ಮುಖಪುಟ /ನಮ್ಮದೇವಾಲಯಗಳು   

ರಾಜ್ಯದ ಏಕೈಕ ಗರುಡ ದೇವಾಲಯ

ಅರ್ಜುನನ ಸರ್ಪದೋಷ ನಿವಾರಿಸಿದ ಮುಳಬಾಗಿಲು ಬಳಿಯ ಕ್ಷೇತ್ರ

* ಟಿ.ಎಂ. ಸತೀಶ್

Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ರಾಕ್ಷಸನಾದ ರಾವಣ ವನವಾಸದಲ್ಲಿದ್ದ ಸೀತಾ ಮಾತೆಯನ್ನು ಅಪಹರಿಸಿ ಪುಷ್ಪಕ ವಿಮಾನದಲ್ಲಿ ಲಂಕೆಗೆ ಹೊತ್ತೊಯ್ಯುತ್ತಿದ್ದಾಗ, ಸೀತೆ  ಕಾಪಾಡಿ ಕಾಪಾಡಿ ಎಂದು ಕೂಗುತ್ತಾಳೆ. ಆಕೆಯ ಆಕ್ರಂದನ ಕೇಳಿದ ಜಟಾಯು ಎಂಬ ಪಕ್ಷಿ  ರಾವಣನನ್ನು ತಡೆಯಲು ಮತ್ತು ಸೀತಾ ದೇವಿಯನ್ನು ಕಾಪಾಡಲು ಪ್ರಯತ್ನಿಸಿತು, ರಾವಣ ಆಗ ಜಟಾಯುವಿನ ಎರಡೂ ರೆಕ್ಕೆಗಳನ್ನು ಕತ್ತರಿಸಿದಾಗ ಅದು ಭೂಮಿಗೆ ಬಿದ್ದು ನರಳಿ, ಸೀತೆಯನ್ನು ಹುಡುಕುತ್ತಾ ಬಂದ ರಾಮನಿಗೆ ವಿಷಯ ತಿಳಿಸಿ ಪ್ರಾಣ ಬಿಟ್ಟಿತು ಎಂಬುದು ರಾಮಾಯಣ ಓದಿದ ನಮಗೆಲ್ಲರಿಗೂ ತಿಳಿದಿದೆ.

ಆದರೆ, ಈ ಜಟಾಯು ಪಕ್ಷಿ ರಾವಣನನ್ನು ತಡೆದಿದ್ದು ಎಲ್ಲಿ, ಹೋರಾಡಿ ರೆಕ್ಕೆ ಕಳೆದುಕೊಂಡು ಕೆಳಗೆ ಬಿದ್ದಿದ್ದು ಎಲ್ಲಿ ಎಂಬುದು ಹಲವರಿಗೆ ಗೊತ್ತಿಲ್ಲ. ಆ ಸ್ಥಳ ಕರ್ನಾಟಕದಲ್ಲೇ ಇದೆ ಎಂಬುದೂ ಅನೇಕರಿಗೆ ತಿಳಿದಿಲ್ಲ. ಹೌದು ಈ ಸ್ಥಳ ಇರುವುದು ಕರ್ನಾಟಕದಲ್ಲೇ ಅದು ರಾಜ್ಯದ ರಾಜಧಾನಿ ಬೆಂಗಳೂರಿಗೆ ಅತಿ ಸಮೀಪದಲ್ಲೇ. ಅದುವೇ ಕೊಲದೇವಿ ಗ್ರಾಮದ ರಾಜ್ಯದ ಏಕೈಕ ಗರುಡ ದೇವಾಲಯ ಇರುವ ಕ್ಷೇತ್ರವಂತೆ.

ಅಷ್ಟ ಸರ್ಪದೋಷ ನಿವಾರಣಾ ಕ್ಷೇತ್ರ ಎಂದೇ ಖ್ಯಾತವಾಗಿರುವ ಇಲ್ಲಿ ಗರುಡ ದೇವರ ದರ್ಶನ ಮಾಡಿ, ಪೂಜೆ ಸಲ್ಲಿಸಿದರೆ ಎಂಟು ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ ಎಂದು ದೇವಾಲಯದ ಅರ್ಚಕರಾದ ಪದ್ಮನಾಭ ಆಚಾರ್ಯ ಮತ್ತು ಶ್ರೀನಿವಾಸ್ ಅವರು ತಿಳಿಸುತ್ತಾರೆ.

Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ದ್ವಾಪರದಲ್ಲಿ ಖಾಂಡವ ದಹನ ಮಾಡಿದಾಗ ಹಲವು ಸರ್ಪಗಳನ್ನು ಕೊಂದ ಅರ್ಜುನನಿಗೆ ಸರ್ಪದೋಷ ಸುತ್ತಿಕೊಂಡಿರುತ್ತದೆ. ಇದನ್ನು ಅರಿತ ಶ್ರೀಕೃಷ್ಣ, ಅರ್ಜುನನಿಗೆ ತ್ರಿಕರಣಶುದ್ಧಿಯಿಂದ ಶ್ರೀಮನ್ನಾರಾಯಣನ ಪ್ರಾರ್ಥನೆ ಮಾಡುವಂತೆ ತಿಳಿಸಿದನಂತೆ. ಕೃಷ್ಣನ ಆಣತಿಯಂತೆ ಶ್ರದ್ಧಾಭಕ್ತಿಯಿಂದ ಅರ್ಜುನ ನಾರಾಯಣನನ್ನು ಸ್ಮರಿಸಿ ಧ್ಯಾನಿಸಿದಾಗ, ನಾರಾಯಣ, ತನ್ನ ವಾಹನವಾದ ಗರುಡನಿಗೆ ಭೂಲೋಕಕ್ಕೆ ಹೋಗಿ ಅರ್ಜುನನ ಸರ್ಪದೋಷ ನಿವಾರಣೆ ಮಾಡು ಎಂದು ಸೂಚಿಸಿದನಂತೆ. ನಾನು ಮಾತಾಪಿತೃ ಸ್ವರೂಪಿಗಳಾದ ನಿಮ್ಮಿಬ್ಬರನ್ನು (ನಾರಾಯಣ –ಲಕ್ಷ್ಮೀ) ಬಿಟ್ಟು ತಾನೊಬ್ಬನೇ ಭೂಲೋಕಕ್ಕೆ ಹೋಗುವುದಿಲ್ಲ. ನೀವೂ ನನ್ನೊಂದಿಗೆ ಬನ್ನಿ ಎಂದು ಪ್ರಾರ್ಥಿಸಿದನಂತೆ. ಹೀಗಾಗಿ ಲೋಕ ಕಲ್ಯಾಣಾರ್ಥ ಗರುಡನ ಜೊತೆಗೆ ಲಕ್ಷ್ಮೀನಾರಾಯಣರೂ ಬಂದರಂತೆ. ಹೀಗಾಗಿಯೇ ದೇವಾಲಯದ ಪ್ರಧಾನಗರ್ಭಗುಡಿಯಲ್ಲಿರುವ ಗರುಡನ ವಿಗ್ರಹದ ಬಲ ಭಾಗದಲ್ಲಿ ನಾರಾಯಣ ಮತ್ತು ಎಡ ಭಾಗದಲ್ಲಿ ಲಕ್ಷ್ಮೀಯ ವಿಗ್ರಹಗಳಿವೆ, ಶಂಖ ಚಕ್ರಗಳೂ ಇವೆ ಎಂದು ಅರ್ಚಕರಾದ ಪದ್ಮನಾಭ ಅವರು ತೋರಿಸುತ್ತಾರೆ. ಅರ್ಜುನನ ಸರ್ಪದೋಷ ನಿವಾರಿಸಿದ ಈ ಗರುಡನ ಮೈ ಮೇಲೆ ಎಂಟು ನಾಗಗಳೂ ಇವೆ. ಆದ್ದರಿಂದಲೇ ಇಲ್ಲಿ ಪೂಜೆ ಮಾಡಿಸಿದರೆ ಎಂಟು ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವಂತೆ.

ದೇವಾಲಯದಲ್ಲಿ ಸುಂದರವಾದ ಆಂಜನೇಯನ ವಿಗ್ರಹವೂ ಇದೆ. ಈ ಕ್ಷೇತ್ರಕ್ಕೆ ಪ್ರಾಣ ದೇವರೂ ಶಕ್ತಿ ತುಂಬಿದ್ದಾನೆ. ಇಲ್ಲಿ ಆಂಜನೇಯ ನೆಲೆಸಿದ ಬಗ್ಗೆಯೂ ಐತಿಹ್ಯವಿದೆ. ಬಲಶಾಲಿಯಾದ ಜಟಾಯು ರಾವಣನೊಂದಿಗೆ ಹೋರಾಡಿ ತನಗೆ ಬಲ ನೀಡಿದ್ದ ರೆಕ್ಕೆಯನ್ನೇ ಕಳೆದುಕೊಂಡು ದುರ್ಬಲನಾಗಿ ಕೆಳಗೆ ಬಿದ್ದು ರಾಮ ರಾಮ ಎಂದು ನರಳುತ್ತಿದ್ದಾಗ ತನ್ನ ಪ್ರಭುವಾದ ರಾಮದೇವರನ್ನು ಕರೆಯುತ್ತಿರುವವರು ಯಾರು?, ಅವರಿಗೆ ತಾನು ಸಹಾಯ ಮಾಡಬೇಕು ಎಂದು ಆಂಜನೇಯನೂ ಇಲ್ಲಿಗೆ ಬಂದನಂತೆ, Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ಆದರೆ, ಶ್ರೀರಾಮ ದೇವರ ಅವತಾರ ಆಗಿರುವುದೇ ರಾವಣ ಸಂಹಾರಕ್ಕಾಗಿ ಹೀಗಾಗಿ ಇದು ತನ್ನ ಕಾರ್ಯವಲ್ಲ ಎಂಬುದನ್ನು ಮನಗಂಡ ಹನುಮಂತ ಜಟಾಯುವಿನ ನೋವನ್ನಷ್ಟೇ ನಿವಾರಿಸಿ, ಅಲ್ಲೇಯೇ ನೆಲೆನಿಂತನಂತೆ. ಹೀಗಾಗಿಯೇ ಈ ಗರುಡ ದೇವರ ದೇವಾಲಯದ ಬಲ ಭಾಗದಲ್ಲಿ ಆಂಜನೇಯನ ಗುಡಿಯೂ ಇದೆ. ವಿಘ್ನ ನಿವಾರಕ ಗಣಪನೂ ಇಲ್ಲಿದ್ದಾನೆ.

