ಮುಖಪುಟ /ನಮ್ಮದೇವಾಲಯಗಳು   

ಅರ್ಜುನ ಪ್ರತಿಷ್ಠಾಪಿತ ಪ್ರಾಣದೇವರ ಪವಿತ್ರ ತಾಣ

ಮುಳಬಾಗಲು ಆಂಜನೇಯಸ್ವಾಮಿ ದೇವಾಲಯ

 

*ಟಿ.ಎಂ.ಸತೀಶ್

Mulabagalu Anjaneya, Mulabagilu Anjaneya, kolar, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಕರ್ನಾಟಕದ ದೇವಾಲಯಗಳು, temples of karnataka, karnataka temples, ourtemple.comಆಂಧ್ರದ ಕಡೆಯಿಂದ ಕರ್ನಾಟಕಕ್ಕೆ ಮೂಡಣ (ಪೂರ್ವ)ದ ಪ್ರವೇಶ ದ್ವಾರವಾದ   ಮುಳಬಾಗಲು,   ಸಾಹಿತ್ಯ,   ಕಲೆ,  ಸಂಸ್ಕೃತಿಯ  ಬೀಡು. ಕನ್ನಡದ ಹೆಸರಾಂತ  ಚಿಂತಕ,  ಕಗ್ಗದಕವಿ,   ಸಾಹಿತಿ  ವಿರಕ್ತ ರಾಷ್ಟ್ರಕ  ಡಿ.ವಿ. ಗುಂಡಪ್ಪನವರ  ಸ್ಪೂರ್ತಿಯ  ಸೆಲೆಯೂ  ಹೌದು.

ಮುಳಬಾಗಲು ಮೊದಲಿಗೆ ಬಾಣ ದೊರೆಗಳ ಆಡಳಿಕ್ಕೆ ಸೇರಿತ್ತು, 10ನೆ ಶತಮಾನದ ಕೊನೆಯಲ್ಲಿ ಪಲ್ಲವರ, ನಂತರ 500 ವರ್ಷಗಳ ಹಿಂದೆ ವಿಜಯನಗರದ ಅರಸರ ಕೈವಶವಾಯ್ತು. 1768 ರಿಂದ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು ಎನ್ನುತ್ತದೆ ಇತಿಹಾಸ.

ಮುಳಬಾಗಲು (ಮುಳಬಾಗಿಲು) ಇಲ್ಲಿರುವ ಪ್ರಾಚೀನವಾದ ಆಂಜನೇಯನ ದೇವಾಲಯದಿಂದ ಪ್ರಖ್ಯಾತವಾಗಿದೆ. ಪ್ರತಿನಿತ್ಯ ಈ ಪ್ರಾಣ ದೇವರ ದರ್ಶನ ಪಡೆಯಲು ನೂರಾರು ಭಕ್ತರು ಆಗಮಿಸುತ್ತಾರೆ.

ಶತ ಶತಮಾನಗಳ ಕಾಲ ವಿವಿಧ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಮುಳಬಾಗಿಲಿನ ಈ ಆಂಜನೇಯ ದೇವಾಲಯವೂ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದೆ. ವಿಜಯನಗದ ಅರಸು ಶ್ರೀಕೃಷ್ಣ ದೇವರಾಯರ ಕಾಲದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದ ಪುರಾತನ ದೇವಾಲಯವನ್ನು ಕರ್ನಾಟಕ ಸರ್ಕಾರ ಸಹ ಪುನರುದ್ಧಾರ ಮಾಡಿದೆ. ಮುಳಬಾಗಲು ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ  ಶ್ರೀ ಆಂಜನೇಯ ಸ್ವಾಮಿ ದೇವಾಲಯ ಈಗ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದೆ.

ಸುಮಾರು   ಸಾವಿರ   ವರ್ಷಗಳಷ್ಟು ಪುರಾತನವಾದ  ದೇವಾಲಯದ  ಪ್ರಾಕಾರ  ವಿಶಾಲವಾಗಿದ್ದು,  Mulabagalu Anjaneya, Mulabagilu Anjaneya, kolar, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಕರ್ನಾಟಕದ ದೇವಾಲಯಗಳು, temples of karnataka, karnataka temples, ourtemple.comವಿಜಯನಗರ   ಶೈಲಿಯ ಪ್ರವೇಶದ್ವಾರ  ಹೊಂದಿದೆ. ಮೂರು ಅಂತಸ್ತುಗಳ ಗೋಪುರವಿದೆ. ಈ ಗೋಪುರದಲ್ಲಿ ದ್ವಾರಪಾಲಕರು ಮತ್ತು ವಿವಿಧ ದೇವಾನು ದೇವತೆಗಳ ಸುಂದರ ಗಾರೆಯ ಶಿಲ್ಪಗಳಿವೆ. ಗೋಪುದಲ್ಲಿ ಐದು ಕಳಶಗಳಿವೆ. ಗೋಪುರ ದ್ವಾರ ಪ್ರವೇಶಿಸಿ ಒಳ ಹೋದರೆ,  ಪುರಾತನವಾದ ಆಂಜನೇಯಸ್ವಾಮಿಯ ಸುಂದರ ಕಲ್ಲಿನಿಂದ ನಿರ್ಮಿಸಿದ ದೇವಾಲಯ ಕಾಣುತ್ತದೆ. ದೇವಾಲಯದ ಮೇಲೆ ಗೋಪುರ ಮತ್ತು ಗೋಪುರ ಗೂಡುಗಳಿದ್ದು, ಈ ಎಲ್ಲ ಗೂಡುಗಳಲ್ಲಿ ದಶಾವತಾರದ ಗಾರೆಯ ಮೂರ್ತಿಗಳ ಶಿಲ್ಪಗಳಿವೆ.

ದೇವಾಲಯದ ಮುಂದೆ ಗರುಡಗಂಭ ಮತ್ತು ಹಿತ್ತಾಳೆಯ  ಪಟ ಧ್ವಜವಿದೆ. ವಿಮಾನಗಳು,   ಪ್ರಾಕಾರ,  ಗರ್ಭಗೃಹ,  ಮಹಾದ್ವಾರ,  ಸುಖನಾಶಿ,  ಅಂತರಾಳ,  ಮುಖಮಂಟಪ  ದೇವಾಲಯಕ್ಕಿದೆ.  ದೇವಾಲಯದ  ಒಳ ಪ್ರಾಂಗಣ  ಪ್ರವೇಶಿಸಿದರೆ  ಮೊದಲಿಗೆ  ಲಕ್ಷ್ಮೀ ನರಸಿಂಹ ದೇವರ ದರ್ಶನ ಆಗುತ್ತದೆ. ಮೆಟ್ಟಿಲುಗಳೇರಿ  ದೇವಾಲಯದ ಒಳ ಹೊಕ್ಕರೆ ಪ್ರಧಾನ ಗರ್ಭಗೃಹದಲ್ಲಿರುವ 10 ಅಡಿ ಎತ್ತರದ ಬೃಹತ್ ಹಾಗೂ ರಮ್ಯವಾದ  ಪ್ರಾಣ ದೇವರ Mulabagalu Anjaneya, Mulabagilu Anjaneya, kolar, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಕರ್ನಾಟಕದ ದೇವಾಲಯಗಳು, temples of karnataka, karnataka temples, ourtemple.comಮೂರ್ತಿ ಮನ ಸೆಳೆಯುತ್ತದೆ. ವಿಳ್ಳೆಯದೆಲೆ ಹಾಗೂ ಹೂವಿನ ಅಲಂಕಾರಗಳಲ್ಲಿ ಪ್ರಾಣ ದೇವರ ಮೂರ್ತಿಯ ಸೊಬಗು ನೂರ್ಮಡಿಯಾಗುತ್ತದೆ.

ಈ ಪ್ರಾಣ ದೇವರನ್ನು ಮಧ್ಯಮ ಪಾಂಡವ ಅರ್ಜುನ ಸ್ವತಃ ಪ್ರತಿಷ್ಠಾಪಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ.

ಹಾಭಾರತದ ಯುದ್ಧದ ಬಳಿಕ, ಸೋದರರ ಬಂಧುಗಳ ಹತ್ಯೆಯ ಪಾಪ ಪರಿಹಾರ್ಥವಾಗಿ ತೀರ್ಥ ಸ್ನಾನ ಮಾಡಿ, ಶ್ರೀಕೃಷ್ಣ ಪರಮಾತ್ಮನ ಆಜ್ಞೆಯಂತೆ ಅರ್ಜುನನು ತನ್ನ ರಥದಲ್ಲಿದ್ದ ಹನುಮಧ್ವಜವನ್ನು ತೆಗೆದುಕೊಂಡು ಬಂದು  ಮುಳಬಾಗಿಲಿನಲ್ಲಿ ಈಗ ದೇವಾಲಯ ಇರುವ ಕಡೆ ನೆಟ್ಟು, ಆ ಸ್ಥಳದಲ್ಲಿ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಯುದ್ಧದಲ್ಲಿ ತನಗೆ ರಕ್ಷಣೆ ನೀಡಿದ ಮತ್ತು ಶಕ್ತಿ ದಯಪಾಲಿಸಿದ ಮಹಾನ್ ಶಕ್ತಿವಂತ ಹನುಮನಿಗೆ ಕೃತಜ್ಞತೆ ಅರ್ಪಿಸಿದನಂತೆ. ಪಂಚ ಪಾಂಡವರು ಇಲ್ಲಿ ದೇವಾಲಯ ನಿರ್ಮಿಸಿದರು ಎಂದು ದೇವಾಲಯ ಪ್ರಾಕಾರದಲ್ಲಿ ಪ್ರದರ್ಶಿಸಿರುವ ಫಲಕ ಸಾರುತ್ತದೆ.

ಹೀಗಾಗಿ ಪ್ರಧಾನ ಗರ್ಭಗೃಹದಲ್ಲಿರುವ  ಆಂಜನೇಯ ಮೂರ್ತಿ ದ್ವಾಪರಯುಗದಲ್ಲಿ ಅರ್ಜುನ ಪ್ರತಿಷ್ಠಾಪಿಸಿದ್ದು ಎಂದು ಸ್ಥಳ ಪುರಾಣ ಸಾರುತ್ತದೆ. ