ಮುಖಪುಟ /ನಮ್ಮದೇವಾಲಯಗಳು

ಅರ್ಕೇಶ್ವರನ ಸನ್ನಿಧಿ - ಎಡತೊರೆ ಕ್ಷೇತ್ರ

*ಟಿ.ಎಂ.ಸತೀಶ್

Edatore Arkeswara temple ಎಡತೊರೆ ಅರ್ಕೇಶ್ವರ ದೇವಸ್ಥಾನ, ಕನ್ನಡರತ್ನ.ಕಾಂ ಚಿತ್ರ, kannadaratna.com, ಎಡತೊರೆ ಅರ್ಕೇಶ್ವರ ದೇವಾಲಯ, dashavatara, Matsyavatara, kurmavatara, krishnavatara, ramavatara, varahavatara, parashuramavatara, buddavatara, kalki avatara,  ಧಶಾವತಾರ,  ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ರಾಮಾವತಾರ, ಪರಶುರಾಮಾವತಾರ, ಕೃಷ್ಣಾವತಾರ, ಬೌದ್ಧಾವತಾರ, ಕಲ್ಕಿ ಅವತಾರ. ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಕನ್ನಡ ನಾಡಿನ ಜೀವನದಿ ಕಾವೇರಿಯ ಬಲದಂಡೆಯಲ್ಲಿರುವ ಪವಿತ್ರ ಪುಣ್ಯಕ್ಷೇತ್ರ ಎಡತೊರೆ. ತಲಕಾವೇರಿಯಲ್ಲಿ ಹುಟ್ಟಿ ಸಮುದ್ರ ಸೇರುವವರೆಗೆ ಕಾವೇರಿ ತಾಯಿ ಹರಿಯುವ ಇಕ್ಕೆಲಗಳಲ್ಲಿ ಇರುವ ಹಲವು ಪುಣ್ಯಕ್ಷೇತ್ರಗಳ ಪೈಕಿ ಎಡತೊರೆಯೂ ಒಂದು.

ಮೈಸೂರು ಜಿಲ್ಲೆ ಕೃಷ್ಣರಾಜನಗರದ ಹೊರವಲಯದಲ್ಲಿರುವ ಹಳೆಯ ಊರೇ ಎಡತೊರೆ. ಕಾವೇರಿ  ಇಲ್ಲಿ ತೊರೆಯಂತೆ ಎಡಕ್ಕೆ ತಿರುಗಿ ಹರಿಯುವ ಕಾರಣ ಈ ಊರಿಗೆ ಎಡತೊರೆ ಎಂದೇ ಹೆಸರಾಗಿದೆ. ಇಲ್ಲಿ ಶ್ರೀ ಅರ್ಕೇಶ್ವರಸ್ವಾಮಿಯ ಪುರಾತನ ದೇವಾಲಯವಿದೆ.

ಈ ದೇವಾಲಯವನ್ನು ಮೈಸೂರು ಅರಸು ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದರೆಂದೂ,  11ನೆಯ ಶತಮಾನದಲ್ಲಿ ಗಂಗರನ್ನು ಸೋಲಿಸಿ ರಾಜೇಂದ್ರ ಚೋಳ ಈ ಸ್ಥಳವನ್ನು ವಶಪಡಿಸಿಕೊಂಡಿದ್ದನೆಂದು ಇತಿಹಾಸ ಸಾರುತ್ತದೆ.

ಈ ಊರು ಪದೇಪದೇ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಅಪಾರ ಹಾನಿ ಅನುಭವಿಸುತ್ತಿತ್ತು. ಸರ್.ಎಂ.ವಿಶ್ವೇಶ್ವರಾಯರ ದೂರದರ್ಶಿತ್ವದ ಫಲವಾಗಿ ಕೃಷ್ಣರಾಜಸಾಗರ ಅಣೆಕಟ್ಟು (ಕೆ.ಆರ್.ಎಸ್) ಕಟ್ಟಿದ ಬಳಿಕ, ಊರಿನ ಒಂದು ಭಾಗ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ಆಗ ಕೃಷ್ಣರಾಜ ಒಡೆಯರು ಹಳೆ ಊರಿಗೆ 3 ಕಿಲೋ ಮೀಟರ್ ದೂರದಲ್ಲಿ 75 ವರ್ಷಗಳ ಹಿಂದೆ ಹೊಸ ಪಟ್ಟಣ ನಿರ್ಮಿಸಿದರು. ಹೀಗಾಗಿ ಈ ಊರಿಗೆ ಕೃಷ್ಣರಾಜನಗರ ಎಂಬ ಹೆಸರು ಬಂದಿದೆ.

ಮೈಸೂರು ಮಹಾರಾಜರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ದೇವಾಲಯದಲ್ಲಿ ಕಲ್ಯಾಣ ಮಂಟಪವೂ ಇದ್ದು, ಇಲ್ಲಿ ವಿವಾಹಾದಿ ಶುಭಕಾರ್ಯಗಳೂ ನಡೆಯುತ್ತವೆ.

ಸೂರ್ಯಭಗವಂತನು ಇಲ್ಲಿನ ಪ್ರಶಾಂತ ವಾತಾವರಣಕ್ಕೆ ಮನಸೋತು, ಶಿವರಾತ್ರಿಯ ದಿನ, ಕಾವೇರಿಯಲ್ಲಿ ಮಿಂದು ಮಡಿಯುಟ್ಟು ಶಿವನನ್ನು ಪೂಜಿಸಿದನಂತೆ, ಶಿವ ಪ್ರತ್ಯಕ್ಷನಾಗಿ ಸ್ವಯಂಭು ಲಿಂಗರೂಪದಲ್ಲಿ ಸೂರ್ಯನಿಗೆ ದರ್ಶನ ನೀಡಿದನಂತೆ.  ಹೀಗಾಗಿ ಈ ದೇವರಿಗೆ ಅರ್ಕೇಶ್ವರ ಎಂಬ ಹೆಸರು ಬಂತೆಂಬುದು ಪ್ರತೀತಿ. ಇಂದಿಗೂ ಶಿವರಾತ್ರಿಯ ದಿನ ಸೂರ್ಯೋದಯದ ಕಾಲದಲ್ಲಿ ಪ್ರಥಮ ಸೂರ್ಯಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುತ್ತವೆ.

ಸೂರ್ಯಭಗವಾನನ ತಪಸ್ಸಿನ ಫಲವಾಗಿ ಶಿವ ನೆಲೆಸಿದ ಈ ಕ್ಷೇತ್ರದಲ್ಲಿ ರಥಸಪ್ತಮಿಯ ದಿನ ರಥೋತ್ಸವ ಹಾಗೂ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ಜರುಗುತ್ತದೆ.

ಮುಖಪುಟ /ನಮ್ಮ ದೇವಾಲಯಗಳು