ಮುಖಪುಟ /ನಮ್ಮದೇವಾಲಯಗಳು 

ಪ್ರಕೃತಿಯ ಮಡಿಲ ಸೌಂದರ್ಯ ಲಹರಿ ಅನ್ನಪೂರ್ಣೆಯ ಹೊರನಾಡು
ಆಸ್ತಿಕರಿಗೆ ಆದಿಶಕ್ತ್ಯಾತ್ಮಿಕೆಯ ನೆಲೆವೀಡಾದ ಹೊರನಾಡು,
ನಾಸ್ತಿಕರಿಗೆ ಪ್ರಕೃತಿ ಸೌಂದರ್ಯದ ಸಿರಿಬೀಡು

*ಶೋಭಾ ಸತೀಶ್

Horanadu Annapurneswari, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳುಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ |
್ಞಾನವೈರಾಗ್ಯ ಸಿಧ್ಯರ್ಥಂ ಭಿಕ್ಷಾಂದೇಹೀಚ ಪಾರ್ವತಿ||

ಭವತಿ ಭಿಕ್ಷಾಂ ದೇಹಿ ಎಂದು ಕೈನೀಡಿ ಬೇಡಿದ ಕೈಲಾಸನಾಥನಾದ ಶಂಕರನಿಗೇ ಭಿಕ್ಷೆ ನೀಡಿದ ತಾಯಿ ಅನ್ನಪೂರ್ಣೇಶ್ವರಿಯನ್ನು ಸ್ತುತಿಸುವುದೇ ಹೀಗೆ. ಇಂತಹ ಮಂಗಳಮಯಳಾದ ತಾಯಿಯು ಕರ್ನಾಟಕದ ನಿತ್ಯಹರಿದ್ವರ್ಣದ ಕಾನನದ ಗಿರಿ ಪ್ರದೇಶವಾದ ಮಲೆನಾಡ ಮಡಿಲ ಸೌಂದರ್ಯ ಲಹರಿ ಹೊರನಾಡಿನಲ್ಲಿ ನೆಲೆಸಿದ್ದಾಳೆ.

ಭಕ್ತಿಭಾವ ಉಕ್ಕಿಸುವ ಆರು ಅಡಿ ಎತ್ತರದ ಸುಂದರವಾದ ವಿಗ್ರಹ ರೂಪದಲ್ಲಿ ಹೊರನಾಡಿನಲ್ಲಿ ನೆಲೆ ನಿಂತಿರುವ ಆದಿಶಕ್ತ್ಯಾತ್ಮಿಕೆಯಾದ ತಾಯಿ ಅನ್ನಪೂರ್ಣೆಶ್ವರಿಯನ್ನು ನೋಡುವುದೇ ಒಂದು ಸೌಭಾಗ್ಯ. ಹೀಗಾಗೆ ಕವಿ.. ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು, ನಾಲಿಗೆ ಸಾವಿರ ಸಾಲದು.. ಈಶ್ವರಿ ನಿನ್ನನು ಹೊಗಳಲು.. ಎಂದು ಹಾಡಿರುವುದು.

ಚಿಕ್ಕಮಗಳೂರು ಜಿಲ್ಲೆಯ ಸಮೃದ್ಧ ಸಸ್ಯ ಶ್ಯಾಮಲೆಯ ಮಡಿಲಲ್ಲಿ ಝುಳುಝುಳು ಹರಿವ ಜಲಲ ಜಲಧಾರೆಗಳ ನಡುವೆ ಭದ್ರಾನದಿಯ ತಟದಲ್ಲಿ ಅನಂತ ಪ್ರಕೃತಿಯ ಅನನ್ಯತೆಯಿಂದ ಮನಸ್ಸಿಗೆ ಮುದನೀಡುವ ಸುಂದರ ಘಟ್ಟಪ್ರದೇಶದಲ್ಲಿ ಇರುವ ಪವಿತ್ರ ಪುಣ್ಯಕ್ಷೇತ್ರದಲ್ಲಿ ತಾಯಿಯ ಮೂಲ ಮೂರ್ತಿಯನ್ನು ನೂರಾರು ವರ್ಷಗಳ ಹಿಂದೆ ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರಂತೆ. ಈಗಿರುವ ಶಂಖ, ಚಕ್ರ, ಶ್ರೀಚಕ್ರ ಹಿಡಿದ ಚತುರ್ಭುಜೆಯಾದ ಈ ತಾಯಿಯ ಮೂರ್ತಿಯನ್ನು ತಮಿಳುನಾಡಿನ ಶಂಕೋಟೆಯಿಂದ ತಂದು 1973 ರಲ್ಲಿ  ಪ್ರತಿಷ್ಠಾಪಿಸಲಾಗಿದೆ. ಆರು ಅಡಿ ಎತ್ತರದ ವಿಗ್ರಹದ ಕೆಳಭಾಗದಲ್ಲಿ ಮೂಲದೇವಿಯ ಮೂರ್ತಿ ಇದೆ.

