ಮುಖಪುಟ /ನಮ್ಮದೇವಾಲಯಗಳು

ಕೋಟಿ ಲಿಂಗೇಶ್ವರ

ವಿಶ್ವದ ಅತಿ ಎತ್ತರದ ಶಿವಲಿಂಗ ಹಾಗೂ ಬೃಹತ್ ನಂದಿ ಇರುವ ಕ್ಷೇತ್ರ

*ಟಿ.ಎಂ.ಸತೀಶ್

Kotilingeshwara, Kammanahalli, KGF, Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಕೋಲಾರ ಜಿಲ್ಲೆಯ ಬಂಗಾರಪೇಟೆಗೆ 12 ಕಿಲೋ ಮೀಟರ್ ಹಾಗೂ ಕೆ.ಜಿ.ಎಫ್.ಗೆ 6 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.

108 ಅಡಿಗಳ ಬೃಹತ್ ಶಿವಲಿಂಗ ಹಾಗೂ 32 ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು ಹೊಂದಿರುವ ಇಲ್ಲಿ ಭಕ್ತರು ನಿತ್ಯವೂ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಲಿಂಗ ಸ್ಥಾಪನೆಯಾಗುವ ಸಾಧ್ಯತೆ ಇದೆ.

ತ್ರೇತಾಯುಗದ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೇ ಪರಿಗಣಿತವಾಗಿರುವ ಕಮ್ಮಸಂದ್ರದಲ್ಲಿ ಶ್ರೀಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ 13 ಎಕರೆಯ ವಿಶಾಲ ಪ್ರದೇಶದಲ್ಲಿ ಕೋಟಿ ಲಿಂಗ ಸ್ಥಾಪನೆಯ ಸಂಕಲ್ಪದೊಂದಿಗೆ ಮೊದಲ ಶಿವಲಿಂಗವನ್ನು 10ನೇ ಅಕ್ಟೋಬರ್ 1980ರಲ್ಲಿ ಸ್ಥಾಪಿಸಲಾಯಿತು. ಇಂದು ಇಲ್ಲಿ ಭಕ್ತರು ಸಾವಿರಾರು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದರು. ಅಂದು ಲಿಂಗ ಪ್ರತಿಷ್ಠಾಪನೆಯೊಂದಿಗೆ ಶೈವ ಕ್ಷೇತ್ರವಾದ ಈ ತಾಣವನ್ನು ಇಂದು ಸಕಲ ದೇವಾನು ದೇವತೆಗಳ ನೆಲೆವೀಡು ಎಂದರೂ ತಪ್ಪಾಗಲಾರದು.  ಈ ದೇವಾಲಯದ ವಿಶಾಲ ಪ್ರಾಕಾರದಲ್ಲಿ ಈಗ ಬಹುತೇಕ ಎಲ್ಲ ದೇವತೆಗಳ ಗುಡಿಗಳೂ ಇವೆ.

Kotilingeshwara, Kammanahalli, KGF, Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ವಿಶಾಲ ಪ್ರಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು, ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಾಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳನ್ನು ನೋಡಬಹುದು.

ದೇವಾಲಯದ ಪ್ರಾಂಗಣ ಪ್ರವೇಶಿಸಿದ ಬಳಿಕ ಪ್ರಧಾನ ಗರ್ಭಗೃಹದ ಮಧ್ಯದಲ್ಲಿ ಶಿವಪಾರ್ವತಿಯರ ಮೂರ್ತಿಗಳಿದ್ದರೆ, ಬಲ ಭಾಗದಲ್ಲಿ ಲಕ್ಷ್ಮೀ ಪದ್ಮಾವತಿ ಸಹಿತ ಶ್ರೀನಿವಾಸ ದೇವರು ಹಾಗೂ ಎಡ ಭಾಗದಲ್ಲಿ ಸರಸ್ವತಿ ಸಹಿತನಾದ ಚತುರ್ಮುಖ ಬ್ರಹ್ಮನ ವಿಗ್ರಹಗಳಿವೆ. ಪುರಾಣಗಳ ರೀತ್ಯ ಶಿವನಿಗೆ ಮೂರ್ತಿ ಪೂಜೆ ಇಲ್ಲಿ, ಭೂಲೋಕದಲ್ಲಿ ಬ್ರಹ್ಮನಿಗೆ ಪೂಜೆಯೇ ಇಲ್ಲ. ಆದರೆ ಈ ದೇವಾಲಯದಲ್ಲಿ ಲಿಂಗ ರೂಪಿ ಶಿವನಿಗೆ ಮೂರ್ತಿ ಪೂಜೆಯೂ ನಡೆಯುತ್ತದೆ. ಬ್ರಹ್ಮ ದೇವರಿಗೆ ಶಾಸ್ತ್ರೋಕ್ತ ಪೂಜೆ ನಡೆಯುತ್ತದೆ.

Kotilingeshwara, Kammanahalli, KGF, Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಈ ದೇವಾಲಯದ ಪ್ರಾಕಾರದಲ್ಲಿ ಶ್ರೀಮನ್ನಾರಾಯಣ,  ಅನ್ನಪೂರ್ಣೇಶ್ವರಿ, ಮಹೇಶ್ವರ, ವಿನಾಯಕ, ಅಯ್ಯಪ್ಪ, ಆಂಜನೇಯ, ಕನ್ಯಕಾಪರಮೇಶ್ವರಿ, ಪಾರ್ವತಿ, ಲಕ್ಷ್ಮೀ, ನವಗ್ರಹ, ಸತ್ಯನಾರಾಯಣಸ್ವಾಮಿ, ಸುಬ್ರಹ್ಮಣ್ಯ, ವೆಂಕಟೇಶ್ವರ, ಶ್ರೀ ಸೀತಾ ಸಮೇತ ರಾಮ ಲಕ್ಷ್ಮಣರು, ಪಂಚಮುಖಿ ಆಂಜನೇಯ, ಸಂತೋಷಿಮಾತಾ, ರಾಘವೇಂದ್ರರ ಬೃಂದಾವನ, ಪಾಂಡುರಂಗ, 16 ಭುಜದ ಗಣಪತಿ,  ಮಂಜುನಾಥೇಶ್ವರ ಸ್ವಾಮಿ, ಶನಿ ಶಿಂಗ್ನಾಪುರ ಶನೇಶ್ಚರ ಸ್ವಾಮಿ, ದತ್ತಾತ್ರೇಯ, ಹನುಮಂತ, ನವದುರ್ಗೆಯರು, ಸಪ್ತ ಮಾತೃಕೆಯರೇ ಮೊದಲಾದ ಹಲವಾರು ದೇವಾನು ದೇವತೆಗಳ ದರ್ಶನಭಾಗ್ಯ ಲಭಿಸುತ್ತದೆ. ದೇವರುಗಳಿಗೆ ಇಲ್ಲಿ ಪ್ರತ್ಯೇಕ ಗುಡಿಗಳಿವೆ.

Kotilingeshwara, Kammanahalli, KGF, Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  108 ft linga ಹೂವಿನ ಅಲಂಕಾರ ಈ ದೇವಾಲಯದ ವಿಶೇಷ. ಲ್ಲಿರುವ ಶ್ರೀನಿವಾಸ ದೇವರಿಗೆ ಮಾಡುವ ಹೂವಿನ ಅಲಂಕಾರವಂತೂ ಮನೋಹರವಾಗಿರುತ್ತದೆ. ಪುಷ್ಪಾಲಂಕಾರದಲ್ಲಿ ಕಂಗೊಳಿಸುವ ವೆಂಕಟೇಶನ ನೋಡುವುದೇ ಒಂದು ಸೌಭಾಗ್ಯ. ಇಲ್ಲಿ ಎಲ್ಲ ದೇವರುಗಳಿಗೂ ಸುಂದರವಾಗಿ ಪುಷ್ಪಾಲಂಕಾರ ಮಾಡುತ್ತಾರೆ. ಎಲ್ಲ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಪ್ರದಕ್ಷಿಣ ಪಧ ಮಾಡಲಾಗಿದೆ. ಈ ಸಾಲಿನಲ್ಲಿ ಸಾಗಿದರೆ ದೇವಾಲಯ ಸಮುಚ್ಚಯದಲ್ಲಿರುವ ಸಕಲ ದೇವರುಗಳನ್ನೂ ಹಾಗೂ ಭಕ್ತಾದಿಗಳು ಪ್ರತಿಷ್ಠಾಪನೆ ಮಾಡಿರುವ ನಾನಾ ಬಗೆಯ, ವಿಶಿಷ್ಟವಾದ ಶಿವಲಿಂಗಗಳ ದರ್ಶನ ಮಾಡಿ ಪುನೀತರಾಗಬಹುದು.

ಪ್ರಾಕಾರದ ಮಧ್ಯದಲ್ಲಿ ದೇವಾಲಯದ ಪ್ರಮುಖ ಆಕರ್ಷಣೆ ಇದೆ. ಅದುವೇ ಅತ್ಯಂತ ಬೃಹತ್ ಶಿವಲಿಂಗ ಹಾಗೂ ನಂದಿ. ಇಲ್ಲಿ ನಿರ್ಮಿಸಿರುವ ಶಿವಲಿಂಗ ಸುಮಾರು 108 ಅಡಿ ಎತ್ತರ ಇದೆ. ವಿಶ್ವದಲ್ಲಿಯೇ ಇದು ಅತ್ಯಂತ ಎತ್ತರದ ಶಿವಲಿಂಗ ಎಂದು ಹೇಳಲಾಗುತ್ತದೆ. ಲಿಂಗದ ಎದುರು 35 ಅಡಿ ಎತ್ತರದ ಬಸವನ ವಿಗ್ರಹವಿದೆ.  ಈಗ ಪಕ್ಕದ ಇನ್ನೊಂದು ಪ್ರಾಕಾರದಲ್ಲಿಯೂ ಬೃಹತ್ ಶಿವಲಿಂಗ ಹಾಗೂ ಬೃಹತ್ ಬಸವಣ್ಣನನ್ನು ನಿರ್ಮಿಸಲಾಗಿದೆ. ಪಕ್ಕದಲ್ಲೇ ಸುಂದರವಾದ ಪುಷ್ಕರಣಿಯೂ ಇದೆ.

Kotilingeshwara, Kammanahalli, KGF, Kolar, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M.  108 ft linga

ಆಲಯದಲ್ಲಿರುವ ಗಣೇಶ ದೇವಾಲಯದ ಎದುರು ಹರಕೆಯ ಬಿಲ್ವಪತ್ರೆ ಮರ ಹಾಗೂ ನಾಗಲಿಂಗ ವೃಕ್ಷಗಳಿವೆ. ದೇವಾಲಯದಲ್ಲಿ ಪೂಜಿಸಿದ ಪವಿತ್ರ ದಾರವನ್ನು ಈ ಮರಗಳಿಗೆ ಕಟ್ಟಿದರೆ ಇಷ್ಟಾರ್ಥ ಈಡೇರುತ್ತದೆ ಎಂಬುದು ಜನರ ನಂಬಿಕೆ.

ನಿತ್ಯವೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ದೇವಾಲಯಗಳಲ್ಲಿ ನಿತ್ಯಸೇವೆ, ಅನ್ನದಾನ, ನಡೆಯುತ್ತದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಮಹೋತ್ಸವವೂ ಜರುಗುತ್ತವೆ.  ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಸತಿ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಪ್ರತಿವರ್ಷ ಆಶ್ವಯುಜ ಮಾಸದಲ್ಲಿ ದಸರೆಯ ಸಂದರ್ಭದಲ್ಲಿ ಇಲ್ಲಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಶಿವರಾತ್ರಿಯಂದು ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ

ಮುಖಪುಟ /ನಮ್ಮ ದೇವಾಲಯಗಳು