ಮುಖಪುಟ /ನಮ್ಮ ದೇವಾಲಯಗಳು  

ಹಿರೇಮಗಳೂರಿನ ಕನ್ನಡ ರಾಮ ದೇವಾಲಯ

ದಕ್ಷಿಣ ಭಾರತದ ಪ್ರಥಮ ರಾಮಮಂದಿರ

*ಟಿ.ಎಂ.ಸತೀಶ್

Hiremagaluru, Kodandaramaswamy temple, Bhrghavapuri, Chikmagalur, Hiremagaluru Kannan, T.M.Satish, Journalist, malenadu, ಕೋದಂಡರಾಮ ದೇವಾಲಯ, ಹಿರೇ ಮಗಳೂರು, ಕನ್ನಡದ ಪುರೋಹಿತ, ಹಿರೇ ಮಗಳೂರು ಕಣ್ಣನ್, temples in karnataka, ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಹಿರೇ ಮಗಳೂರೂ ಒಂದು. ಪರಶುರಾಮನ ಕ್ಷೇತ್ರವೆಂದು ಪ್ರತೀತಿ ಪಡೆದ ಈ ಊರಿಗೆ ಭಾರ್ಗವಪುರಿ ಎಂಬ ಪೌರಾಣಿಕ ಹೆಸರಿತ್ತು. 11ನೇ ಶತಮಾನದಲ್ಲಿ ಸಖರಾಯಪಟ್ಟಣದ ಅರಸು ರುಕ್ಮಾಂಗದ ತನ್ನ ಇಬ್ಬರು ಪುತ್ರಿಯರ ಮದುವೆಯ ಸಂದರ್ಭದಲ್ಲಿ ಎರಡು ಊರುಗಳನ್ನು ಇಬ್ಬರಿಗೂ ಬಳುವಳಿಯಾಗಿ ನೀಡಿದನಂತೆ. ಹಿರಿಯ ಮಗಳಿಗೆ ಭಾರ್ಗವಪುರಿಯನ್ನೂ, ಕಿರಿಯ ಮಗಳಿಗೆ ಅಂಗಡಿ ಎಂಬ ಊರನ್ನೂ ನೀಡಿದ.

ಹಿರಿಯ ಮಗಳು ಪಡೆದ ಈ ಊರು ಕಾಲಾನಂತರದಲ್ಲಿ ಹಿರೇ ಮಗಳೂರಾದರೆ, ಅಂಗಡಿ ಬೆಳೆದು ಚಿಕ್ಕಮಗಳೂರು ಆಯಿತು ಎಂದು ಹೇಳಲಾಗುತ್ತದೆ.

ಹಿರೇಮಗಳೂರಿನಲ್ಲಿರುವ ಶ್ರೀಕೋದಂಡರಾಮಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾಗಿದೆ, ದಕ್ಷಿಣ ಭಾರತದ ಪ್ರಪ್ರಥಮ ರಾಮ ಮಂದಿರ ಇದೆಂಬ ಹೆಗ್ಗಳಿಕೆಯೂ ಈ ಪುರಾತನ ದೇವಾಲಯಕ್ಕಿದೆ ಎನ್ನುತ್ತಾರೆ ಊರ ಹಿರಿಯರು.

