ಮುಖಪುಟ /ನಮ್ಮ ದೇವಾಲಯಗಳು  

ಬೆಳವಾಡಿಯ ವೀರನಾರಾಯಣ ದೇವಾಲಯ
ಅತ್ಯಂತ ಸುಂದರವಾದ ವೀರನಾರಾಯಣ, ನರಸಿಂಹ ಹಾಗೂ ಕೃಷ್ಣನ ನೋಡಲು ಕಣ್ಣು ನೂರು ಸಾಲದು...

*ಟಿ.ಎಂ. ಸತೀಶ್

Belavadi Veeranarayana, kannadaratna.com, T.M.Satish, ಬೆಳವಡಿ, ವೀರನಾರಾಯಣ ದೇವಾಲಯ, ಸುಂದರ ಮೂರ್ತಿ, ಸತೀಶ್ ಟಿ.ಎಂ. ಕನ್ನಡರತ್ನ, ನಮ್ಮ ದೇವಾಲಯಗಳು, ourtemples.inಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಣ.  ಚಿಕ್ಕಮಗಳೂರಿನಿಂದ ಬಾಣಾವರಕ್ಕೆ ಹೋಗುವ ದಾರಿಯಲ್ಲಿ 20 ಕಿಮೀ ದೂರದಲ್ಲಿರುವ ಇಲ್ಲಿ ಮನಮೋಹಕವಾದ ಹೊಯ್ಸಳ ಶೈಲಿಯ ವೀರನಾರಾಯಣ ಸ್ವಾಮಿ ದೇವಾಲಯವಿದೆ.

ಹೊಯ್ಸಳರ ಕಾಲದಲ್ಲಿ ಜೈನ ಕೇಂದ್ರವಾಗಿದ್ದ ಈ ಗ್ರಾಮವನ್ನು 1760ರಲ್ಲಿ ಮೈಸೂರು ಅರಸು, ಇಮ್ಮಡಿ ಕೃಷ್ಣರಾಜ ಒಡೆಯರು ಈ ಊರನ್ನು ಶೃಂಗೇರಿ ಮಠಕ್ಕೆ ಜಹಗೀರಿ ನೀಡಿದ್ದರು ಎಂದು ತಿಳಿದುಬರುತ್ತದೆ. ಸ್ಥಳ ಪುರಾಣದ ರೀತ್ಯ ಪುರಾಣ ಕಾಲದಲ್ಲಿ ಈ ಗ್ರಾಮ ಏಕಚಕ್ರನಗರ ಎಂದು ಹೆಸರಾಗಿತ್ತು.

ವನವಾಸಿಗಳಾಗಿದ್ದ ಪಾಂಡವರು ಇಲ್ಲಿ ಕೆಲ ಕಾಲ ಕಳೆದರೆಂದೂ ಹೇಳಲಾಗುತ್ತದೆ. ಬಕಾಸುರನೆಂಬ ರಾಕ್ಷಸನು ಪ್ರಜಾಪೀಡಕನಾಗಿದ್ದಾಗ, ಭೀಮ ಊರ ಜನ ಬಂಡಿತುಂಬ ತುಂಬಿಕೊಟ್ಟ ಅನ್ನವನ್ನು ತಾನೇ ತಿಂದು, ಬಕಾಸುರನನ್ನು ಸಂಹರಿಸಿದ್ದು ಇಲ್ಲಿಯೇ ಎಂದು ಜನ ನಂಬಿದ್ದಾರೆ. ಇದರ ಕುರುಹಾಗಿ ಇಲ್ಲಿ  ಪ್ರತಿವರ್ಷ ಚೈತ್ರಮಾಸದಲ್ಲಿ ಬಂಡಿಬಾನ ಹಬ್ಬ ನಡೆಯುತ್ತದೆ.

ಇಲ್ಲಿರುವ ವೀರನಾರಾಯಣ ದೇವಾಲಯ ಕಲಾತ್ಮಕವಾಗಿಯೂ ಸುಂದರವಾಗಿಯೂ ಇದೆ. ಹೊರ ಬಿತ್ತಿಗಳಲ್ಲಿ ಬೇಲೂರು ಹಳೇಬೀಡಿನಂತೆ ಸೂಕ್ಷ್ಮಕೆತ್ತನೆಯ ಶಿಲ್ಪಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲವಾದರೂ ಗರ್ಭಗೃಹದಲ್ಲಿರುವ ದೇವತಾಮೂರ್ತಿಗಳ ವಿಗ್ರಹಗಳು ನಯನ ಮನೋಹರವಾಗಿವೆ.

