ಮುಖಪುಟ
/ನಮ್ಮದೇವಾಲಯಗಳು
ಹರಳೂರು ವೀರಭದ್ರೇಶ್ವರ ದೇವಾಲಯ
*ಟಿ.ಎಂ.ಸತೀಶ್
ವೀರಭದ್ರನ ಅವತಾರದ ಬಗ್ಗೆ ಒಂದು ಕಥೆ ಇದೆ. ದಕ್ಷ ರಾಜನ ಮಗಳು ಶಿವ ಸತಿ
ದಾಕ್ಷಾಯಿಣಿ ತನ್ನ ಪತಿಗೆ ಆದ ಅವಮಾನ ಸಹಿಸಲಾರದೆ ಯಜ್ಞಕುಂಡದಲ್ಲಿ ಬಿದ್ದು
ದಗ್ಧವಾಗಿ ಹೋದಾಗ ಕೋಪಗೊಂಡ ಶಿವನ ಅಂಶದಿಂದ ಹುಟ್ಟಿದವನೇ ಈ ವೀರಭದ್ರ. ವೀರಭದ್ರ
ದಕ್ಷ ಸಂಹಾರ ಮಾಡಿ, ಧರ್ಮೋತ್ಥಾನ ಮಾಡಿದನೆಂದು ತಿಳಿದುಬರುತ್ತದೆ.
ಈ ದೇವಾಲಯವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದ್ದು ನೂತನ
ಸಿಮೆಂಟ್ ಕಟ್ಟಡವಾಗಿ ಪರಿವರ್ತಿಸಲಾಗಿದೆ. ಒಳಭಾಗದಲ್ಲಿ ಹಳೆಯ ಕಲ್ಲಿನ ಕಟ್ಟಡವನ್ನು
ಹಾಗೇ ಉಳಿಸಿಕೊಳ್ಳಲಾಗಿದೆ. ದೇವಾಲಯ ಪ್ರವೇಶಿಸಲು ಮೆಟ್ಟಿಲುಗಳಿವೆ. ದೇಗುಲದ ಮೇಲೆ
ಗೋಪುರವಿದ್ದು ಗೋಪುರದ
ದೇವಾಲಯದಲ್ಲಿ 35 ಅಡಿ ಎತ್ತರದ ಬೃಹದಾಕಾರದ ಮರದಿಂದ ನಿರ್ಮಿಸಿದ ರಥವಿದ್ದು ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.innin | |||