ಮುಖಪುಟ /ನಮ್ಮ ದೇವಾಲಯಗಳು  

ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ

ಸ್ವಯಂಭು ಲಿಂಗವಿರುವ ಪುಣ್ಯಕ್ಷೇತ್ರ

kadri manjunatheswara, Dharmasthala, Mangalore, Dakshina Kannada, ದಕ್ಷಿಣ ಕನ್ನಡ, ಮಂಗಳೂರು, ಕದ್ರಿ ಮಂಜುನಾಥೇಶ್ವರ, ಕನ್ನಡರತ್ನ.ಕಾಂ, ಟಿ.ಎಂ. ಸತೀಶ್, temples in Karnataka, karnataka temples, ourtemples.in, T.M. Satish, kannadaratna.com*ಟಿ.ಎಂ. ಸತೀಶ್
ಮಂಗಳೂರಿನ ಹೊರವಲಯ ಕದ್ರಿಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಅತ್ಯಂತ ಪುರಾತನವಾದ್ದು. ಪ್ರಕೃತಿ ರಮಣೀಯವಾದ ತಾಣದಲ್ಲಿರುವ ಈ ಸುಂದರ ದೇವಾಲಯದಲ್ಲಿ ಮೂಲ ಮಂಜುನಾಥ ಸ್ವಾಮಿ ನೆಲೆಸಿದ್ದಾನೆ ಎಂಬುದು ಪ್ರತೀತಿ.
ಈ ದೇವಾಲಯ ಅತ್ಯಂತ ಪ್ರಾಚೀನ ಹಾಗೂ ಪುರಾತನವಾದ್ದು ಎಂಬುದಕ್ಕೆ ಈ ದೇಗುಲದ ಇತಿಹಾಸ ಭಾರದ್ವಾಜ ಸಂಹಿತೆಯಲ್ಲಿ ಉಲ್ಲೇಖವಾಗಿರುವುದೇ ಸಾಕ್ಷಿ ಎನ್ನುತ್ತಾರೆ ಇಲ್ಲಿನ ಅರ್ಚಕರು. ಈ ಹಿಂದೆ ಈ ಪ್ರದೇಶಕ್ಕೆ ಸುವರ್ಣ ಕದಳೀ ವನ (ಚಿನ್ನದ ವರ್ಣದ ಬಾಳೆಯ ತೋಟ) ಎಂಬ ಹೆಸರಿತ್ತಂತೆ.
ವಿಷ್ಣು ಪರಶುರಾಮಾವತಾರ ತಾಳಿದ್ದ ಸಂದರ್ಭದಲ್ಲಿ ಈಶ್ವರನ ಒಲಿಸಿಕೊಳ್ಳಲು ತಪವನ್ನು ಆಚರಿಸುತ್ತಾರೆ. ಆಗ ಪರಶಿವ, ತಾನು ಪವಿತ್ರ ಸುವರ್ಣ ಕದಳಿ ವನದಲ್ಲಿ ರಸಕೂಪದಲ್ಲಿದ್ದು ನೀನು ನನ್ನನ್ನು ಅಲ್ಲಿ ಪೂಜಿಸು ಎಂದು ಹೇಳಿದರಂತೆ. ಅದರಂತೆ ಪರಶುರಾಮರು ಸುವರ್ಣ ಕದಳಿವನಕ್ಕೆ ಬಂದಾಗ ಅದು ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಆಗ ಪರಶುರಾಮರು ತಮ್ಮ ದಿವ್ಯ ಶಕ್ತಿಯಿಂದ ಸಮುದ್ರವನ್ನೇ ಹಿಂದಕ್ಕೆ ಸರಿಸಿ ರಸಕೂಪದಲ್ಲಿ ಶಿವನನ್ನು ಪೂಜಿಸಿದರಂತೆ. ಈ ಕಾರ್ಯಕ್ಕೆ ತ್ರಿಮೂರ್ತಿಗಳೂ ಪರಶುರಾಮರಿಗೆ ತಮ್ಮ ಶಕ್ತಿ ಧಾರೆ ಎರೆದರು ಎಂದು ಭಾರದ್ವಾಜ ಸಂಹಿತೆಯಲ್ಲಿ ಉಲ್ಲೇಖವಿದೆ ಎಂದೂ ಹೇಳುತ್ತಾರೆ.
kadri manjunatheswara, Dharmasthala, Mangalore, Dakshina Kannada, ದಕ್ಷಿಣ ಕನ್ನಡ, ಮಂಗಳೂರು, ಕದ್ರಿ ಮಂಜುನಾಥೇಶ್ವರ, ಕನ್ನಡರತ್ನ.ಕಾಂ, ಟಿ.ಎಂ. ಸತೀಶ್, temples in Karnataka, karnataka temples, ourtemples.in, T.M. Satish, kannadaratna.comದೇವಾಲಯದ ಉತ್ತರ ಭಾಗದಲ್ಲಿ ಏಳು ಕುಂಡ ಅಥವಾ ಕೊಳಗಳಿವೆ. ಗೋಮುಖದಿಂದ ಇಲ್ಲಿ ಬರುವ ತೀರ್ಥ ಗೋಮುಖ ತೀರ್ಥ ಎಂದೂ ಕರೆಸಿಕೊಂಡಿದೆ. ಕಾಶಿಯ ವಿಶ್ವನಾಥನ ಪಾದ ತೊಳೆದು ಹರಿವ ಗಂಗೆ ಇಲ್ಲಿಯೂ ಪ್ರವಹಿಸುತ್ತಾಳೆ ಎಂಬುದು ನಂಬಿಕೆ. ಹೀಗಾಗಿಯೇ ಇದಕ್ಕೆ ಭಾಗೀರಥಿ ತೀರ್ಥ ಎಂದೂ ಹೇಳುತ್ತಾರೆ. ಈ ತೀರ್ಥದಿಂದ ಅಭಿಷೇಕ ಪ್ರಿಯನಾದ ಶಿವನಿಗೆ ಇಲ್ಲಿ ಅಭಿಷೇಕ ನೆರವೇರಿಸಲಾಗುತ್ತದೆ.
ಸ್ವಯಂಭು ಲಿಂಗ: ಇಲ್ಲಿರುವ ಲಿಂಗ ಯಾರೂ ಕೆತ್ತಿದ್ದಲ್ಲ. ಸ್ವಯಂ ಪ್ರಕಟಗೊಂಡಿದ್ದು ಎಂದು ಹೇಳಲಾಗುತ್ತದೆ. ಇದಕ್ಕೂ ಒಂದು ಐತಿಹ್ಯವಿದೆ. ಹಿಂದೆ ಶಿವನ ಅಂಶವೇ ಆದ ಶ್ರೀ ಮತ್ಸ್ಯೇಂದ್ರನಾಥರು ಸುವರ್ಣ ಕದಳೀ ವನದ ಪ್ರಕೃತಿ ರಮಣೀಯತೆಗೆ ಮನಸೋತು. ಇಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜಿಸುವ ಇಂಗಿತ ವ್ಯಕ್ತಪಡಿಸುತ್ತಾರೆ. ತಮ್ಮ ಶಿಷ್ಯ ಗೋರಕ್ಷನಾಥನಿಗೆ ಕಾಶಿಗೆ ಹೋಗಿ ಲಿಂಗ ತರುವಂತೆ ಸೂಚಿಸುತ್ತಾರೆ. ಆದರೆ ನಿಗದಿತ ಸಮಯಕ್ಕೆ ಆತ ಲಿಂಗ ತರುವುದಿಲ್ಲ. ಆಗ ಪೂಜೆಗೆ ಕುಳಿತ ಮತ್ಯ್ಸೇಂದ್ರನಾಥರು ಧ್ಯಾನದಲ್ಲಿ ಕುಳಿತು ಶಿವನನ್ನು ಅರ್ಚಿಸುತ್ತಾರೆ. ಆಶ್ಚರ್ಯವೆಂಬಂತೆ ಶಿವಲಿಂಗ ಅಲ್ಲಿ ಪ್ರಕಟಗೊಳ್ಳುತ್ತದೆ. ಇದಾದ ಬಳಿಕ ಗೋರಕ್ಷನಾಥರು ಕಾಶಿಯಿಂದ ಲಿಂಗ ತರುತ್ತಾರಾದರೂ ಸ್ವಯಂಭು ಲಿಂಗಾರ್ಚನೆ ಆದ ಹಿನ್ನೆಲೆಯಲ್ಲಿ ಅವರು ಕಾಶಿಯಿಂದ ತಂದ ಲಿಂಗವನ್ನು ಪವಿತ್ರ ಜಲದ ಬಳಿ ಇಡುತ್ತಾರೆ. 
kadri manjunatheswara, Dharmasthala, Mangalore, Dakshina Kannada, kadri manjunatheswara, Dharmasthala, Mangalore, Dakshina Kannada, ದಕ್ಷಿಣ ಕನ್ನಡ, ಮಂಗಳೂರು, ಕದ್ರಿ ಮಂಜುನಾಥೇಶ್ವರ, ಕನ್ನಡರತ್ನ.ಕಾಂ, ಟಿ.ಎಂ. ಸತೀಶ್, temples in Karnataka, karnataka temples, ourtemples.in, T.M. Satish, kannadaratna.comದಕ್ಷಿಣ ಕನ್ನಡ, ಮಂಗಳೂರು, ಕದ್ರಿ ಮಂಜುನಾಥೇಶ್ವರ, ಕನ್ನಡರತ್ನ.ಕಾಂ, ಟಿ.ಎಂ. ಸತೀಶ್, temples in Karnataka, karnataka temples, ourtemples.in, T.M. Satish, kannadaratna.comಕಾಲಾನಂತರದಲ್ಲಿ ಅಣ್ಣಪ್ಪ ದೈವ ಇಲ್ಲಿನ ಶಿವಲಿಂಗವನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಇಡುತ್ತಾರೆ. ಅಲ್ಲಿ ಉಡುಪಿಯ ವಾದಿರಾಜಸ್ವಾಮಿಯವರು ಅದನ್ನು ಪ್ರತಿಷ್ಠಾಪಿಸುತ್ತಾರೆ. ಹೀಗಾಗಿಯೇ ಧರ್ಮಸ್ಥಳ ಮಂಜುನಾಥನ ಮೂಲ ಸ್ಥಾನ ಎಂದು ಹೇಳಲಾಗಿದೆ. ಧರ್ಮಸ್ಥಳ ಮಂಜುನಾಥನಿಗೆ ಹರಕೆ ಹೊತ್ತವರು ಕದ್ರಿ ಶ್ರೀ ಮಂಜುನಾಥನ ದೇವಾಲಯಕ್ಕೆ ಬಂದು ಹರಕೆ ತೀರಿಸಬಹುದಂತೆ. ಆದರೆ ಕದ್ರಿಯಲ್ಲಿ ಹರಕೆ ಹೊತ್ತವರು ಇಲ್ಲಿಗೇ ಬಂದು ತೀರಿಸಬೇಕು ಎಂದು ಹೇಳಲಾಗುತ್ತದೆ.
ಈ ದೇವಾಲಯಕ್ಕೆ ಭವ್ಯವಾದ ಗೋಪುರ, ವಿಶಾಲವಾದ ಆವರಣ, ಸುಂದರ ದೇವಾಲಯ ನಿರ್ಮಿಸಲಾಗಿದೆ. ದೇಗುಲ ಪ್ರವೇಶಿಸುತ್ತಿದ್ದಂತೆ ಮಹಾಗಣಪತಿಯ ದರ್ಶನವೂ ಆಗುತ್ತದೆ. ಮೆಟ್ಟಿಲುಗಳನ್ನು ಏರಿದರೆ ಪ್ರಕೃತಿ ರಮಣೀಯವಾದ ಪ್ರದೇಶದಲ್ಲಿನ ಕುಂಡಗಳನ್ನು ನೋಡಬಹುದು.

ಮುಖಪುಟ /ನಮ್ಮ ದೇವಾಲಯಗಳು