ಮುಖಪುಟ /ನಮ್ಮದೇವಾಲಯಗಳು   

ಬನವಾಸಿಯ ಮಧುಕೇಶ್ವರ ದೇವಾಲಯ

ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, ಬನವಾಸಿ, kannadaratna.com, banavasi, ourtemples.inಮಧುಕೇಶ್ವರನ ನೆಲೆವೀಡು ಬನವಾಸಿ, ಶಿರಸಿ ತಾಲ್ಲೂಕಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರ. ಐತಿಹಾಸಿಕವಾಗಿಯೂ ಶ್ರೀಮಂತವಾದ ಈ ನಾಡು ಆದಿ ಕವಿ ಪಂಪನ ನೆಚ್ಚಿನ ತಾಣ. ಪಂಪ ಬನವಾಸಿಯನ್ನು ವರ್ಣಿಸುವಾಗ, ಅಂಕುಶದಿಂದ ತಿವಿದರೂ ಬನವಾಸಿಯನ್ನು ನೆನೆಯುತ್ತೇನೆ ಎನ್ನುತ್ತಾನೆ. ಮರಿದುಂಬಿಯಾಗಿ ಇಲ್ಲ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ ಎನ್ನುತ್ತಾನೆ.

ಇಂಥ ರಮಣೀಯವಾದ ಪುಣ್ಯತಾಣ ಬನವಾಸಿ ವರದಾ ನದಿಯ ದಂಡೆಯ ಮೇಲಿದೆ. ಪೌರಾಣಿಕವಾಗಿಯೂ ಈ ಕ್ಷೇತ್ರ ಮಹತ್ವದ್ದಾಗಿದೆ. ದ್ವಾಪರಯುಗದಲ್ಲಿ ಪಾಂಡವರು ತಮ್ಮ ವನವಾಸದ ಕೆಲ ಸಮಯವನ್ನು ಇಲ್ಲಿ ಕಳೆದರೆಂದೂ, ಧರ್ಮರಾಜನ ಅಶ್ವಮೇಧ ಯಾಗ ಮಾಡಿದಾಗ, ಕುದುರೆಯ ಕಾವಲಿಗೆ ಹೊರಟ ಸಹದೇವ  ವನವಾಸಿಕಾ ಅರ್ಥಾತ್  ಬನವಾಸಿಯನ್ನು ಗೆದ್ದನೆಂದೂ ಉಲ್ಲೇಖವಿದೆ. ಪುರಾಣ ಕಾಲದಲ್ಲಿ ವೈಜಯಂತಿ ಎಂದು ಕರೆಸಿಕೊಂಡಿದ್ದ ಈ ನಗರದಲ್ಲಿ ಮಧು-ಕೈಟಭರೆಂಬ ರಾಕ್ಷಸರಿದ್ದರಂತೆ. ವಿಷ್ಣು ಇವರನ್ನು ಕೊಂದನಂತೆ. ಶಿವಭಕ್ತರಾದ ಈ ಇಬ್ಬರು ರಕ್ಕಸ ಹೆಸರಿನಲ್ಲಿ ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, ಬನವಾಸಿ, kannadaratna.com, banavasi, ourtemples.inಬನವಾಸಿಯಲ್ಲಿ ಮಧುಕೇಶ್ವರ ಮತ್ತು ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯಗಳನ್ನು ನಿರ್ಮಿಸಲಾಯಿತೆಂದು ಹೇಳಲಾಗುತ್ತದೆ. 4ನೆಯ ಶತಮಾನದಲ್ಲಿ ಕದಂಬರು ಬನವಾಸಿಯನ್ನು ತಮ್ಮ ರಾಜಧಾನಿ ಮಾಡಿಕೊಂಡರು.

ವರದಾನದಿಯಿಂದ ಸ್ವಲ್ಪವೇ ದೂರದಲ್ಲಿರುವ ಮಧುಕೇಶ್ವರ ದೇವಾಲಯ ಪ್ರಮುಖವಾದುದು. 3ನೆಯ ಶತಮಾನಕ್ಕೆ ಸೇರಿದ ಮಧುಕೇಶ್ವರ ದೇವಾಲಯದಲ್ಲಿರುವ ಐದುಹೆಡೆಯ ನಾಗಶಿಲ್ಪ, ಗರ್ಭಗೃಹದಲ್ಲಿರುವ ಮಧುಕೇಶ್ವರಲಿಂಗ, ಕಾರ್ತಿಕೇಯ, ಆದಿಮೂರ್ತಿ, ವೀರಭದ್ರ, ನರಸಿಂಹ, ಗಣಪತಿ, ವೆಂಕಟರಮಣ, ಅಷ್ಟದಿಕ್ಪಾಲಕ ನಯನ ಮನೋಹರವಾಗಿವೆ.

ದೇವಾಲಯದ  ಸ್ತಂಭಗಳು ಕಲಾತ್ಮಕವಾಗಿದ್ದು, ಕದಂಬ ಶೈಲಿಯ ದ್ಯೋತಕವಾಗಿದೆ. ಸಾಲುಗಂಬಗಳ ಮಧ್ಯೆ ಇರುವ ಬೃಹದಾಕಾರದ ನಂದಿಯ ಮೂರ್ತಿ ಮನಮೋಹಕವಾಗಿದೆ. ಕದಂಬರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಪುರದ ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, ಬನವಾಸಿ, kannadaratna.com, banavasi, ourtemples.inದೇವಾಲಯದ ಕಂಬಗಳ ಮೇಲಿರುವ ಹಲವು ದೇವತೆಗಳ ಮತ್ತು ಪರಿವಾರ ದೇವತೆಗಳ ಶಿಲ್ಪಗಳು ಕಲ್ಯಾಣ ಚಾಲುಕ್ಯ-ಹೊಯ್ಸಳರ ಕಾಲದವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ದೇವಾಲಯದ ಕಂಬದ ಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೊರೆತಿವೆ. ಮೌರ್ಯರ ಕಾಲದಲ್ಲಿಯೇ ಬನವಾಸಿ ಇತ್ತೆಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿವೆ.

ಇಷ್ಟು ಮನಮೋಹಕವೂ, ಪುರಾಣ ಪ್ರಸಿದ್ಧ ಹಾಗೂ 2000 ವರ್ಷಗಳ ಇತಿಹಾಸ ಪ್ರಸಿದ್ಧ ದೇವಾಲಯ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಮಳೆಗಾಲದಲ್ಲಿ ದೇವಾಲಯದ ಮಾಳಿಗೆ ಸೋರುತ್ತದೆ. ನೆಲದಲ್ಲಿ ಹಾಗೂ ಭಿತ್ತಿ, ಕಂಬಗಳಲ್ಲಿ ಪಾಚಿ ಕಟ್ಟಿದೆ. ಕಾಲಿಟ್ಟರೆ ಜಾರುವಂಥ ಸ್ಥಿತಿ ನಿರ್ಮಾಣವಾಗಿದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು