ಮುಖಪುಟ /ನಮ್ಮದೇವಾಲಯಗಳು  

ಚನ್ನರಾಯಪಟ್ಟಣದ ಕೋಟೆ ಚಂದ್ರಶೇಖರ ದೇಗುಲ

ಶಿವನಿಗೆ ಇಲ್ಲಿ ಮೂರ್ತಿ ಪೂಜೆ ನಡೆಯುವುದು ವಿಶೇಷ

channarayapattana, chandrashekara temple, ಚಂದ್ರಶೇಖರ ದೇವಾಲಯ, ಚನ್ನಪಟ್ಟಣ, ಕನ್ನಡರತ್ನ.ಕಾಂ. ourtemples, karnataka temples*ಟಿ.ಎಂ. ಸತೀಶ್

ಶಿಲ್ಪಕಲೆಗಳ ತವರು, ದೇವಾಲಯಗಳ ಬೀಡು ಹಾಸನಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಚನ್ನರಾಯಪಟ್ಟಣ. ಈ ಊರಿನಲ್ಲಿ ಹಲವಾರು ಪುರಾತನ ದೇವಾಲಯಗಳಿವೆ. ಈ ಪೈಕಿ ಕೋಟೆಯ ಚಂದ್ರಶೇಖರ ದೇವಾಲಯ ಪ್ರಮುಖವಾದದ್ದು. ಕಲ್ಲಿನ ಕಂಬಗಳ ಮಂಟಪ ಹಾಗೂ ಗ್ರಾನೈಟ್ ಕಲ್ಲಿನಿಂದಲೇ ಕಟ್ಟಿದ ಹಳೆಯ ದೇವಾಲಯ ಇದಾಗಿದ್ದು, ಕಲೆಗಳ ಬೀಡಿನಲ್ಲಿರುವ ಈ ದೇವಾಲಯ ಶಿಲ್ಪಕಲಾ ವೈಭವದಿಂದೇನೂ ಕೂಡಿಲ್ಲದಿದ್ದರೂ ತನ್ನದೇ ವಿಶೇಷತೆಯಿಂದ ಭಕ್ತರ ಮನಸೆಳೆಯುತ್ತದೆ.

ಈ ದೇವಾಲಯದಲ್ಲಿ ಶಿವನಿಗೆ ಮೂರ್ತಿಪೂಜೆ ನಡೆಯುವುದು ವಿಶೇಷ. ಪುರಾಣದ ರೀತ್ಯ ಭೃಗು ಮಹರ್ಷಿಗಳ ಶಾಪದ ಫಲವಾಗಿ ಬ್ರಹ್ಮದೇವರಿಗೆ ಭೂಮಿಯಲ್ಲಿ ಪೂಜೆಯಿಲ್ಲ. ಶಿವನನ್ನು ಲಿಂಗರೂಪದಲ್ಲಿ ಮಾತ್ರವೇ ಪೂಜಿಸುತ್ತಾರೆ. ಅಂದರೆ ಶಿವನಿಗೆ ಮೂರ್ತಿಪೂಜೆ ನಿಷಿದ್ಧ. ಆದರೆ, ಚನ್ನರಾಯಪಟ್ಟಣದ ಕೋಟೆಯಲ್ಲಿರುವ ಈ ಪುರಾತನ ದೇವಾಲಯದಲ್ಲಿ ನಂದಿಯಿರುವ ಪೀಠದ ಮೇಲೆ ನಿಂತಿರುವ ಸುಂದರ ಶಿವನ ವಿಗ್ರಹವಿದೆ. ಇಲ್ಲಿ ಶಿವನಿಗೆ ಮೂರ್ತಿ ಪೂಜೆ ನಡೆಯುತ್ತದೆ.

channarayapattana, chandrashekara temple, ಚಂದ್ರಶೇಖರ ದೇವಾಲಯ, ಚನ್ನಪಟ್ಟಣ, ಕನ್ನಡರತ್ನ.ಕಾಂ. ourtemples, karnataka templesಆರೂವರೆ ಅಡಿ ಎತ್ತರವಿರುವ ಸಮ ಹಾಗೂ ಕ್ರಮಬದ್ಧ ಪ್ರಮಾಣದಲ್ಲಿ ಕೆತ್ತಲಾಗಿರುವ ಚಂದ್ರಶೇಖರನ ಈ ಮೂರ್ತಿ ಅತ್ಯಂತ ಸುಂದರ ಮತ್ತು ಮನಮೋಹಕವಾಗಿದೆ. ಒಂದು ಕೈಯಲ್ಲಿ ಮೃಗ(ಜಿಂಕೆ) ಮತ್ತೊಂದರಲ್ಲಿ ಪರಶು ಹಿಡಿದ ಶಿವ ಅಭಯ ಮತ್ತು ವರದ ಮುದ್ರೆಯಲ್ಲಿದ್ದಾನೆ. ಮಂದಸ್ಮಿತವಾದ ಸುಂದರ ವದನ ಎಲ್ಲರನ್ನೂ ಆಕರ್ಷಿಸುತ್ತದೆ. ಶಿವನಿಗೆ ವಸ್ತ್ರಾಭರಣಗಳನ್ನು ಶಿಲೆಯಲ್ಲೇ ತೊಡಿಸಿರುವ ಶಿಲ್ಪಿಯ ಕಲಾ ಚಾತುರ್ಯ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತದೆ. ಶಿವ ಗಜ ಚರ್ಮವನ್ನಷ್ಟೇ ಧರಿಸುವುದಿಲ್ಲ. ಪಟ್ಟೆಪೀತಾಂಬರ ಸಹಿತ ವಸ್ತ್ರಾಭರಣವನ್ನೂ ಧರಿಸುತ್ತಾನೆ ಎಂಬುದುನ್ನು ಶಿಲ್ಪಿ ನಿರೂಪಿಸಿದ್ದಾನೆ.

ಶಿವಾಯ ವಿಷ್ಣು ರೂಪಾಯ , ಶಿವರೂಪಾಯ ವಿಷ್ಣವೇ | ಶಿವಶ್ಚಾ ಹೃದಯಂ ವಿಷ್ಣು , ವಿಷ್ಣೋಶ್ಚ ಹೃದಯಂ ಶಿವಃ ಎಂಬ ಶ್ಲೋಕವಿದೆ. ಹರಿ ಹರರಿಗೆ ಯಾವುದೇ ಭೇದವಿಲ್ಲ ಎಂಬುದು ಇದರ ಅರ್ಥ. ಹೀಗಾಗಿಯೇ ಈ ದೇವಾಲಯದಲ್ಲಿ ನಿಂತಿರುವ ಶಿವನಿಗೆ ವಿಷ್ಣುವಿನ ಅಲಂಕಾರವನ್ನೂ ಮಾಡಲಾಗುತ್ತದೆ. ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ವರದಿ (1939)ಯಲ್ಲಿ ಚಂದ್ರಶೇಖರ (ರಾಮೇಶ್ವರ) ವಿಜಯನಗರ ಕಾಲದ್ದೆಂಬ ಉಲ್ಲೇಖವಿದೆ.

