ಮುಖಪುಟ /ನಮ್ಮ ದೇವಾಲಯಗಳು  

ಧರ್ಮ ಕರ್ಮಗಳ ಸಂಗಮವೀ ಧರ್ಮಸ್ಥಳ
ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಇದೊಂದು ನ್ಯಾಯಪೀಠ
, ಸಾಹಿತ್ಯ ಸರಸ್ವತಿಯ ನೆಲೆವೀಡು, ಅನ್ನಪೂಣೆಯ ಸಿರಿನಾಡು, ಒಟ್ಟಿನಲ್ಲಿದು ಧರ್ಮಕರ್ಮಗಳ ಸಂಗಮ ಸ್ಥಳ.

*ಟಿ.ಎಂ.ಸತೀಶ್

Dharmasthala Temple, ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ದೇವಾಲಯ, dashavatara, Matsyavatara, kurmavatara, krishnavatara, ramavatara, varahavatara, parashuramavatara, buddavatara, kalki avatara,  ಧಶಾವತಾರ,  ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ರಾಮಾವತಾರ, ಪರಶುರಾಮಾವತಾರ, ಕೃಷ್ಣಾವತಾರ, ಬೌದ್ಧಾವತಾರ, ಕಲ್ಕಿ ಅವತಾರ. ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಎದ್ದೇಳು ಮಂಜುನಾಥ, ಏಳು ಬೆಳಗಾಯಿತು.. ಧರ್ಮದೇವತೆಗಳು ನಿನ್ನ ದರುಶನಕೆ ಕಾದಿಹರು, ಅಣ್ಣಪ್ಪಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನು... ಎಂಬ ಸುಪ್ರಭಾತದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿಯ ನಿತ್ಯಸೇವೆ ಆರಂಭವಾಗುತ್ತದೆ. ನೇತ್ರಾವತಿಯಲ್ಲಿ ಮಿಂದ ಜನರು ಸ್ವಾಮಿ ಶ್ರೀ ಮಂಜುನಾಥನ ದರುಶನಕ್ಕಾಗಿ ಸರತಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ.

ಭಗವಂತನ ದರ್ಶನ ಪಡೆದು ಕೃತಾರ್ಥರಾಗಿ ಹೆಗ್ಗಡೆಬೀಡಿಗೆ ತೆರಳಿ ಶ್ರೀವೀರೇಂದ್ರಹೆಗ್ಗಡೆಯವರೊಂದಿಗೆ ತಮ್ಮ ದುಃಖ ದುಮ್ಮಾನ ಹೇಳಿಕೊಂಡು, ಪರಿಹಾರ ಪಡೆದು, ಮಂಜೂಷ ವಸ್ತುಸಂಗ್ರಹಾಲಯ, ಉದ್ಯಾನ ವೀಕ್ಷಣೆಯ ಬಳಿಕ ಅನ್ನಪೂರ್ಣ ಹಾಲಿನಲ್ಲಿ ಭೋಜನಕ್ಕೆ ತೆರಳುತ್ತಾರೆ.

ಬಂದರು ನಗರಿ ಮಂಗಳೂರಿನಿಂದ 60 ಕಿ.ಮೀಟರ್ ದೂರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಭೂಕೈಲಾಸ ಎಂದೇ ಪ್ರಖ್ಯಾತವಾಗದೆ. ನೇತ್ರಾವತಿಯ ಮಡಿಲ ಘಟ್ಟಪ್ರದೇಶದ ಸುಂದರ ಮಡಲಲ್ಲಿ ಶಿವನೇ ನೆಲೆಸಿಹ ಪುಣ್ಯಕ್ಷೇತ್ರ. ಧರ್ಮಸ್ಥಳ, ಧರ್ಮದ ನೆಲೆವೀಡು. ಸರ್ವಧರ್ಮ ಸಮನ್ವಯದ ನಾಡು. ಇಲ್ಲಿರುವದು ಶೈವದೇವರು ಅರ್ಥಾತ್ ಮಂಜುನಾಥ. ಈ ದೇವಾಲಯದಲ್ಲಿ ಈಶ್ವರನ ಪೂಜಿಸುವ ಅರ್ಚಕರು ವೈಷ್ಣವರು, ದೇಗುಲದ ಧರ್ಮಾಕಾರಿಗಳು ಜೈನಧರ್ಮೀಯರಾದ ಡಾ. ಡಿ. ವೀರೇಂದ್ರಹೆಗ್ಗಡೆಯವರು.ಹೀಗಾಗಿ ಮೂರು ಧರ್ಮಗಳ ಸಂಗಮ ಸ್ಥಳವಾಗಿದೆ. ಮಿಗಿಲಾಗಿ ಇಲ್ಲಿನ ಎತ್ತರದ ಬೆಟ್ಟದ ಮೇಲೆ ಗೊಮ್ಮಟೇಶ್ವರನೂ ನಿಂತಿದ್ದಾನೆ. 210 ಟನ್ ಏಕಶಿಲೆಯ 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಯನ್ನು 1982ರಲ್ಲಿ ರತ್ನಗಿರಿಯ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಯಿತು.

ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಇದೊಂದು ನ್ಯಾಯಪೀಠ, ಸಾಹಿತ್ಯ ಸರಸ್ವತಿಯ ನೆಲೆವೀಡು, ಅನ್ನಪೂಣೆಯ (ನಿತ್ಯ ದಾಸೋಹದ) ಸಿರಿನಾಡು, ಒಟ್ಟಿನಲ್ಲಿದು ಧರ್ಮಕರ್ಮಗಳ ಸಂಗಮ ಸ್ಥಳ.

Dharmasthala Temple, ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ದೇವಾಲಯ, dashavatara, Matsyavatara, kurmavatara, krishnavatara, ramavatara, varahavatara, parashuramavatara, buddavatara, kalki avatara,  ಧಶಾವತಾರ,  ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ರಾಮಾವತಾರ, ಪರಶುರಾಮಾವತಾರ, ಕೃಷ್ಣಾವತಾರ, ಬೌದ್ಧಾವತಾರ, ಕಲ್ಕಿ ಅವತಾರ. ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಇತಿಹಾಸ :ಈ ಕ್ಷೇತ್ರಕ್ಕೆ ಸುಮಾರು 8೦೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ. ಈ ಪ್ರಾಂತದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ-ಪತಿ ವಾಸವಾಗಿದ್ದರು. ಒಮ್ಮೆ ಇವರ ಮನೆಗೆ ೪ ಮಂದಿ ಅತಿಥಿಗಳು ಬಂದರು. ನೇಮನಿಷ್ಠೆಯಿದ ದಂಪತಿ ಅಥಿತಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಆಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟುಕೊಟ್ಟರು. ಕಾಳರಾಹು, ಕಾಳಕಾಯ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪೆರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಅರ್ಚಕರು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಧರ್ಮದೇವತೆಗಳೂ ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತ.

ಅಂದಿನಿಂದ ಇಲ್ಲಿ ಧರ್ಮ ನೆಲೆ ನಿಂತಿದ್ದಾರೆ. ತಾವೂ ಮಂಜುನಾಥನ ಪೂಜಿಸುತ್ತಾ, ಧರ್ಮರಕ್ಷಣೆಗೆ ತೊಡಗಿದ್ದಾರೆ. ಇಂದೂ ಇಲ್ಲಿ ಧರ್ಮಕಾರ್ಯಗಳು ನಿರಂತರವಾಗಿ ಯಾವ ವಿಘ್ನವೂ ಇಲ್ಲದೆ ಜರುಗುತ್ತವೆ. ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ ಮಹೋತ್ಸವ, ಸರ್ವಧರ್ಮ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಧರ್ಮಸ್ಥಳದ ದೇವಾಲಯದ ಆಡಳಿತದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ‍್ಯನಿರ್ವಹಿಸುತ್ತಿವೆ. ನಿರುದ್ಯೋಗಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ರುಡ್‌ಸೆಟ್ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಅಲ್ಲಿ ನಿರುದ್ಯೋಗಿ ಯುವಕರಿಗೆ ವೃತ್ತಿ ತರಬೇತಿ ನೀಡಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳೂ ನಡೆಯುತ್ತವೆ. 1933ರಿಂದ ಇಲ್ಲಿ ಸರ್ವಧರ್ಮ ಸಾಹಿತ್ಯ ಸಮ್ಮೇಳನವೂ ಜರುಗುತ್ತಾ ಬಂದಿದೆ. ಸುಮಾರು 6೦ ವರ್ಷಗಳ ಹಿಂದೆಯೇ ಸರ್ವಧರ್ಮ ಸಮ್ಮೇಳನ ನಡೆಸಿದ ಕೀರ್ತಿ ಧರ್ಮಸ್ಥಳದ್ದು. ಇದರ ಹಿಂದಿನ ಶಕ್ತಿ ಅಂದಿನ ಧರ್ಮಾಕಾರಿಗಳಾದ ಮಂಜಯ್ಯ ಹೆಗಡೆ ಅವರು. ವೀರೇಂದ್ರ ಹೆಗ್ಗಡೆ ಅವರು ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

