ಮುಖಪುಟ /ನಮ್ಮ ದೇವಾಲಯಗಳು  

ಪರಮ ಪವಿತ್ರ ಶ್ರೀ ಕ್ಷೇತ್ರವೀ ಕಮಲಶಿಲೆ

ಶಿವಲಿಂಗರೂಪಿಯಾದ ಬ್ರಾಹ್ಮೀ ದುರ್ಗಾ ಪರಮೇಶ್ವರಿ ನೆಲೆಸಿಹ ಪುಣ್ಯಭೂಮಿ

*ಟಿ.ಎಂ. ಸತೀಶ್

Kamalashile, kundapura, udupi district, history of Kamalashile, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಚ್ಚ ಹಸುರಿನ ದಟ್ಟ ಅರಣ್ಯದ ನಡುವೆ ಕುಬ್ಜ ನದಿಯ ದಂಡೆಯ ಮೇಲಿರುವ ಪರಮ ಪವಿತ್ರ ಕ್ಷೇತ್ರವೇ ಕಮಲಶಿಲೆ. ಇಲ್ಲಿ ಪಾರ್ವತಿ ದೇವಿ, ಕಮಲದಂತೆ ಕಾಣುವ ಶಿಲೆಯಲ್ಲಿ ಶಿವಲಿಂಗರೂಪಿಯಾಗಿ ಗೋಚರಿಸಿರುವ ಕಾರಣ ಈ ಊರಿಗೆ ಕಮಲಶಿಲೆ ಎಂಬ ಹೆಸರು ಬಂದಿದೆ.

ಸ್ಥಳ ಪುರಾಣದ ಪ್ರಕಾರ, ಕೃತಯುಗದಿಂದಲೂ ಪುಣ್ಯಪುರುಷರ, ಋಷಿಮುನಿಗಳ ತಪೋಭೂಮಿಯಾಗಿರುವ ಈ ಕ್ಷೇತ್ರ, ಕಲಿಯುಗದಲ್ಲಿ ಸುಮಾರು 2 ಸಾವಿರ ವರ್ಷಗಳ ಹಿಂದೆ ಗೋಚರವಾಗಿದೆ ಎಂದು ತಿಳಿದುಬರುತ್ತದೆ.

ದಟ್ಟ ಅರಣ್ಯದ ಮಧ್ಯದಲ್ಲಿ ಈಗ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನವಿರುವ ಸ್ಥಳ ಹಿಂದೆ ಗಿಡ ಗಂಟೆಗಳಿಂದ ಮುಚ್ಚಿ ಹೋಗಿತ್ತು. ಇದೇ ಪ್ರದೇಶಕ್ಕೆ ಸಮೀಪದಲ್ಲಿದ್ದ ಊರಿನಲ್ಲಿದ್ದ ಬ್ರಾಹ್ಮಣ ಕುಟುಂಬವೊಂದಕ್ಕೆ ಸೇರಿದ ಹಸುವೊಂದು ನಿತ್ಯ ಈ ಪೊದೆಯ ಬಳಿ ಬಂದು ಸ್ವಯಂ ಹಾಲು ಕರೆಯುತ್ತಿತ್ತು. ಈ ವಿಚಿತ್ರ ಕಂಡ ಆ ವಿಪ್ರೋತ್ತಮರು, ಗಿಡಗಂಟಿಗಳನ್ನೆಲ್ಲಾ ತೆಗೆಸಿ ನೋಡಿದಾಗ ಅಲ್ಲಿ ಲಿಂಗ ರೂಪದ ಶಿಲೆ ಕಾಣಿಸಿತು. ತಮ್ಮ ಮನೆಯ ಗೋವು ಈ ಶಿವಲಿಂಗಕ್ಕೇ ಕ್ಷೀರಾಭಿಷೇಕ ಮಾಡುತ್ತಿದೆ ಎಂಬುದನ್ನು ಅರಿತ ಅವರು, ಅದಕ್ಕೆ ಬ್ರಹ್ಮ ಲಿಂಗೇಶ್ವರ ಎಂಬ ಹೆಸರಲ್ಲಿ, ಗುಡಿ ಕಟ್ಟಿಸಿ ಹಲವಾರು ವರ್ಷಗಳ ಕಾಲ ಪೂಜಿಸಿದರಂತೆ.

Kamalashile, kundapura, udupi district, history of Kamalashile, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಒಮ್ಮೆ ಆ ವಿಪ್ರಶ್ರೇಷ್ಠರ ಕನಸಲ್ಲಿ ಕಾಣಿಸಿಕೊಂಡ ತಾಯಿ ಪಾರ್ವತಿ, ನೀನು ಪೂಜಿಸುತ್ತಿರುವುದು ಬ್ರಹ್ಮಲಿಂಗವಲ್ಲ. ಅದು ಬ್ರಾಹ್ಮೀ ದುರ್ಗಪರಮೇಶ್ವರಿಯಾದ ತನ್ನ ರೂಪ, ಲೋಕ ಕಂಟಕರಾಗಿದ್ದ ಖರರಟ್ಟಾಸುರರ ಸಂಹಾರ ಮಾಡಿ, ಈ ಕಮಲ ಶಿಲೆಯಲ್ಲಿ ಲಿಂಗ ರೂಪ ತಳೆದಿದ್ದೇನೆ ಎಂದು ತಿಳಿಸಿ, ಇನ್ನು ಮುಂದೆ ತನ್ನನ್ನು ಆ ಶಿಲೆಯಲ್ಲಿ ಆರಾಧನೆ ಮಾಡು ಎಂದು ಅಪ್ಪಣೆ ಕೊಡಿಸಿ ಅದೃಶ್ಯಳಾದಳಂತೆ.

ತಮ್ಮ ಸ್ವಪ್ನ ವಿಚಾರವನ್ನು ಊರಿನವರಿಗೆಲ್ಲಾ ತಿಳಿಸಿದ ಆ ವಿಪ್ರೋತ್ತಮರು, ಇಲ್ಲಿ ದೇವಿಯನ್ನು ಪೂಜಿಸಲು ಆರಂಭಿಸಿದರಂತೆ. ಅಂದಿನಿಂದ ಈ ಕ್ಷೇತ್ರ ಬ್ರಾಹ್ಮೀ ದುರ್ಗಾಪರಮೇಶ್ವರಿ ಸುಕ್ಷೇತ್ರವಾಗಿ ಜಗದ್ವಿಖ್ಯಾತವಾಗಿದೆ.

ಇಲ್ಲಿ ದೇವರಿಗೆ ಹಾಕುವ ನಿತ್ಯಾಲಂಕಾರದ ಬೆಳ್ಳಿಯ ಮುಖವಾಡ ಶಿವನದ್ದಾಗಿದೆ. ಧಾರಾಪಾತ್ರೆಯ ಮೇಲೆ ಕಮಲಶಿಲೆ ಬ್ರಹ್ಮಲಿಂಗ ದೇವರಿಗೆ ಬಿದನೂರ ಅಣ್ಣಾಜೀ ಬಂಕಪ್ಪನವರ ಸೇವೆ ಎಂದು ಬರೆದಿರುವುದು ಹಾಗೂ ಇಲ್ಲಿ ಶಿವರಾತ್ರಿ ಉತ್ಸವ ಮತ್ತು ಡಮರು ಸೇವೆ, ರುದ್ರಾಭಿಷೇಕಗಳು ನಡೆಯುವುದು  ಹಿಂದೆ ಈ ದೇವಾಲಯದಲ್ಲಿ ಬ್ರಹ್ಮಲಿಂಗೇಶ್ವರನ ಪೂಜೆ ನಡೆಯುತ್ತಿತ್ತು ಎಂಬುದನ್ನು ಸಾಕ್ಷೀಕರಿಸುತ್ತವೆ.

Kamalashile, kundapura, udupi district, history of Kamalashile, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಹಿಂದೆ ಈ ಪವಿತ್ರ ಕ್ಷೇತ್ರ ಕೆಳದಿಯ ದೊರೆಗಳು ಹಾಗೂ ಮೈಸೂರು ಅರಸರ ಆಳ್ವಿಕೆಗೂ ಒಳಪಟ್ಟಿತ್ತು. ಈ ಎರಡು ರಾಜ ಮನೆತನದವರು ದೇವಿಗೆ ಹಲವಾರು ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದು, ಆ ಆಭರಣಗಳಲ್ಲಿ ಮೈಸೂರು ಮತ್ತು ಕೆಳದಿ ಅರಸರ ಲಾಂಛನಗಳಿವೆ.

ದೇವಾಲಯಕ್ಕೆ ಎರಡು ಅಂತಸ್ತಿನ ಪ್ರವೇಶ ದ್ವಾರವಿದ್ದು, ಅತಿಥಿಗೃಹಗಳೂ ಇವೆ. ಒಳ ಪ್ರಾಕಾರದಲ್ಲಿ ಕಲ್ಲಿನಲ್ಲಿ ಕಟ್ಟಿದ ಭದ್ರವಾದ ಗುಡಿ ಇದೆ. ಗುಡಿಯ ಮುಂಭಾಗದಲ್ಲಿ ಎತ್ತರದ ಧ್ವಜಸ್ತಂಭವಿದ್ದು ಅದಕ್ಕೆ ಲೋಹದ ಕವಚ ಹಾಕಲಾಗಿದೆ. ಈ ಕಂಬದಲ್ಲಿ ಶಿವ, ಲಕ್ಷ್ಮೀ, ಪಾರ್ವತಿ, ಸೂರ್ಯ, ಸರಸ್ವತಿ ಮೊದಲಾದ ದೇವತೆಗಳ  ಉಬ್ಬು ಶಿಲ್ಪಗಳಿವೆ.

Kamalashile, kundapura, udupi district, history of Kamalashile, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistವಿಶಾಲವಾದ ಪ್ರಾಕಾರದಲ್ಲಿ ಈಶ್ವರ ದೇವರ ಲಿಂಗ, ಸುಬ್ರಹ್ಮಣ್ಯ, ಶಂಖ, ಚಕ್ರ, ಗದಾ, ಪದ್ಮಧಾರಿಯಾದ ವಿಷ್ಣು, ಅಂಜಲೀಬದ್ಧ ಆಂಜನೇಯ, ನಾಗಬಂಧ, ಮುಂಡಂತಾಯ ದೇವತೆ, ಹೊಸಮ್ಮ ದೇವತೆ, ಬೆಳ್ಳಿಯ ಕವಚ ಒಳಗೊಂಡ ನವಗ್ರಹ ಮಂಟಪ, ಗಣಪತಿ, ವೀರಭದ್ರ ಮೊದಲಾದ ಗುಡಿಗಳಿವೆ.

ಪ್ರಧಾನಗರ್ಭಗೃಹದಲ್ಲಿ ಕೊಲ್ಲೂರು ಮೂಕಾಂಬಿಕೆಯಂತೆಯೇ ಕಾಣುವ ಚತುರ್ಭುಜೆಯಾಗಿ, ಒಂದು ಕೈಯಲ್ಲಿ ಶಂಖವನ್ನೂ ಮತ್ತೊಂದು ಕೈಯಲ್ಲಿ ಚಕ್ರವನ್ನೂ ಹಿಡಿದು ಅಭಯ ಮತ್ತು ವರದ ಮುದ್ರೆಯಲ್ಲಿರುವ ಸಿಂಹವಾಹಿನಿಯ ಸುಂದರ ವಿಗ್ರಹವಿದೆ. ವಿಗ್ರಹದ ಕೆಳಗೆ ಪಾಣಿಪೀಠ ಸಹಿತವಾದ ಶಿವಲಿಂಗವಿದೆ.