channarayapattana, chandrashekara temple, ಚಂದ್ರಶೇಖರ ದೇವಾಲಯ, ಚನ್ನಪಟ್ಟಣ, ಕನ್ನಡರತ್ನ.ಕಾಂ. ourtemples, karnataka templesದೊಡ್ಡ ಬಸವಣ್ಣನ ಗುಡಿ ಎಂದೂ ಖ್ಯಾತವಾದ ಈ ದೇವಾಲಯದಲ್ಲಿ ಸುಂದರವಾದ ಬಸವಣ್ಣನ ಮೂರ್ತಿಯಿದೆ. ಪ್ರಾಕಾರದಲ್ಲಿರುವ ಮತ್ತೊಂದು ಗರ್ಭಗೃಹದಲ್ಲಿ ಅತ್ಯಂತ ಸುಂದರವಾದ ಗೌರಮ್ಮನ ವಿಗ್ರಹವಿದೆ. ಕಮಲ ಹಿಡಿದ ದೇವಿಯ ಸುಂದರ ಕೃಷ್ಣ ಶಿಲೆಯ ವಿಗ್ರಹ ಮನಮೋಹಕವಾಗಿದೆ. ಹಿಂದಿನ ಪ್ರಭಾವಳಿಯಲ್ಲಿ ಹಾಗೂ ಕಿರೀಟದಲ್ಲಿ ಸೂಕ್ಷ್ಮ ಕೆತ್ತನೆ ಇದೆ.ದೇವಾಲಯದಲ್ಲಿ ಸುಂದರವಾದ ಅಮೃತಶಿಲೆಯ ಶಿವಲಿಂಗವಿದೆ. ನಿತ್ಯವೂ ದೇವರಿಗೆ ಪೂಜೆ, ಪುನಸ್ಕಾರಗಳು ಶೈವಾಗಮದ ರೀತ್ಯ ನಡೆಯುತ್ತದೆ.

channarayapattana, chandrashekara temple, ಚಂದ್ರಶೇಖರ ದೇವಾಲಯ, ಚನ್ನಪಟ್ಟಣ, ಕನ್ನಡರತ್ನ.ಕಾಂ. ourtemples, karnataka templesಚಂದ್ರಶೇಖರ ಸ್ವಾಮಿಗೆ ಪ್ರತಿ ವರ್ಷ ಮಾಘ ಶುದ್ಧ ಪೌರ್ಣಿಮೆಯಲ್ಲಿ ಅನೇಕ ಉತ್ಸವಾದಿಗಳು ನಡೆಯುತ್ತವೆ. ಬ್ರಹ್ಮ ರಥೋತ್ಸವವೂ ಜರುಗುತ್ತದೆ.

ಕಾರ್ತೀಕ ಮಾಸದ ಎಲ್ಲ ಸೋಮವಾರಗಳಂದು, ನವರಾತ್ರಿ/ದಸರೆಯ ಹತ್ತೂ ದಿನ ಹಾಗೂ ಹಾ ಶಿವರಾತ್ರಿಯಂದು ಇಲ್ಲಿ ದೇವರಿಗೆ ವಿಶೇಷ ಅಲಂಕಾರ ನಡೆಯುತ್ತವೆ.

ವ್ಯಾಪಾರ ವಹಿವಾಟಿಗಾಗಿ ಸುತ್ತಮುತ್ತಲ ಗ್ರಾಮಗಳಿಂದ ಚನ್ನರಾಯಪಟ್ಟಣಕ್ಕೆ ಬರುವ ಭಕ್ತರು, ಸಾಮಾನ್ಯವಾಗಿ ಚಂದ್ರಶೇಖರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶ್ರೀ ಚಂದ್ರಶೇಖರ ಸ್ವಾಮಿಯ ದರ್ಶನ ಪಡೆಯುತ್ತಾರೆ.  ಹೀಗಾಗಿ ಇಲ್ಲಿ ನಿತ್ಯ ಜನಜಾತ್ರೆಯೇ ನಡೆಯುತ್ತದೆ.

ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ದೇಗುಲ ತೆರೆದಿರುವ ಸಮಯ, ಪೂಜೆ ಅಭಿಷೇಕ ಇತ್ಯಾದಿ ವಿವರಗಳಿಗೆ ದೇವಾಲಯದ ಪ್ರಧಾನ ಅರ್ಚಕರಾದ ವೇ||ಬ್ರ|| ಶ್ರೀ|| ಬಿ.ಎಲ್. ಬಾಲಕೃಷ್ಣ ಭಟ್ (ಗುಡಿ ಭಟ್ಟರು) ಅವರನ್ನು ದೂರವಾಣಿ ಸಂಖ್ಯೆ 9845611426 ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು