ಮುಖಪುಟ /ನಮ್ಮದೇವಾಲಯಗಳು   

ಹುಳಿಮಾವು ಮೀನಾಕ್ಷಿ ಸುಂದರೇಶ್ವರ ದೇವಾಲಯ

ಬನ್ನೇರುಘಟ್ಟ ರಸ್ತೆಯಲ್ಲಿರುವ ಭವ್ಯ ದೇಗುಲ

*ಟಿ.ಎಂ.ಸತೀಶ್

Hulimavu Meenakshi temple, Sundareshwara temple, Hulimavu, ಹುಳಿಮಾವು ಮೀನಾಕ್ಷಿ ಸುಂದರೇಶ್ವರ ದೇವಾಲಯ, ಬನ್ನೇರುಘಟ್ಟ ರಸ್ತೆ, Temples in and around Bangalore, Temples of Karnataka. our temples.in, ಟಿ.ಎಂ. ಸತೀಶ್,  Turuvekere Satish, Satish T.M. ಬೆಂಗಳೂರಿನಿಂದ ಬನ್ನೇರುಘಟ್ಟಕ್ಕೆ ಹೋಗುವ ಮಾರ್ಗದಲ್ಲಿ ಹುಳಿಮಾವಿನ ಬಳಿ ಮುಖ್ಯರಸ್ತೆಯ ಬಲಭಾಗದಲ್ಲೇ ಕಾಣುವ ಸುಂದರ ಮಂದಿರವೇ ಶ್ರೀ.ಮೀನಾಕ್ಷಿ ಸುಂದರೇಶ್ವರ ದೇವಾಲಯ.

1993ರ ಫೆಬ್ರವರಿ 24ರಂದು  ಅಂದರೆ ಶ್ರೀ ಆಂಗೀರಸ ನಾಮ ಸಂವತ್ಸರದ ಉತ್ತರಾಯಣ ಶಿಶಿರ ಫಾಲ್ಗುಣ ಮಾಸದ ಶುಕ್ಲಪಕ್ಷದ ತದಿಗೆಯಂದು ಪ್ರತಿಷ್ಠಾಪನೆಗೊಂಡ ಈ ದೇವಾಲಯ ವಿಶಾಲವಾದ ಪ್ರಾಕಾರ, ಭವ್ಯ ರಾಜಗೋಪುರ, ಸುಂದರ ಮುಖಮಂಟಪ, ನವರಂಗವನ್ನು ಒಳಗೊಂಡಿದ್ದು ಭವ್ಯವಾಗಿದೆ.

ಶ್ರೀ ತಿರುಚ್ಚಿ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಅರಕೆರೆ ಗ್ರಾಮದ ಸಿ. ನಾರಾಯಣ ರೆಡ್ಡಿ ಅವರು ತಮ್ಮ ಸೋದರರ ಹಾಗೂ ಹತ್ತೂ ಸಮಸ್ತರ ಸಹಕಾರದೊಂದಿಗೆ ನಿರ್ಮಿಸಿದ ಈ ದೇವಾಲಯ ಅತ್ಯಾಕರ್ಷಕವಾಗಿದೆ. ಐದು ಅಂತಿಸ್ತಿನ ಪ್ರಧಾನ ಗೋಪುರ ದಾಟಿ ದೇವಾಲಯದ ಒಳ ಪ್ರವೇಶಿಸಿದರೆ ಭವ್ಯವಾದ ದೇವಾಲಯ ಸಮುಚ್ಚಯದ ದರ್ಶನವಾಗುತ್ತದೆ. ಸಾಲುಗಂಬಗಳ ಮುಖಮಂಟಪದಲ್ಲಿ ಎರಡು ಪ್ರತ್ಯೇಕ ಗರ್ಭಗುಡಿಗಳಿದ್ದು, ಎರಡು ನಂದಿ ಮಂಟಪಗಳಿವೆ.

Hulimavu Meenakshi temple, Sundareshwara temple, Hulimavu, ಹುಳಿಮಾವು ಮೀನಾಕ್ಷಿ ಸುಂದರೇಶ್ವರ ದೇವಾಲಯ, ಬನ್ನೇರುಘಟ್ಟ ರಸ್ತೆ, Temples in and around Bangalore, Temples of Karnataka. our temples.in, ಟಿ.ಎಂ. ಸತೀಶ್,  Turuvekere Satish, Satish T.M. ದೇವಾಲಯದ ಪ್ರಧಾನ ರಾಜಗೋಪುರಕ್ಕೆ ಎದುರಾಗಿ ಇರುವ ಗರ್ಭಗೃಹದಲ್ಲಿ ಸುಂದರೇಶ್ವರನ ಶಿವಲಿಂಗವಿದ್ದರೆ, ದೇವರ ಎಡಭಾಗದಲ್ಲಿರುವ ಮತ್ತೊಂದು ಗರ್ಭಗೃಹದಲ್ಲಿ ಮದುರೆಯ ಮೀನಾಕ್ಷಿಯ ಪ್ರತಿರೂಪದಂತೆಯೇ ಇರುವ ಮೀನಾಕ್ಷಿ ಅಮ್ಮನವರ ವಿಗ್ರಹವಿದೆ. ಎರಡೂ ದೇವಾಲಯಗಳಿಗೆ ಒಂದೇ ನವರಂಗವಿದೆ.