Belavadi Veeranarayana, kannadaratna.com, T.M.Satish, ಬೆಳವಡಿ, ವೀರನಾರಾಯಣ ದೇವಾಲಯ, ಸುಂದರ ಮೂರ್ತಿ, ಸತೀಶ್ ಟಿ.ಎಂ. ಕನ್ನಡರತ್ನ, ನಮ್ಮ ದೇವಾಲಯಗಳು, ourtemples.inಏಳು ಬಾಗಿಲುಗಲನ್ನು ದಾಟಿ ಹೋದಾಗ ದೇವಾಲಯದ ಮುಖ್ಯದ್ವಾರಕ್ಕೆ ನೇರವಾಗಿ ಇರುವ ಗರ್ಭಗೃಹದಲ್ಲಿರುವ ವ್ಯಾಘ್ರಮುದ್ರೆಯ ವೀರನಾರಾಯಣನ ಕೃಷ್ಣವರ್ಣದ ವಿಗ್ರಹದ ಸೂಕ್ಷ್ಮ ಕೆತ್ತನೆಗಳಂತೂ ವರ್ಣಿಸಲಸದಳವಾದಷ್ಟು ಸುಂದರವಾಗಿವೆ. ವೀರನಾರಾಯಣನ ಸುಂದರ ಮುಖ, ಪ್ರಭಾವಳಿಯಲ್ಲಿರುವ ಮನಮೋಹಕ ಕೆತ್ತನೆ, ಪಾದದ ಬಳಿ ಇರುವ  ಶಿಲಾ ಬಾಲಿಕೆಯರ ಮೂರ್ತಿಗಳಂತೂ ಅತ್ಯಂತ ಸುಂದರವಾಗಿವೆ. ಜೊತೆಗೆ ವೀರನಾರಾಯಣನ ಕೈಯಲ್ಲಿರುವ ಶಂಖ, ಚಕ್ರ, ಗದೆಯಲ್ಲಿನ ಸೂಕ್ಷ್ಮ ಕೆತ್ತನೆ ಶಿಲ್ಪಿಯ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ಕ್ರಿ.ಶ. 1200ರ ಆಸುಪಾಸಿನಲ್ಲಿ ಎರಡನೇ ವೀರಬಲ್ಲಾಳ ನಿರ್ಮಿಸಿದನೆನ್ನಲಾದ ಈ ಹೊಯ್ಸಳ  ದೇವಾಲಯ ತ್ರಿಕೂಟಾಚಲವಾಗಿದ್ದು, ದೇವಾಲಯಕ್ಕೆ ಪ್ರತ್ಯೇಕ ಮೂರು ಗೋಪುರ ಹಾಗೂ ಮೂರು ಗರ್ಭಗೃಹಗಳಿವೆ. ಈ ದೇವಾಲಯದ ವಾಸ್ತು ವಿನ್ಯಾಸ ಎಂಥವರನ್ನೂ ಬೆರಗುಗೊಳಿಸುತ್ತದೆ.

Belavadi Veeranarayana, kannadaratna.com, T.M.Satish, ಬೆಳವಡಿ, ವೀರನಾರಾಯಣ ದೇವಾಲಯ, ಸುಂದರ ಮೂರ್ತಿ, ಸತೀಶ್ ಟಿ.ಎಂ. ಕನ್ನಡರತ್ನ, ನಮ್ಮ ದೇವಾಲಯಗಳು, ourtemples.inಎದುರುಗಡೆಯಿಂದ ನೋಡಿದರೆ ಇಂಗ್ಲಿಷ್ ವರ್ಣಮಾಲೆಯ ಡಬ್ಲ್ಯುನಂತೆ ಕಾಣುವ ದೇವಾಲಯದ ಮುಂಭಾಗದಲ್ಲಿ ಪೀಠದ ಮೇಲೆ ಆನೆಗಳ ಸುಂದರ ಶಿಲ್ಪವಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಈ ದೇವಾಲಯವನ್ನು ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದು, ದೇವಾಲಯದ ಸುತ್ತಲೂ ಹಚ್ಚ ಹಸುರಿನ ಆವರಣ ಈ ದೇವಾಲಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತದ ವಾಸ್ತುಶಿಲ್ಪವನ್ನು ಎತ್ತಿ ಹಿಡಿಯುವಲ್ಲಿ ಹೊಯ್ಸಳ ದೊರೆಗಳ ಪಾತ್ರವನ್ನು ಈ ದೇವಾಲಯ ಸಾರುತ್ತದೆ. ವಾಸ್ತುಶಿಲ್ಪದ ಭವ್ಯ ಪರಂಪರೆಗೆ ಸಾಕ್ಷಿಯಾಗರುವ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ವೀರನಾರಾಯಣ ಸ್ವಾಮಿಯಿದ್ದರೆ, ಉಳಿದೆರಡು ಗರ್ಭಗೃಹಗಳಲ್ಲಿ ವೇಣುಗೋಪಾಲ ಹಾಗೂ ಯೋಗಾನರಸಿಂಹ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮರದ ಕೆಳಗೆ ನಿಂತು ಕೊಳಲನ್ನುಊದುತ್ತಿರುವ ಕೃಷ್ಣನ ಮೂರ್ತಿಯ ಸೌಂದರ್ಯ ಮನಮೋಹಕ. ಈ ವಿಗ್ರಹದಲ್ಲಿ ಸನಕಾದಿ ಮುನಿಗಳನ್ನೂ ಕೆತ್ತಲಾಗಿದೆ.  ಪಾದದ ಬಳಿ ಇರುವ ಗೋವಿನ ಕೆತ್ತನಯಂತೂ ಜೀವಂತಿಕೆಯನ್ನು ಪಡೆದಿದೆ. ಇನ್ನು ಯೋಗಾನರಸಿಂಹಸ್ವಾಮಿಯ ಮೂರ್ತಿಯಲ್ಲಿರುವ ಸೌಮ್ಯತೆ, ಮುಖಭಾವ ಅತ್ಯಾಕರ್ಷಕವಾಗಿದೆ.  ಈ ಎರಡೂ ಗರ್ಭಗೃಹಗಳು ಎದುರು ಬದುರಾಗಿದ್ದು, ಇಲ್ಲಿ ಯೋಗಾನರಸಿಂಹ ಮತ್ತು ಶ್ರೀಕೃಷ್ಣ ಪರಸ್ಪರ ಎದುರು ಮುಖವಾಗಿ ನಿಂತಿದ್ದಾರೆ.

Belavadi Veeranarayana, kannadaratna.com, T.M.Satish, ಬೆಳವಡಿ, ವೀರನಾರಾಯಣ ದೇವಾಲಯ, ಸುಂದರ ಮೂರ್ತಿ, ಸತೀಶ್ ಟಿ.ಎಂ. ಕನ್ನಡರತ್ನ, ನಮ್ಮ ದೇವಾಲಯಗಳು, ourtemples.inದೇವಾಲಯದ ಪ್ರವೇಶದ್ವಾರದಲ್ಲಿ ಇರುವ ಆನೆಗಳು ಮನಮೋಹಕವಾಗಿವೆ.  ಹೊರಭಿತ್ತಿಗಳ ಕಲಾತ್ಮಕತೆ, ದೇವಾಲಯದ ವಿಶಾಲ ಪ್ರಾಕಾರ ಹಾಗೂ ಕಲ್ಲುಗಳಲ್ಲಿ ಅರಳಿರುವ ಶಿಲೆಗಳು ಮನಸೂರೆಗೊಳ್ಳುತ್ತವೆ.ಎಲ್ಲಕ್ಕಿಂತ ಮಿಗಿಲಾಗಿ ದೇವಾಲಯದ ಒಳ ಭಾಗದಲ್ಲಿರುವ ನುಣುಪಾದ ಸಾಲು ಕಂಬಗಳಂತೂ ಪ್ರವಾಸಿಗರ ಮನಗೆಲ್ಲುತ್ತವೆ. ಭುವನೇಶ್ವರಿಗಳಲ್ಲಿರುವ ಕೆತ್ತನೆಗಳೂ ತಮ್ಮನ್ನೊಮ್ಮೆ ನೋಡಿ ಹೋಗಿ ಎಂದು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ. ಇಷ್ಟು ಸುಂದರವಾದ ಶಿಲ್ಪಕಲೆಯ ತವರು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸದಿರುವುದು ನಿಜಕ್ಕೂ ವಿಷಾದದ ಸಂಗತಿ.

ಮುಖಪುಟ /ನಮ್ಮದೇವಾಲಯ