ಮುಖಪುಟ /ನಮ್ಮದೇವಾಲಯಗಳು   

ದ್ವಾದಶ ಜ್ಯೋತಿರ್ಲಿಂಗ

*ಟಿ.ಎಂ.ಸತೀಶ್

Shivaparvathi, ಶಿವಪಾರ್ವತಿ. jyotirlinga, ಜ್ಯೋತಿರ್ಲಿಂಗ, ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, kannadaratna.com,  ourtemples.in,ಶಿವನಷ್ಟು ಸುಲಭವಾಗಿ ಒಲಿವ ದೈವ ಮತ್ತೊಬ್ಬನಿಲ್ಲ. ಲಯಕರ್ತನಾದ ಶಿವ ಭಕ್ತರಿಗೊಲಿದು, ಬೇಡಿದ ವರವ ಕೊಡುವ ಕಲ್ಪವೃಕ್ಷ. ರಾವಣಾಸುರನಿಗೆ ತನ್ನ ಆತ್ಮಲಿಂಗವನ್ನೇ ದಯಪಾಲಿಸಿದ ಕರುಣಾಮಯಿ ಶಿವನಲ್ಲವೇ. ಗಂಗೆಗೆ ಮುಡಿಯಲ್ಲಿ ಜಾಗಕೊಟ್ಟು, ಪಾರ್ವತಿಗೆ ಅರ್ಧ ಶರೀರವನ್ನೇ ಬಿಟ್ಟುಕೊಟ್ಟು ಅರ್ಧನಾರೀಶ್ವರನಾದ ಶಿವ ಕರುಣಾಸಾಗರ...

 ಪರಶಿವನನ್ನು ಪೂಜಿಸಲು ಸಮಯಾಸಮಯವಿಲ್ಲ. ಆದಾಗ್ಯೂ ಮಹಾ ಶಿವರಾತ್ರಿಯಂದು ಶಿವನ ಪೂಜಿಸಿದರೆ ಕೈವಲ್ಯ ಕಟ್ಟಿಟ್ಟ ಬುತ್ತಿ. ಇದೇ ಫೆಬ್ರವರಿ ೧೮ರ ಬುಧವಾರ ಮಹಾ ಶಿವರಾತ್ರಿ. ಅಂದು ಉಪವಾಸವಿದ್ದು, ಜಾಗರಣೆ ಮಾಡಿ, ಶಿವನ ತಲೆಯ ಮೇಲೊಂದು ಬಿಲ್ವಪತ್ರೆಯನ್ನಿರಿಸಿದರೂ ಸಾಕು ಶಿವ ಒಲಿಯುತ್ತಾನಂತೆ. ಬೇಡರ ಕಣ್ಣಪ್ಪ, ಮಾರ್ಕಂಡೇಯನಿಗೆ ಒಲಿದು ವರ ನೀಡಿದ ಶಿವ ಭಕ್ತ ಪರಾನ.  ಶಿವ ೧೨ ಜ್ಯೋತಿರ್ಲಿಂಗಗಳಾಗಿ ಈ ಭುವಿಯಲ್ಲಿ  ನೆಲೆಸಿದ್ದಾನೆ. ದ್ವಾದಶ ಜ್ಯೋತಿರ್ಲಿಂಗಗಳ ಶ್ಲೋಕ ಪಠಣ ಮಾಡುವವರಿಗೆ ಸಕಲ ಸನ್ಮಂಗಳವನ್ನುಂಟುಮಾಡುತ್ತಾನೆ. ಈ ಶ್ಲೋಕ ಪಠಿಸಿದರೆ, ಏಳೇಳು ಜನ್ಮದಲ್ಲಿ ಮಾಡಿದ  ಪಾಪಗಳೂ ಪರಿಹಾರವಾಗುತ್ತವೆ ಎನ್ನುತ್ತದೆ ಶಿವಪುರಾಣ.

