ಮುಖಪುಟ /ನಮ್ಮದೇವಾಲಯಗಳು   

ಮಲ್ಲೇಶ್ವರದ ಲಕ್ಷ್ಮೀನರಸಿಂಹ

*ಟಿ.ಎಂ.ಸತೀಶ್

Lakshmi narasimha, Malleswaram, ಲಕ್ಷ್ಮೀನರಸಿಂಹ ಮಲ್ಲೇಶ್ವರ, ನಮ್ಮ ದೇವಾಲಯಗಳು, our temples, ಕರ್ನಾಟಕ ದೇವಾಲಯಗಳು, karnataka temples, temples of karnatakaಬೆಂಗಳೂರಿನ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಶ್ರೀಲಕ್ಷ್ಮೀನರಸಿಂಹ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳ ಪೈಕಿ ಒಂದು. 16ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಇರುವ ಲಕ್ಷ್ಮೀ ನರಸಿಂಹ ಉದ್ಭವ ಮೂರ್ತಿ ಎಂದು ಹೇಳುತ್ತಾರೆ.

16ನೇ ಶತಮಾನದಲ್ಲಿ ಇಲ್ಲಿ ಗರ್ಭಗುಡಿ ಮಾತ್ರವಿದ್ದು ಪುಟ್ಟ ಆಲಯವಿತ್ತು. ಮಲ್ಲಪುರದ ಜನ ಇಲ್ಲಿ ಬಂದು ದೇವರ ಪೂಜೆ ಸಲ್ಲಿಸುತ್ತಿದ್ದರು. ಕಾಲಾನಂತರದಲ್ಲಿ ಈ ದೇವಾಲಯ ಜೀರ್ಣೋದ್ಧಾರ ಮಾಡಿ, ವಿಮಾನ ಗೋಪುರ, ದೊಡ್ಡ ಪ್ರಾಕಾರ ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಈ ದೇಗುಲ ಆಂಧ್ರಪ್ರದೇಶದ ಅಹೋಬಲ ನರಸಿಂಹ ಸ್ವಾಮಿ ದೇವಾಲಯದ ಮಾದರಿಯಲ್ಲೇ ಇದೆ.

ದೇವಾಲಯದಲ್ಲಿ ರಾಮಾನುಜಾಚಾರ್ಯರು ಮತ್ತು ವೇದಾಂತ ದೇಶಿಕರರ ವಿಗ್ರಹಗಳೂ ಇವೆ. ಪ್ರತಿ ವರ್ಷ ಮಾಘ ಬಹುಳ ಸಪ್ತಮಿಯಂದು ಇಲ್ಲಿ ಬೆಳ್ಳಿರಥದಲ್ಲಿ ಸ್ವಾಮಿಯ ರಥೋತ್ಸವ ಜರುಗುತ್ತದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ದೊಡ್ಡ ಬೆಳ್ಳಿರಥ ನಿರ್ಮಾಣ ಮಾಡಿಸಿದ್ದು ಈ ದೇವಾಲಯ ಹಿರಿಮೆ ಎನ್ನುತ್ತಾರೆ ಪ್ರದಾನ ಅರ್ಚಕರಾದ ಬಿ.ಆರ್. ಪಟ್ಟಾಭಿರಾಮ ಭಟ್ಟರು.

Lakshmi narasimha, Malleswaram, ಲಕ್ಷ್ಮೀನರಸಿಂಹ ಮಲ್ಲೇಶ್ವರ, ನಮ್ಮ ದೇವಾಲಯಗಳು, our temples, ಕರ್ನಾಟಕ ದೇವಾಲಯಗಳು, karnataka temples, temples of karnataka21 ಅಡಿ ಎತ್ತರ ಹಾಗೂ 7 ಅಡಿ ಅಗಲ ಇರುವ ಈ ಬೃಹತ್ ಬೆಳ್ಳಿರಥಕ್ಕೆ ಬಳಸಿರುವ ಬೆಳ್ಳಿ ಎಷ್ಟು ಗೊತ್ತೆ. 700 ಕೆ.ಜಿ. ಎಂಟು ಮೂಲೆಗಳನ್ನು ಹೊಂದಿರುವ ಈ ರಥದ ವಿನ್ಯಾಸ ಅಮೋಘವಾಗಿದೆ. 8 ಯಾಳಿಗಳಿರುವ ರಥದಲ್ಲಿ ಅಷ್ಟ ದಿಕ್ಪಾಲಕರು, ಸಿಂಹಮುಖ, ಜಯವಿಜಯರ ವಿಗ್ರಹ, ಗಜ, ಆದಿಶೇಷ,  ಅಶ್ವ, ಅಷ್ಟಲಕ್ಷ್ಮೀ, ನವ ನರಸಿಂಹ, ಪದ್ಮ, ಗರುಡ, ಆಂಜನೇಯನ ಪ್ರತಿಮೆಗಳು ಮನೋಹರವಾಗಿವೆ.

ನರಸಿಂಹ ಜಯಂತಿ, ವರಮಹಾಲಕ್ಷ್ಮೀ ಹಬ್ಬದ ದಿನಗಳಂದು ಹಾಗೂ ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ಜರುಗುತ್ತದೆ. ಆಷಾಢ ಮಾಸದಲ್ಲಿ 5 ದಿನಗಳ ಕಾಲ ಇಲ್ಲಿ ಉಯ್ಯಾಲೆ ಉತ್ಸವ ನಡೆಯುವುದು ವಿಶೇಷ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು

Mahendra Diamonda and jewellers, Malleswaram,