ಮುಖಪುಟ /ನಮ್ಮ ದೇವಾಲಯಗಳು  

ರಾಜಮುಡಿ, ವೈರಮುಡಿ ವೈಭವದ: ಚೆಲುವ ನಾರಾಯಣ
ಆಚಾರ್ಯ ರಾಮಾನುಜರಿಂದ ಪುನೀತವಾದ ಈ ಪುಣ್ಯಕ್ಷೇತ್ರ ಮೇಲುಕೋಟೆ, ಸಾಹಿತ್ಯ, ಕಲೆ, ಸಂಸ್ಕೃತಿಯ ತವರು...

Melukote chaluva narayana, mandya, ramanujacharya, yadugiri, south badhari, temples in and around Bangalore, kannadaratna.com, ourtemples in, T.M. Satish, ಬೆಂಗಳೂರು ಸುತ್ತ ಮುತ್ತಲ ದೇವಾಲಯಗಳು, ತುರುವೇಕೆರೆ ಸತೀಶ್, ಮೇಲುಕೋಟೆ, ರಾಜಮುಡಿ, ಚೆಲುವ ನಾರಾಯಣ, ರಾಮಾನುಜಾಚಾರ್ಯರು, ಮಂಡ್ಯ, ಮೈಸೂರು, ಚಿತ್ರಕೃಪೆ ಇಂಟರ್ ನೆಟ್ಟಿ.ಎಂ.ಸತೀಶ್

ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಕಲೆ, ಸಂಸ್ಕೃತಿ, ಶಿಲ್ಪಕಲೆಯ ತವರು. ಕರ್ನಾಟಕದ ಸುಪ್ರಸಿದ್ಧ ಯಾತ್ರಾಸ್ಥಳ. ಗಿರಿಶಿಖರಗಳಿಂದ ಕಂಗೊಳಿಸುವ ಮೇಲುಕೋಟೆ ಆಚಾರ್ಯ ರಾಮಾನುಜಾಚಾರ್ಯರಿಂದ ಪುನೀತವಾದ ಪುಣ್ಯಕ್ಷೇತ್ರ. 

ದಕ್ಷಿಣದ ಬದರಿ ಕ್ಷೇತ್ರವೆಂದೇ ಖ್ಯಾತವಾದ ಮೇಲುಕೋಟೆ ಮಂಡ್ಯದಿಂದ 36 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 120 ಕಿ.ಮೀ. ಹಾಗೂ ಮೈಸೂರಿಗೆ ಕೇವಲ 50 ಕಿ.ಮೀಟರ್  ದೂರದಲ್ಲಿದೆ.  101 ದೇಗುಲ ಹಾಗೂ 101 ಕಲ್ಯಾಣಿಗಳಿರುವ ಈ ಸುಂದರ ಬೀಡು, ಸಮುದ್ರಮಟ್ಟದಿಂದ 1,013 ಮೀಟರ್ ಎತ್ತರದಲ್ಲಿದೆ.

ಸ್ಥಳಪುರಾಣ : ದಕ್ಷಿಣ ಭಾರತದ ಚಾರ್ ಧಾಮ- ಶ್ರೀವೈಷ್ಣವ ಕ್ಷೇತ್ರಗಳೆಂದು ಖ್ಯಾತವಾಗಿರುವ ನಾಲ್ಕು ಪುಣ್ಯಕ್ಷೇತ್ರಗಳ ಪೈಕಿ ಮೇಲುಕೋಟೆಯೂ ಒಂದು. ಇನ್ನುಳಿದ ಮೂರು ಕ್ಷೇತ್ರಗಳೆಂದರೆ, ಕಂಚಿ, ತಿರುಪತಿ ಮತ್ತು ಶ್ರೀರಂಗಂ ಎಂದು ಹೇಳಲಾಗುತ್ತದೆ.

Melukote chaluva narayana, mandya, ramanujacharya, yadugiri, south badhari, temples in and around Bangalore, kannadaratna.com, ourtemples in, T.M. Satish, ಬೆಂಗಳೂರು ಸುತ್ತ ಮುತ್ತಲ ದೇವಾಲಯಗಳು, ತುರುವೇಕೆರೆ ಸತೀಶ್, ಮೇಲುಕೋಟೆ, ರಾಜಮುಡಿ, ಚೆಲುವ ನಾರಾಯಣ, ರಾಮಾನುಜಾಚಾರ್ಯರು, ಮಂಡ್ಯ, ಮೈಸೂರು, ಚಿತ್ರಕೃಪೆ ಇಂಟರ್ ನೆಟ್ಮೇಲುಕೋಟೆಗೆ  ಯಾದವಾದ್ರಿ,  ವೇದಾದ್ರಿ, ನಾರಾಯಣಾದ್ರಿ, ಯತಿಶೈಲ,  ಯದುಗಿರಿ ಎಂಬ ಹೆಸರುಗಳೂ ಇವೆ.  ಕೃತಯುಗದಲ್ಲಿ ಸನತ್ಕುಮಾರ ಇಲ್ಲಿ ತಿರುನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರಿಂದ  ನಾರಾಯಣಾದ್ರಿ ಎಂದೂ, ತ್ರೇತಾಯುಗದಲ್ಲಿ ದತ್ತಾತ್ರೇಯರು ಈ ಪರ್ವತದಲ್ಲಿ ವೇದ ಪಾರಾಯಣ ಮಾಡಿದ್ದರಿಂದ ವೇದಾದ್ರಿಯೆಂದೂ, ದ್ವಾಪರದಲ್ಲಿ ಶ್ರೀಕೃಷ್ಣ ಪರಮಾತ್ಮನೇ ಮೊದಲಾದವರಿಂದ ಪೂಜಿಸಲ್ಪಟ್ಟ ಈ ಸ್ಥಳ ಯಾದವಾದ್ರಿಯೆಂದೂ, ಕಲಿಯುಗದಲ್ಲಿ ಅಂದರೆ ಕ್ರಿ.ಶ.1100ರ ಸುಮಾರಿನಲ್ಲಿ ಚೋಳನಾಡಿನಿಂದ ವಲಸೆ ಬಂದ ಆಚಾರ್ಯ ರಾಮಾನುಜಾಚಾರ್ಯರು 12 ವರ್ಷಗಳ ಕಾಲ ಇಲ್ಲಿ ಮತ್ತು ಸಮೀಪದ ತೊಣ್ಣೂರಿನಲ್ಲಿ ನೆಲೆಸಿ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿದ ಕಾರಣ ಯತಿಶೈಲವೆಂದೂ ಹೆಸರು ಪಡೆದಿದೆ ಎನ್ನುತ್ತದೆ ಸ್ಥಳ ಪುರಾಣ. 

Melukote chaluva narayana, mandya, ramanujacharya, yadugiri, south badhari, temples in and around Bangalore, kannadaratna.com, ourtemples in, T.M. Satish, ಬೆಂಗಳೂರು ಸುತ್ತ ಮುತ್ತಲ ದೇವಾಲಯಗಳು, ತುರುವೇಕೆರೆ ಸತೀಶ್, ಮೇಲುಕೋಟೆ, ರಾಜಮುಡಿ, ಚೆಲುವ ನಾರಾಯಣ, ರಾಮಾನುಜಾಚಾರ್ಯರು, ಮಂಡ್ಯ, ಮೈಸೂರು, ಚಿತ್ರಕೃಪೆ ಇಂಟರ್ ನೆಟ್ಶಾಸನಗಳಲ್ಲಿ ಈ ಕ್ಷೇತ್ರಕ್ಕೆ  ಯಾದವಗಿರಿ,  ಯದುಗಿರಿ,  ವೈಕುಂಠವರ್ಧನ ಕ್ಷೇತ್ರ, ದಕ್ಷಿಣ ಬದರಿಕಾಶ್ರಮ, ತಿರುನಾರಾಯಣಪುರ, ಮೇಲುಕೋಟೆ  ಎಂಬ ಹೆಸರುಗಳಿರುವ ಉಲ್ಲೇಖವಿದೆ. 1189ರಲ್ಲೇ ಇಲ್ಲಿ ಕೋಟೆ ಇತ್ತು ಎಂಬ ಬಗ್ಗೆಯೂ ಆಧಾರಗಳು ದೊರೆತಿವೆ.

ಚೆಲುವ ನಾರಾಯಣ ದೇಗುಲ:  280 ಅಡಿ ಉದ್ದ ಅಗಲ ಇರುವ ಚಚ್ಚೌಕಾಕಾರದ ವಿಸ್ತಾರವಾದ ಕಟ್ಟಡ, ಹಲವು ಕೈಶಾಲೆ  ಮಹಾದ್ವಾರ, 150 ಅಡಿ ಎತ್ತರದ  ರಾಜಗೋಪುರ,  ಪ್ರಾಕಾರ, ಚಿಕ್ಕಗುಡಿಗಳು,  ಯಾಗಶಾಲೆ, ಪಾಕಶಾಲೆ, ನವರಂಗ, ಮಂಟಪಗಳನ್ನೊಳಗೊಂಡ ಬೃಹತ್ ಚೆಲುವನಾರಾಯಣ ಸ್ವಾಮಿ ದೇವಾಲಯವೇ ಮೇಲುಕೋಟೆಯ ಪ್ರಧಾನ ಆಕರ್ಷಣೆ.

ಈ ದೇವಾಲಯವನ್ನು 12ನೇ ಶತಮಾನದ ಆದಿಭಾಗದಲ್ಲಿ ಕಣ ಶಿಲೆಯಲ್ಲಿ ನಿರ್ಮಿಸಲಾಗಿದ್ದು, ಪೂರ್ವಾಭಿಮುಖವಾಗಿದೆ. ತಲವಿನ್ಯಾಸದಲ್ಲಿ ಗರ್ಭಗೃಹ, ಅರ್ಧಮಂಟಪ, ಸುತ್ತಲೂ ಕಿದಾದ ಕಂಬಗಳ ಸಾಲುಳ್ಳ ಕೈಶಾಲೆ, ಮುಂಭಾಗದಲ್ಲಿ ಮುಖ ಮಂಟಪವನ್ನೂ ಒಳಗೊಂಡಿದೆ. ಇದರ ಹೊರ ಭಾಗದಲ್ಲಿ ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಾಕಾರವಿದೆ. ಪ್ರಾಕಾರದ ಸುತ್ತಲೂ ಕಂಬಗಳ ಸಾಲುಗಳುಳ್ಳ ವಿಶಾಲ ಕೈಶಾಲೆ ಇದೆ. ಎತ್ತರವಾದ ಪ್ರಾಕಾರ, ಪ್ರಕಾರದಲ್ಲಿ ಕೈಶಾಲೆ ಇದೆ. ಪ್ರವೇಶದ್ವಾರದ ಎಡಬಲದಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಆನೆಯ ಶಿಲ್ಪದ ಕಟಾಂಜನವೂ ಇದೆ.

Melukote chaluva narayana, mandya, ramanujacharya, yadugiri, south badhari, temples in and around Bangalore, kannadaratna.com, ourtemples in, T.M. Satish, ಬೆಂಗಳೂರು ಸುತ್ತ ಮುತ್ತಲ ದೇವಾಲಯಗಳು, ತುರುವೇಕೆರೆ ಸತೀಶ್, ಮೇಲುಕೋಟೆ, ರಾಜಮುಡಿ, ಚೆಲುವ ನಾರಾಯಣ, ರಾಮಾನುಜಾಚಾರ್ಯರು, ಮಂಡ್ಯ, ಮೈಸೂರು, ಚಿತ್ರಕೃಪೆ ಇಂಟರ್ ನೆಟ್ಉಪಾನ, ಜಗತಿ, ತ್ರಿಪಟ್ಟ, ಕುಮುದ, ಕಂಠ ಹಾಗೂ ಅದಿಷ್ಠಾನವಿರುವ ಪ್ರಧಾನ ಗರ್ಭಗೃಹದಲ್ಲಿ ವಿಷ್ಣುವಿನ ರೂಪವಾದ ಚೆಲುವ ನಾರಾಯಣ ಮೂರ್ತಿ ಇದೆ. ಈ ಮೂಲ ದೇವರು ಅತ್ಯಂತ ಮಹಮಾನ್ವಿತವಾದ್ದು. ಹುತ್ತದಲ್ಲಿ ಹುದುಗಿದ್ದ ಚೆಲುವನಾರಾಯಣ ವಿಗ್ರಹವನ್ನು ಹೊರ ತೆಗೆಯಲು ಮತ್ತು ದೇವಾಲಯ ನಿರ್ಮಿಸಲು ಹೊಯ್ಸಳರ ದೊರೆ ವಿಷ್ಣುವರ್ಧನನು ಆಚಾರ್ಯತ್ರಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರಿಗೆ ನೆರವಾದನೆಂದು ತಿಳಿದುಬರುತ್ತದೆ.

ಇತಿಹಾಸ : ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಈ ಪುಣ್ಯಕ್ಷೇತ್ರ 14ನೇ ಶತಮಾನದಲ್ಲಿ ದಾಳಿಗೆ ಒಳಗಾಗಿತ್ತು. 1460ರಲ್ಲಿ ಹಾಳಾಗಿದ್ದ ದೇವಾಲಯವನ್ನು ವಿಜಯನಗರದರಸರು ಜೀರ್ಣೋದ್ಧಾರ ಮಾಡಿದರು. 1771ರಲ್ಲಿ ಮರಾಠರು ಮೇಲುಕೋಟೆಯನ್ನು ಲೂಟಿ ಮಾಡಿದರು.  ಆನಂತರ ಮತ್ತೆ ದೇಗುಲ ಜೀರ್ಣೋದ್ಧಾರಗೊಂಡಿತು. ಊರಿನ ಪುನರ್‌ ಸ್ಥಾಪನೆಯಾಯಿತು. ಮೇಲುಕೋಟೆಯ ಚೆಲುವರಾಯ ಮೈಸೂರು ಅರಸರ ಆರಾಧ್ಯದೈವ. ಹೀಗಾಗೆ ಮೈಸೂರು ಒಡೆಯರು ದೇವಾಲಯಕ್ಕೆ ಹೇರಳವಾಗಿ ದಾನಧರ್ಮ ಮಾಡಿದ್ದಾರೆ. ಕಲಾತ್ಮಕ ಮಂಟಪಗಳನ್ನು ಕಟ್ಟಿಸಿದ್ದಾರೆ. ಹಲವು ಭೂಭಾಗಗಳನ್ನು ಉಂಬಳಿಯಾಗಿ ನೀಡಿದ್ದಾರೆ. ಮೇಲುಕೋಟೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

Melukote chaluva narayana, mandya, ramanujacharya, yadugiri, south badhari, temples in and around Bangalore, kannadaratna.com, ourtemples in, T.M. Satish, ಬೆಂಗಳೂರು ಸುತ್ತ ಮುತ್ತಲ ದೇವಾಲಯಗಳು, ತುರುವೇಕೆರೆ ಸತೀಶ್, ಮೇಲುಕೋಟೆ, ರಾಜಮುಡಿ, ಚೆಲುವ ನಾರಾಯಣ, ರಾಮಾನುಜಾಚಾರ್ಯರು, ಮಂಡ್ಯ, ಮೈಸೂರು, ಚಿತ್ರಕೃಪೆ ಇಂಟರ್ ನೆಟ್ದೇವಾಲಯಕ್ಕೆ ಭದ್ರವಾದ ಹೊರ ಗೋಡೆಯಿದೆ. ಪ್ರವೇಶದ್ವಾರದಲ್ಲಿ ಪ್ರವೇಶಗೋಪುರವಿದೆ. ದೇವಾಲಯದ ಹೊರಗೋಡೆಯ ಮೇಲೆ ಇರುವ ಗಾರೆಯ ಗೋಪುರಗಳಲ್ಲಿ ಹಲವು ದೇವಾನು ದೇವತೆಗಳ ಗಾರೆ ಶಿಲ್ಪಗಳಿವೆ.

ದೇವಾಲಯಕ್ಕೆ ವಿಶಾಲ ಪ್ರಾಕಾರವಿದ್ದು, ಹಲವು ಮಂಟಪಗಳಿಂದ ಕೂಡಿದೆ. ಉತ್ತರ ದಿಕ್ಕಿನ ರಂಗ ಮಂಟಪವು ಆಕರ್ಷಕ ಶಿಲ್ಪ ಕೆತ್ತನೆಯಿಂದ ಕೂಡಿದೆ.  ಕೆಲವು ಮಂಟಪಗಳಲ್ಲಿ ಕಂಬಗಳು ಹಂಪೆಯ ಶಿಲ್ಪಕಲಾತ್ಮಕತೆಯನ್ನು ನೆನಪಿಸುತ್ತವೆ. ಕೆಲವು ಕಂಬಗಳಲ್ಲಿ ಲಕ್ಷ್ಮೀ, ನಾರಾಯಣ, ನರಸಿಂಹ ಹಾಗೂ ಕನ್ನಿಕೆಯರ ವಿವಿಧ ಶಿಲ್ಪಗಳಿವೆ. ರಾಮಾಯಣ, ಮಹಾಭಾರತ, ಭಾಗವತದ ಆಯ್ದ ಸನ್ನಿವೇಶಗಳ ಉಬ್ಬು ಶಿಲ್ಪಗಳೂ ಇವೆ. ದೇವಾಲಯದ ಪ್ರಾಕಾರದಲ್ಲಿ ಆಳ್ವಾರರುಗಳ ಹಾಗೂ ದೇವಿ ಗುಡಿ ಇದೆ.

Melukote chaluva narayana, mandya, ramanujacharya, yadugiri, south badhari, temples in and around Bangalore, kannadaratna.com, ourtemples in, T.M. Satish, ಬೆಂಗಳೂರು ಸುತ್ತ ಮುತ್ತಲ ದೇವಾಲಯಗಳು, ತುರುವೇಕೆರೆ ಸತೀಶ್, ಮೇಲುಕೋಟೆ, ರಾಜಮುಡಿ, ಚೆಲುವ ನಾರಾಯಣ, ರಾಮಾನುಜಾಚಾರ್ಯರು, ಮಂಡ್ಯ, ಮೈಸೂರು, ಚಿತ್ರಕೃಪೆ ಇಂಟರ್ ನೆಟ್ಪ್ರತಿವರ್ಷ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಜಮುಡಿ,  ರಾಜಮುಡಿ,  ವೈರಮುಡಿ,  ಬ್ರಹ್ಮೋತ್ಸವಗಳು ವೈಭವದಿಂದ ನಡೆಯುತ್ತವೆ. ಮೇಲುಕೋಟೆಗೆ  ರಾಜ್ಯದ ಪ್ರಮುಖ ಸ್ಥಳಗಳಿಂದ ನೇರ ಬಸ್ ಸೌಕರ್ಯವಿದೆ. ರಾತ್ರಿ ಉಳಿಯುವುದಾದರೆ, ಮಂಡ್ಯ ಅಥವಾ ಮೈಸೂರಿನಲ್ಲಿ ಉತ್ತಮ ಸೌಕರ್ಯಗಳಿವೆ.

ಪು.ತಿ.ನ. ಅವರ ತವರೂ ಆದ ಈ ಊರು ಸಾಹಿತ್ಯ, ಕಲೆಯ ತವರೂ ಆಗಿದೆ. ಮೇಲುಕೋಟೆಯಲ್ಲಿರುವ ಪು.ತಿ.ನ. ಅವರ ಮನೆಯನ್ನು ಸ್ಮಾರಕವೆಂದು ಘೋಷಿಸಿ, ಸಂರಕ್ಷಿಸಲಾಗಿದೆ. ಅಕ್ಕ ತಂಗಿಯರ ಕೊಳ, ಬೆಟ್ಟದ ಯೋಗಾ ನರಸಿಂಹ ಸ್ವಾಮಿ, ಹಾಗೂ ಹಲವು ಚಲನಚಿತ್ರಗಳ ಚಿತ್ರೀಕರಣ ನಡೆದಿರುವ ಅಪೂರ್ಣ ಸಂಗೀತ ನೃತ್ಯ ಮಂಟಪ, ಕಲ್ಯಾಣಿ, ಪುಷ್ಕರಣಿಗಳು ಮೇಲುಕೋಟೆಯಲ್ಲಿ ನೋಡಲೇಬೇಕಾದ ಸ್ಥಳಗಳು.

ಮುಖಪುಟ /ನಮ್ಮ ದೇವಾಲಯಗಳು