Hiremagaluru, Kodandaramaswamy temple, Bhrghavapuri, Chikmagalur, Hiremagaluru Kannan, T.M.Satish, Journalist, malenadu, ಕೋದಂಡರಾಮ ದೇವಾಲಯ, ಹಿರೇ ಮಗಳೂರು, ಕನ್ನಡದ ಪುರೋಹಿತ, ಹಿರೇ ಮಗಳೂರು ಕಣ್ಣನ್, temples in karnataka, ಈ ದೇವಾಲಯ ಹೊಯ್ಸಳರ ಎಲ್ಲ ದೇವಾಲಯಗಳಂತೆಯೇ ನಕ್ಷತ್ರಾಕಾರದ ಜಗಲಿಯ ಮೇಲಿದೆ. ದೇವಾಲಯದ ಬಿತ್ತಿಗಳಲ್ಲಿ ಸುಂದರವಾದ ಶಿಲ್ಪಾಲಂಕರಣಗಳು, ದೇವಾನು ದೇವತೆಗಳ ಶಿಲ್ಪಗಳು ಹಾಗೂ ಪುರಾಣದ ಕಥಾನಕಗಳು ಇವೆ. ಬೇರೆ ಹೊಯ್ಸಳ ದೇವಾಲಯಗಳಲ್ಲಿರುವಂತೆ ಹೆಚ್ಚಿನ ಸೂಕ್ಷ್ಮ ಕೆತ್ತನೆಯ ಶಿಲ್ಪಗಳು ಇಲ್ಲಿಲ್ಲದಿದ್ದರೂ, ದೇವಾಲಯದ ವಿಶಾಲ ಪ್ರಾಕಾರವನ್ನೊಮ್ಮೆ ಸುತ್ತು ಹಾಕಿದರೆ, ಅತ್ಯಂತ ಅದ್ಭುತ ಕೆತ್ತನೆಯ ನರಸಿಂಹ, ಕಾಳಿಂಗ ಮರ್ದನ ಕೃಷ್ಣ, ಲಕ್ಷ್ಮೀಯ ಕೆತ್ತನೆಗಳು ಹಾಗೂ ಆಳ್ವಾರರ, ಮಾಧವ ಹಾಗೂ ಸುಗ್ರೀವರ ಅಪರೂಪದ ವಿಗ್ರಹಗಳನ್ನು ಕಾಣಬಹುದು. ಹೊಯ್ಸಳರ ಕಾಲದ ಕಂಬ, ಕೆತ್ತನೆಯ ಕಲ್ಲಿನ ದೇವಾಲಯದ ಮೇಲೆ ಗಾರೆಯ ಗೋಪುರ ನಿರ್ಮಾಣ ಮಾಡಲಾಗಿದೆದೇವಾಲಯದ ಶಿಲ್ಪಕಲಾ ಸೊಬಗಷ್ಟೇ ಅಲ್ಲ,  ಸುಭಾಷಿತಗಳೂ ಇಲ್ಲಿ ಜನರ ಮನ ಸೆಳೆಯುತ್ತವೆ. ಎಡವಿದ ಕಾಲಿಗಿಂತ, ಎಡವಿದ ನಾಲಿಗೆ ಅಪಾಯ, ದೇಶ ಸೇವೆಯೇ ಈಶ ಸೇವೆ, ಮಾನವನ ಸೇವೆಯೇ ಮಾಧವನ ಸೇವೆ, ಜನ ಸೇವೆಯೇ ಜನಾರ್ದನ ಸೇವೆ, ಚಂದ್ರನ ಬೆಳದಿಂಗಳು ತಂಪು, ಶ್ರೀಗಂಧ ಇನ್ನಷ್ಟು ತಂಪು, ಸಜ್ಜನರ ಹೃದಯ ಅದಕ್ಕಿಂತ ತಂಪು, ಬಾಲ್ಯವೇ ಸ್ವಾಗತ ಭಾಷಣ, ಯೌವನವೇ ಉಪನ್ಯಾಸ, ಮುಪ್ಪೆ ವಂದನಾರ್ಪಣೆ ಮೊದಲಾದ ಮನಮುಟ್ಟುವಂಥ ವಾಕ್ಯಗಳು ನಮ್ಮ ಬದುಕಿನ ಸಾರ್ಥಕತೆಯ ಬಗ್ಗೆ ನಮ್ಮನ್ನು ಚಿಂತೆಯ ಒರೆಗಲ್ಲಿಗೆ ಹಚ್ಚುತ್ತವೆ.

ಈ ದೇವಾಲಯದ ಮತ್ತೂ ಒಂದು ವಿಶೇಷ, ಇಲ್ಲಿ ಶ್ರೀರಾಮ, ಜಯರಾಮ, ಕೋದಂಡರಾಮನಿಗೆ ಪೂಜೆ ನಡೆಯುವುದು ಸಂಪೂರ್ಣ ಕನ್ನಡದಲ್ಲಿ. ಸಂಸ್ಕೃತ ಶ್ಲೋಕ, ಮಂತ್ರಗಳನ್ನು ಹಾಗೂ ಆಳ್ವಾರರ ತಮಿಳು ಪ್ರಬಂಧಗಳನ್ನು ಮೂಲಕ್ಕೆ ಚ್ಯುತಿ ಆಗದ ರೀತಿ ಕನ್ನಡಕ್ಕೆ ತರ್ಜುಮೆ ಮಾಡಿರುವ, ಹೆಸರಾಂತ ವಾಗ್ಮಿ, ಹಿರೇಮಗಳೂರು ಕಣ್ಣನ್ ಅವರು, ಇಲ್ಲಿ ಕೋದಂಡರಾಮನಿಗೆ ಎಲ್ಲ ಸೇವೆಗಳನ್ನೂ ಕನ್ನಡದಲ್ಲಿಯೇ ನೆರವೇರಿಸುತ್ತಾರೆ.

