ಮುಖಪುಟ /ನಮ್ಮ ದೇವಾಲಯಗಳು  

ಮಹಾಲಕ್ಷ್ಮೀ ಲೇಔಟ್ ಶ್ರೀನಿವಾಸ ದೇವಾಲಯ

ಮರಿ ತಿರುಪತಿ ಎಂದೇ ಖ್ಯಾತವಾದ ಬೃಹತ್ ಮಂದಿರ

*ಟಿ.ಎಂ.ಸತೀಶ್

Bangalore temples, ಬೆಂಗಳೂರು ದೇವಾಲಯಗಳು, ಮ್ಯಾಜಿಸ್ಟ್ರೇಟ್ ಕೋರ್ಟ್ ಗಣಪತಿ, ಧರ್ಮಾಧಿಪ ಗಣಪತಿ, court ganesha, mahalakshmi layout srinivasa temple, ಮಹಾಲಕ್ಷ್ಮೀಲೇಔಟ್ ಶ್ರೀನಿವಾಸ ದೇವಾಲಯ,  ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಬೆಂಗಳೂರು ನಗರದ ಮಹಾಲಕ್ಷ್ಮೀಪುರ (ಮಹಾಲಕ್ಷ್ಮೀ ಲೇಔಟ್) ಆಂಜನೇಯ, ಮಹಾಲಕ್ಷ್ಮಿಯರು ನೆಲೆಸಿಹ ಪುಣ್ಯಕ್ಷೇತ್ರವಷ್ಟೇ ಅಲ್ಲ, ಲಕ್ಷ್ಮೀಪತಿ, ತಿರುಪತಿ ಗಿರಿವಾಸ ಶ್ರೀನಿವಾಸನೂ ನೆಲೆಸಿಹ ತಾಣ.

ಆಂಜನೇಯ, ಮಹಾಲಕ್ಷ್ಮೀ ದೇವಸ್ಥಾನಕ್ಕೆ ಅನತಿ ದೂರದಲ್ಲಿಯೇ ಇಲ್ಲಿ ವಿಶಿಷ್ಟ ವಾಸ್ತು ಶೈಲಿಯ ಶ್ರೀನಿವಾಸ ದೇವಾಲಯ ಇದೆ.

ಸ್ಥಳೀಯ ನಿವಾಸಿಗಳ ಸಹಕಾರ ಮತ್ತು  ನೆರವಿನಿಂದ ನಿರ್ಮಿಸಿದ ಶ್ರೀನಿವಾಸದೇವರ ದೇವಾಲಯದ ಸ್ಥಾಪನೆ ಆದದ್ದು 1976ರ ಜೂನ್ 7ರಂದು. ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರ ಅಮೃತಹಸ್ತದಿಂದ ದೇವಸ್ಥಾನದ ಪ್ರಾರಂಭೋತ್ಸವ ಹಾಗೂ ವರಹಸ್ವಾಮಿಯ ಪ್ರತಿಷ್ಠಾಪನೆಯೂ  ನೆರವೇರಿತು.

ಭವ್ಯವಾಗಿರುವ ಈ ದೇವಾಲಯ ವಾಸ್ತು ವಿನ್ಯಾಸದಲ್ಲೂ ಮೋಹಕವಾಗಿದೆ. ದೇವಾಲಯದ ಪ್ರವೇಶ ದ್ವಾರದ ಬಳಿ ಬೃಹತ್ ಗರುಡನ ಮೇಲೆ ತನ್ನ ಎರಡೂ ತೊಡೆಗಳ ಮೇಲೆ ಶ್ರೀ ಮಹಾಲಕ್ಷ್ಮೀ ಮತ್ತು ಪದ್ಮಾವತಿಯರನ್ನು ಕೂರಿಸಿಕೊಂಡಿರುವ ಶ್ರೀನಿವಾಸನ ಬೃಹತ್ ಗಾರೆಯ ಶಿಲ್ಪವಿದೆ. ಗರುಡಪಕ್ಷಿಯ ಕಾಲುಗಳ ನಡುವೆ ದ್ವಾರ ನಿರ್ಮಿಸಲಾಗಿದೆ. ಮತ್ತೊಂದು ಕಡೆ ದ್ವಾರದಲ್ಲಿ ಜಯವಿಜಯರ ಸಹಿತನಾದ ಶೇಷ ಶಯನ ನಾರಾಯಣನ ಗಾರೆಯ ಮೂರ್ತಿಯಿದೆ. ಮಗದೊಂದು ದ್ವಾರದಲ್ಲಿ ಎರಡು ಆನೆಗಳ ನಡುವೆ ಕಮಲದಲ್ಲಿ ಕುಳಿತಿರುವ ಧನದೇವತೆ ಗಜಲಕ್ಷ್ಮೀಯ ಮೂರ್ತಿಯೂ ಇದೆ, ಇನ್ನೊಂದು ದ್ವಾರದಲ್ಲಿ ಸಂಜೀವಿನ ಪರ್ವತ ಹೊತ್ತು ಹಾರುತ್ತಿರುವ ಹನುಮನ ಮೂರ್ತಿಯಿದೆ.  ಜೊತೆಗೆ ದೇವಾಲಯದ ಬಿತ್ತಿಗಳಲ್ಲಿ ರಂಗನಾಥ, ಅನಂತಪದ್ಮನಾಭ, ಆಂಜನೇಯ ಮೊದಲಾದ ಗಾರೆ ಶಿಲ್ಪಗಳಿವೆ.

Bangalore temples, ಬೆಂಗಳೂರು ದೇವಾಲಯಗಳು, ಮ್ಯಾಜಿಸ್ಟ್ರೇಟ್ ಕೋರ್ಟ್ ಗಣಪತಿ, ಧರ್ಮಾಧಿಪ ಗಣಪತಿ, court ganesha, mahalakshmi layout srinivasa temple, ಮಹಾಲಕ್ಷ್ಮೀಲೇಔಟ್ ಶ್ರೀನಿವಾಸ ದೇವಾಲಯ,  ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ಮರಿ ತಿರುಪತಿ ಎಂದೇ ಖ್ಯಾತವಾದ ಈ ಶ್ರೀನಿವಾಸದೇವರ ದೇವಾಲಯದ ಪ್ರಧಾನಗರ್ಭಗೃಹದಲ್ಲಿ ಶಂಖ, ಚಕ್ರಧಾರಿಯಾಗಿ, ಸೊಂಟದ ಮೇಲೆ ಒಂದು ಕೈ ಇಟ್ಟುಕೊಂಡು, ವರದ ಮುದ್ರೆಯಲ್ಲಿರುವ ಶ್ರೀನಿವಾಸ ದೇವರ ಸುಂದರವಾದ ಮೂರ್ತಿಯಿದೆ. ಈ ದೇವರಿಗೆ  ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವಂತೆಯೇ ತಿರುಪ್ಪಾವೈ ಸೇವೆ, ಪೂಲಂಗಿ ಸೇವೆ, ಬ್ರಹ್ಮೋತ್ಸವ, ಕಲ್ಯಾಣೋತ್ಸವ, ಸಹಸ್ರ ಕಳಷಾಭಿಷೇಕ, ಸಹಸ್ರ ದೀಪಾರಾಧನೆ, ಮುತ್ತಂಗಿ ಸೇವೆಯೇ ಮೊದಲಾದ ಸೇವೆಗಳು ಜರುಗುತ್ತವೆ.

ತಿರುಪತಿಗೆ ಹೋಗಲಾಗದವರು ಇಲ್ಲಿಯೇ ಮುಡಿಕೊಟ್ಟು ದೇವರ ದರ್ಶನ ಮಾಡುತ್ತಾರೆ. ಹೀಗಾಗೇ ಸ್ಥಳೀಯರು ಇದನ್ನು ಮರಿ ತಿರುಪತಿ ಎಂದೇ ಕರೆಯುತ್ತಾರೆ.

ದೇವಾಲಯದ ಆವರಣದಲ್ಲಿ ದೊಡ್ಡ ಸಭಾಂಗಣವಿದ್ದು, ವಿಶೇಷ ದಿನಗಳಲ್ಲಿ ಇಲ್ಲಿ ಭಜನೆ, ಹರಿಕಥೆ, ಸಂಗೀತೋತ್ಸವಗಳು ನಡೆಯುತ್ತವೆ.  ದೇಗುಲದಲ್ಲಿ ಪದ್ಮಾವತಿ, ಲಕ್ಷ್ಮೀ, ಆಂಜನೇಯ, ಗಣಪತಿಯ ಗುಡಿಗಳೂ ಇವೆ. ಸುಂದರವಾದ ಗರುಡಗಂಬವೂ ಇದೆ. ಹಬ್ಬ ಹರಿದಿನ, ವೈಕುಂಠ ಏಕಾದಶಿಯಂದು ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಪ್ರತಿವರ್ಷ ಇಲ್ಲಿ 9 ದಿನಗಳ ಕಾಲ ಬ್ರಹ್ಮೋತ್ಸವವೂ ಜರುಗುತ್ತದೆ. ಆ ಸಮಯದಲ್ಲಿ ಗರುಡೋತ್ಸವ, ಶೇಷವಾಹನೋತ್ಸವ, ಶಯನೋತ್ಸವವೇ ಮೊದಲಾದ ಅಲಂಕಾರಗಳನ್ನು ಮಾಡಲಾಗುತ್ತದೆ. ಪ್ರತಿ ಶುಕ್ರವಾರ ಶ್ರೀನಿವಾಸದೇವರ ಮೂಲವಿಗ್ರಹಕ್ಕೆ ಇಲ್ಲಿ ವಿಶೇಷ ಅಭಿಷೇಕ ಜರುಗುತ್ತದೆ.

Bangalore temples, ಬೆಂಗಳೂರು ದೇವಾಲಯಗಳು, ಮ್ಯಾಜಿಸ್ಟ್ರೇಟ್ ಕೋರ್ಟ್ ಗಣಪತಿ, ಧರ್ಮಾಧಿಪ ಗಣಪತಿ, court ganesha, mahalakshmi layout srinivasa temple, ಮಹಾಲಕ್ಷ್ಮೀಲೇಔಟ್ ಶ್ರೀನಿವಾಸ ದೇವಾಲಯ,  ಕನ್ನಡರತ್ನ.ಕಾಂ, kannadaratna.com, ourtemples.in, ಕರ್ನಾಟಕದ ದೇವಾಲಯಗಳು, karnataka temples,ದೇವಾಲಯಕ್ಕೆ 7 ಅಂತಸ್ತುಗಳ 150 ಅಡಿಗಳ ಚರಣಗೋಪುರ ನಿರ್ಮಿಸಲಾಗಿದೆ. ಈ ಚರಣ ಗೋಪುರದ ಒಂದೊಂದು ಅಂತಸ್ತಿನಲ್ಲೂ ಬಾಲಾಜಿಯ ಮಹಿಮೆ, ಸಮುದ್ರ ಮಂಥನ, ಋಷಿ ಮುನಿನಗಳು, ಕಾಶಿ ವಿಶಾಲಾಕ್ಷಿ, ದಶಾವತಾರ, ಕೃಷ್ಣ ಲೀಲೆ ಮೊದಲಾದ ಕಲಾ ಕಾವ್ಯಗಳಿವೆ.  ಏಳೂ ಅಂತಸ್ತಿಗೆ ಹೋಗಲು ಲಿಫ್ಟ್ ಸೌಲಭ್ಯವೂ ಇದೆ. ಇದಕ್ಕೆ 20 ರೂಪಾಯಿ ಪಾವತಿ ಮಾಡಬೇಕಷ್ಟೇ.  ದೇವಾಲಯ ವಿನೂತನ ಶೈಲಿಯಲ್ಲಿದ್ದು, ಮನಮೋಹಕವಾಗಿದೆ. ಶ್ರೀ ಶ್ರೀನಿವಾಸ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್ ದೇವಾಲಯದ ನಿರ್ವಹಣೆಯ ಜೊತೆ, ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ., ಸರಳ ಸಾಮೂಹಿಕ ವಿವಾಹಗಳನ್ನೂ ನಡೆಸುವ ಟ್ರಸ್ಟ್ ದೇಗುಲ ಆವರಣದಲ್ಲಿ ಆಸ್ಪತ್ರೆಯನ್ನೂ ನಿರ್ಮಿಸಿದ್ದು, ಬಡ ರೋಗಿಗಳಿಗೆ ಇಲ್ಲಿ ಉಚಿತ ಚಿಕಿತ್ಸೆಯನ್ನೂ ನೀಡಲಾಗುತ್ತದೆ.  ಹೆಚ್ಚಿನ ಮಾಹಿತಿಗೆ 080 - 23493482 ದೂರವಾಣಿ ಸಂಪರ್ಕಿಸಬಹುದು.

 

ಮುಖಪುಟ /ನಮ್ಮ ದೇವಾಲಯಗಳು