ಈ ದೇವಿ ಕಮಲಶಿಲೆ, ಹಳ್ಳಿಹೊಳೆ, ಎಡಮಾಗೆ, ಹೊಸಂಗಡಿ, ಅಬ್ಬರಿ, ಸಿದ್ದಾಪುರ ಹಾಗೂ ಕೊಡ್ಲಾಡಿ ಸೇರಿ ಏಳು ಮಾಗಣಿ ಗ್ರಾಮಗಳ ಮುಖ್ಯ ದೇವರು ಎಂದೇ ಖ್ಯಾತವಾಗಿದೆ. ಕಮಲಶಿಲೆಯಿಂದ ಹಳ್ಳಿ ಹೊಳೆಗೆ ಹೋಗುವ ಮಾರ್ಗದಲ್ಲಿ 2 ಕಿಲೋ ಮೀಟರ್ ದೂರದಲ್ಲಿ ಒಂದು ಗುಹೆ ಇದೆ. ಅದನ್ನು ಕೃತಯುಗದಲ್ಲಿ ರಾಜನಾಗಿ, ನಂತರ ತನ್ನ ತಪೋಶಕ್ತಿಯಿಂದ ರಾಜರ್ಷಿಯಾದ ಸುಪಾರ್ಶ್ವ ಚಕ್ರವರ್ತಿಯ ಗುಹೆ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಇದುವೇ ದುರ್ಗಾ ಪರಮೇಶ್ವರಿಯ ಮೂಲ ದೇವಾಲಯ ಎಂದೂ ಹೇಳಲಾಗುತ್ತದೆ.

Kamalashile, kundapura, udupi district, history of Kamalashile, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಇಲ್ಲಿ ದೀರ್ಘಕಾಲ ತಪಸ್ಸು ಆಚರಿಸಿದನಂತೆ, ಆತನ ಭಕ್ತಿಗೆ ಮೆಚ್ಚಿದ ಶಿವ ಅವನ ತಪಸ್ಸಿಗೆ ಯಾವುದೇ ಭಂಗ ಬಾರದಂತೆ ನೋಡಿಕೊಳ್ಳುವಂತೆ ಭೈರವನನ್ನು ನೇಮಿಸಿದನಂತೆ. ಬಳಿಕ ಸುಪಾರ್ಶ್ವ ಚಕ್ರವರ್ತಿ ಶಿವಸಾಯುಜ್ಯ ಪಡೆದನೆಂದು ಹೇಳಲಾಗುತ್ತದೆ. ಈತ ತಪ್ಪಸ್ಸು ಆಚರಿಸಿದ ಗುಹೆ ಸುಪಾರ್ಶ್ವಗುಹೆ ಎಂದೇ ಖ್ಯಾತವಾಗಿದೆ. ಗುಹೆಯಲ್ಲಿ ಬೈರವನ ಮೂರ್ತಿಯಿದೆ. ಗುಹೆಯಲ್ಲಿ ಅಕ್ಕ ತಂಗಿಯರ ಕೊಳವಿದ್ದು, ಒಂದನ್ನು ನಾಗತೀರ್ಥ ಎನ್ನುತ್ತಾರೆ. ಇದರಲ್ಲಿ ಸುಬ್ರಹ್ಮಣ್ಯನ ವಿಗ್ರಹವಿದೆ.

