ಮುಖಪುಟ /ನಮ್ಮ ದೇವಾಲಯಗಳು  

ಸರೋವರ ಕ್ಷೇತ್ರ ಅನಂತಪುರದ ಅನಂತಪದ್ಮನಾಭ

ಜೀವಂತ ಮೊಸಳೆ ಬಂದು ಅನ್ನ ಪ್ರಸಾದ ತಿನ್ನುವ ಚಮತ್ಕಾರ ನಡೆವ ದೇವಳ

*ಟಿ.ಎಂ. ಸತೀಶ್

Lake temple, Ananthapura, kerala, kasaragodu, karnataka, temples of karnataka, kerala, ananthapadmanabha, ಅನಂತಪದ್ಮನಾಭ, ಕರ್ನಾಟಕದ ದೇವಾಲಯಗಳು, ಕೇರಳದ ದೇವಾಲಯಗಳು, ಅನಂತಪದ್ಮನಾಭ, ಕಾಸರಗೋಡು, ಕನ್ನಡರತ್ನ.ಕಾಂ ಸತೀಶ್ ತುರುವೇಕೆರೆ, T.M. Satishಅನಂತಪುರ, ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಪರಮ ಪವಿತ್ರವಾದ ಸರೋವರ ಕ್ಷೇತ್ರ. ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಭಾವನಾತ್ಮಕವಾಗಿ ಕರ್ನಾಟಕದಲ್ಲೇ ಇರುವ ಈ ದೇವಾಲಯದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ. ಇದನ್ನು ಶ್ರೀ ಅನಂತ ಪದ್ಮನಾಭ ಸ್ವಾಮಿ  ದೇವಾಲಯ ಎಂದು ಪ್ರಥಮ ಸಾಲಿನಲ್ಲಿ ಬರೆದಿರುವ ಪ್ರವೇಶದ್ವಾರದ  ಫಲಕವೇ ಸಾರುತ್ತದೆ.

ಈ ಪ್ರವೇಶ ದ್ವಾರ ದಾಟಿದರೆ, 3 ಮೀಟರ್ ಎತ್ತರದ ಸರ್ಪಕಟ್ಟು ವಿನ್ಯಾಸದ ಕೆಂಪು ಕಲ್ಲಿನಿಂದ ಕಟ್ಟಿದ ಆವರಣ ಗೋಡೆ ಕಾಣಿಸುತ್ತದೆ. ಒಂದು ಹಾವೂ ನುಸುಳಲು ಇಲ್ಲ ಹತ್ತಲು ಸಾಧ್ಯವಿಲ್ಲದಂಥ ಈ ವಾಸ್ತುಶಿಲ್ಪ ಬಹಳ ಅಪರೂಪವಾದ್ದೆಂದೂ ಹೇಳಲಾಗುತ್ತದೆ. ಈ ದೇವಾಲಯವನ್ನು ವೇಲಪ್ಪರಂಬಿಲ್ ಶ್ರೀ ಪರಮೇಶ್ವರನ್ ನಂಬೂದಿರಪ್ಪಾಡ್ ಎಂಬ ವಾಸ್ತುಶಿಲ್ಪಿ ಕಟ್ಟಿದರೆಂದು ತಿಳಿದುಬರುತ್ತದೆ. ಈ ಸರ್ಪಕಟ್ಟಿನ ಶೈಲಿನ ರಚನೆಯ ಮಧ್ಯದಲ್ಲಿರುವ ಪ್ರವೇಶದ್ವಾರದಿಂದ ಒಳ ಹೋದರೆ, ಬಲಿಗಲ್ಲು ಮತ್ತು ನಮಸ್ಕಾರ ಮಂಟಪಗಳು ಕಾಣುತ್ತವೆ. ನಮಸ್ಕಾರ ಮಂಟಪದ ಛಾವಣಿಯಲ್ಲಿ ಕನಕ, ಪುರಂದರ, ತುಳಸಿದಾಸರು, ವಿವೇಕಾನಂದರು ಹಾಗೂ ಮಹಾ ಮುನಿಗಳ, ಸಂತರ ತೈಲವರ್ಣ ಚಿತ್ರಗಳಿವೆ.ಈ ಚಿತ್ರದ ಚೌಕಟ್ಟುಗಳು ವಿಶಿಷ್ಟ ಕಲಾಕೃತಿಗಳಿಂದ ಕೂಡಿವೆ. ಇದರಲ್ಲಿ ಕ್ಷೇತ್ರದ ಇತಿಹಾಸ, ಮಹಾಭಾರತ, ರಾಮಾಯಣದ ಘಟನೆಗಳು ಇದ್ದು, ದಾರುಶಿಲ್ಪ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇಡೀ ದೇವಾಲಯವನ್ನು ಮುರುಕಲ್ಲಿನ ಸರೋವರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಹೆಂಚಿನ ಮಾಡನ್ನು ಒಳಗೊಂಡ ಈ ದೇವಾಲಯ ಕೇರಳದ ಸಾಂಪ್ರದಾಯಿಕ ದೇಗುಲಗಳ ಶೈಲಿಯಲ್ಲಿದೆ.

Lake temple, Ananthapura, kerala, kasaragodu, karnataka, temples of karnataka, kerala, ananthapadmanabha, ಅನಂತಪದ್ಮನಾಭ, ಕರ್ನಾಟಕದ ದೇವಾಲಯಗಳು, ಕೇರಳದ ದೇವಾಲಯಗಳು, ಅನಂತಪದ್ಮನಾಭ, ಕಾಸರಗೋಡು, ಕನ್ನಡರತ್ನ.ಕಾಂ ಸತೀಶ್ ತುರುವೇಕೆರೆ, T.M. Satishಇದನ್ನು ದಾಟಿ ದೇವಾಲಯದ ದರ್ಶನ ಸ್ಥಳಕ್ಕೆ ಬಂದರೆ, ಕತ್ತಲೆಯಿಂದ ಕೂಡಿದ ಗರ್ಭಗೃಹದಲ್ಲಿ ತುಪ್ಪದ ದೀಪದ ಬೆಳಕಲ್ಲಿ ಮಾತ್ರವೇ ನೋಡಬಹುದಾದ ಮಹಾ ಮಹಿಮನಾದ ಅನಂತಪದ್ಮನಾಭನ ಮೂರ್ತಿಯ ದಿವ್ಯ ದರ್ಶನವಾಗುತ್ತದೆ. ಸಾಲಿನಲ್ಲಿ ಬರುವ ಭಕ್ತರಿಗೆ ಇಲ್ಲಿ ಮೊದಲಿಗೆ ಅಂಧಕಾರವಷ್ಟೇ ಕಾಣುತ್ತದೆ. ಆದರೆ ಅರೆ ಕ್ಷಣ ಕಣ್ಮುಚ್ಚಿ ಭಗವಂತನನ್ನು ಪ್ರಾರ್ಥಿಸಿ ಕಣ್ಣು ಬಿಟ್ಟರೆ ನಾಗ ಕನ್ನಿಕೆ ಸಹಿತವಾದ ಐದು ಹೆಡೆಯ ಸರ್ಪದ ಪೀಠದ ಮೇಲೆ ಒಂದು ಮಂಡಿಯನ್ನು ಮಡುಚಿಕೊಂಡು, ಮತ್ತೊಂದು ಕಾಲನ್ನು ನೆಲದ ಮೇಲಿಟ್ಟು, ಶಂಖ, ಚಕ್ರ ಹಿಡಿದು ವರದ ಮತ್ತು ಅಭಯ ಮುದ್ರೆಯಲ್ಲಿರುವ ದಿವ್ಯ ಮಂಗಳ ಮೂರ್ತಿಯ ದರ್ಶನ ಭಾಗ್ಯ ದೊರಕುತ್ತದೆ. ಈ ಅನುಭವ ನಿಜಕ್ಕೂ ವರ್ಣನಾತೀತ.

ಗರ್ಭ ಗೃಹದಲ್ಲಿ ಅನಂತ ಪದ್ಮನಾಭನ ಜೊತೆಗೆ ಎಡಬಲದಲ್ಲಿ ಶ್ರೀದೇವಿ, ಭೂದೇವಿ, ಗರುಡ ಮತ್ತು ಹನುಮಂತನ ವಿಗ್ರಹಗಳೂ ಇವೆ. ಪದ್ಮನಾಭನ ವಿಗ್ರಹ ಮರದಿಂದಲಾಗಲೀ, ಶಿಲೆಯಿಂದಲಾಗಲೀ ಮಾಡಿದ್ದಲ್ಲ, ಬದಲಾಗಿ ವಿಗ್ರಹ ರಚನೆಯ ಎಂಟು ವಿಧಾನಗಳ ಪೈಕಿ  ಬಹು ಕಷ್ಟಕರವಾದ ಕಡುಶರ್ಕರ ಪಾಕದಿಂದ 108 ಗಿಡಮೂಲಿಕೆಗಳ ನೆರವಿನಿಂದ ಮಾಡಿದ್ದು ಎಂದು ಹೇಳಲಾಗುತ್ತದೆ.  ಇಂಥ ಈ Lake temple, Ananthapura, kerala, kasaragodu, karnataka, temples of karnataka, kerala, ananthapadmanabha, ಅನಂತಪದ್ಮನಾಭ, ಕರ್ನಾಟಕದ ದೇವಾಲಯಗಳು, ಕೇರಳದ ದೇವಾಲಯಗಳು, ಅನಂತಪದ್ಮನಾಭ, ಕಾಸರಗೋಡು, ಕನ್ನಡರತ್ನ.ಕಾಂ ಸತೀಶ್ ತುರುವೇಕೆರೆ, T.M. Satishವಿಧಾನದಿಂದ ನಿರ್ಮಿಸಿದ ವಿಗ್ರಹಗಳು ಮಾಡಾಯಿಕಾವು ಮಹಾಕಾಳಿ ದೇವಾಲಯದಲ್ಲಿ, ತಿರುವನಂತಪುರ ಅನಂತಪದ್ಮನಾಭ ದೇವಾಲಯದಲ್ಲಿ ಹಾಗೂ ಈ ದೇವಾಲಯದಲ್ಲಿ ಮಾತ್ರವೇ ಇರುವುದು ಎಂದು ದೇವಳದ ಅರ್ಚಕರು ಹೇಳುತ್ತಾರೆ.

ಈ ದೇವಾಲಯವೇ ಮೂಲ ಅನಂತಪದ್ಮನಾಭನ ಮೂಲ ದೇವಾಲಯವಾಗಿದ್ದು, ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ ನಂತರದ್ದು ಎನ್ನಲಾಗಿದ್ದು, ಈ ಎರಡು ದೇವಾಲಯಗಳ ನಡುವೆ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ.

ಮೊಸಳೆ ಆಕರ್ಷಣೆ -ಈ ದೇವಾಲಯದಲ್ಲಿ ಮತ್ತೂ ಒಂದು ವಿಶೇಷವಿದೆ. ಅದು ಸರೋವರದಲ್ಲಿರುವ ಬಬಿಯಾ ಎಂಬ ಮೊಸಳೆ. ಅರ್ಚಕರು ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಆದ ಬಳಿಕ ಅನ್ನ ಪ್ರಸಾದ ತಂದು ಬಬಿಯಾ ಎಂದು ಕೂಗಿ, ಮೊಸಳೆಗೆ ನೀಡುತ್ತಾರೆ.
ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ 1945ರಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ಇಲ್ಲಿ ಮೊಸಳೆ ಕಂಡು ಬಬಿಯಾ ಎಂದು ಕೂಗಿದರಂತೆ, ಆಗ ಸೈನಿಕನೊಬ್ಬ ಗುಂಡು ಹಾರಿಸಿ ಮೊಸಳೆ ಕೊಂದನಂತೆ.
Lake temple, Ananthapura, kerala, kasaragodu, karnataka, temples of karnataka, kerala, ananthapadmanabha, ಅನಂತಪದ್ಮನಾಭ, ಕರ್ನಾಟಕದ ದೇವಾಲಯಗಳು, ಕೇರಳದ ದೇವಾಲಯಗಳು, ಅನಂತಪದ್ಮನಾಭ, ಕಾಸರಗೋಡು, ಕನ್ನಡರತ್ನ.ಕಾಂ ಸತೀಶ್ ತುರುವೇಕೆರೆ, T.M. Satish, crocadile, ಮೊಸಳೆ ಅನ್ನ ಪ್ರಸಾದಇದಾದ ಕೆಲವೇ ದಿನದಲ್ಲಿ ಆ ಸೈನಿಕ ಹಾವು ಕಚ್ಚಿ ಸತ್ತನಂತೆ. ಕೆಲ ದಿನಗಳ ಬಳಿಕ ಮತ್ತೆ ಸರೋವರದಲ್ಲಿ ಮೊಸಳೆ ಕಾಣಿಸಿತಂತೆ. ಈಗಲೂ ಬಬಿಯಾ ಎಂದು ಕೂಗಿದರೆ ಸರೋವರದಲ್ಲಿರುವ ಗುಹೆಯಿಂದ ಮೊಸಳೆ ಹೊರಬರುತ್ತದೆ. ಸದಾ ಗುಹೆಯಲ್ಲಿ ಮಲಗಿರುವ ಈ ಮೊಸಳೆಯನ್ನು ನೋಡಲು ಭಕ್ತರು ಸರೋವರಕ್ಕೂ ಇಳಿಯುತ್ತಾರೆ. ಆದರೆ ಈವರೆಗೂ ಯಾರಿಗೂ ಮೊಸಳೆ ತೊಂದರೆ ಕೊಟ್ಟಿಲ್ಲವಂತೆ.

ದೇವಾಲಯದ ಪ್ರಾಕಾರದಲ್ಲಿ ಶ್ರೀ ಮಹಾಗಣಪತಿ, ಶ್ರೀ ವನಶಾಸ್ತಾರ, ಶ್ರೀ ರಕ್ತೇಶ್ವರಿ, ಶ್ರೀ ಮಹಿಷಾಸುರ ಮರ್ದಿನಿ, ಉಳ್ಳಾಕುಳು, ಶ್ರೀ ವೇದಾವತಿ ಮೊದಲಾದ ಉಪ ಸಾನ್ನಿಧ್ಯಗಳೂ ಇವೆ.

ಪ್ರತಿ ವರ್ಷ ಕುಂಭ ಮಾಸ (ಫೆಬ್ರವರಿ)ದ 14ನೇ ದಿನ ವಾರ್ಷಿಕ ಮಹೋತ್ಸವ ನಡೆಯುತ್ತದೆ. ಮೇಷ ಮಾಸದ 24ನೇ ದಿನ ಪ್ರತಿಷ್ಠಾಪನಾ ದಿನ, ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ ನಡೆಯುತ್ತದೆ.

 ಕಾಸರಗೋಡಿನಿಂದ 11 ಕಿ.ಮೀಟರ್ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದರೆ, ಕುಂಬಳೆ ಸಿಗುತ್ತದೆ. ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿ ಪೂರ್ವಕ್ಕೆ ನಾಯ್ಕಾಪು ಎಂಬ ಊರು ಸಿಗುತ್ತದೆ. ಅಲ್ಲಿಂದ 1 ಕಿ.ಮೀ. ದೂರದಲ್ಲಿ ಈ ಅನಂತಪದ್ಮನಾಭನ ಅನಂತಪುರ ಕ್ಷೇತ್ರವಿದೆ.

ಮುಖಪುಟ /ನಮ್ಮ ದೇವಾಲಯಗಳು