ಮುಖಪುಟ /ನಮ್ಮದೇವಾಲಯಗಳು

ಲಕ್ಷ್ಮೇಶ್ವರದ ಮಹಂತರ ಮಠ

Mahantaramuttದೇವಾಲಯಗಳ ತೂಗು ತೊಟ್ಟಿಲೆಂದು ಖ್ಯಾತವಾದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿರುವ ಲಕ್ಷ್ಮೇಶ್ವರದಲ್ಲಿ ಜೈನ ಬಸದಿಗಳು, ಮಠಗಳೂ ಇವೆ. ಇಲ್ಲಿರುವ ಮಠಗಳ ಪೈಕಿ ಮಹಂತರ ಮಠ ಪ್ರಮುಖವಾದದ್ದು.

ಊರಿನ ಉತ್ತರಭಾಗದಲ್ಲಿರುವ ಈ ಮಠ ತನ್ನ ಶಿಲ್ಪ ಕಲಾವೈಭವದಿಂದ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಮಠದ ಮುಂಭಾಗದಲ್ಲಿ ಶಿಲಾಸ್ಪಂಭವಿದೆ. ಹಿಂದೆ ಇಲ್ಲಿ ಶಿವಶರಣರ ಚಿಂತನಗೋಷ್ಠಿ, ಧರ್ಮೋಪದೇಶ, ದಾಸೋಹ, ಪೂಜಾವಿಧಿಗಳು ನಡೆಯುತ್ತಿದ್ದವು ಎಂದು ತಿಳಿದುಬರುತ್ತದೆ.

ಮಠದ ಒಳಗೆ ವಿಶಾಲವಾದ ಪ್ರಾಂಗಣ, ಸಭಾಮಂಟಪ ಹಾಗೂ ದೇವಾಲಯವಿದೆ. ಭುವನೇಶ್ವರಿಯಲ್ಲಿ ಅರಳಿದ ಕಮಲದಂಥ ಸುಂದರ ಶಿಲ್ಪವಿದೆ. ಜೊತೆಗೆ ನಾಟ್ಯರಾಣಿಯ ಉಬ್ಬುಶಿಲ್ಪವೂ ಇದೆ. ಧ್ಯಾನಾರೂಢ ಶಿವನ ಮೂರ್ತಿಯ ಸುತ್ತಲೂ ಪ್ರಭಾವಳಿಯೋಪಾದಿಯಲ್ಲಿ ನೃತ್ಯಭಂಗಿಗಳಲ್ಲಿರುವ ಸ್ತ್ರೀ ವಿಗ್ರಹಗಳನ್ನು ಕಡೆಯಲಾಗಿದೆ. ಇಲ್ಲಿರುವ ಶಿಲಾಶಾಸನಗಳಲ್ಲಿ ನೃತ್ಯಮೇಳ, ಸಂಗೀತಗೋಷ್ಠಿ, ಶಿವನಮೂರ್ತಿಗಳಿವೆ. ಮಠದ ಹಿಂಭಾಗದಲ್ಲಿ ದೊಡ್ಡ ಕೆರೆ ಇದೆ.

ಊರಿನಲ್ಲಿ ನೋಡಬೇಕಾದ ಸ್ಥಳಗಳು

 1. ಲಕ್ಷ್ಮೀಲಿಂಗನಗುಡಿ
 2. ವಿಠೋಬ ಗುಡಿ
 3. ಸ್ವಯಂಭು ಸೋಮೇಶ್ವರ ದೇವಾಲಯ
 4. ಬಾಳೇಶ್ವರ ಮಠ
 5. ಅಗ್ನಿ ಸೋಮೇಶ್ವರ ದೇವಾಲಯ
 6. ಪಂಚತೀರ್ಥ
 7. ಜೈನ ಬಸದಿಗಳು
 8. ಪೇಟೆ ಹನುಮಂತದೇವರ ಗುಡಿ
 9. ರಾಘವೇಂದ್ರ ಮಠ
 10. ಬ್ರಹ್ಮೇಶ್ವರ ಗುಡಿ
 11. ವೆಂಕಟೇಶ್ವರ ದೇವಾಲಯ

ಧಾರವಾಡದಿಂದ ಲಕ್ಷ್ಮೇಶ್ವರಕ್ಕೆ ಕೇವಲ 72 ಕಿ.ಮೀ. ಬಸ್ ಸೌಕರ್ಯ ಉತ್ತಮವಾಗಿದೆ.
ಚಿತ್ರ ಮಾಹಿತಿ: ಬಿ.ಎಚ್.ಕೊಪ್ಪರ

ಮುಖಪುಟ /ನಮ್ಮ ದೇವಾಲಯಗಳು