ಬನ್ನಿ ಜ್ಯೋತಿರ್ಲಿಂಗ ಸ್ತೋತ್ರ ಭಜಿಸೋಣ...
ಸೌರಾಷ್ಟ್ರೇ ಸೋಮನಾಥಂ ಚ
, ಶ್ರೀಶೈಲೇ ಮಲ್ಲಿಕಾರ್ಜುನಂ
ಉಜ್ಜಯಿನ್ಯಾಂ ಮಹಾಕಾಲಃ
, ಓಂಕಾರ ಮಮಲೇಶ್ವರಮ್
ಪರಣ್ಯಾಂ ವೈದ್ಯನಾಥಂಚ, ಢಾಕಿನ್ಯಾಂ ಭೀಮಶಂಕರಂ
ಸೇತು ಬಂಧೇ ತು ರಾಮೇಶಂ
, ನಾಗೇಶಂ ಧಾರುಕಾವನೆ
ವಾರಣ್ಯಾಸ್ಯಾಂತು ವಿಶ್ವೇಶಂ ತ್ರಯಂಭಕಂ ಗೌತಮೀ -ತಟೇ
ಹಿಮಾಲಯೇತು ಕೇದಾರಂ
, ಧ್ರುಸೃಣೇಶೇಂ ಶಿವಾಲಯೇ
ಏತಾನಿ ಜ್ಯೋತಿರ್ಲಿಂಗಾನಿ
, ಸಾಯಂ ಪ್ರಾತಃ ಪಠೇನ್ ನರಃ
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.

ಸೌರಾಷ್ಟ್ರ (ಗುಜರಾತ್)ದಲ್ಲಿ ಸೋಮನಾಥನಾಗಿ, ಶ್ರೀಶೈಲ (ಆಂಧ್ರಪ್ರದೇಶ)ದಲ್ಲಿ ಮಲ್ಲಿಕಾರ್ಜುನನಾಗಿ, ಉಜ್ಜಯಿನಿ (ಮಧ್ಯಪ್ರದೇಶ)ಯಲ್ಲಿ ಮಹಾಕಾಲೇಶ್ವರನಾಗಿ, ಮಧ್ಯಪ್ರದೇಶದ ಓಂಕಾರದಲ್ಲಿ ಅಮಲೇಶ್ವರನಾಗಿ, ಬಿಹಾರದಲ್ಲಿ ವೈದ್ಯನಾಥನಾಗಿ, ರಾಜಮಹೇಂದ್ರಿಯಲ್ಲಿ ಭೀಮಶಂಕರನಾಗಿ, ರಾಮೇಶ್ವರ (ತಮಿಳುನಾಡು)ದಲ್ಲಿ ರಾಮೇಶ್ವರನಾಗಿ, ಗುಜರಾತ್‌ನಲ್ಲಿ ನಾಗೇಶ್ವರನಾಗಿ, ವಾರಾಣಸಿ ಅಥವಾ ಕಾಶಿಯಲ್ಲಿ ವಿಶ್ವೇಶ್ವರನಾಗಿ, ಕೇದಾರ (ಹಿಮಾಲಯ)ದಲ್ಲಿ ಕೇದಾರನಾಥನಾಗಿ, ಗೋತಮಿ ನದಿ  ದಡದಲ್ಲಿ ತ್ರಯಂಭಕೇಶ್ವರನಾಗಿ, ಮಹಾ ರಾಷ್ಟ್ರದಲ್ಲಿ ಧ್ರುಷ್ಣೇಶ್ವರನಾಗಿ ದ್ವಾದಶ ಜ್ಯೋತಿರ್ಲಿಂಗ ರೂಪದಿಂದ ಆಸೇತು ಹಿಮಾಚಲ ಪರ್ಯಂತ ನೆಲೆಸಿ ಈ ಭರತ ಖಂಡವನ್ನು ರಕ್ಷಿಸುತ್ತಿರುವ ಪರಮೇಶ್ವರ ಸಕಲರಿಗೂ  ಸನ್ಮಂಗಳವನ್ನುಂಟುಮಾಡಲಿ. ಓಂ ನಮಃ ಶಿವಾಯ

ಮುಖಪುಟ /ನಮ್ಮದೇವಾಲಯಗಳು

M.V.Shankaranarayan

Our ministers.com