತೆಯನ್ನು ಭೂಮಿತಾಯಿ (ಭೂಮಿ ಇಬ್ಭಾಗವಾಗಿ) ತನ್ನ ಒಡಲಲ್ಲಿ ಸೇರಿಸಿಕೊಂಡಳಂತೆ.

ಆಗ ಶ್ರೀರಾಮಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಆಗ ವಾಲ್ಮೀಕಿ ಮಹರ್ಷಿಗಳ ಉಪದೇಶದಂತೆ ಪ್ರಾಯಶ್ಚಿತ್ತಾರ್ಥವಾಗಿ ಇಲ್ಲಿ ಬೃಹತ್ ಲಿಂಗ ಸ್ಥಾಪಿಸಿ, ಪೂಜಿಸಿದನಂತೆ.  ಅದುವೇ ರಾಮೇಶ್ವರ ಲಿಂಗ. ನಂತರ ಲಕ್ಷ್ಮಣ, ಭರತ, ಶತೃಘ್ನ, ಸುಗ್ರೀವ ಸೇರಿದಂತೆ ಶ್ರೀರಾಮ ಪರಿವಾರದವರೆಲ್ಲರೂ ಇಲ್ಲಿ 108 ಲಿಂಗ ಪ್ರತಿಷ್ಠಾಪಿಸಿ, ಪೂಜಿಸಿದರಂತೆ. ಈಗಲೂ ದೇವಾಲಯ ಆವರಣದಲ್ಲಿ ಲಕ್ಷ್ಮಣ ಲಿಂಗೇಶ್ವರ, ಭರತೇಶ್ವರ, ಶತ್ರುಘ್ನ ಲಿಂಗೇಶ್ವರ, ಸುಗ್ರೀವೇಶ್ವರ ಗುಡಿಗಳಿವೆ.

 Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  Avani Ramalingeshwara Temple, Lakshmana Lingeshwara, ರಾಮಲಿಂಗೇಶ್ವರ ದೇವಸ್ಥಾನ, ಆವನಿ ಇಲ್ಲಿರುವ ರಾಮಲಿಂಗೇಶ್ವರ ದೇವಾಲಯ ತಳ ವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಹಾಗೂ ಮಾನಸ್ತಂಭವನ್ನು ಹೋಲುವ ಅಲಂಕೃತ ಸ್ತಂಭಗಳನ್ನು ಒಳಗೊಂಡಿದೆ. ದೇವಾಲಯದ ಅಧಿಷ್ಠಾನದಲ್ಲಿ ಕೀರ್ತಿಮುಖ ಮತ್ತು ಸಿಂಹಗಳನ್ನು ಕೆತ್ತಲಾಗಿದೆ. ಬಿತ್ತಿಯಲ್ಲಿ ಉಬ್ಬು ಕಂಬಗಳಿದ್ದು, ಮೇಲ್ಭಾಗ ದ್ರಾವಿಡ ವಿಮಾನ ಹೊಂದಿದೆ. ಗರ್ಭಗೃಹದಲ್ಲಿ ಕೃಷ್ಣ ಶಿಲೆಯ ಸುಂದರ ಲಿಂಗವಿದೆ. ದೇವಾಲಯಕ್ಕೆ ದ್ರಾವಿಡಶೈಲಿಯ ಸುಂದರ ಗೋಪುರವಿದೆ.

ಇನ್ನು ಲಕ್ಷ್ಮಣ ಲಿಂಗೇಶ್ವರ ದೇವಾಲಯ ಕ್ರಿ.ಶ. 10ನೇ ಶತಮಾನಕ್ಕೆ ಸೇರಿದ್ದು, ಇಡೀ ದೇವಾಲಯ ಸಮುಚ್ಛಯದಲ್ಲೇ ಅತ್ಯಂತ ಸುಂದರ ಹಾಗೂ ಅಲಂಕೃತ ದೇವಾಲಯವಾಗಿದೆ. ನವರಂಗದಲ್ಲಿ ನಾಲ್ಕು  Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  Avani Ramalingeshwara Temple, Lakshmana Lingeshwara, ರಾಮಲಿಂಗೇಶ್ವರ ದೇವಸ್ಥಾನ, ಆವನಿ ಸ್ತಂಭಗಳಿದ್ದು, ಸುಂದರ ಶಿಲ್ಪಗಳಿಂದ  ಕೂಡಿವೆ. ನವರಂಗದ ಒಳ ಛಾವಣಿಯ ಒಳಮೈಯಲ್ಲಿ ಅಷ್ಟ ದಿಕ್ಪಾಲಕರ ಕೆತ್ತನೆ ಇದ್ದು, ಮಧ್ಯದಲ್ಲಿ ಉಮಾ ಮಹೇಶ್ವರರ ಉಬ್ಬು ಶಿಲ್ಪವಿದೆ. ಗರ್ಭಗೃಹದಲ್ಲಿರುವ ಲಕ್ಷ್ಮಣ ಲಿಂಗೇಶ್ವರ ಇಡೀ ಆವರಣದಲ್ಲಿರುವ ಎಲ್ಲ ಲಿಂಗಗಳಿಗಿಂತಲೂ ದೊಡ್ಡದಾಗಿದೆ. ದೇವಾಲಯದ ದಕ್ಷಿಣ ಮಹಾದ್ವಾರ ಚೋಳರ ಕಾಲಕ್ಕೆ ಸೇರಿದ್ದು ಎಂದು ತಜ್ಞರು ಹೇಳುತ್ತಾರೆ. ದೇವಾಲಯದ ಅದಿಷ್ಟಾನದಲ್ಲಿ ಐದು ಅಲಂಕಾರಿಕ ಪಟ್ಟಿಕೆಗಳಿದ್ದು, ಅವುಗಳಲ್ಲಿ ಆನೆ, ಸಿಂಹ, ಯಾಳಿ ಮತ್ತು ಮಕರ ತಲೆಗಳಿಂದ ಕೂಡಿದ ಶಿಲ್ಪಗಳಿವೆ. ದೇವಾಲಯದ ಗೋಡೆಗಳಲ್ಲಿ ಯಕ್ಷರ, ದ್ವಾರಪಾಲಕರ, ಭೈರವ, ಭೈರವಿ, ವಿಷ್ಣು ಹಾಗೂ ಗಣೇಶನ ಶಿಲ್ಪಗಳಿವೆ. ಮೇಲಿನ ದೊಡ್ಡ ಪಟ್ಟಿಕೆಗಳಲ್ಲಿ ಯಕ್ಷ,  ಶಿವ,  ದುರ್ಗಿ,  ಗಣೇಶ,  ಭೈರವ,  ಭೈರವಿ,  ವಿಷ್ಣು ಮುಂತಾದ ಶಿಲ್ಪಗಳಿವೆ. ಮಧ್ಯೆ ಮಧ್ಯೆ ಸುಂದರವಾದ ಅರೆಗಂಬಗಳ ಉಬ್ಬುಶಿಲ್ಪಗಳಿವೆ. ಇದರ ಮಧ್ಯೆ ಮಧ್ಯೆ ಮಹಿಷಾಸುರಮರ್ದಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಿಸಿವೆ. ದೇವಾಲಯದ  ಶಿಖರ ವಿಜಯನಗರ ಕಾಲದ್ದಾಗಿದೆ.

ಇನ್ನು ಶತೃಘ್ನಲಿಂಗೇಶ್ವರ ದೇವಾಲಯ ಕೂಡ ಅದಿಷ್ಟಾನದಲ್ಲಿ ಮೂರು ಅಲಂಕೃತ ಪಟ್ಟಿಕೆ ಹೊಂದಿದ್ದು, ಅದರಲ್ಲಿ ಸಾಧಾರಣ ಸಿಂಹದ ಉಬ್ಬು ಶಿಲ್ಪವಿದೆ. ಕೃಷ್ಣ ಶಿಲೆಯ ಬಾಗಿಲವಾಡದಲ್ಲಿ ಗಜಲಕ್ಷ್ಮೀ ವಿಗ್ರಹವಿದೆ. ಕಂಬಗಳು ಹದಿನಾರು ಮೂಲೆಗಳನ್ನು ಹೊಂದಿದ್ದು, ಅಲಂಕರಣ ಬೋದಿಗೆಗಳಿವೆ.

 Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  Avani Ramalingeshwara Temple, Lakshmana Lingeshwara, ರಾಮಲಿಂಗೇಶ್ವರ ದೇವಸ್ಥಾನ, ಆವನಿ ಇನ್ನು ದೇವಾಲಯದ ವಿಶಾಲ ಪ್ರಾಕಾರದಲ್ಲಿ ಕಾಲಭೈರವೇಶ್ವರ, ಗಣಪತಿ, ನವಗ್ರಹ, ಪಾರ್ವತಿ, ಕಾಮಾಕ್ಷಿ ಮೊದಲಾದ ವಿಗ್ರಹಗಳಿವೆ. ದೇವಾಲಯವನ್ನು ವಿಜಯನಗರದರಸರ, ನೊಳಂಬರ, ಗಂಗರ ಕಾಲದಲ್ಲಿ ಅಭಿವೃದ್ಧಿಪಡಿಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ.

ರಾಮಾಯಣದ ನಂಟು ಹೊಂದಿರುವ ಈ ಪ್ರದೇಶದಲ್ಲಿ ವಾಲ್ಮೀಕಿಯ ಕುಟೀರ, ವಾಲ್ಮಿಕಿಯೊಂದಿಗೆ ಶ್ರೀರಾಮ ಏಕಾಂತದಲ್ಲಿ ಮಾತನಾಡಿದ ಸ್ಥಳದಲ್ಲಿ ಏಕಾಂತರಾಮಸ್ವಾಮಿ ಸನ್ನಿಧಿ, ಸೀತೆಯ ಬಾಯಾರಿಕೆ ತೀರಿಸಲು ಲಕ್ಷ್ಮಣ ಧನುಸ್ಸಿಗೆ ಬಾಣ ಹೂಡಿ ತರಿಸಿದ ಜಲ ಇರುವ ಧನುಷ್ಕೋಟಿ, ಲವಕುಶರು ಮಲಗುತ್ತಿದ್ದ ತೊಟ್ಟಿಲು, ಸೀತೆಯು ಬಳಸಿದ ಅಡುಗೆಪಾತ್ರೆ, ಸ್ನಾನ ಮಾಡುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ ಇದೆ.

ಮುಳುಬಾಗಿಲನಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಹೋಗಲು ಬೆಂಗಳೂರು, ಕೋಲಾರ, ಮುಳಬಾಗಿಲಿನಿಂದ ನೇರ ಬಸ್ ಸೌಕರ್ಯವಿದೆ.

 ಮುಖಪುಟ /ನಮ್ಮದೇವಾಲಯಗಳು