ಮುಖಪುಟ /ನಮ್ಮ ದೇವಾಲಯಗಳು  

ಮಹಾಲಕ್ಷ್ಮೀ ಲೇಔಟ್ ಮಹಾಲಕ್ಷ್ಮೀ ದೇವಾಲಯ

ಈ ಬಡಾವಣೆಯ ಹೆಸರಲ್ಲೇ ಮಹಾಲಕ್ಷ್ಮೀ ನೆಲೆಸಿದ್ದಾಳೆ. ಈ  ಬಡಾವಣೆಯಲ್ಲಿ ಕೂಡ.*ಟಿ.ಎಂ.ಸತೀಶ್

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್  ತಾಯಿ ಮಹಾಲಕ್ಷ್ಮೀ ನೆಲೆಸಿಹ ತಾಣವೂ ಹೌದು. ಈ ಪ್ರದೇಶಕ್ಕೆ ಮಹಾಲಕ್ಷ್ಮೀಪುರಂ, ಮಹಾಲಕ್ಷ್ಮೀ ಲೇಔಟ್ ಎಂದು ಹೆಸರಿರುವ ಹಿನ್ನೆಲೆಯಲ್ಲಿ ಹೆಸರನ್ನು ಅನ್ವರ್ಥಗೊಳಿಸಲು ಸ್ಥಳೀಯರು ಬಹುದಿನಗಳಿಂದ ಇಲ್ಲಿದ್ದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ  ಬೃಹತ್ ಲಕ್ಷ್ಮೀ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ.

2001ರಲ್ಲಿ ಇಲ್ಲಿ 5 ಅಡಿ ಕಮಲ ಹಾಗೂ 2 ಅಡಿ ಪೀಠದ ಮೇಲೆ ಕುಳಿತ 12 ಅಡಿ ಎತ್ತರದ ಏಕಶಿಲಾ ಲಕ್ಷ್ಮೀ ಮೂರ್ತಿಯನ್ನು  ಪ್ರತಿಷ್ಠಾಪಿಸಲಾಗಿದೆ.

ನುರಿತ ಶಿಲ್ಪಿಗಳಾದ ಮೋಹನ್‌ರಾಜ್ ಹಾಗೂ ರಾಜಗಣಪತಿಯವರು ಈ ಸುಂದರ ಮೂರ್ತಿಯನ್ನು ಮಾಡಿದ್ದಾರೆ. ಈ ದೇವಿಯ ಪ್ರತಿಷ್ಠಾಪನೆಯದಿನ 108 ಸುಮಂಗಲಿಯರು 10 ದಿನಗಳ ಕಾಲ ಲಕ್ಷ್ಮಿಯನ್ನು ಭಕ್ತಿ ಭಾವದಿಂದ ಪೂಜಿಸಿದರು. ಸಹಸ್ರಾರು ಸುಮಂಗಲಿಯರು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಇಲ್ಲಿ ನಿತ್ಯ ಪೂಜೆ, ಪುರಸ್ಕಾರಗಳು ನಡೆಯುತ್ತವೆ. ವರಮಹಾಲಕ್ಷ್ಮೀ ಹಬ್ಬದ ದಿನ ವಿಶೇಷ ಪೂಜೆ ನಡೆಯುತ್ತದೆ. ಈ ದೇವಾಲಯದ ಪಕ್ಕದಲ್ಲಿ ಗಣಪತಿ, ಹನುಮದ್ ಸಮೇತ ಸೀತಾರಾಮರು ಹಾಗೂ ಆಂಜನೇಯ ಸ್ವಾಮಿ ದೇವಾಲಯವಿದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು