ಮುಖಪುಟ /ನಮ್ಮ ದೇವಾಲಯಗಳು  

ಕುಮಾರಪಾರ್ಕ್ ಶ್ರೀ ಮಹಾಲಕ್ಷ್ಮೀ ಮಂದಿರ

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. lakshmi Mandir, kumara park west, ಮಹಾಲಕ್ಷ್ಮೀ ಮಂದಿರ, ಕುಮಾರಕೃಪ ವೆಸ್ಟ್.ಬೆಂಗಳೂರು ನಗರದ ಪ್ರತಿಷ್ಠಿತ ಹಾಗೂ ಸಿರಿವಂತರ ಬಡಾವಣೆ ಕುಮಾರ ಪಾರ್ಕ್ ಲಕ್ಷ್ಮಿಯ ನೆಲೆವೀಡೂ ಹೌದು. ಇಲ್ಲಿ ಧನದೇವತೆ ಲಕ್ಷ್ಮೀಯ ಮಂದಿರವಿದೆ. ಶ್ರೀ ಮಹಾಲಕ್ಷ್ಮೀ ಮಂದಿರ ಟ್ರಸ್ಟ್ (ರಿ) ಆಡಳಿತಕ್ಕೊಳಪಟ್ಟ ಈ ದೇವಾಲಯ ನಿರ್ಮಾಣವಾದದ್ದು 1944ರಲ್ಲಿ.

ತಾರಣ ನಾಮ ಸಂವತ್ಸರದ ಮಾರ್ಗಶಿರ ಮಾಸ ಶುಕ್ಲಪಕ್ಷ ತ್ರಯೋದಶಿಯ ಮಂಗಳವಾರ 28-11-1944ರಲ್ಲಿ ಶ್ರೀಮತಿ ನ್ಯಾಪತಿ ನರಸಮ್ಮ ಮಾಧವರಾವ್ ಈ ದೇವಾಲಯಕ್ಕೆ ಅಸ್ತಿಭಾರ ಹಾಕಿದರು ಎಂದು ದೇವಾಲಯದ ಭಿತ್ತಿಯಲ್ಲಿರುವ ಶಿಲಾಕೆತ್ತನೆ ಸಾರುತ್ತದೆ.

ವಿಶಾಲವಾದ ಪ್ರಾಕಾರವಿರುವ ಈ ದೇವಾಲಯದಲ್ಲಿ ಕಲ್ಲು ಕಂಬಗಳಿಂದ ಕಟ್ಟಿದ ಹಾಗೂ ಗೋಪುರಗಳಿರುವ ಪ್ರವೇಶ ದ್ವಾರವಿದೆ. ದೇವಾಲಯ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ಹನುಮದ್ ಸಮೇತ ಸೀತಾರಾಮಲಕ್ಷ್ಮಣರ ಪುಟ್ಟ ಹಾಗೂ ಸುಂದರ ಪ್ರತಿಮೆಗಳು ಗಮನ ಸೆಳೆಯುತ್ತವೆ. ಇದಕ್ಕೇ ನೇರವಾಗಿ ಎದುರು ಇರುವ ಗುಡಿಯಲ್ಲಿ ನವಗ್ರಹಗಳ ಮಂದಿರವಿದೆ.

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. lakshmi Mandir, kumara park west, ಮಹಾಲಕ್ಷ್ಮೀ ಮಂದಿರ, ಕುಮಾರಕೃಪ ವೆಸ್ಟ್.ದೇಗುಲದ ಪ್ರಧಾನ ಗರ್ಭಗೃಹದಲ್ಲಿ ಶ್ರೀ ಮಹಾಲಕ್ಷ್ಮೀಯ ಸುಂದರ ವಿಗ್ರಹವಿದೆ. ಲಕ್ಷ್ಮಿ ದೇವರ ಬಲ ಭಾಗದಲ್ಲಿರುವ ಗರ್ಭಗೃಹದಲ್ಲಿ ಈಶ್ವರ, ಪಾರ್ವತಿ, ಗಣೇಶ ಹಾಗೂ ಸುಬ್ರಹ್ಮಣ್ಯನ ವಿಗ್ರಹಗಳಿವೆ. ಲಕ್ಷ್ಮೀದೇವಿಯ ಎಡ ಭಾಗದ ಗರ್ಭಗೃಹದಲ್ಲಿ ಶ್ರೀಸತ್ಯನಾರಾಯಣ ಸ್ವಾಮಿಯ ವಿಗ್ರಹವಿದೆ. ಈ ಎಲ್ಲ ವಿಗ್ರಹಗಳನ್ನು 1973ರ ಮೇ 13ರಂದು ಪ್ರತಿಷ್ಠಾಪಿಸಲಾಗಿದೆ.