ಹಿಂದೆ ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿಯರನ್ನು ಸಂತೋಷ ಪಡಿಸಲು ನಿತ್ಯ ನರ್ತನ ಮಾಡುತ್ತಿದ್ದ ಪಿಂಗಾಲ ದೇವಿ ಎಂಬ ದೇವ ನರ್ತಕಿ, ತನ್ನ ಸೌಂದರ್ಯದಿಂದ ಗರ್ವಿತಳಾಗಿ, ಒಂದು ದಿನ ಶಿವಪಾರ್ವತಿ ಎದುರು ನೃತ್ಯ ಮಾಡಲು ನಿರಾಕರಿಸಿ, ಪಾರ್ವತಿಯ  ಶಾಪಕ್ಕೆ ತುತ್ತಾಗಿ ಕುಬ್ಜಳಾದಳಂತೆ. ನಂತರ ತನ್ನ ತಪ್ಪನ್ನು ಮನ್ನಿಸೆಂದು ದೇವಿಯ ಮೊರೆ ಹೋಗಿ, ದೇವಿಯ ಆಣತಿಯಂತೆ ಸುಪಾರ್ಶ್ವ ಗುಹೆಯಲ್ಲಿ ಬ್ರಾಹ್ಮೀ ದುರ್ಗಾಪರಮೇಶ್ವರಿಯನ್ನು ಪೂಜಿಸಿ ಸಂತೃಷ್ಟಪಡಿಸಿ ನಂತರ Kamalashile, kundapura, udupi district, history of Kamalashile, purana, kannadaratna.com out temples, karnataka temples of karnataka, ಕರ್ನಾಟಕದ ದೇವಾಲಯಗಳು, ಕಮಲಶಿಲೆ, ಬ್ರಾಹ್ಮೀ ದುರ್ಗಾ ಪರಮೇಶ್ವರಿ, ಕೊಲ್ಲೂರು, ಕರ್ನಾಟಕ, ಕುಬ್ಜಾ ನದಿ, kubja river, brahmi durga parameshwari, T.M. Satish, journalistಮಥುರೆಯ ಕೃಷ್ಣನ ಕೃಪೆಗೆ ಪಾತ್ರಳಾಗಿ ಪಾಪ ವಿಮೋಚನೆಯಾಗಿ ಮೊದಲ ರೂಪ ಪಡೆದಳಂತೆ. ಗುಹೆಯಲ್ಲಿ ಆಕೆ ತಪಸ್ಸು ಮಾಡಿದ ಸ್ಥಳದಲ್ಲಿ ಕುಬ್ಜ ನದಿ ಹುಟ್ಟಿತಂತೆ. ಇನ್ನು ಗರುಡ ಭೀತಿಯಿಂದ ಆದಿಶೇಷ ಈ ಗುಹೆಗೆ ಬಂದು ತಪಸ್ಸು ಮಾಡಿದನಂತೆ. ಹೀಗಾಗಿ ಇಲ್ಲಿ ನಾಗತೀರ್ಥ ಅವತರಿಸಿದ್ದು. ಈ ತೀರ್ಥಕ್ಕೆ ಪೂಜೆ ಮಾಡುವುದರಿಂದ ಸರ್ಪದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.

ವಸು ಚಕ್ರವರ್ತಿ ಮತ್ತು ವೇದಸಖರು ತಪವನ್ನಾಚರಿಸಿ ವರ ಪಡೆದ, ಸುತಪ್ತ ಮುನಿ ಕಠಿಣ ತಪಸ್ಸು ಮಾಡಿ ಮೋಕ್ಷ ಪಡೆದ ಕಮಲಶಿಲೆ ಪರಮ ಪವಿತ್ರ ಕ್ಷೇತ್ರವೆಂದು ಖ್ಯಾತವಾಗಿದೆ. ಪ್ರತಿ ವರ್ಷ ಚೈತ್ರ ಮಾಸದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ. ವಿಜಯಾಗಮ ಪದ್ಥತಿಯಂತೆ ನಿತ್ಯ ಪೂಜಾ ವಿಧಿಗಳು ನಡೆಯುತ್ತವೆ.

್ರಕೃತಿಯ ರಮಣೀಯ ತಾಣದಲ್ಲಿರುವ ತಾಯಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ವಸತಿ ನಿಲಯವೂ ಇದೆ. ಮಧ್ಯಾಹ್ನ ಭೋಜನದ ವ್ಯವಸ್ಥೆಯೂ ಇದೆ.  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ  ದೂರವಾಣಿ ಸಂಖ್ಯೆ: 91-8259-277221, 9741859721.

ಮುಖಪುಟ /ನಮ್ಮ ದೇವಾಲಯಗಳು