ಮುಖಪುಟ /ನಮ್ಮ ದೇವಾಲಯಗಳು  

ಗುಂಜಾ ನರಸಿಂಹ ದೇವಾಲಯ

*ಟಿ.ಎಂ. ಸತೀಶ್

T Narasipura, Gunja Narasimha swamy temple, Mysore, ಗುಂಜಾ ನರಸಿಂಹಸ್ವಾಮಿ ದೇವಾಲಯ ದೇವರು,ಮೈಸೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಸಹ ಹರಿಹರರ ಕ್ಷೇತ್ರ. ಕಾವೇರಿ, ಕಪಿಲೆಯ ಸ್ಫಟಿಕ ಸರೋವರದಲ್ಲಿ ಸಂಗಮವಾಗುತ್ತವೆ. ಈ ಮೂರರ ಸಂಗಮ ಸ್ಥಳವಾದ್ದರಿಂದಲೇ ಇದಕ್ಕೆ ತ್ರಿಮಕೂಟ, ತಿರುಮ ಕೂಡಲು  ಎನ್ನುತ್ತಾರೆ, ನದಿಯ ದಡದಲ್ಲಿ ಗುಂಜಾ ನರಸಿಂಹ ನೆಲೆಸಿರುವುದರಿಂದ ಕ್ಷೇತ್ರಕ್ಕೆ ತಿರಮಕೂಡಲು ನರಸೀಪುರ ಎಂದು ಹೆಸರು ಬಂದಿದೆ ಎಂಬುದು ಹಿರಿಯರ ಅಭಿಪ್ರಾಯ.

ಇಲ್ಲಿ ಅಗಸ್ತ್ಯೇಶ್ವರ ದೇವಾಲಯದ ಜೊತೆಗೆ ಗುಂಜಾ ನರಸಿಂಹಸ್ವಾಮಿ ದೇವಾಲಯವಿದೆ. ನದಿಯ ಆಚೆ ದಡದಲ್ಲಿರುವ ಈ ದೇವಾಲಯದ ಪ್ರಮುಖ ದೇವರು ಭಕ್ತ ಪ್ರಹ್ಲಾದರ ಮೊರೆ ಕೇಳಿ ಕಂಬದಲ್ಲಿ ಅವತರಿಸಿದ ನರಸಿಂಹ. ನರಸಿಂಹ ದೇವರ ಕೈಯಲ್ಲಿ ಗುಲಗಂಜಿ ಇರುವ ಕಾರಣ ಗುಂಜಾ ನರಸಿಂಹ ಎಂದೇ ಖ್ಯಾತವಾಗಿದೆ.

ದ್ರಾವಿಡ ಶೈಲಿಯಲ್ಲಿರುವ ಗುಂಜಾ ನರಸಿಂಹಸ್ವಾಮಿಯ ದೇವಾಲಯವನ್ನು ಮಧ್ಯಯುಗದ ಕಾಲದ್ದೆಂದೂ ಹೇಳಲಾಗುತ್ತದೆ. ಶಿಥಿಲವಾಗಿದ್ದ ಈ ದೇವಾಲಯವನ್ನು 16ನೇ ಶತಮಾನದಲ್ಲಿ ಮೈಸೂರು ಒಡೆಯರ ದಳವಾಯಿ ಲಿಂಗಣ್ಣ ಜೀರ್ಣೋದ್ಧಾರ ಮಾಡಿಸಿರುವುದಾಗಿ ತಿಳಿದುಬರುತ್ತದೆ. ಮುಖಮಂಟಪದ ಬಳಿಯಿರುವ T Narasipura, Gunja Narasimha swamy temple, Mysore, ಗುಂಜಾ ನರಸಿಂಹಸ್ವಾಮಿ ದೇವಾಲಯ ದೇವರು,ಬಲಿಪೀಠದ ಪಕ್ಕದಲ್ಲಿ  ಎರಡು ಕಂಬಗಳ ಮೇಲೆ ಮತ್ತು ಮಹಾದ್ವಾರದ ಬಳಿಯ ಮತ್ತೊಂದು ಕಂಬದಲ್ಲಿ ಕೈಮುಗಿದು ನಿಂತಿರುವ ಭಕ್ತವಿಗ್ರಹಗಳಿವೆ. ದೇವಾಲಯದ ಅಭಿವೃದ್ಧಿ ಮಾಡಿ, ಕೆಲವು ಭಾಗ ಕಟ್ಟಿಸಿದ ಮೂಗೂರು ನಾಯಕರ ಮೂರ್ತಿಗಳು ಇದೆಂದು ಹೇಳಲಾಗುತ್ತದೆ.

ಇಲ್ಲಿರುವ ಅಮ್ಮನವರ ಗುಡಿಯಲ್ಲಿ  ಹನುಮಂತನ ಸುಂದರಮೂರ್ತಿ, ಶ್ರೀಕೃಷ್ಣಲೀಲೆಯ ದೃಶ್ಯಗಳನ್ನು ಕೆತ್ತಲಾಗಿದೆ. ನರಸಿಂಹನ ವಿವಿಧ ಭಂಗಿಗಳಲ್ಲಿರುವ ಶಿಲ್ಪಗಳು ದೇವಾಲಯದ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