ಮುಖಪುಟ /ನಮ್ಮದೇವಾಲಯಗಳು  

ಕುರುಡುಮಲೆ ಸೋಮೇಶ್ವರ ದೇವಾಲಯ

*ಟಿ.ಎಂ.ಸತೀಶ್

kurudumale Someswara Temple.ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಕೋಲಾರ ಜಿಲ್ಲೆಯ ಕುರುಡು ಮಲೆಯೂ ಒಂದು. ಕುರುಡುಮಲೆ ಬೆಂಗಳೂರು ನಗರದಿಂದ ಕೇವಲ 108 ಕಿಲೋ ಮೀಟರ್ ದೂರದಲ್ಲಿದೆ.

ಆಂಜನೇಯನ ಪುಣ್ಯಕ್ಷೇತ್ರ ಮುಳಬಾಗಲಿನಿಂದ ಕೇವಲ 9 ಕಿಲೋ ಮೀಟರ್ ದೂರದಲ್ಲಿರುವ ಈ ಪುಟ್ಟ ಗ್ರಾಮ ಚೋಳ ರಾಜರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿತ್ತು ಎಂಬುದನ್ನು ಇಲ್ಲಿರುವ ದೇವಾಲಯಗಳು ಸಾರುತ್ತವೆ.

kurudumale someshwara god, ಕುರುಡುಮಲೆ ಸೋಮೇಶ್ವರ, ಕ್ಷಮಾಂಬಾ ಸಹಿತ ಸೋಮೇಶ್ವರ, ಕನ್ನಡರತ್ನ.ಕಾಂ. ತುರುವೇಕೆರೆ ಸತೀಶ್,ಇಲ್ಲಿ ಅತ್ಯಂತ ಪುರಾತನವಾದ ಕ್ಷಮಾಂಬಾ ಸೋಮೇಶ್ವರ ದೇವಾಲಯವಿದೆ. ಮುಖಮಂಟಪ, ಸುಕನಾಸಿ, ನವರಂಗ, ಗರ್ಭಗುಡಿ ಇರುವ ದೇವಾಲಯದ ನವರಂಗದಲ್ಲಿರುವ ಎಂಟು ಮೂಲೆಯ ನಾಲ್ಕು ಕಂಬಗಳ ಮೇಲೂ ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ.

ಗರ್ಭಗೃಹದ ಎಡಭಾಗದಲ್ಲಿರುವ ಕಂಬದಲ್ಲಿ ಅಮರಶಿಲ್ಪಿ ಜಕಣಚಾರಿ ಹಾಗೂ ಚೋಳರಾಜರ ವಿಗ್ರಹವಿದೆ. ಜಕಣನ ಕೈಯಲ್ಲಿ ಸುತ್ತಿಗೆ ಹಾಗೂ ಉಳಿ ಇದ್ದು, ಭಗವಂತ ದೇವಾಲಯಗಳನ್ನು ನಿರ್ಮಿಸಿ, ಭೂಲೋಕವನ್ನು ಪವಿತ್ರ ತಾಣವಾಗಿ ಮಾಡಲು ಹೊಯ್ಸಳ ರಾಜರನ್ನೂ, ಸುರಲೋಕದ ಕಲ್ಪನೆಯೊಂದಿಗೆ ಶಿಲೆಯಲ್ಲೇ ಕಲೆ ಅರಳಿಸುವಂತೆ ಜಕಣಾಚಾರಿಯನ್ನೂ ಭೂಮಿಗೆ ಕಳುಹಿಸಿದ ಸಂಕೇತ ಇದೆಂದು ಪುರೋಹಿತರು ಹೇಳುತ್ತಾರೆ.

ಬಲಭಾಗದ ಕಂಬದಲ್ಲಿ ಹಾವು, ಹುತ್ತದ ಜೊತೆ ಸುಬ್ರಹ್ಮಣ್ಯನ ವಿಗ್ರಹ ಕೆತ್ತಲಾಗಿದೆ. ಗರ್ಭಗೃಹದ ಎದುರು ಇರುವ ಭಿತ್ತಿಯಲ್ಲಿ ರಂಧ್ರವಿದ್ದು, ಈ ರಂಧ್ರದ ಮೂಲಕವೂ ದೇವರ ದರ್ಶನ ಲಭ್ಯ. ಈ ರಂಧ್ರದಿಂದ ಸೂರ್ಯ ಕಿರಣಗಳು ಹಾದು ದೇವರ ಮೇಲೆ ಬೀಳುತ್ತದೆ ಎಂದೂ ಇಲ್ಲಿನ ಅರ್ಚಕರು ಹೇಳುತ್ತಾರೆ.

kurudumale someshwara god, ಕುರುಡುಮಲೆ ಸೋಮೇಶ್ವರ, ಕ್ಷಮಾಂಬಾ ಸಹಿತ ಸೋಮೇಶ್ವರ, ಕನ್ನಡರತ್ನ.ಕಾಂ. ತುರುವೇಕೆರೆ ಸತೀಶ್,ರಸ್ತೆಯಿಂದ ಹದಿನಾಲ್ಕು ಮೆಟ್ಟಿಲೇರಿ ದೇವಾಲಯದ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ ದೊಡ್ಡ ಬಯಲು ಗಣಪನ ದರ್ಶನವಾಗುತ್ತದೆ. ಈ ಗಣಪನಿಗೆ ಹಾನಿ ಆಗದಂತೆ ಕಬ್ಬಿಣದ ಗ್ರಿಲ್ ಮಾಡಿಸಿ ಬಂಧಿಸಿಡಲಾಗಿದೆ. ವಿಶಾಲವಾದ ಕಲ್ಲು ಕಟ್ಟಡದ ದೇವಾಲಯದ ಮೇಲ್ಭಾಗದಲ್ಲಿ ಗೋಪುರ, ಗೋಪುರದ ಸುತ್ತಲೂ ಬಸವನ ಮೂರ್ತಿಗಳು ಗೋಚರಿಸುತ್ತವೆ. ಪ್ರಧಾನ ದೇವಾಲಯ ಪ್ರವೇಶಿಸಲು ಮಂಟಪ ಪ್ರವೇಶಿಸುತ್ತಿದ್ದಂತೆ ಮಂಟಪದ ಕಂಬಗಳಲ್ಲಿರುವ ಸೂಕ್ಷ್ಮ ಕಲಾಕೃತಿಗಳು ಗಮನ ಸೆಳೆಯುತ್ತವೆ.

kurudumale someshwara god, ಕುರುಡುಮಲೆ ಸೋಮೇಶ್ವರ, ಕ್ಷಮಾಂಬಾ ಸಹಿತ ಸೋಮೇಶ್ವರ, ಕನ್ನಡರತ್ನ.ಕಾಂ. ತುರುವೇಕೆರೆ ಸತೀಶ್,ಶಿವಪಾರ್ವತಿ, ಗಂಗೆ,ಗೌರಿಯರೊಂದಿಗೆ ಇರುವ ಶಿವ, ಮುನಿಗಳು ಇತ್ಯಾದಿ ಹಲವಾರು ದೇವತಾ ವಿಗ್ರಹಗಳಿವೆ. ದೇವಾಲಯದ ಒಳ ಭಾಗದಲ್ಲಿ ಇರುವ ಕಂಬಗಳಲ್ಲಿ ಸಹ ನೃತ್ಯ ಮಾಡುತ್ತಿರುವ ಗಣಗಳು, ಶಿವಪುರಾಣದ ಹಲವು ದೃಶ್ಯಾವಳಿಗಳು ಕಲ್ಲಿನಲ್ಲಿ ಕಥೆ ಹೇಳುತ್ತವೆ. ಗರ್ಭಗೃಹಕ್ಕೆ ನೇರವಾಗಿರುವ ಬಿತ್ತಿಯಲ್ಲಿ ರಂಧ್ರವಿದ್ದು, ಹೊರಭಾಗದಲ್ಲಿ ಮಂಟಪ ನಿರ್ಮಿಸಲಾಗಿದೆ. ಇದರಲ್ಲಿ ಬಸವಣ್ಣನ ಸುಂದರ ಮೂರ್ತಿಯಿದೆ.

ಒಳ ಪ್ರಾಕಾರದಲ್ಲಿ ಗಣಪತಿ, ಸುಬ್ರಹ್ಮಣ್ಯ, ಲಕ್ಷ್ಮೀನಾರಾಯಣ, ಆಚಾರ್ಯರ ಪ್ರತಿಮೆಗಳಿವೆ.  ಗರ್ಭಗೃಹದ ಎದುರು ಸುಂದರ ನಂದಿಯ ವಿಗ್ರಹವಿದೆ. ಹೊರ ಭಿತ್ತಿಗಳಲ್ಲಿ ಅಪರೂಪದ ಕಲಾಕೃತಿಗಳಿವೆ. ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಈ ಬಿತ್ತಿಗಳು ಚಿತ್ತಾಕರ್ಷಕವಾಗಿವೆ. ಕುಂಭದಿಂದ ಹೊರಬಂದ ಲತೆಯ ನಡುವಿನ ಅರೆಕಂಬದಾಕಾರದ ಕೆತ್ತನೆಗಳು, ಅರೆ ಗೋಪುರಗಳು ಶಿಲ್ಪಿಯ ಕಲೆಗಾರಿಕೆಗೆ ಸಾಕ್ಷಿಯಾಗಿವೆ.

ಹೊರಭಿತ್ತಿಗಳ ಮೇಲೆ ಸುಂದರ ಕೆತ್ತನೆ ಇದೆ. ಕಂಬವೊಂದರ ಮೇಲೆ ಸಿಂಹ ಆನೆಯನ್ನು ಕೊಲ್ಲುತ್ತಿರುವ ಶಿಲ್ಪವೂ ಇದೆ. ಗರ್ಭಗುಡಿಯಲ್ಲಿರುವ ಲಿಂಗ ಸುಂದರವಾಗಿದೆ. ದೇಗುಲ ಪ್ರಾಕಾರದಲ್ಲಿ ನವಿಲಿನ ಮೇಲೆ ಕುಳಿತ ಷಣ್ಮುಖನ ಸುಂದರ ಹಾಗೂ ಚಿಕ್ಕ ಗುಡಿ ಇದೆ. ಪಾರ್ವತಿ ಮತ್ತು ಕ್ಷಮಾಂಬಾ ಅಮ್ಮನವರ ಗುಡಿಗಳೂ ಇವೆ.

kurudumale Ganesha, ಕುರುಡುಮಲೆ ಗಣೇಶ, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, our temples, Karnataka Temples, ತುರುವೇಕೆರೆ ಸತೀಶ್, ಟಿ.ಎಂ. ಸತೀಶ್, T.M.Satishಸ್ಥಳ ಪುರಾಣದ ಪ್ರಕಾರ ಇದು ಕೌಂಡಿನ್ಯ ಕ್ಷೇತ್ರ. ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ ಉಲ್ಲೇಖವಿದೆ.  ಕೌಂಡಿನ್ಯ ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಲ್ಲಿ ಎರಡು ಬೆಟ್ಟಗಳು ಕೂಡುವ ಕಾರಣ ಇದನ್ನು ಕೂಡು ಮಲೆ ಎನ್ನುತ್ತಿದ್ದರು. ಕಾಲಾಂತರದಲ್ಲಿ ಇದು ಕುರುಡುಮಲೆ ಆಗರಬಹುದು ಎಂಬುದು ತಜ್ಞರ ವಾದ.

ಪುರಾಣ ಪ್ರಸಂಗದ ರೀತ್ಯ ತ್ರಿಪುರಾಸುರ ಸಂಹಾರವಾದ ಬಳಿಕ ದೇವಾನು ದೇವತೆಗಳು ಈ ಗಿರಿಯ ಮೇಲೆ ಕೂಡಿ ಸಂಭ್ರಮ ಪಟ್ಟರಂತೆ. ದೇವತೆಗಳೆಲ್ಲರೂ ಒಂದೇ ಕಡೆ ಕೂಡಿದ ಈ ಬೆಟ್ಟ ಕೂಡು ಮಲೆ ಎಂದು ಖ್ಯಾತವಾಯಿತಂತೆ. 

ಈ ದೇವಾಲಯಕ್ಕೆ ಸನಿಹದಲ್ಲಿ  3 ಅಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ 15 ಅಡಿ ಎತ್ತರದ ತುಸು ಹಸಿರು ಬಣ್ಣದ ಸಾಲಿಗ್ರಾಮ ಶಿಲೆಯ ಗಣಪನ ವಿಗ್ರಹವಿರುವ ಪುರಾತನ ದೇವಾಲಯವಿದೆ.

ಮುಖಪುಟ /ನಮ್ಮದೇವಾಲಯಗಳು 

M.V.Shankaranarayan