ಮುಖಪುಟ /ನಮ್ಮ ದೇವಾಲಯಗಳು  

ಮಹತೋಭಾರ ಮಂಗಳಾದೇವಿ

ಮಂಗಳೂರಿನ ಪುರಾತನ ಪುರಾಣ ಪ್ರಸಿದ್ಧ ದೇವಾಲಯ

*ಟಿ.ಎಂ.ಸತೀಶ್

Mangaladevi temple, ourtemples.in, kannadaratna.com, T.M.Satish, Temples in karnataka, temples of Mangalore, T.M.Satish, Journalist., ಮಂಗಳಾದೇವಿ ದೇವಾಲಯ, ಮಂಗಳೂರು,ಬಂದರು ನಗರಿ ಮಂಗಳೂರನ್ನು ಪೊರೆಯುತ್ತಿರುವ ದೇವತೆಯೇ ಮಂಗಳಾದೇವಿ. ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡುವ ದೇವಿಯ ಈ ದೇವಾಲಯ ಮಂಗಳೂರು ನಗರದ ಹೃದಯಭಾಗದಲ್ಲಿದೆ. ಈ ದೇವಾಲಯವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಇತಿಹಾಸದ ಪ್ರಕಾರ ಮಂಗಳೂರಿಗೆ ಹಿಂದೆ ಮಂಗಳಾಪುರ ಎಂಬ ಹೆಸರಿತ್ತು. ಆಳುಪ ಅರಸರಲ್ಲಿ ಪ್ರಖ್ಯಾತನಾದ ಕುಂದವರ್ಮನು ಮಂಗಳಾಪುರವನ್ನು ತನ್ನ ರಾಜಧಾನಿ ಮಾಡಿಕೊಂಡಿದ್ದನೆಂದು ಇತಿಹಾಸ ಸಾರುತ್ತದೆ. ನೇಪಾಳದಿಂದ ಮಂಗಳಾಪುರಕ್ಕೆ ಬಂದ ಮಚ್ಚೇಂದ್ರನಾಥ ಮತ್ತು ಗೋರಕನಾಥ ಎಂಬ ಯತಿಗಳಿಬ್ಬರ ಸೂಚನೆಯಂತೆ ಕುಂದವರ್ಮನೇ ಈ ದೇವಾಲಯ ಕಟ್ಟಿಸಿದ ಎಂದು ಹೇಳಲಾಗುತ್ತದೆ.  

ದಶಾವತಾರ ಎತ್ತಿದ ವಿಷ್ಣು ಪರಶುರಾಮಾವತಾರದಲ್ಲಿ ಕೆಲ ಕಾಲ ಇಲ್ಲಿ ನೆಲೆಸಿ ತಪಸ್ಸು ಮಾಡಿದ್ದರಂತೆ ಹೀಗಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಾಂತ್ಯಗಳು ಪರಶುರಾಮಕ್ಷೇತ್ರ ಎಂದೇ ಖ್ಯಾತವಾಗಿವೆ. ಅಷ್ಟೇ ಅಲ್ಲ, ತ್ರಿಲೋಕ ಕಂಟಕನಾಗಿದ್ದ ಹಿರಣ್ಯಾಕ್ಷನ ಮಗಳಾದ ವಿಖಾಸಿನಿ ಎಂಬ ರಕ್ಕಸಿಯ ಪುತ್ರ ಅಂಡಾಸುರನೆಂಬ ರಾಕ್ಷಸನನ್ನು ಮಂಗಳಾದೇವಿ ಈ ಸ್ಥಳದಲ್ಲಿ ಸಂಹರಿಸಿದಳೆಂದೂ, Mangaladevi temple, ourtemples.in, kannadaratna.com, T.M.Satish, Temples in karnataka, temples of Mangalore, T.M.Satish, Journalist., ಮಂಗಳಾದೇವಿ ದೇವಾಲಯ, ಮಂಗಳೂರು,ಪ್ರದೇಶ ಪೂರ್ತಿ ಸಮುದ್ರದಿಂದ ಆವರಿಸಿಕೊಂಡಿತ್ತೆಂದೂ, ಸಮುದ್ರ ರಾಜನಿಗೆ ಹಿಂದೆ ಸರಿಯುವಂತೆ ತಿಳಿಸಿ, ಈ ಪವಿತ್ರ ತಾಣದಲ್ಲಿ ಪರಶುರಾಮರು ಮಂಗಳದೇವಿಯನ್ನು ಕುರಿತು ತಪಸ್ಸು ಮಾಡಿದರಂತೆ.