ಪುರಾತನವಾದ ಈ ದೇವಾಲಯ ವಾಸ್ತುವಿನ್ಯಾಸದಿಂದ ಸಾಧಾರಣ ದೇವಾಲಯವಷ್ಟೇ. ಗರ್ಭಗೃಹ ಕಲ್ಲಿನ ನಿರ್ಮಾಣವಾಗಿದ್ದು, ಈಗ ಹೊರಗೆ ಗಾರೆಯ ಕಟ್ಟಡ ಇದೆ.  ನಿತ್ಯವೂ ನೂರಾರು ಭಕ್ತರು ಆಗಮಿಸುತ್ತಾರೆ. Garuda Temple, Koladevi, Mulabagalu, temples of Karnataka, karnataka temples, ಕರ್ನಾಟಕದ ದೇವಾಲಯಗಳು, ourtemples.in, kannadaratna.com T.M.Satish, ಇಲ್ಲಿ ಅರ್ಚಕರಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಭವಿಷ್ಯವನ್ನೂ ತಿಳಿಯುತ್ತಾರೆ. ವಿದ್ಯಾಭ್ಯಾಸದಲ್ಲಿ ಹಿಂದಿರುವವರು ಇಲ್ಲಿ ಬಂದು ಪೂಜೆ ಮಾಡಿಸಿದರೆ ಅವರಿಗೆ ಏಕಾಗ್ರತೆ ಹೆಚ್ಚಿ ವಿದ್ಯಾವಂತರಾಗುತ್ತಾರಂತೆ. ಅವಿವಾಹಿತರಿಗೆ ದೋಷ ಪರಿಹಾರವಾಗಿ ಶೀಘ್ರ ವಿವಾಹ ನೆರವೇರುತ್ತದಂತೆ, ಮಕ್ಕಳಿಲ್ಲದವರಿಗೆ ಇಲ್ಲಿ ಲಕ್ಷ್ಮೀನಾರಾಯಣರು ಸಂತಾನ ಭಾಗ್ಯವನ್ನೂ ಕರುಣಿಸುತ್ತಾರಂತೆ. ಒಟ್ಟಾರೆಯಾಗಿ ಕೋಲಾರ ಜಿಲ್ಲೆಯ ಈ ಕ್ಷೇತ್ರ ಪವಾಡಗಳ ನೆಲೆವೀಡಾಗಿದೆ.

ಬೆಂಗಳೂರು ನಗರದಿಂದ 123 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ, ಮುಳಬಾಗಿಲಿನಿಂದ 15 ಕಿ.ಮೀ. ದೂರದಲ್ಲಿದೆ. ಮುಳಬಾಗಲಿನಿಂದ ಶ್ರೀನಿವಾಸಪುರಕ್ಕೆ ಹೋಗುವ ಮಾರ್ಗದಲ್ಲಿ  ಮುಡಿಯನೂರು ಬಳಿ ಬಲಕ್ಕೆ ತಿರುಗಿದರೆ ನೇರವಾಗಿ ಗರುಡ ದೇವಾಲಯಕ್ಕೆ ಹೋಗಬಹುದು.

ಸನಿಹದಲ್ಲೇ ಕುರುಡುಮಲೆ ಗಣಪತಿ, ಸೋಮೇಶ್ವರ ದೇವಾಲಯಗಳೂ ಇವೆ. ಮುಳಬಾಗಲಲ್ಲಿ ಆಂಜನೇಯ ಹಾಗೂ ವಿಠ್ಠಲ ನಾರಾಯಣ ದೇವಾಲಯಗಳೂ ಇವೆ. ಆವನಿಯಲ್ಲಿ ರಾಮಲಿಂಗೇಶ್ವರ ದೇವಾಲಯವಿದ್ದು, ಮಾರ್ಗದಲ್ಲಿ ವಿರೂಪಾಕ್ಷಿ ಮತ್ತು ಪಂಚಮುಖಿಗೂ ಹೋಗಬಹುದು.

 ಮುಖಪುಟ /ನಮ್ಮದೇವಾಲಯಗಳು