ಮುಖಪುಟ /ನಮ್ಮದೇವಾಲಯಗಳು   

ಮಾದೇಶ್ವರರು ನೆಲೆಸಿಹ ಮಲೆ ಮಹದೇಶ್ವರ ಬೆಟ್ಟ            

Male Mahadeswara betta, god, mm hills ಮಲೆ ಮಹದೇಶ್ವರ, kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಕೊಳ್ಳೇಗಾಲಕ್ಕೆ 80 ಕಿಲೋ ಮೀಟರ್ ಹಾಗೂ ಮೈಸೂರಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟಶ್ರೇಣಿಯೇ ಮಹದೇಶ್ವರ ಬೆಟ್ಟ. ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂಎಂಹಿಲ್ಸ್ ಎಂದು ಖ್ಯಾತವಾದ ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.

ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನದಾರಿ. ಬಸವನದಾರಿ ಎಂಬ ಎರಡು ಮಾರ್ಗಗಳಿವೆ. ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ, ಪವಳಮಲೆ, ಪೊನ್ನಾಚಿಮಲೆ , ಕೊಂಗುಮಲೆ ಮೊದಲಾಗಿ 77 ಮಲೆಗಳಿವೆ.

ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ  ಇರುವ ಶಿವ ದೇವಾಲಯವೇ ಪ್ರಧಾನವಾದ್ದು. ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲ ಪ್ರದೇಶದ ಹಲವು ವಂಶಗಳ ಕುಲದೈವವಾಗಿ ಪೂಜಿಸಲ್ಪಡುವ ಮಹದೇಶ್ವರರು 15ನೇ ಶತಮಾನದಲ್ಲಿ ಜೀವಿಸಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ.  ಲೋಕಕಲ್ಯಾಣಾರ್ಥ  ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ.

Male Mahadeswara betta, god, mm hills ಮಲೆ ಮಹದೇಶ್ವರ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಸುಮಾರು 600 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು, ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ, ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ.  ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ.

ಮಾದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ.Male Mahadeswara betta, god, mm hills ಮಲೆ ಮಹದೇಶ್ವರ,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳು ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಾದೇಶ್ವರರು ಜನ್ಮತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಲಿಯ ಕಾಲದ 1761ರ ಒಂದು ಶಾಸನದಲ್ಲಿ ಮಾದೇಶ್ವರರ ಬಗ್ಗೆ  ವಿವರಗಳು ತಿಳಿದುಬರುತ್ತವೆ.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು