ಮುಖಪುಟ /ನಮ್ಮ ದೇವಾಲಯಗಳು  

ಆದಿಕೇಶವನ ನೆಲೆವೀಡು - ಕಾಗಿನೆಲೆ
ಕನಕದಾಸರ ಆರಾಧ್ಯದೈವ ನೆಲೆಸಿಹ ಪುಣ್ಯಕ್ಷೇತ್ರ

* ಟಿ.ಎಂ.ಸತೀಶ್

ತಮ್ಮ ಭಕ್ತಿಯಿಂದ ಉಡುಪಿಯ ಶ್ರೀಕೃಷ್ಣನನ್ನೇ ತಿರುಗು ಮುರುಗಾಗಿ ನಿಲ್ಲುವಂತೆ ಮಾಡಿ, ಕನಕನ ಕಿಂಡಿಯ ಸೃಷ್ಟಿಗೆ ಕಾರಣರಾದ ದಾಸಶ್ರೇಷ್ಠ ಕನಕದಾಸರ  ಆರಾಧ್ಯದೈವ ಕಾಗಿನೆಲೆಯ ಆದಿಕೇಶವ. ಕನಕದಾಸರು ತಮ್ಮ ಎಲ್ಲ ಕೃತಿಗಳಲ್ಲಿ ಕಾಗಿನೆಲೆ ಆದಿಕೇಶವನಿಗೆ ಅರ್ಪಣೆ ಮಾಡಿದ್ದಾರೆ.

ಕನಕದಾಸರ ಆರಾಧ್ಯ ದೈವ ನೆಲೆಸಿಹ ಪುಣ್ಯಕ್ಷೇತ್ರವೇ ಕಾಗಿನೆಲೆ. ಹಾವೇರಿಯಿಂದ 14 ಕಿಲೋ ಮೀಟರ್. ದೂರದಲ್ಲಿರುವ ಈ ಕ್ಷೇತ್ರ ಹಲವು ಪುರಾತನ ದೇವಾಲಯಗಳ ನೆಲೆವೀಡು.

ಕದಂಬರು, ಚಾಳುಕ್ಯರು, ದೇವಗಿರಿಯ ಯಾದವರು, ವಿಜಯನಗರದ ಅರಸರು ಆಳಿದ ಈ ಭೂಭಾಗ ಹಿಂದೆ ಒಂದು ಪರಗಣವಾಗಿದ್ದ ಇಲ್ಲಿ ಸುಮಾರು 15 ಶಿಲಾಶಾಸನಗಳೂ ದೊರಕಿದ್ದು, ಇತಿಹಾಸಕ್ಕೆ ಪುಷ್ಟಿನೀಡಿವೆ.

ಜೈನ, ವೈಷ್ಣವ, ಶೈವ, ವೀರಶೈವ ಸಂಸ್ಕೃತಿಗಳ ಸಂಗಮವಾಗಿರುವ ಕಾಗಿನೆಲೆಯಲ್ಲಿ  ಲಕ್ಷ್ಮೀನರಸಿಂಹ, ಆದಿಕೇಶವ, ಕಾಳಹಸ್ತೀಶ್ವರ, ವೀರಭದ್ರ, ಸೋಮೇಶ್ವರ, ಬ್ರಹ್ಮೇಶ್ವರ, ಸಂಗಮೇಶ್ವರ, ಬಸವಣ್ಣ, ಆದಿಶಕ್ತಿ ಮೊದಲಾದ 10ಕ್ಕೂ ಹೆಚ್ಚು ಪುರಾತನ ದೇವಾಲಯಗಲಿವೆ.

ಊರಿನ ಪುರದ್ವಾರ ಪ್ರವೇಶಿಸುತ್ತಿದ್ದಂತೆ ನರಸಿಂಹ ದೇವಾಲಯ ಗೋಚರಿಸುತ್ತದೆ. ಪಕ್ಕದಲ್ಲೇ ಆದಿಕೇಶವ ದೇವಾಲಯವಿದೆ. 16ನೆಯ ಶತಮಾನದಲ್ಲಿ ಆದಿಕೇಶವನ ಸುಂದರ ಮೂರ್ತಿಯನ್ನು ಕನಕದಾಸರು ಪ್ರತಿಷ್ಠಾಪಿಸಿದರು. ಇಲ್ಲಿಯೇ ನೆಲೆಸಿ ಹಲವು ವರ್ಷಗಳ ಕಾಲ ಆದಿಕೇಶವನ ಪೂಜಿಸಿದರು. ಇದೇ ಗ್ರಾಮದ ಕೆರೆಯ ದಂಡೆಯ ಮೇಲೆ ಕನಕದಾಸರ ಸಮಾಧಿಯೂ ಇದೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು