ಮುಖಪುಟ /ನಮ್ಮದೇವಾಲಯಗಳು   

ಬೆಂಗಳೂರು ಬಳಿಯ ಮುಕ್ತಿನಾಗ ಕ್ಷೇತ್ರ

ಆದಿ ಮುಕ್ತಿನಾಗ ಹಾಗೂ 21 ಅಡಿ ಸುಬ್ರಹ್ಮಣ್ಯ ಇರುವ ಚಿಕ್ಕಪಳನಿ

.*ಟಿ.ಎಂ. ಸತೀಶ್

Bangalore, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಮುಕ್ತಿ ನಾಗ ಕ್ಷೇತ್ರ, ದೊಡ್ಡ ಆಲದ ಮರ, Big Banyan tree, our temples, ourtemples.in, Karnataka temples, kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. ನೀಲಾಂಬಿಕೆ, ತ್ರಯಂಬಕೇಶ್ವರ, ಪಾರ್ವತಿ, ಪಳನಿ, ಸುಬ್ರಹ್ಮಣ್ಯ 108 ಅಡಿ ಎತ್ತರದ ವಿಗ್ರಹ,ದ್ಯಾನ ನಗರಿ ಬೆಂಗಳೂರು ಹೊರವಲಯ ರಾಮೋಹಳ್ಳಿಯ ಬಳಿಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣ ಹಾಗೂ 400  ವರ್ಷಗಳಷ್ಟು ಪುರಾತನವಾದ ಹಾಗೂ ಭಾರತದ ನಾಲ್ಕನೇ ಅತಿ ದೊಡ್ಡ ಆಲದ ಮರ ಇರುವ ದೊಡ್ಡಾಲದಮರ ಪ್ರದೇಶಕ್ಕೆ ಅತ್ಯಂತ ಸನಿಹದಲ್ಲಿರುವ ಜುಂಜಪ್ಪನ  ಗುಡಿ ಬೈಲೆಂಬ ಪವಿತ್ರ ತಾಣವೇ ಮುಕ್ತಿನಾಗ ಕ್ಷೇತ್ರ.

200 ವರ್ಷಗಳಿಂದ  ಜುಂಜಪ್ಪನ ಗುಡಿ ಬೈಲು ಎಂದು ಕರೆಸಿಕೊಂಡಿದ್ದ ಈ ಪ್ರದೇಶ ಬೃಹತ್ ನಾಗರ ಹಾವುಗಳೂ ಸೇರಿದಂತೆ ನಾನಾ ಬಗೆಯ ವಿಷಪೂರಿತ ಹಾವುಗಳ ಬೀಡಾಗಿತ್ತು. ಇಲ್ಲಿ, ಸ್ಥಳೀಯರು ವರ್ಷಕ್ಕೊಮ್ಮೆ ಇಲ್ಲಿದ್ದ ಹುತ್ತಗಳ ಬಳಿ ಕಲ್ಲುಗಳನ್ನು ಜೋಡಿಸಿ ನಾಗದೇವತೆಯನ್ನು ಜುಂಜಪ್ಪ, ಮುನಿಯಪ್ಪ ಎಂಬ ಹೆಸರಲ್ಲಿ ಪೂಜಿಸುತ್ತಿದ್ದರಂತೆ. ಈಗ ಇದೇ ಸ್ಥಳದಲ್ಲಿ ಗುರೂಜಿ ದೈವಜ್ಞ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳು (ದೇವಾಲಯದ ಧರ್ಮದರ್ಶಿ) ಭಗವತ್ಪ್ರೇರಣೆಯಂತೆ ಬೃಹತ್ ಹಾಗೂ ಸುಂದರ ದೇವಾಲಯ ನಿರ್ಮಿಸಿದ್ದು, ಒಂದು ಪವಿತ್ರ ಸುಬ್ರಹ್ಮಣ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ನಿತ್ಯ ನೂರಾರು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

Bangalore, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಮುಕ್ತಿ ನಾಗ ಕ್ಷೇತ್ರ, ದೊಡ್ಡ ಆಲದ ಮರ, Big Banyan tree, our temples, ourtemples.in, Karnataka temples, kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. ನೀಲಾಂಬಿಕೆ, ತ್ರಯಂಬಕೇಶ್ವರ, ಪಾರ್ವತಿ, ಪಳನಿ, ಸುಬ್ರಹ್ಮಣ್ಯ 108 ಅಡಿ ಎತ್ತರದ ವಿಗ್ರಹ,ದೇವಾಲಯದ ನಿರ್ಮಾಣ ಕಾರ್ಯ ಬಹುತೇಕ ಕೊನೆಯ ಚರಣದಲ್ಲಿದೆ. ದೇವಾಲಯಕ್ಕೆ ವಿಶಾಲವಾದ ಪ್ರಾಕಾರ ನಿರ್ಮಿಸಲಾಗಿದ್ದು, ಪ್ರಾಕಾರದ ನಾಲ್ಕೂ ಮೂಲೆಯಲ್ಲಿ ನಾಲ್ಕು ಪುಟ್ಟ ಗುಡಿಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಪ್ರಧಾನ ಪ್ರವೇಶದ್ವಾರದ ಎಡ ಭಾಗದಲ್ಲಿ ಪೀಠದ ಮೇಲೆ 9 ಹೆಡೆಯ ಸರ್ಪದ ಕೆಳಗೆ ಲಕ್ಷ್ಮೀ ಸಹಿತನಾದ ನರಸಿಂಹ ದೇವರ ಪುಟ್ಟ ಗುಡಿಯಿದ್ದು, ಬಿತ್ತಿಯಲ್ಲಿ ದ್ವಾರಪಾಲಕರ ಸ್ತ್ರೀ ಶಿಲ್ಪಗಳಿವೆ,. ಗೋಪುರದಲ್ಲಿ ಲಕ್ಷ್ಮೀನಾರಸಿಂಹ ಹಾಗೂ ಗರುಡನ ಗಾರೆಯ ಶಿಲ್ಪಗಳಿವೆ,  ಬಲಭಾಗದಲ್ಲಿ ತ್ರಯಂಬಕೇಶ್ವರ ಗುಡಿ ಇದ್ದು, ಗೋಪುರದಲ್ಲಿ ನಂದಿಯ ಮೇಲೆ ಕುಳಿತ ಶಿವಪಾರ್ವತಿ, ಗಣಗಳ ಶಿಲ್ಪಗಳಿವೆ. ಗುಡಿಯೊಳಗೆ ಸುಂದರ ಶಿವಲಿಂಗವಿದೆ. ಸುಬ್ರಹ್ಮಣ್ಯ ದೇವಾಲಯದ ಹಿಂಭಾಗದ ಎಡ ಮೂಲೆಯಲ್ಲಿರುವ ಕಾರ್ಯಸಿದ್ಧ ಗಣಪನ ಗುಡಿಯ ಗೋಪುರದಲ್ಲಿ ಗಣಪ, ಮೂಷಿಕ, ಗಣಗಳು ಹಾಗೂ ದ್ವಾರಪಾಲಕರ ಶಿಲ್ಪಗಳಿವೆ. ಬಲ ಭಾಗದಲ್ಲಿ ತಾಯಿ ನೀಲಾಂಬಿಕೆ (ಪಾರ್ವತಿ) ಗುಡಿಯೂ ಇದೇ ಸ್ವರೂಪದಲ್ಲಿದ್ದು, ಇಲ್ಲಿ ಸುಂದರವಾದ ಪಾರ್ವತಿ ದೇವಿಯ ವಿಗ್ರಹವಿದೆ.

Bangalore, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಮುಕ್ತಿ ನಾಗ ಕ್ಷೇತ್ರ, ದೊಡ್ಡ ಆಲದ ಮರ, Big Banyan tree, our temples, ourtemples.in, Karnataka temples, kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. ನೀಲಾಂಬಿಕೆ, ತ್ರಯಂಬಕೇಶ್ವರ, ಪಾರ್ವತಿ, ಪಳನಿ, ಸುಬ್ರಹ್ಮಣ್ಯ 108 ಅಡಿ ಎತ್ತರದ ವಿಗ್ರಹ,ಪ್ರಾಕಾರದ ಮಧ್ಯ ಭಾಗದಲ್ಲಿರುವ ಬೃಹತ್ ಭವ್ಯ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಮೂರೂಕಾಲು ಅಡಿ ಪೀಠದ ಮೇಲೆ ಏಳು ಹೆಡೆಗಳ ಹನ್ನೆರಡೂಮುಕ್ಕಾಲು ಅಡಿ ಎತ್ತರದ ಬೃಹತ್ ನಾಗ ದೇವತೆ (ಸುಬ್ರಹ್ಮಣ್ಯ) ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ನಾಗರಾಜನ ವಿಗ್ರಹಕ್ಕೆ ನಾನಾ ಬಗೆಯ ಅಲಂಕಾರಗಳನ್ನು ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನದಂದು ತ್ರಿವರ್ಣ ಅಲಂಕಾರ ಹಾಕಲಾಗಿತ್ತು. ಹೂವಿನ ಅಲಂಕಾರದಲ್ಲಂತೂ ವಿಗ್ರಹದ ಸೊಬಗು ನೂರ್ಮಡಿಗೊಳ್ಳುತ್ತದೆ.  

ಗರ್ಭಗೃಹದ ಮುಂದೆ ಕೆತ್ತನೆಗಳಿಂದ ಕೂಡಿದ ಕಲ್ಲುಕಂಬಗಳಿಂದ ನಿರ್ಮಿಸಿದ ಸುಂದರ ಮುಖ ಮಂಟಪವಿದೆ. ಮಂಟಪದ ಪ್ರವೇಶದ ಮೆಟ್ಟಿಲ ಬಳಿ ಕಲ್ಲಿನ ಧ್ವಜಸ್ತಂಭವೂ ಇದ್ದು, ಇದಕ್ಕೆ ಹಿತ್ತಾಳೆಯ ಕವಚ ಹಾಕಲಾಗಿದೆ. ಪ್ರವೇಶದ ಮೆಟ್ಟಿಲ ಎಡ ಬಲದಲ್ಲಿ ಆನೆಯ ಶಿಲ್ಪವಿದೆ. ಈ ಕಲ್ಲಿನ ಮಂಟಪದ ಮೇಲೆ ಗಾರೆಯ ಗೋಪುರಗಳಿದ್ದು, ಪ್ರತಿಯೊಂದು ಗೋಪುರದಲ್ಲೂ ಸುಬ್ರಹ್ಮಣ್ಯ ಹಾಗೂ ನಾಗ ದೇವತೆಗಳ ಗಾರೆಯ ಶಿಲ್ಪಗಳಿವೆ.  ಪ್ರಧಾನ ಗರ್ಭಗೃಹದ ಮೇಲೆ ಕಳಶ ಸಹಿತವಾದ ಸುಂದರ ಗೋಪುರ ನಿರ್ಮಿಸಲಾಗಿದ್ದು, ಅದಕ್ಕೆ ಚಿನ್ನದ ಬಣ್ಣದಿಂದ ಕೂಡಿದೆ.

Bangalore, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಮುಕ್ತಿ ನಾಗ ಕ್ಷೇತ್ರ, ದೊಡ್ಡ ಆಲದ ಮರ, Big Banyan tree, our temples, ourtemples.in, Karnataka temples, kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. ನೀಲಾಂಬಿಕೆ, ತ್ರಯಂಬಕೇಶ್ವರ, ಪಾರ್ವತಿ, ಪಳನಿ, ಸುಬ್ರಹ್ಮಣ್ಯ 108 ಅಡಿ ಎತ್ತರದ ವಿಗ್ರಹ,

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದಿ ತಟದಲ್ಲಿ ಆದಿ ನಾಗಪ್ಪನ ಗುಡಿ ಇರುವಂತೆಯೇ ಇಲ್ಲೂ ಇದೆ. ದೇವಾಲಯದ ಎದುರು ಇರುವ ವಿಶಾಲ ಪ್ರದೇಶದಲ್ಲಿ ಆದಿ ಮುಕ್ತಿ ನಾಗನ  ದೇವಾಲಯವಿದೆ.

Bangalore, tourist places in and around Bangalore, ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕೋಲಾರ ಜಿಲ್ಲೆ ದೇವಾಲಯಗಳು, Temples in Kolar District, Karnataka, kannadaratna Satish. T.M. ಮುಕ್ತಿ ನಾಗ ಕ್ಷೇತ್ರ, ದೊಡ್ಡ ಆಲದ ಮರ, Big Banyan tree, our temples, ourtemples.in, Karnataka temples, kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. ನೀಲಾಂಬಿಕೆ, ತ್ರಯಂಬಕೇಶ್ವರ, ಪಾರ್ವತಿ, ಪಳನಿ, ಸುಬ್ರಹ್ಮಣ್ಯ 108 ಅಡಿ ಎತ್ತರದ ವಿಗ್ರಹ,ಇಲ್ಲಿ ಏಳು ಹೆಡೆಯ ಸುಂದರ ವಿಗ್ರಹವಿದೆ. ಮುಂದೆ ಹುತ್ತವಿದೆ. ಈ ದೇವಾಲಯದ ಎದುರು ಗ್ರಾಮದೇವತೆ ಪಟ್ಟಾಲಮ್ಮನ ಹಾಗೂ ನವಗ್ರಹಗಳ ಗುಡಿ ಇದೆ. ಈ ಪ್ರದೇಶದಲ್ಲಿ ನಾಗ ದೋಷ ಇರುವವರು ದೋಷ ಪರಿಹಾರಾರ್ಥವಾಗಿ ಪ್ರತಿಷ್ಠಾಪಿಸಿರುವ ನೂರಾರು ನಾಗರ ಕಲ್ಲುಗಳಿವೆ.

ಚಿಕ್ಕ ಪಳನಿ: ಇನ್ನು ದೇವಾಲಯದ ಸನಿಹದಲ್ಲಿ ದೇವಾಲಯದ ಪ್ರಧಾನ ಆಕರ್ಷಣೆಯಾದ 21 ಅಡಿ ಎತ್ತರದ ಸುಬ್ರಹ್ಮಣ್ಯನ ವಿಗ್ರಹವಿದೆ. ಚಿಕ್ಕ ಪಳನಿ ಎಂದೇ ಕರೆಯಲಾಗುವ 100 ಅಡಿ ಎತ್ತರದ ಸಿಮೆಂಟ್ ಕಟ್ಟಡದ  ಮೇಲೆ ಪೀಠ ನಿರ್ಮಿಸಿ ಅಲ್ಲಿ ಬಲಗೈಯಲ್ಲಿ ವೇಲಾಯುಧ ಹಿಡಿದು, ಎಡಗೈಯನ್ನು ಸೊಂಟದ ಮೇಲೆ ಇಟ್ಟು ಕೊಂಡು ನಿಂತಿರುವ ಭಂಗಿಯಲ್ಲಿರುವ ಸುಂದರ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಗ್ರಹ ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ. ಸುಬ್ರಹ್ಮಣ್ಯನ ಎದುರು ನಾಗರ ಹಾವಿನ ಜೊತೆಗಿರುವ ಸುಂದರವಾದ ಬೃಹತ್ ನವಿಲಿನ ಕಲ್ಲಿನ ಶಿಲ್ಪವಿದೆ.   ಈ ಪ್ರದೇಶದಲ್ಲಿ ಉದ್ಯಾನವನವಿದ್ದು, ಅದರಲ್ಲಿ ಶ್ರೀನಿವಾಸದೇವರ ಬೃಹತ್ ಮೂರ್ತಿಯೂ ಇದೆ.

ದೇವಾಲಯ ಪ್ರದೇಶಧಲ್ಲಿ ಗೋಶಾಲೆ, ಉಚಿತ ಭೋಜನಾಲಯ, ವೇದಶಾಲೆ, ಉಚಿತ ಆರೋಗ್ಯ ಚಿಕಿತ್ಸೆಗಾಗಿ ವೈದ್ಯಾಲಯ ಹಾಗೂ ವೃದ್ಧಾಶ್ರಮ ನಿರ್ಮಾಣ ಕಾರ್ಯವೂ ಭರದಿಂದ ನಡೆದಿದೆ. ದೂರದ ಊರಿನಿಂದ ಬಂದು ಇಲ್ಲಿ ನಾಗ ಪ್ರತಿಷ್ಠಾಪನೆ ಮಾಡುವವರ ಅನುಕೂಲಕ್ಕಾಗಿ ವಸತಿ ನಿಲಯದ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.

ಹೋಗುವುದು ಹೇಗೆ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಂಗೇರಿ ದಾಟಿ, ದೊಡ್ಡ ಆಲದ ಮರದ ರಸ್ತೆಯಲ್ಲಿ 5 ಕಿ.ಮೀ. ಸಾಗಿ ರಾಮೋಹಳ್ಳಿ ಬಳಿ ಮುಕ್ತಿನಾಗ ಕ್ಷೇತ್ರಕ್ಕೆ ಹೋಗುವ ದಾರಿ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಒಂದು ಕಿಲೋ ಮೀಟರ್ ಹೋದರೆ ದೇವಾಲಯ ತಲುಪಬಹುದು. 

 ಮುಖಪುಟ /ನಮ್ಮದೇವಾಲಯಗಳು