ಮಂಟಪದ ಕಂಬಗಳಲ್ಲಿ ನಟರಾಜ, ಗಣಪತಿ, ಸುಬ್ರಹ್ಮಣ್ಯ. ತಾಂಡವೇಶ್ವರ ಮೊದಲಾದ ಉಬ್ಬುಶಿಲ್ಪಗಳಿವೆ. ದೇವಾಲಯದ ಪ್ರಾಕಾರದಲ್ಲಿ ಸೂರ್ಯ, ಚಂದ್ರರಿಗೆ ಪ್ರತ್ಯೇಕ ಪುಟ್ಟ ಗುಡಿಗಳಿವೆ. ಜೊತೆಗೆ ಮಹಾಗಣಪತಿಯ ಗುಡಿಯೂ ಇದೆ. ಹಲವು ಪರಿವಾರ ದೇವತೆಗಳ ಸಾಲೂ ಇಲ್ಲಿದ್ದು, ಪದ್ಮಾವತಿ, ಶ್ರೀನಿವಾಸ, ಆಂಜನೇಯ, ಅಯ್ಯಪ್ಪ, ಗಜಲಕ್ಷ್ಮೀ ವಿಗ್ರಹಗಳೂ ಇವೆ. ಸುಬ್ರಹಣ್ಯ, ಚಂಡಿಕೇಶ್ವರ ಮತ್ತು ಕಾಲಭೈರವ ದೇವರ ಪುಟ್ಟ ಗುಡಿಗಳೂ ಇವೆ. ಪ್ರವೇಶದ್ವಾರದ ಬಲ ಭಾಗದಲ್ಲಿ ನವಗ್ರಹ ಮಂಟಪವೂ ಇದ್ದು, ಇದರಲ್ಲಿ ಒಂಟಿ ಚಕ್ರದ ಏಳು ಕುದುರೆಗಳ ರಥದಲ್ಲಿ ಕುಳಿತ ಸೂರ್ಯನ ವಿಗ್ರಹದ ಸುತ್ತ ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

Hulimavu Meenakshi temple, Sundareshwara temple, Hulimavu, ಹುಳಿಮಾವು ಮೀನಾಕ್ಷಿ ಸುಂದರೇಶ್ವರ ದೇವಾಲಯ, ಬನ್ನೇರುಘಟ್ಟ ರಸ್ತೆ, Temples in and around Bangalore, Temples of Karnataka. our temples.in, ಟಿ.ಎಂ. ಸತೀಶ್,  Turuvekere Satish, Satish T.M. ಐದು ಅಂತಸ್ತುಗಳ ಭವ್ಯವಾದ ರಾಜಗೋಪುರದಲ್ಲಿ ಮದುರೆ ಮೀನಾಕ್ಷಿ, ರಾಜೇಶ್ವರಿ, ದ್ವಾರಪಾಲಕರು, ನಟರಾಜ ಮೊದಲಾದ ದೇವಾನು ದೇವತೆಗಳ ಗಾರೆಯ ಶಿಲ್ಪಗಳಿವೆ. ಒಳಗಿನ ಮಂಟಪದ ಮೇಲಿನ ಗಾರೆಗಚ್ಚಿನ ಗೋಪುರದ ಗೂಡಿನಲ್ಲಿ ಗಿರಿಜಾ ಕಲ್ಯಾಣದ ಶಿಲ್ಪವಿದೆ. ಸುತ್ತಲೂ ಸುಬ್ರಹ್ಮಣ್ಯ, ಗಣಪತಿ ಮೊದಲಾದ ದೇವತೆಗಳ ಗಾರೆಯ ಶಿಲ್ಪಗಳಿವೆ. ಮುಂಭಾಗದಲ್ಲಿ ನಂದಿ ಕಂಬವಿದೆ. ಕಲ್ಲಿನಿಂದ ನಿರ್ಮಿಸಲಾಗಿರುವ ದೇವಾಲಯದ ಹೊರ ಬಿತ್ತಿಗಳಲ್ಲಿ ದಕ್ಷಿಣಾಮೂರ್ತಿ, ಗಣಪತಿ, ಮಹಿಷಾಸುರ ಮರ್ದಿನಿ ಮೊದಲಾದ ದೇವರುಗಳ ಮೂರ್ತಿಗಳಿವೆ.  

ದೇವಾಲಯ ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 6.30ರಿಂದ 12 ಹಾಗೂ ಸಂಜೆ 4ರಿಂದ 8ವರೆಗೆ ತೆರೆದಿರುತ್ತದೆ. ಶುಕ್ರವಾರ ಹಾಗೂ ಭಾನುವಾರಗಳಂದು ಬೆಳಗ್ಗೆ 6.30ರಿಂದ ಮಧ್ಯಾಹ್ನ 1 ಹಾಗೂ ಸಂಜೆ 4ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ. ನಿತ್ಯವೂ ಅಭಿಷೇಕ, ಪೂಜೆಗಳು ನಡೆಯುತ್ತವೆ.

ಮುಖಪುಟ /ನಮ್ಮದೇವಾಲಯಗಳು