 ಸರ್ವ ಮಂಗಳದಾಯಿನಿಯಾದ ಮಂಗಳಾದೇವಿ ಪ್ರತ್ಯಕ್ಷಳಾದಾಗ ಈ ಪಾವನ ಕ್ಷೇತ್ರದಲ್ಲಿ ಪೂಜಿಸಿದ್ದರಂತೆ. ಹೀಗಾಗಿ ಈ ಕ್ಷೇತ್ರ ಪರಶುರಾಮಸೃಷ್ಟಿ ಎಂದೂ ಕರೆಸಿಕೊಂಡಿದೆ. ಭಾರದ್ವಾಜ ಮಹಾಮುನಿಗಳು ಕೂಡ ಈ ತಾಯಿಯನ್ನು ಅರ್ಚಿಸಿದ್ದರೆಂಬ ಪ್ರತೀತಿ ಇದೆ. ಈ ಎಲ್ಲ ಸ್ಥಳ ಮಹಾತ್ಮೆಯನ್ನು ಕುಂದವರ್ಮನಿಗೆ ನೇಪಾಳದ ಯತಿಗಳು ತಿಳಿಸಿದರೆಂದೂMangaladevi temple, ourtemples.in, kannadaratna.com, T.M.Satish, Temples in karnataka, temples of Mangalore, T.M.Satish, Journalist., ಮಂಗಳಾದೇವಿ ದೇವಾಲಯ, ಮಂಗಳೂರು, ಹೀಗಾಗಿ ಅವರು ಸೂಚಿಸಿದ ರೀತಿ ರಾಜ ಮಂಗಳಾದೇವಿ ದೇವಾಲಯ ನಿರ್ಮಿಸಿ, ಇಲ್ಲಿ ಶಿವಶಕ್ತಿ ಸಮ್ಮಿಲಿತವಾದ ಲಿಂಗ ರೂಪದ ಬಿಂಬವನ್ನು ಪುನರ್ ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ. ಮಂಗಳಾದೇವಿಯ ಪ್ರತಿಷ್ಠಾಪನೆಯಿಂದಲೇ ಈ ಊರಿಗೆ ಮಂಗಳಾಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

ಪ್ರಸ್ತುತ ಈಗಿರುವ ದೇವಾಲಯ ಕರಾವಳಿಯ ದೇವಾಲಯಗಳ ವಾಸ್ತುವಿನ್ಯಾಸದಲ್ಲೇ ಇದೆ. ಹೆಂಚಿನ ಛಾವಣಿಯ ಈ ದೇವಾಲಯಕ್ಕೆ ಕಬ್ಬಿಣದ ಸರಳುಗಳ ಬಾಗಿಲುಗಳನ್ನು ಅಳವಡಿಸಿ ಭದ್ರಪಡಿಸಲಾಗಿದೆ. ಹೆಂಚಿನ ಮಾಡಿನ ಮೇಲೆ ಎತ್ತರವಾದ ಕಬ್ಬಿಣದ ಕಂಬಗಳ ಅಳವಡಿಸಿ, ವಿಶಾಲ ಪ್ರದೇಶದಲ್ಲಿ ಶೀಟುಗಳ ಛಾವಣಿ ಹಾಕಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ. ಪ್ರವೇಶದ್ವಾರದ ಮೇಲ್ಭಾಗದಲ್ಲಿ ಪಟ್ಟಿಕೆಯ ರೂಪದಲ್ಲಿ ಸುವರ್ಣವರ್ಣದ ಶಾರದೆ, ದುರ್ಗೆಯೇ ಮೊದಲಾದ ದೇವತೆಗಳ ಮತ್ತು ನೃತ್ಯಭಂಗಿಯ ಕೆಲವು ಶಿಲ್ಪಗಳಿವೆ. ದೇವಿಯ ಮಹಿಮೆ ಸಾರುವ ವರ್ಣ ಚಿತ್ರಗಳನ್ನೂ ಬಿತ್ತಿಗಳಲ್ಲಿ ಅಳವಡಿಸಲಾಗಿದೆ. ದೇವಾಲಯದ ಮುಂದೆ ಇರುವ ಬೃಹತ್ ಕಂಬಕ್ಕೆ ಹಿತ್ತಾಳೆಯ ಕವಚ ಹಾಕಲಾಗಿದ್ದು, ಸುತ್ತಲೂ ನವಗ್ರಹಗಳ ಮೂರ್ತಿಗಳಿವೆ.

