ಮುಖಪುಟ /ನಮ್ಮ ದೇವಾಲಯಗಳು  

ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯ

*ಟಿ.ಎಂ. ಸತೀಶ್

k.R.S. Venugopalaswamy temple, ಕನ್ನಂಬಾಡಿ ವೇಣುಗೋಪಾಲಸ್ವಾಮಿ ದೇವಾಲಯಕರುನಾಡ ಶಾಲಿಮಾರ್ ಬೃಂದಾವನ ಉದ್ಯಾನ ಹಾಗೂ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿದ ಬಳಿಕ ಈ ಪ್ರದೇಶ ಕೆ.ಆರ್.ಎಸ್. ಎಂದೇ ಖ್ಯಾತವಾಗಿದೆ. ಆದರೆ, ಅಣೆಕಟ್ಟು ಕಟ್ಟುವ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಹಿಂದೆ ಇಲ್ಲಿ ಕಣ್ವ ಮಹರ್ಷಿಗಳು ತಪವನ್ನಾಚರಿಸಿದ್ದ ಕಾರಣ ಈ ಪ್ರದೇಶ ಕಣ್ವಪುರಿ ಎಂದೂ ಕರೆಸಿಕೊಂಡಿತ್ತೆಂದು ತಿಳಿದುಬರುತ್ತದೆ.

ಇಲ್ಲಿ 6೦೦ ವರ್ಷಗಳ ಹಿಂದೆ ನಿರ್ಮಿಸಲಾದ ಚೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವೂ ಇತ್ತು. ಅಣೆಕಟ್ಟು ಕಟ್ಟುವಾಗ ಕಾವೇರಿ ಹಿನ್ನೀರಿನಲ್ಲಿ ದೇವಾಲಯ ಮುಳುಗಿ ಹೋಯಿತು.

2000 ಇಸವಿ ಮೇ 24ರಂದು ರಾಜ್ಯ ತೀವ್ರ ಬರದ ದವಡೆಗೆ ಸಿಲುಕಿದಾಗ, ಕೃಷ್ಣರಾಜಸಾಗರದ ನೀರು ಬರಿದಾಗಿ ಸುಂದರ ಶಿಲ್ಪಕಲಾ ಕೆತ್ತನೆಯ ದೊಡ್ಡ ದೊಡ್ಡ ಕಂಬಗಳು, ಗೋಪುರಗಳುಳ್ಳ ಈ ಶಿಲಾ ದೇಗುಲ ಸಂಪೂರ್ಣ ಗೋಚರಿಸಿತು. ಎರಡು ವರ್ಷದ ಬಳಿಕ ಮತ್ತೆ ಜಲಾಶಯ ಬರಿದಾಗಿ ದೇವಾಲಯ ಪೂರ್ಣ ಕಾಣಿಸಿಕೊಂಡಿತು.

ದ್ರಾವಿಡ ಶೈಲಿಯಲ್ಲಿರುವ ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆ ಗೋಚರಿಸಿ, ಹಿಂದೆ ಇಲ್ಲಿ ಊರಿತ್ತು ಎಂಬುದನ್ನು ಸಾಕ್ಷೀಕರಿಸಿದವು. ತ್ರಿಕೂಟ, ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದ ಈ ದೇಗುಲ 18 ಕಂಬಗಳಿಂದ ಕೂಡಿದ್ದು ಸುಭದ್ರವಾಗಿತ್ತು.

ಇಷ್ಟು ಭವ್ಯವಾದ ದೇವಾಲಯ ನೋಡಲು ಜನಜಾತ್ರೆಯೇ ನೆರೆಯಿತು.ಈಗ ಇಡೀ ದೇಗುಲವನ್ನು ಸ್ಥಳಾಂತರ ಮಾಡಿ ಅಣೆಕಟ್ಟೆಯ ಪಕ್ಕದ ಹೊಸ ಊರಿನಲ್ಲಿ ಪುನರ್ ನಿರ್ಮಾಣ ಮಾಡಲಾಯಿತು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