ಮುಖಪುಟ /ನಮ್ಮದೇವಾಲಯಗಳು   

ಬೆಂಗಳೂರು ಸುಬ್ಬಣ್ಣ ಗಾರ್ಡನ್ ಕೈಲಾಸೇಶ್ವರ ದೇವಾಲಯ

Subbanna gardan, Basaveswara layout Kailaseswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರು ಮಹಾನಗರದ ಚಂದ್ರಾಲೇಔಟ್, ಮಾರೇನಹಳ್ಳಿ ಹಾಗೂ ವಿಜಯನಗರ ಬಳಿ ಇರುವ ಬಸವೇಶ್ವರ ಬಡಾವಣೆ, ಸುಬ್ಬಣ್ಣ ಗಾರ್ಡನ್ ಎಂದೇ ಖ್ಯಾತವಾಗಿದೆ. ಇಲ್ಲಿರುವ ವಿಶಾಲ ಹಚ್ಚ ಹಸುರಿನ ಪ್ರದೇಶದಲ್ಲಿ ಶ್ರೀಕೈಲಾಸೇಶ್ವರ ನೆಲೆಸಿ ಭಕ್ತ ಕೋಟಿಯನ್ನು ಹರಸುತ್ತಿದ್ದಾನೆ.

ಬೆಂಗಳೂರು ನಗರ ಬೆಳೆದಂತೆಲ್ಲಾ ಅಭಿವೃದ್ಧಿಯಾದ ವಿಜಯನಗರ ಸುತ್ತಮುತ್ತಲ ಪ್ರದೇಶದಲ್ಲಿ ತಲೆ ಎತ್ತಿದ ಹೊಸ ಬಡಾವಣೆಗಳಲ್ಲಿ ಬಸವೇಶ್ವರ ಬಡಾವಣೆಯೂ ಒಂದು. ಆಗ ಇಲ್ಲಿ ವಾಸಕ್ಕೆ ಬಂದ ಜನರ ಪೈಕಿ ಹತ್ತೂ ಸಮಸ್ತರು ಸೇರಿ, ತಮ್ಮ ಬಡಾವಣೆಯಲ್ಲೊಂದು ದೇವಾಲಯ ಇರಬೇಕೆಂದು ಸಂಕಲ್ಪ ಮಾಡಿ,  ಪುಟ್ಟ ಶಿವನ ದೇವಾಲಯವೊಂದನ್ನು ನಿರ್ಮಿಸಿದರು.

Subbanna gardan, Basaveswara layout Kailaseswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ದೇವಾಲಯದ ನಿರ್ವಹಣೆಗೆ ಇದೇ ಬಡಾವಣೆಯ ನಿವಾಸಿಗಳಾದ ಎಸ್. ಗೋವಿಂದ ರಾಜು ಅವರ ಅಧ್ಯಕ್ಷತೆಯಲ್ಲಿ  ಶ್ರೀ ಬಸವೇಶ್ವರ ಧಾರ್ಮಿಕ ಮತ್ತು ಸಾಂಸ್ಕೃತಿಕ ದತ್ತಿ (ರಿ) ಸಂಸ್ಥೆಯೂ ಸ್ಥಾಪನೆಯಾಯಿತು. 1994ರ ಜೂನ್ 20ರಂದು ನೂತನ ದೇವಾಲಯದ ನಿರ್ಮಾಣವೂ ನೆರವೇರಿತು. ನಂತರ ಅಂದಿನ ಶಾಸಕರಾದ ವಿ.ಸೋಮಣ್ಣ ಅವರು ಈ ದೇವಾಲಯದ ಅಭಿವೃದ್ಧಿಗೆ ಮುತುವರ್ಜಿ ವಹಿಸಿ, ದೇವಾಲಯದ ಮಹಾಪೋಷಕರಾದ ಮೇಲೆ ಕೈಲಾಸೇಶ್ವರ ದೇವಾಲಯ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿತು.

ಸುಂದರವಾದ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಈಗಿರುವ  ಬೃಹತ್ ಭವ್ಯ ದೇವಾಲಯದಲ್ಲಿ ಕೈಲಾಸೇಶ್ವರ, ಗಣಪತಿ, ತಾಯಿ ಪಾರ್ವತಿ ದೇವಿ, ಆಂಜನೇಯ ಹಾಗೂ ನವಗ್ರಹ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.

Subbanna gardan, Basaveswara layout Kailaseswara temple, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಸುಂದರ ಉದ್ಯಾನದಂತೆ ಕಾಣುವ ದೇವಾಲಯ ಪ್ರವೇಶಿಸಿದೊಡನೆಯೇ ಬಲಭಾಗದಲ್ಲಿ ಆಂಜನೇಯಸ್ವಾಮಿಯ ಭವ್ಯ ಮೂರ್ತಿಯ ದರ್ಶನವಾಗುತ್ತದೆ. ಎಡಭಾಗದಲ್ಲಿ ನವಗ್ರಹ ಉದ್ಯಾನ ಹಾಗೂ ನವಗ್ರಹ ಗುಡಿ ಇದೆ.

ವಿಶಾಲ ಪ್ರಾಂಗಣದಲ್ಲಿರುವ ಪ್ರಧಾನ ದೇವಾಲಯದ ಮೇಲ್ಭಾಗದಲ್ಲಿ 18 ಅಡಿ ಎತ್ತರದ ಪದ್ಮಾಸನಾರೂಢನಾದ ಶಿವನ ಮೂರ್ತಿ ಗಮನಸೆಳೆಯುತ್ತದೆ. ಶಿವನ ಗೋಪುರಕ್ಕೆ ಆಧಾರವಾಗಿರುವ ಸ್ತಂಭಗಳಲ್ಲಿರುವ ಆನೆಗಳ ಹಾಗೂ ದ್ವಾರಪಾಲಕರ ಪ್ರತಿಮೆಗಳೂ ಸುಂದರವಾಗಿವೆ.

ಪ್ರಧಾನ ಗರ್ಭಗೃಹದಲ್ಲಿ ಸುಂದರವಾದ ಕೃಷ್ಣಶಿಲೆಯ ಶಿವಲಿಂಗವಿದ್ದು, ದೇವರ ಎಡಭಾಗದಲ್ಲಿ ತಾಯಿ ಪಾರ್ವತಿಯ ಗುಡಿಯಿದೆ. ಅಂತೆಯೇ ಬಲಭಾಗದಲ್ಲಿ ಗಣಪತಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಪ್ರಾಕಾರದಲ್ಲಿ ಅಶ್ವತ್ಥಕಟ್ಟೆ, ನಾಗರಕಲ್ಲುಗಳೂ ಇವೆ.

ದೇವಾಲಯದಲ್ಲಿ ಪ್ರತಿ ತಿಂಗಳೂ ಸಂಕಷ್ಟ ಹರ ಗಣಪತಿ ಪೂಜೆ, ಪೌರ್ಣಿಮೆಯಂದು ಶ್ರೀ ಸತ್ಯನಾರಾಯಣ ಪೂಜೆ, ತಿಂಗಳಲ್ಲಿ ಎರಡು ದಿನ ಪ್ರದೋಷಪೂಜೆ, ಆಂಜನೇಯನಿಗೆ ಸಂಕ್ರಮಣ ಪೂಜೆ, ಅಮಾವಾಸ್ಯೆಯ ದಿನ ಕೈಲಾಸೇಶ್ವರನಿಗೆ ವಿಶೇಷ ಪೂಜೆಗಳು ನಡೆಯುತ್ತವೆ.

ಶಿವರಾತ್ರಿಯಂದು ನಾಲ್ಕು ಯಾಮದ ಪೂಜೆ, ಅಭಿಷೇಕ, ಜಾಗರಣೆ, ಭಜನೆ ಕಾರ್ಯಕ್ರಮಗಳು ಜರುಗುತ್ತವೆ. ಹನುಮಜಯಂತಿ, ಶ್ರೀರಾಮನವಮಿಯಲ್ಲಿ ಹಾಗೂ ಪ್ರತಿ ಸೋಮವಾರ ಮತ್ತು ಶನಿವಾರ ವಿಶೇಷ ಪೂಜೆ ಪ್ರಸಾದ ವಿನಿಯೋಗ ನಡೆಯುತ್ತದೆ.

ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ವಾರ ಇಲ್ಲಿ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯುತ್ತದೆ. ಲೋಕಕಲ್ಯಾಣಾರ್ಥ ಹೋಮ, ಹವನಗಳನ್ನೂ ದೇವಾಲಯದ ಆಡಳಿತ ಮಂಡಳಿ ಏರ್ಪಡಿಸುತ್ತಾ ಬಂದಿದೆ.

ದೇವಾಲಯದ ಪ್ರಕಾರದಲ್ಲಿರುವ ಧ್ಯಾನ ಮಂದಿರದಲ್ಲಿ ಅಮೃತ ಶಿಲೆಯ ಶಿವನ ವಿಗ್ರಹವಿದ್ದು, ಧ್ಯಾನ ಮಾಡಲು ಪ್ರಶಾಂತವಾದ ವಾತಾವರಣವಿದೆ.

 ಮುಖಪುಟ /ನಮ್ಮದೇವಾಲಯಗಳು