ಕಾರಣಾಂತರಗಳಿಂದ ವಿವಾಹ ವಿಳಂಬವಾಗುವವರು ಈ ಕ್ಷೇತ್ರದಲ್ಲಿ ಬಂದು ಪಾರ್ವತಿ ಸ್ವಯಂವರ ವ್ರತ ಮಾಡಿದರೆ, ಕಂಕಣಭಾಗ್ಯ ಕೂಡಿ ಬರುತ್ತದೆಂದೂ, ಗುಣವಂತನಾದ ಪತಿ ದೊರಕುತ್ತಾನೆಂಬ ನಂಬಿಕೆ ಇದೆ.

Mangaladevi temple, ourtemples.in, kannadaratna.com, T.M.Satish, Temples in karnataka, temples of Mangalore, T.M.Satish, Journalist., ಮಂಗಳಾದೇವಿ ದೇವಾಲಯ, ಮಂಗಳೂರು,ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಆಶ್ವಯುಜ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ಹಾಗೂ ಪ್ರತಿ ನಿತ್ಯ ವಿವಿಧ ಅಲಂಕಾರ ಹಾಗೂ ಚಂಡಿಕಾಹೋಮ, ವಿದ್ಯಾರಂಭ, ರಂಗಪೂಜೆ, ರಥೋತ್ಸವ ಹಾಗೂ ಅವಭೃತ ಸ್ನಾನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೂ ನಡೆಯುತ್ತವೆ.  ಈ ಒಂಬತ್ತೂ ದಿನ ಇಲ್ಲಿ ಜನಜಾತ್ರೆಯೇ ಸೇರುತ್ತದೆ.

ಇನ್ನು ಕಾರ್ತೀಕ ಮಾಸದಲ್ಲಿ ಬಹುಳ ನವಮಿಯ ದಿನ ಮಂಗಳಾದೇವಿಯ ದೇವಾಲಯದಲ್ಲಿ ಲಕ್ಷದೀಪೋತ್ಸವವೂ ಜರುಗುತ್ತದೆ.

ಬಹುತೇಕ ಮಾರ್ಚ್ ತಿಂಗಳಲ್ಲಿ ಪ್ರತಿ ವರ್ಷ ಇಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಮೇ 17ರಂದು  ಪ್ರತಿಷ್ಠಾ ಮಹೋತ್ಸವ ನಡೆಯುತ್ತದೆ.

ಮಂಗಳೂರಿನ ವಿವಿಧ ಪ್ರದೇಶಗಳಿಂದ ಮಂಗಳಾದೇವಿ ದೇವಾಲಯಕ್ಕೆ ನಗರ ಸಾರಿಗೆ ಬಸ್ ಸೌಕರ್ಯವೂ ಇದೆ.

ಮುಖಪುಟ /ನಮ್ಮ ದೇವಾಲಯಗಳು