ಮುಖಪುಟ /ನಮ್ಮದೇವಾಲಯಗಳು   

ನಗರ್ತಪೇಟೆಯ ಲಕ್ಷ್ಮೀನಾರಾಯಣ ದೇವಾಲಯ
14 ಅಡಿ ಎತ್ತರದ ಭವ್ಯ ವಿಷ್ಣುಮೂರ್ತಿಯ ಆಲಯ

*ಟಿ.ಎಂ.ಸತೀಶ್

Laksminarayana and Anjaneya temple, ಲಕ್ಷ್ಮೀನಾರಾಯಣ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳ ಪೈಕಿ ಒಂದಾದ ನಗರ್ತಪೇಟೆ ಹಲವು ದೇವಾಲಯಗಳ ಬೀಡು ಎಂದರೆ ತಪ್ಪಲ್ಲ. ಇಲ್ಲಿ ವೇಣುಗೋಪಾಲಸ್ವಾಮಿ, ಲಕ್ಷ್ಮೀನಾರಾಯಣಸ್ವಾಮಿ, ಮಕ್ಕಳ ಬಸವಣ್ಣ, ಧರ್ಮರಾಯಸ್ವಾಮಿ, ನಗರೇಶ್ವರ, ರಾಮಲಿಂಗೇಶ್ವರ ಮೊದಲಾದ ಹಲವು ದೇವಾಲಯಗಳಿವೆ.

ನಗನಾಣ್ಯ ವ್ಯಾಪಾರಕ್ಕಾಗಿ ನಗರಕ್ಕೆ ಬಂದ ನಗರ್ತ ಸಮುದಾಯದವರು ಇಲ್ಲಿ ಹಲವು ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹೀಗೆ ನಿರ್ಮಾಣವಾದ ದೇವಾಲಯಗಳ ಪೈಕಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಮತ್ತು ಪ್ರಸನ್ನ ಆಂಜನೇಯಸ್ವಾಮಿ ದೇವಾಲಯವೂ ಒಂದು.

ಬೆಂಗಳೂರು ಕರಗಕ್ಕೆ ಹೆಸರಾದ ಧರ್ಮರಾಯನ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ನಗರ್ತಪೇಟೆಯತ್ತ ಸಾಗಿದರೆ, ಮಕ್ಕಳ ಬಸವಣ್ಣ ದೇವಾಲಯಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿರುವ ಪುಟ್ಟ ದೇವಾಲಯವೇ ಶ್ರೀಲಕ್ಷ್ಮೀನಾರಾಯಣ ಮತ್ತು ಪ್ರಸನ್ನ ಆಂಜನೇಯ ದೇವಾಲಯ.

ಜೀರ್ಣೋದ್ಧಾರ ಮಾಡಲಾಗಿರುವ ಈಗಿನ ದೇವಾಲಯವನ್ನು ಕಲ್ಲು ಕಂಬಗಳು, ಇಟ್ಟಿಗೆ, ಸಿಮೆಂಟಿನಿಂದ ಕಟ್ಟಿ ಕಬ್ಬಿಣದ Laksminarayana and Anjaneya temple, ಲಕ್ಷ್ಮೀನಾರಾಯಣ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಗೇಟುಗಳನ್ನು ಅಳವಡಿಸಿ ಭದ್ರಪಡಿಸಲಾಗಿದೆ. ದೇವಾಲಯದ ಮೇಲೆ ಗಾರೆಗಚ್ಚಿನ ಗೋಪುರವಿದ್ದು, ಗೂಡಿನಲ್ಲಿ ಎಡ ಬಲದಲ್ಲಿ ಲಕ್ಷ್ಮೀ ಪದ್ಮಾವತಿಯರನ್ನು ಕೂರಿಸಿಕೊಂಡಿರುವ ನಾರಾಯಣನ ಸುಂದರ ಗಾರೆಯ ಶಿಲ್ಪವಿದೆ. ಗೂಡಿನ ಎಡ ಬಲದಲ್ಲಿ ಕೂಡ ವಿಷ್ಣು ಮೂರ್ತಿಗಳಿದ್ದು ಅಂಜಲೀಬದ್ಧ ಆಂಜನೇಯನ ಗಾರೆ ಶಿಲ್ಪವೂ ಇದೆ.

ಈ ಆಲಯ ನೋಡಲು ತುಂಬಾ ಪುಟ್ಟದು. ಎತ್ತರವಾದ ಕಲ್ಲಿನ ಬಾಗಿಲವಾಡದಲ್ಲಿ ಕೆಲವು ಕೆತ್ತನೆಗಳಿದ್ದು, ಎಡ ಬಲದಲ್ಲಿ ಜಯ ವಿಜಯ ದ್ವಾರಪಾಲಕ ವಿಗ್ರಹಗಳಿವೆ. ಒಳ ಪ್ರವೇಶಿಸಿದರೆ, ಇದರಲ್ಲಿರುವ ಬೃಹತ್ ಲಕ್ಷ್ಮೀನಾರಾಯಣನ ಮೂರ್ತಿ ತನ್ಮಯಗೊಳಿಸುತ್ತದೆ. ಸುಮಾರು 14 ಅಡಿ ಎತ್ತರ ಇರುವ ಈ ದೇವತಾ ಮೂರ್ತಿ ಸುಂದರ ಶಿಲ್ಪ. ಶಂಖ, ಚಕ್ರ ಗದಾಧಾರಿಯ ವಿಗ್ರಹದಲ್ಲಿ ಸೂಕ್ಷ್ಮ ಕೆತ್ತನೆಗಳಿದ್ದು, ಶಿಲ್ಪಿಯ ಕಲಾಚಾತುರ್ಯ ವಿಸ್ಮಯಗೊಳಿಸುತ್ತದೆ. ಈ ಪುಟ್ಟ ಆಲಯದಲ್ಲಿ ನಾರಾಯಣನ ಎಡ ಭಾಗದಲ್ಲಿ ಆಂಜನೇಯನ ಮೂರ್ತಿಯಿದೆ. ಬಲ ಭಾಗದಲ್ಲಿರುವ ಗೋಡೆಯಲ್ಲಿ ವಾಮನ ಮೂರ್ತಿ, ನಾಗರ ಶಿಲ್ಪ ಹಾಗೂ ಇತರ ಪರಿವಾರ ದೇವತೆಗಳ ವಿಗ್ರಹಗಳಿವೆ. ಉತ್ಸವ ಮೂರ್ತಿಯೂ ಅತ್ಯಂತ ಸುಂದರವಾಗಿದೆ.

ಸುಮಾರು 2೦೦ ವರ್ಷಗಳ ಹಿಂದೆ ಭಕ್ತರೊಬ್ಬರಿಗೆ ಕನಸಿನಲ್ಲಿ ಲಕ್ಷ್ಮೀನಾರಾಯಣ ಕಾಣಿಸಿಕೊಂಡು, ತಾನು ಬೆಂಗಳೂರಿನ ಸಂಪಂಗಿ ಕೆರೆಯಲ್ಲಿ ಜಲಾಧಿವಾಸದಲ್ಲಿ ಇರುವುದಾಗಿ, ತನ್ನನ್ನು ಹೊರ ತೆಗೆದು ದೇವಾಲಯ ನಿರ್ಮಿಸುವಂತೆ ಅಪ್ಪಣೆ ಕೊಡಿಸಿದನಂತೆ ಅದರಂತೆ ಅವರು ಕೆರೆಯಲ್ಲಿ ಶೋಧ ನಡೆಸಿದಾಗ ಈ ಎಲ್ಲ ದೇವತಾ ವಿಗ್ರಹಗಳು ದೊರಕಿದವಂತೆ. lakshminarayana temple, nagartapetಅದನ್ನು ತಂದು ಅವರು ನಗರ್ತ ಪೇಟೆಯಲ್ಲಿ ಪ್ರತಿಷ್ಠಾಪಿಸಿ ದೇವಾಲಯ ಕಟ್ಟಿಸಿದರು ಎಂದು ತಮ್ಮ ಪೂರ್ವಿಕರು ಹೇಳುತ್ತಿದ್ದರು ಎನ್ನುತ್ತಾರೆ ದೇವಾಲಯ ಅರ್ಚಕರಾದ ಜಗನ್ನಾಥಚಾರಿ ಹಾಗೂ ಸಂಪತ್ ಅಯ್ಯಂಗಾರ್ ಅವರು. ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ.

ಪ್ರಸ್ತುತ ಶ್ರೀಲಕ್ಷ್ಮೀನಾರಾಯಣಸ್ವಾಮಿ ಮತ್ತು ಪ್ರಸನ್ನ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟ ಈ ದೇವಾಲಯದಲ್ಲಿ ಗಣಪನ ಮೂರ್ತಿಯೂ ಇದೆ. ವೈಖಾನಸ ಪದ್ಧತಿಯ ರೀತ್ಯ ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ.

ಶ್ರೀರಾಮನವಮಿಯಂದು, ಹನುಮಜಯಂತಿಯಂದು ಹಾಗೂ ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಕೆರೆಯಲ್ಲಿ ದೊರೆತ ಈ ಮೂರ್ತಿಗಳು ಸಾವಿರಾರು ವರ್ಷಗಳಷ್ಟು ಹಳೆಯದೆಂದು ಅವರು ಹೇಳುತ್ತಾರೆ.  ಪ್ರತಿವರ್ಷ ಮಾಘ ಮಾಸದಲ್ಲಿ ಇಲ್ಲಿ ವಾರ್ಷಿಕೋತ್ಸವವೂ ಜರುಗುತ್ತದೆ.

ಮುಖಪುಟ; /ನಮ್ಮದೇವಾಲಯಗಳು