ಮುಖಪುಟ /ನಮ್ಮದೇವಾಲಯಗಳು  

ಹೊಳೆನರಸೀಪುರ ಲಕ್ಷ್ಮೀನರಸಿಂಹ ದೇವಾಲಯ

*ಟಿ.ಎಂ. ಸತೀಶ್

Holenarasipura temple, ಹೊಳೆನರಸೀಪುರ ದೇವಾಲಯ, ಕನ್ನಡರತ್ನ.ಕಾಂ.ಹೊಳೆನರಸೀಪುರ ಹಾಸನ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ. ಹೇಮಾವತಿ ನದಿ ದಂಡೆಯ ಮೇಲಿರುವ ಈ ಊರಿನಲ್ಲಿ ನರಸಿಂಹನಾಯಕ 1168ರಲ್ಲಿ ಕೋಟೆ ಕಟ್ಟಿದನೆಂದು ತಿಳಿದು ಬರುತ್ತದೆ. ಕೋಟೆಯ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ.

ನದಿ ಎಂಬ ಪದಕ್ಕೆ ಹಾಸನ ಭಾಗದಲ್ಲಿ ಹೊಳೆ ಎಂದೇ ಕರೆಯುತ್ತಾರೆ. ಹೊಳೆಯ ದಂಡೆಯಲ್ಲಿರುವ ಊರಿನ ಹೆಸರಿನ ಜೊತೆ ಹೊಳೆ ಸೇರಿಕೊಂಡಿದೆ. ಜೊತೆಗೆ ಇಲ್ಲಿ ನರಸಿಂಹ ದೇವಾಲಯ ಇರುವುದರಿಂದ ಹಾಗೂ ನರಸಿಂಹನಾಯಕ ಕೋಟೆ ಕಟ್ಟಿಸಿದ ಕಾರಣ ಈ ಊರಿಗೆ ಹೊಳೆ ನರಸೀಪುರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. 

ಭಕ್ತಿವರ್ಧನ ಕ್ಷೇತ್ರ ಎಂದೇ ಖ್ಯಾತವಾದ ಹೊಳೆನರಸೀಪುರ ಪಟ್ಟಣದಲ್ಲಿ 14ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಭವ್ಯ ಹಾಗೂ ವಿಶಾಲವಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವಿದೆ. ನವರಂಗ, ಗರ್ಭಗೃಹ ಒಳಗೊಂಡ ದೇವಾಲಯ ಹಾಗೂ ವಿಗ್ರಹಗಳು, ಕೆತ್ತನೆಗಳು ಹೊಯ್ಸಳ ಶೈಲಿಯಲ್ಲಿವೆ. ದೇವಾಲಯದ ಹೊರ ನವರಂಗ ಹಾಗೂ ದ್ವಾರಪಾಲಕರ ವಿಗ್ರಹಗಳು, ರಾಜಗೋಪುರ  ದ್ರಾವಿಡ ಶೈಲಿಯಲ್ಲಿವೆ.

ನಾಲ್ಕು ಅಂತಸ್ತಿನ ದೇವಾಲಯದ ಗೋಪುರ ದ್ವಾರಗಳ ಅಕ್ಕಪಕ್ಕದಲ್ಲಿ ಜಯವಿಜಯರ ಹಾಗೂ ಗೋಪುರದ ಸುತ್ತ ದೇವಾನುದೇವತೆಗಳ ಗಾರೆ ಶಿಲ್ಪಗಳಿವೆ. ಮುಖ್ಯಪ್ರವೇಶದ್ವಾರದಕ್ಕೆ ನೇರವಾಗಿ ಗರ್ಭಗುಡಿಯಿದ್ದು, ಪ್ರಾಕಾರದಲ್ಲಿ ಗರುಡಗಂಭವಿದೆ. ಗರುಡಗಂಬಕ್ಕೆ ಹಿತ್ತಾಳೆಯ ತಗಡನ ಅಲಂಕಾರ ಸೊಗಸಾಗಿ ಕಾಣುತ್ತದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು