ಮುಖಪುಟ /ನಮ್ಮದೇವಾಲಯಗಳು  

ಬೂದನೂರಿನ ಕಾಶಿ ವಿಶ್ವನಾಥ ದೇವಸ್ಥಾನ

ಪುನರ್ ನಿರ್ಮಾಣಗೊಂಡ ಹೊಯ್ಸಳರ ಕಾಲದ ಪುರಾತನ ದೇವಾಲಯ

ourtemples.com  budanoor Kashi Vishwanatha temple, shiva temple, maddur, hosa budanoor, hale budanuru,  mandya, anantapadmanabha temple, hosa boodanur, hale budanoor, karnataka temples, ಬೂದನೂರಿನ ಅನಂತಪದ್ನಾಭ ದೇವಾಲಯ, ಟಿ.ಎಂ. ಸತೀಶ್, t.m. satishTalakaveri, karnataka temples, *ಟಿ.ಎಂ. ಸತೀಶ್

ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಮಂಡ್ಯ ನಡುವೆ ಇರುವ ಊರೇ ಬೂದನೂರು. ಬೂದನೂರು ಹೊಯ್ಸಳರ ಕಾಲದ ಎರಡು ಪುರಾತನ ಭವ್ಯ ದೇವಾಲಯಗಳಿಂದ ಖ್ಯಾತಿ ಪಡೆದಿದೆ.

ಬೆಂಗಲೂರು ಮೈಸೂರು ಹೆದ್ದಾರಿಯಿಂದ  ಕೇವಲ 1 ಕಿ.ಮೀ. ದೂರದಲ್ಲಿರುವ ಈ ಊರು ಹಿಂದೆ ಶ್ರೀಮದ್ ಸರ್ವಜ್ಞ ಪದುಮನಾಭಪುರ ಎಂದು ಕರೆಸಿಕೊಂಡಿತ್ತಂತೆ. ಹೊಯ್ಸಳರ ದೊರೆ ಮೂರನೇ ನರಸಿಂಹ 1236ರಲ್ಲಿ  ಈ ಊರಿನಲ್ಲಿ ಕೇಶವ (ಪದ್ಮನಾಭ) ಹಾಗೂ ಶಿವ (ಕಾಶಿ ವಿಶ್ವನಾಥ) ದೇವಾಲಯಗಳನ್ನು ನಿರ್ಮಿಸಿ ಅಗ್ರಹಾರವಾಗಿ ಮಾಡಿದ್ದನೆಂದು ಶಾಸನಗಳಿಂದ ತಿಳಿದು ಬರುತ್ತದೆ.

ourtemples.com  budanoor Kashi Vishwanatha temple, shiva temple, maddur, hosa budanoor, hale budanuru,  mandya, anantapadmanabha temple, hosa boodanur, hale budanoor, karnataka temples, ಬೂದನೂರಿನ ಅನಂತಪದ್ನಾಭ ದೇವಾಲಯ, ಟಿ.ಎಂ. ಸತೀಶ್, t.m. satishTalakaveri, karnataka temples, ಇಲ್ಲಿರುವ ಕಾಶಿ ವಿಶ್ವನಾಥನ  ದೇವಾಲಯ ಎಲ್ಲ ಹೊಯ್ಸಳ ದೇವಾಲಯಗಳ ರೀತಿಯಲ್ಲೇ ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲಿದೆ, ಮುಖಮಂಟಪ, ನವರಂಗ, ಅಂತರಾಳ, ವಿಮಾನ, ಭುವನೇಶ್ವರಿ, ಗರ್ಭಗೃಹವನ್ನು ಒಳಗೊಂಡಿದೆ. ಹೊಯ್ಸಳರ ದೇವಾಲಯಗಳ ವಾಸ್ತು ಶಿಲ್ಪದ ಆರಂಭದ ಕಾಲದಲ್ಲಿ ನಿರ್ಮಿಸಿರಬಹುದಾದ ದೇವಾಲಯ ಇದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಗರ್ಭಗುಡಿಯ ಮೇಲಿರುವ ಗೋಪುರ ಕಲಾತ್ಮಕವಾಗಿದೆ.

ನವರಂಗದಲ್ಲಿ ಸುಂದರವಾದ ಕೃಷ್ಣಶಿಲೆಯ ನಂದಿಯ ವಿಗ್ರಹವಿದ್ದು, ಶಿವನತ್ತ ಮುಖಮಾಡಿದೆ. ನಾಲ್ಕು ಅಡಿ ಎತ್ತರ ಇರುವ ನಂದಿಯ ಕೆತ್ತನೆ ಮೋಹಕವಾಗಿದೆ. ನಂದಿಯ ಕೊರಳಲ್ಲಿನ ಗೆಜ್ಜೆಸರ, ಗಂಟೆಗಳನ್ನು ಅತ್ಯಂತ ಮನೋಹರವಾಗಿ ಕೆತ್ತಿರುವ ಶಿಲ್ಪಿಯ ಕೈಚಳಕಕ್ಕೆ ಎಲ್ಲರೂ ತಲೆದೂಗುತ್ತಾರೆ.

ಇನ್ನು ನವರಂಗಕ್ಕೆ ಹೊಂದಿಕೊಂಡಂತೆ ಗರ್ಭಗೃಹದ ಪ್ರವೇಶ ದ್ವಾರದ ಬಾಗಿಲವಾಡದಲ್ಲಿ ಸುಂದರ ಕೆತ್ತನೆಗಳಿವೆ. ಇನ್ನು ವಿಮಾನದಲ್ಲಿನ ಕೆತ್ತನೆಗಳು ಹಾಗೂ ನವರಂಗದಲ್ಲಿ ಗುಂಡಾಕಾರದ ಕಂಬಗಳ ಹಾಗೂ ಭುವನೇಶ್ವರಿಯ ಸೂಕ್ಷ್ಮ ಕೆತ್ತನೆಯೂ ಅಮೋಘವಾಗಿದೆ. ನವರಂಗದಲ್ಲಿರುವ ನವಿಲಿನ ಮೇಲೆ ಕುಳಿತ ಷಣ್ಮುಖ -ಸುಬ್ರಹ್ಮಣನ ವಿಗ್ರಹದ ಕೆತ್ತನೆ ಅತ್ಯಂತ ಕಲಾತ್ಮಕತೆಯಿಂದ ಕೂಡಿದೆ. ನವಿಲಿನ ಗರಿಯನ್ನು ಕೂಡ ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ. ಆದರೆ ಈ ವಿಗ್ರಹದ ಕೈಯನ್ನು ಭಿನ್ನಗೊಳಿಸಲಾಗಿದೆ. ಪಕ್ಕದಲ್ಲಿಯೇ ಗಣಪತಿ ಹಾಗೂ ಸಪ್ತ ಮಾತೃಕೆಯರ ವಿಗ್ರಹವೂ ಇದೆ.

ourtemples.com  budanoor Kashi Vishwanatha temple, shiva temple, maddur, hosa budanoor, hale budanuru,  mandya, anantapadmanabha temple, hosa boodanur, hale budanoor, karnataka temples, ಬೂದನೂರಿನ ಅನಂತಪದ್ನಾಭ ದೇವಾಲಯ, ಟಿ.ಎಂ. ಸತೀಶ್, t.m. satishTalakaveri, karnataka temples, ಪ್ರಧಾನಗರ್ಭಗೃಹವನ್ನು ಅರೆ ಕಂಬಗಳಿಂದ ನಿರ್ಮಿಸಿದ್ದು ಮಧ್ಯದಲ್ಲಿ  ಶಿವನ ಲಿಂಗವಿದೆ. ತಳ ಭಾಗದ ಪಾಣಿಪೀಠ ಮೂಲೆಗಳಿಂದ ಕೂಡಿದ್ದು, ಮೇಲ್ಭಾಗದಲ್ಲಿ ಗೋಲಾಕಾರದಲ್ಲಿದೆ. ಅದರ ಮೇಲೆ ಲಿಂಗವಿದೆ. ವಿಶಿಷ್ಟವಾದ ಶೈಲಿಯಲ್ಲಿರುವ ಈ ಲಿಂಗ ಅಮೋಘವಾಗಿದೆ. ಸಂಪೂರ್ಣ ಶಿಥಿಲವಾಗಿ ಕುಸಿದಿದ್ದ ದೇವಾಲಯವನ್ನು ಈಗ ಪುನರ್ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಹೊರಗೋಡೆಯನ್ನು ಬಳಪದ ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಗರ್ಭಗೃಹದ ಹಿಂಭಾಗದ ಗೋಪುರದಲ್ಲಿ ಕಲಾತ್ಮಕತೆ ಇದೆ. ಉಳಿದಂತೆ ಸುತ್ತಲಿನ ಭಿತ್ತಿಗಳಲ್ಲಿ ಯಾವುದೇ  ಸೂಕ್ಷ್ಮ ಕೆತ್ತನೆಗಳು ಇಲ್ಲ. ಆದರೆ ಪ್ರವೇಶದ ಮೆಟ್ಟಿಲುಗಳ ಬಳಿ ಆನೆಗಳ ಶಿಲ್ಪಗಳಿವೆ. ದೇವಾಲಯದ ಮುಖ್ಯ ದ್ವಾರದ ಮೇಲೆ ಶಿವಪಾರ್ವತಿಯರ ವಿಗ್ರಹದ ಕೆತ್ತನೆ ಇದೆ. ಮುಖಮಂಟಪದಲ್ಲಿನ ಭುವನೇಶ್ವರಿಯ ಕೆತ್ತನೆಯೂ ಮನೋಹರವಾಗಿದೆ. ಸರ್ಕಾರ ಈಗ ಇದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ರಕ್ಷಿಸಿದೆ. ದೇವಾಲಯದ ಎದುರು ಕೆರೆಯೂ ಇದೆ.

ಮುಖಪುಟ /ನಮ್ಮದೇವಾಲಯಗಳು