ಮುಖಪುಟ /ನಮ್ಮದೇವಾಲಯಗಳು  

ಕುರುಡುಮಲೆ ಗಣೇಶನ ಸನ್ನಿಧಿ

*ಟಿ.ಎಂ.ಸತೀಶ್

kurudumale Ganesha, ಕುರುಡುಮಲೆ ಗಣೇಶ, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, our temples, Karnataka Temples, ತುರುವೇಕೆರೆ ಸತೀಶ್, ಟಿ.ಎಂ. ಸತೀಶ್, T.M.Satishಕರ್ನಾಟಕದ ಪ್ರಸಿದ್ಧ ಗಣಪ ಕ್ಷೇತ್ರಗಳಲ್ಲಿ ಕುರುಡು ಮಲೆಯೂ ಒಂದು. ಬೆಂಗಳೂರಿನಿಂದ 108 ಕಿಲೋ ಮೀಟರ್ ದೂರದಲ್ಲಿರುವ ಕುರುಡುಮಲೆ  ಮುಳಬಾಗಲಿನಿಂದ  9 ಕಿಲೋ ಮೀಟರ್ ದೂರದಲ್ಲಿರುವ  ಇತಿಹಾಸಪ್ರಸಿದ್ಧ ಗ್ರಾಮ. ಹೊಯ್ಸಳರ ಕಾಲದಲ್ಲಿ ಇದು ಪ್ರಮುಖ ತಾಣವಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಸ್ಥಳ ಪುರಾಣದ ಪ್ರಕಾರ ಇದು ಕೌಂಡಿನ್ಯ ಕ್ಷೇತ್ರ.ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ ಉಲ್ಲೇಖವಿದೆ.  ಕೌಂಡಿನ್ಯ ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಲ್ಲಿ ಎರಡು ಬೆಟ್ಟಗಳು ಕೂಡುವ ಕಾರಣ ಇದನ್ನು ಕೂಡು ಮಲೆ ಎನ್ನುತ್ತಿದ್ದರು. ಕಾಲಾಂತರದಲ್ಲಿ ಇದು ಕುರುಡುಮಲೆ ಆಗರಬಹುದು ಎಂಬುದು ತಜ್ಞರ ವಾದ.

ಪುರಾಣ ಪ್ರಸಂಗದ ರೀತ್ಯ ತ್ರಿಪುರಾಸುರ ಸಂಹಾರವಾದ ಬಳಿಕ ದೇವಾನು ದೇವತೆಗಳು ಈ ಗಿರಿಯ ಮೇಲೆ ಕೂಡಿ ಸಂಭ್ರಮ ಪಟ್ಟರಂತೆ. ದೇವತೆಗಳೆಲ್ಲರೂ ಒಂದೇ ಕಡೆ ಕೂಡಿದ ಈ ಬೆಟ್ಟ ಕೂಡು ಮಲೆ ಎಂದು ಖ್ಯಾತವಾಯಿತಂತೆ. 

ಕೃತಯುಗದಲ್ಲಿ, ದ್ವಾಪರದಲ್ಲಿ ಇದು ಗಣೇಶಗಿರಿ ಎನಿಸಿಕೊಂಡಿತ್ತಂತೆ. ಇಲ್ಲಿ ಮಹಾಗಣಪತಿಯ ಪ್ರಾಚೀನ ಮಂದಿರವಿದೆ. ಚೋಳರ ಕಾಲದಲ್ಲಿ ಈ ದೇವಾಲಯವನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಸುಂದರವಾದ ಈ ದೇವಾಲಯದ ಮುಂದೆ ಗಣಪತಿಯ ವಾಹನ ಇಲಿಯ ಬೃಹತ್ ಗಾತ್ರದ ಕಲಾತ್ಮಕ ವಿಗ್ರಹವಿದೆ. ದೇವಾಲಯದ ಗರ್ಭಗೃಹದಲ್ಲಿ ಸುಂದರ 3 ಅಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ 15 ಅಡಿ ಎತ್ತರದ ಹಸಿರು ಬಣ್ಣದ ಸಾಲಿಗ್ರಾಮ ಶಿಲೆಯ ಗಣಪನ ವಿಗ್ರಹವಿದೆ.  ಒಂದು ಕೈಯಲ್ಲಿ ಪಾಶ, ಮತ್ತೊಂದರಲ್ಲಿ ಅಂಕುಶ ಹಿಡಿದ ಗಣಪ ಮತ್ತೊಂದು ಕೈಯಲ್ಲಿ ತನಗೆ ಪ್ರಿಯವಾದ ಮೋದಕವನ್ನು ಹಿಡಿದಿರುವುದನ್ನು ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ. ಬೆಣ್ಣೆ ಅಲಂಕಾರ ಹಾಕಿದಾಗಲಂತೂ ಗಣಪನ ನೋಡಲು ನೂರು ಕಣ್ಣು ಸಾಲದು. ಪ್ರತಿ ವರ್ಷ ಭಾದ್ರಪದ ಚೌತಿಯ ದಿನ ಇಲ್ಲಿಗೆ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಮಾರನೇ ದಿನ ಇಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತದೆ.

kurudumale ganesha, kurudumale, kolar, temple, ourtemples.in, kannadaratna.com, ಕನ್ನಡರತ್ನ.ಕಾಂ, ಕರ್ನಾಟಕ ದೇವಾಲಯಗಳ ಮಾಹಿತಿ, ಕುರುಡುಮಲೆ, ಕೋಲಾರದೇವಾಲಯದ ಪ್ರಾಕಾರದಲ್ಲಿ  5 ಅಡಿ ಎತ್ತರದ ಹನ್ನೆರಡು ಕೈಗಳುಳ್ಳ ಸುಬ್ರಹ್ಮಣ್ಯ ಸ್ವಾಮಿಯ ಸುಂದರ ಪ್ರತಿಮೆಯಿದೆ. ಬೃಹತ್ ಗುಂಡುಕಲ್ಲುಗಳಿಂದ ಕೂಡಿದ ಬೆಟ್ಟದ ತಪ್ಪಲಿನಲ್ಲಿರುವ ವಿಶಾಲವಾದ ಜಾಗದಲ್ಲಿ ದೇವಾಲಯವನ್ನು ಬೃಹತ್ತಾಗಿಯೇ ನಿರ್ಮಿಸಲಾಗಿದೆ. ಆದರೆ ದೇವಾಲಯದ ಭಿತ್ತಿಗಳಲ್ಲಿ ಹೇಳಿಕೊಳ್ಳುವಂಥ ಶಿಲ್ಪಗಳೇನಿಲ್ಲ. ದ್ವಾರದ ಬಳಿ ಮತ್ತು ಬಲಭಾಗದ ಹೊರಬಿತ್ತಿಯಲ್ಲಿ ಆನೆ ಹಸು ಎರಡೂ ಒಂದೇ ಶಿರದಲ್ಲಿರುವ ಕೆತ್ತನೆ ಇದೆ. ದೇವಾಲಯಕ್ಕೆ ವಿಶೇಷವಾದ ಗೋಪುರವೂ ಇಲ್ಲ.

ಗರ್ಭಗೃಹದ ಎದುರು ನೇರವಾಗಿ ಎರಡು ಬೃಹತ್ ಕಂಬಗಳನ್ನು ನಿಲ್ಲಿಸಲಾಗಿದೆ. ಈ ಕಲ್ಲುಕಂಬದಲ್ಲಿ ಸಾಧಾರಣ ಕೆತ್ತನೆ ಇದೆ. ಈ ಕಂಬಗಳು ಸಮಾನಾಂತರವಾಗಿ ಕಮಾನಿನಂತೆ ಬಾಗಿವೆ. ಗಣಪನ ಗುಡಿಯ ಪ್ರಾಂಗಣದಲ್ಲಿ ನವಗ್ರಹ ಗುಡಿಯೂ ಇದೆ. 

kurudumale ganesha, kurudumale, kolar, temple, ourtemples.in, kannadaratna.com, ಕನ್ನಡರತ್ನ.ಕಾಂ, ಕರ್ನಾಟಕ ದೇವಾಲಯಗಳ ಮಾಹಿತಿ, ಕುರುಡುಮಲೆ, ಕೋಲಾರಇಲ್ಲಿರುವ ಮತ್ತೊಂದು ದೇವಾಲಯ ಸೋಮೇಶ್ವರ ದೇವಾಲಯ. ಮುಖಮಂಟಪ, ಸುಕನಾಸಿ, ನವರಂಗ, ಗರ್ಭಗುಡಿ ಇರುವ ದೇವಾಲಯದ ನವರಂಗದಲ್ಲಿ ಅಷ್ಟ ಕೋನದ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ.

ಹೊರಭಿತ್ತಿಗಳ ಮೇಲೆ ಸುಂದರ ಕೆತ್ತನೆ ಇದೆ. ಕಂಬವೊಂದರ ಮೇಲೆ ಸಿಂಹ ಆನೆಯನ್ನು ಕೊಲ್ಲುತ್ತಿರುವ ಶಿಲ್ಪವೂ ಇದೆ. ಗರ್ಭಗುಡಿಯಲ್ಲಿರುವ ಲಿಂಗ ಸುಂದರವಾಗಿದೆ. ದೇಗುಲ ಪ್ರಾಕಾರದಲ್ಲಿ ಪಾರ್ವತಿ ಮತ್ತು ಕ್ಷಮಾಂಬಾ ಅಮ್ಮನವರ ಗುಡಿಗಳು ಇವೆ. ಕುರುಡುಮಲೆಗೆ ಹೋಗಲು ಬಸ್ ಸೌಕರ್ಯವಿದೆ. ತಿರುಪತಿಗೆ ಹೋಗುವವರು ಇಲ್ಲಿಗೆ ಹೋಗಿ ಬರುವುದು ವಾಡಿಕೆ.

ಮುಖಪುಟ /ನಮ್ಮದೇವಾಲಯಗಳು 

M.V.Shankaranarayan