Horanadu Temple enterance, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳುಈ ಕ್ಷೇತ್ರದ ಧರ್ಮಕರ್ತರಾಗಿದ್ದ ಡಿ.ಬಿ. ವೆಂಕಟಸುಬ್ಬ ಜೋಯಿಸ್ ಅವರು ಈ ದೇವಾಲಯದ ಅಭಿವೃದ್ಧಿಗೆ ಬಹಳ ಶ್ರಮಿಸಿದರು. 1962ರಲ್ಲಿ ಅವರು ಕಲ್ಲಿನಿಂದ ಇಲ್ಲಿ ಭದ್ರವಾದ ದೇವಾಲಯ ನಿರ್ಮಿಸಿದರು. ನಂತರ ಬಂದ ಎಲ್ಲ ಧರ್ಮಾಧಿಕಾರಿಗಳೂ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರತಿ ದಿನ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿ ನಿತ್ಯವೂ ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರುಶನ ಪಡೆಯಬಹುದಾಗಿದ್ದು, ಎಲ್ಲ ಭಕ್ತರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ದೇವಿಯ ಪಾದದ ಬಳಿಯೇ ನಿಂತು ಅತಿ ಹತ್ತಿರದಿಂದ ತಾಯಿ ಅನ್ನಪೂರ್ಣೆಯ ದರ್ಶನ ಪಡೆಯಬಹುದು.. ಹೊರನಾಡಿನ ದೊಡ್ಡಮನೆ ಪಾಳೆಗಾರ ಮನೆತನದ ಕುಲದೇವತೆ ಎಂದೂ ಹೇಳಲಾಗುವ ಈ ತಾಯಿ ಹೊರನಾಡಿನ ಸುತ್ತಮುತ್ತಲ ಪ್ರದೇಶದ ಜನರ ಅದೇವತೆ. ಆರಾಧ್ಯ ದೇವತೆ. ಹೀಗಾಗೇ ಇಲ್ಲಿನ ರೈತರು ತಾವು ಬೆಳೆದ ಮೊದಲ ಫಸಲನ್ನು ತಾಯಿಯ ಸನ್ನಿಧಿಗೆ ಒಪ್ಪಿಸಿ ತಮ್ಮನ್ನು ರಕ್ಷಿಸೆಂದು ಕೋರುತ್ತಾರೆ.

Horanadu Templeಊಟ- ವಸತಿ : ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩೦ ಕಿಮೀ ದೂರದಲ್ಲಿರುವ ಹೊರನಾಡಿಗೆ ಹೋಗಲು ನೇರ ಬಸ್ ಸೌಕರ್ಯವಿದೆ. ಹೊರನಾಡಿನಿಂದ ಶಾರದಾಪೀಠ- ವಿದ್ಯಾಶಂಕರ ದೇವಾಲಯಗಳಿರುವ ಶೃಂಗೇರಿಗೆ ಕೇವಲ ೭೫ ಕಿಮೀ. ಕರ್ನಾಟಕದ ಕಾಫಿಯ ಕಣಜ ಚಿಕ್ಕಮಗಳೂರಿನಿಂದ ೧೦೦ ಕಿಮೀ. 

ಅನ್ನದೇವಿಯ ತಾಣವಾದ ಇಲ್ಲಿ ಊಟ -ವಸತಿಯ ಸಮಸ್ಯೆ ಇಲ್ಲ. ಆದಿ ಶಕ್ತ್ಯಾತ್ಮಿಕೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯೇ ಊಟ -ವಸತಿಯ ವ್ಯವಸ್ಥೆ ಮಾಡಿದೆ. ಇಲ್ಲಿ ಸುಸಜ್ಜಿತವಾದ ಪಾಕಶಾಲೆ, ವಸತಿ ಗೃಹಗಳೂ ಇವೆ. ಭಕ್ತಾದಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಭೋಜನದ ವ್ಯವಸ್ಥೆ ಇದೆ. ಒಪ್ಪೊತ್ತು ಊಟ ಮಾಡುವವರಿಗೆ ರಾತ್ರಿ ಫಲಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಹೊರನಾಡಿನಲ್ಲಿ ರಾತ್ರಿ ಉಳಿಯಲು ಬಯಸುವವರು ಮೊದಲೇ ಶ್ರೀಕ್ಷೇತ್ರ ಹೊರನಾಡು ದೇವಾಲಯದ ಅಧಿಕೃತ ವೆಬ್ ಸೈಟ್ ನಲ್ಲಿರುವ ದೂರವಾಣಿಗೆ ಕರೆ ಮಾಡಿ ರೂಂ ಬುಕ್ ಮಾಡಿಕೊಳ್ಳುವುದು ಉತ್ತಮ.

Bhimeswara Joshi, Horanadu, M.P. Prakash, Dharm Singhತಾಯಿ ಆದಿ ಶಕ್ತ್ಯಾ ತ್ಮಕೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಶಿ, ಅವರು ದೇವಾಲಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ದೇವಾಲಯದ ವತಿಯಿಂದ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಮೂತ್ರಕೋಶ ತೊಂದರೆ, ಹೃದ್ರೋಗ ಮೊದಲಾದ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಧನ್ವಂತರಿ ಯೋಜನೆಯಡಿ ಆರ್ಥಿಕ ನೆರವನ್ನೂ ದೇವಾಲಯದಿಂದ ನೀಡಲಾಗುತ್ತದೆ. ಸಪ್ತಪದಿ ಯೋಜನೆಯಡಿ ಪ್ರತಿವರ್ಷ ದೇವಿಯ ಸನ್ನಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವೂ ಜರುಗುತ್ತದೆ. ಜೋಶಿ ಅವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇದರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದೆ.

ಸಂಪರ್ಕ: http://srikshetrahoranadu.com/ ನೋಡಬಹುದು.

ಮುಖಪುಟ /ನಮ್ಮದೇವಾಲಯಗಳು