ಪಕ್ಕದಲ್ಲಿರುವ ಮತ್ತೊಂದು ಮಂದಿರದಲ್ಲಿ ಪಾಂಡುರಂಗನ ಪ್ರತಿಮೆಯಿದೆ. 1988ರಲ್ಲಿ ಇಲ್ಲಿ ಲಕ್ಷ್ಮೀಸಹಿತ ಪಾಂಡುರಂಗನನ್ನು ಪ್ರತಿಷ್ಠಾಪಿಸಲಾಗಿದೆ.  ಶ್ರೀಮತಿ ಗಿರಿಜಾ ಭಾಯಿ ಮಹೇಂದ್ರಕರ್ ಅವರು ದೇವಾಲಯದ ಸಂಸ್ಥಾಪಕರಾಗಿ ಈ ಮಂದಿರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಈ ದೇವಾಲಯದಲ್ಲಿ  ತಂತ್ರಸಾರೋಕ್ತ ಮಧ್ವ ಸಂಪ್ರದಾಯ ವೈಷ್ಣವ ಪದ್ಧತಿಯಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಪ್ರತಿ ಪೌರ್ಣಿಮೆಯಂದು ಇಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸಂಕಷ್ಟಹರ ಗಣಪತಿ ಪೂಜೆ, ತಿಂಗಳಲ್ಲಿ ಎರಡು ದಿನ ಪ್ರದೋಷ, ಪ್ರತಿ ಏಕಾದಶಿಯಂದು ಪಾಂಡುರಂಗನಿಗೆ ವಿಶೇಷ ಪೂಜೆ ನಡೆಯುತ್ತದೆ.

our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. lakshmi Mandir, kumara park west, ಮಹಾಲಕ್ಷ್ಮೀ ಮಂದಿರ, ಕುಮಾರಕೃಪ ವೆಸ್ಟ್.ನವರಾತ್ರಿಯ ಹತ್ತೂ ದಿನ ದೇವರಿಗೆ ವಿಶೇಷ ಅಲಂಕಾರ, ಚಂಡಿಕಾ ಹೋಮ, ದಶಮಿಯ ದಿನ ಬನ್ನಿ ಪೂಜೆ, ಪ್ರಸಾದ ವಿನಿಯೋಗ ಜರುಗುತ್ತದೆ. ಧನುರ್ಮಾಸದಲ್ಲಿ ಒಂದು ತಿಂಗಳುಗಳ ಕಾಲ, ಆಷಾಡ ಏಕಾದಶಿಯಲ್ಲಿ ಸಹ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ರಾಮನವಮಿ, ಕೃಷ್ಣಾಷ್ಟಮಿಗಳಲ್ಲಿ ಉತ್ಸವಗಳೂ ಜರುಗುತ್ತವೆ. ದೀಪಾವಳಿ ಅಮಾವಾಸ್ಯೆಯಂದು ಹಾಗೂ ವರಮಹಾಲಕ್ಷ್ಮೀ ಹಬ್ಬದ ದಿನ  ಮಹಾಲಕ್ಷ್ಮಿಗೆ ಅಭಿಷೇಕ, ಅಲಂಕಾರಗಳನ್ನು ಮಾಡಲಾಗುತ್ತದೆ. ಶಿವರಾತ್ರಿಯ ದಿನ ನಾಲ್ಕೂ ಜಾವದಲ್ಲಿ ಪೂಜೆ, ಭಜನೆ, ಜಾಗರಣೆ ನಡೆಯುತ್ತದೆ. ದೇವಾಲಯದ ಎದುರು ಗರುಡಗಂಬವಿದ್ದು, ಆಂಜನೇಯನ ಪುಟ್ಟ ವಿಗ್ರಹವೂ ಇದೆ.

ಮಾರ್ಗ : ಶೇಷಾದ್ರಿಪುರ ಕಾಲೇಜಿನ ಪಕ್ಕದ ರಸ್ತೆಯಲ್ಲಿ ಸಾಗಿದರೆ ಮಹಾಲಕ್ಷ್ಮೀ ಮಂದಿರ ಕಾಣುತ್ತದೆ. ಹೆಚ್ಚಿನ ಮಾಹಿತಿಗೆ ಶ್ರೀ ಗಂಗಾಧರ್ ಅವರನ್ನು ೯೭೪೨೩೪೩೬೯೮ ದೂರವಾಣಿ ಮೂಲಕ ಸಂಪರ್ಕಿಸಬಹುದು.

ಮುಖಪುಟ /ನಮ್ಮ ದೇವಾಲಯಗಳು