ಕಳಲೆ ಲಕ್ಷ್ಮೀಕಾಂತಸ್ವಾಮಿ ದೇವಾಲಯ *ಟಿ.ಎಂ.ಸತೀಶ್
ಸ್ಥಳಪುರಾಣದ ರೀತ್ಯ ಪಾಂಡವ ವಂಶಸ್ಥನಾದ ಜನಮೇಜಯ ಇಲ್ಲಿಗೆ ಬಂದಾಗ, ಕಪಿಲಾ ಮತ್ತು ಕೌಂಡಿನ್ಯ ನದಿಯ ತೀರದ ಅರಣ್ಯದಲ್ಲಿ ಹಸು ಮತ್ತು ಹುಲಿಗಳು ಸೌಹಾರ್ದದಿಂದ ಬಾಳುತ್ತಿರುವುದನ್ನು ಕಂಡು ಅಚ್ಚರಿಗೊಂಡನಂತೆ. ಇದಕ್ಕೆ ಇಲ್ಲಿನ ಬಿದಿರು ಮಳೆಯಲ್ಲಿರುವ ನಾರಾಯಣ ವಿಗ್ರಹದ ಮಹಿಮೆಯೇ ಕಾರಣ ಎಂದು ಅರಿತನಂತೆ. ಆ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಗುಡಿ ಕಟ್ಟಿಸಿದನಂತೆ.
ಇಲ್ಲಿರುವ ಲಕ್ಷ್ಮೀಕಾಂತನ ಸುಂದರ ಮೂರ್ತಿ ಮೂರುವರೆ ಅಡಿ ಎತ್ತರವಿದ್ದು, ನೋಡಲು
ಅತ್ಯಂತ ಸುಂದರವಾಗಿದೆ. ಇಲ್ಲಿ ಲಕ್ಷ್ಮೀಕಾಂತಸ್ವಾಮಿಗೆ ಪಂಚರಾತ್ರಾಗಮದ ರೀತ್ಯ
ನಿತ್ಯ ಪೂಜೆಗಳು
ಇಲ್ಲಿ ದ್ರಾವಿಡಶೈಲಿಯಲ್ಲಿರುವ ಈ ದೇವಾಲಯಕ್ಕೆ ಸುಂದರವಾದ ಐದು ಅಂತಸ್ತಿನ ಪುರಾತನ ರಾಜಗೋಪುರವಿದೆ. ಪಕ್ಕದಲ್ಲಿ ಬರುವ ಭಕ್ತರು ವಿಶ್ರಮಿಸಿಕೊಳ್ಳಲು ಛಾವಡಿಗಳಿವೆ. ಗೋಪುರದಲ್ಲಿ ಹಾಗೂ ಒಳ ಪ್ರಕಾರದ ಗೋಪುರದ ಗೂಡುಗಳಲ್ಲಿ ಗೂಡುಗಳಲ್ಲಿ ಗೋಪಾಲಕೃಷ್ಣ, ಕಾಳಿಂಗಮರ್ದನ ಮೊದಲಾದ ಸುಂದರ ಗಾರೆ ಪ್ರತಿಮೆಗಳಿವೆ.
ಕಳಲೆ ಒಡೆಯರ
ಕಾಲದಲ್ಲಿ ಆಡಳಿತ ಕೇಂದ್ರವಾಗಿತ್ತು. ಇಲ್ಲಿನ ದೇವಾಲಯಕ್ಕೆ
ದಳವಾಯಿ ದೇವರಾಜಯ್ಯನ
ವಿಶಾಲವಾದ ಪ್ರಾಕಾರವಿರುವ ದೇವಸ್ಥಾನದಲ್ಲಿ ವಾಸುದೇವ, ನಮ್ಮಾಳ್ವಾರ್ ಮತ್ತು ಲಕ್ಷ್ಮೀದೇವಿಯ ಮಂದಿರಗಳಿವೆ. ದೇವಾಲಯದ ಹೊರ ಭಾಗದಲ್ಲಿ ಆಕರ್ಷಕವಾದ ಮಂಟಪವಿದೆ. ಇಲ್ಲಿರುವ ಪಟ್ಟದ ಚಾವಡಿಯ ಮುಂಭಾಗದಲ್ಲಿ ಕಳಲೆಯ ಒಡೆಯರಾಗಿದ್ದ ಲಕ್ಷ್ಮೀಕಾಂತ ಒಡೆಯರ್ ಮತ್ತು ಆತನ ಪತ್ನಿಯ ಶಿಲ್ಪಗಳಿರುವ ಮಾಸ್ತಿ ಕಲ್ಲಿದೆ. ದೇವಾಲಯದ ಕಂಬಗಳಲ್ಲಿ ಹನುಮ, ಬಿಲ್ಲಾಳು, ವಾನರ ಮೊದಲಾದ ಉಬ್ಬುಶಿಲ್ಪಗಳಿವೆ. ಆಶ್ವಯುಜ ಮಾಸದಲ್ಲಿ ದೇವರಿಗೆ ಇಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ. ನಾಗವಾಹನೋತ್ಸವ, ಗರುಡೋತ್ಸವ, ಗಜವಾಹನೋತ್ಸವ, ಹನುಮವಾಹನೋತ್ಸವ, ಅಶ್ವವಾಹನೋತ್ಸವೇ ಮೊದಲಾದ ಉತ್ಸವಗಳು ವಿಜೃಂಭಣೆಯಿಂದ ಜರುಗುತ್ತವೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||