ಕಣ್ಣನ್ ಅವರು, ಈ ದೇವಾಲಯಕ್ಕೆ ಒಂದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ, ಪ್ರಧಾನಗರ್ಭಗೃಹದಲ್ಲಿರುವ ರಾಮನ ವಿಗ್ರಹ ನಾಲ್ಕೂವರೆ ಅಡಿ ಎತ್ತರವಿದೆ. ಕೋದಂಡ ಅಂದರೆ ಬಿಲ್ಲನ್ನು ಮತ್ತು ಬಾಣವನ್ನು ರಾಮ ಕೈಯಲ್ಲಿ ಹಿಡಿದಿರುವ ಕಾರಣ ಕೋದಂಡರಾಮ ಎಂಬ ಹೆಸರು. ಎಡಬಲದಲ್ಲಿ ಸೀತಾ ಮಾತೆ ಮತ್ತು ಲಕ್ಷ್ಮಣರ ಮೂರ್ತಿಗಳಿವೆ. ಶ್ರೀರಾಮ ಇಲ್ಲಿ ಮುಖದಲ್ಲಿ ಶಾಂತಿ, ಸೊಂಟದಲ್ಲಿ ಕಾರುಣ್ಯ ಮತ್ತು ಮಂಡಿಯಲ್ಲಿ ಗಂಭೀರತೆ ಒಳಗೊಂಡು ಮೂರು ಭಂಗಿಯಲ್ಲಿ ನಿಂತಿದ್ದಾನೆ, ಸೀತಾಮಾತೆ ತಲೆ ತಗ್ಗಿಸದಿದ್ದರೂ, ಆಕೆಯ ಕಣ್ಣುಗಳು ಲಜ್ಜೆಯಿಂದ ನೆಲವನ್ನು ನೋಡುತ್ತಿರುವಂತೆ ಅಲ್ಪಭಂಗಿಯಲ್ಲಿ ಮತ್ತು ಲಕ್ಷ್ಮಣ ವಿನಯ ಪೂರ್ವಕವಾಗಿ ಸಮ ಭಂಗಿಯಲ್ಲಿ ನಿಂತಿದ್ದಾರೆ. ಬಲ ಭಾಗದಲ್ಲಿ ಸೀತಾಮಾತೆಯ ದರ್ಶನ, ಎಡ ಭಾಗದಲ್ಲಿ ಲಕ್ಷ್ಮಣನ ದರ್ಶನವಾಗುತ್ತದೆ ಎನ್ನುತ್ತಾರೆ. ಇಲ್ಲಿ ರಾಮನ ಹಣೆಯ ಮೇಲೆ ತಿಲಕ, ತ್ರಿಪುಂಡರ ಇತ್ಯಾದಿ ಯಾವುದೇ ನಾಮದ ಸಂಕೇತವಿಲ್ಲ ಎಂಬುದೂ ಮತ್ತೊಂದು ವಿಶೇಷ. ಇದೇ ಭಂಗಿಯಲ್ಲಿ ಶ್ರೀರಾಮಚಂದ್ರರು ಪರಶುರಾಮರಿಗೆ ದರ್ಶನ ನೀಡಿದ್ದರು ಎಂದೂ ಹೇಳಲಾಗುತ್ತದೆ.

Hiremagaluru, Kodandaramaswamy temple, Bhrghavapuri, Chikmagalur, Hiremagaluru Kannan, T.M.Satish, Journalist, malenadu, ಕೋದಂಡರಾಮ ದೇವಾಲಯ, ಹಿರೇ ಮಗಳೂರು, ಕನ್ನಡದ ಪುರೋಹಿತ, ಹಿರೇ ಮಗಳೂರು ಕಣ್ಣನ್, temples in karnataka, ಶ್ರೀಸೀತಾರಾಮಲಕ್ಷ್ಮಣರ ಈ ವಿಗ್ರಹದ ಕೆಳಗೆ ಹನುಮನ ಮೂರ್ತಿಯಿದೆ. ಪ್ರತಿ ವರ್ಷ ಫಾಲ್ಗುಣ ಶುದ್ಧ ಪುನರ್ವಸು ನಕ್ಷತ್ರದಲ್ಲಿ (ಬಹುತೇಕ ಮಾರ್ಚ್) ಇಲ್ಲಿ ಬ್ರಹ್ಮ ರಥೋತ್ಸವ ಜರುಗುತ್ತದೆ. ರಾಮನವಮಿ, ನವರಾತ್ರಿ ಮತ್ತು ವೈಕುಂಠ ಏಕಾದಶಿಯಂದು ವಿಶೇಷ ಪೂಜಾ ಕೈಂಕರ್ಯಗಳೂ ನೆರವೇರುತ್ತವೆ. ವಿಜಯದಶಮಿಯ ದಿನ ಶ್ರೀರಾಮ ಪಟ್ಟಾಭಿಷೇಕ ನಡೆಸುವುದು ಇಲ್ಲಿನ ವಿಶೇಷ. ಹರಕೆ ಹೊತ್ತ ಭಕ್ತರು ಇಲ್ಲಿ ಸೀತಾರಾಮ ಕಲ್ಯಾಣೋತ್ಸವವನ್ನೂ ನಡೆಸುತ್ತಾರೆ.

ಈ ಊರಿನಲ್ಲಿ ಸಂಸ್ಕೃತ ಪಾಠ ಮಾಡುವ ಗುರುಗಳೂ ಇದ್ದು, ದೇಶ ವಿದೇಶಗಳಿಂದ ಬರುವ ಮಂದಿ ಇಲ್ಲಿ ಸಂಸ್ಕೃತ ಕಲಿಯುತ್ತಾರೆ.

ಚಿತ್ರಕೃಪೆ :ಟಿ.ಎನ್.ಎನ್. ಪ್ರಸಾದ್ ಹಾಗೂ ಶ್ರೀಕಂಠ ಬಾಳಗಂಚಿ

ಮುಖಪುಟ /ನಮ್ಮ ದೇವಾಲಯಗಳು