Dr.veerendra Hegde, ಶ್ರೀ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ, dashavatara, Matsyavatara, kurmavatara, krishnavatara, ramavatara, varahavatara, parashuramavatara, buddavatara, kalki avatara,  ಧಶಾವತಾರ,  ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ರಾಮಾವತಾರ, ಪರಶುರಾಮಾವತಾರ, ಕೃಷ್ಣಾವತಾರ, ಬೌದ್ಧಾವತಾರ, ಕಲ್ಕಿ ಅವತಾರ. ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಧರ್ಮದೇವತೆಗಳ ನ್ಯಾಯಪೀಠ : ಧರ್ಮದೇವತೆಗಳು ನೆಲೆಹಿಸ ಈ ತಾಣ ಒಂದು ರೀತಿಯಲ್ಲಿ ನ್ಯಾಯಾಲಯ ಕೂಡ. ಕೋರ್ಟ್ ಕಚೇರಿಗಳಲ್ಲಿ ಪರಿಹಾರ ಕಾಣದ ಎಷ್ಟೋ ಪ್ರಕರಣಗಳಿಗೆ ಶ್ರೀಕ್ಷೇತ್ರದಲ್ಲಿ ಪರಿಹಾರ ಸಿಕ್ಕಿದೆ. ಇದಕ್ಕೆ ಈ ಸ್ಥಳದ ಮಹಿಮೆ, ಹಾಗೂ ಜನರಿಗೆ ಈ ದೇವರ ಬಗ್ಗೆ ಇರುವ ನಂಬಿಕೆ ಮಿಗಿಲಾಗಿ ಅಣ್ಣಪ್ಪನ ಭಯವೂ ಕಾರಣ.

ಅತಿಥಿ ಸತ್ಕಾರ : ಪೆರ್ಗಡೆ ದಂಪತಿ 8೦೦ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅತಿಥಿ ಸತ್ಕಾರ ಇಂದೂ ಇಲ್ಲಿ ಮುಂದುವರಿದಿದೆ. ಇಲ್ಲಿಗೆ ಬರುವ ಎಲ್ಲ ಭಕ್ತರೂ ಒಂದಲ್ಲಾ ಒಂದು ರೀತಿಯಲ್ಲಿ ಅತಿಥಿಗಳೇ. ನಿತ್ಯ ಇಲ್ಲಿ ಕನಿಷ್ಠ ಹತ್ತಾರು ಸಾವಿರಾರು ಭಕ್ತರಿಗೆ ಉಚಿತವಾಗಿ ಅನ್ನಸಂತರ್ಪಣೆ ನಡೆಯುತ್ತದೆ. ಅದಕ್ಕಾಗೆ ಸುಸಜ್ಜಿತವಾದ ಅನ್ನಪೂರ್ಣ ಹಾಲ್ ನಿರ್ಮಿಸಲಾಗಿದೆ.

ಅನ್ನದಾನದ ಜೊತೆಗೆ ವಿದ್ಯಾದಾನ, ವಸ್ತ್ರದಾನ, ಅಭಯದಾನ ಹಾಗೂ ಔಷಧದಾನವೂ ಇಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಅತ್ಯಾಧುನಿಕ ಸಲಕರಣೆಗಳಿಂದ ಸಜ್ಜಾದ ಆಸ್ಪತ್ರೆ ನಿರ್ಮಿಸಿ, ದೀನದಲಿತರಾದಿಯಾಗಿ ಸರ್ವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕ್ಕೆ ಕರ್ನಾಟಕದ ಎಲ್ಲ ಪ್ರಮುಖ ನಗರ-ಪಟ್ಟಣಗಳಿಂದಲೂ ನೇರಬಸ್ ಸೌಕರ್ಯಇದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು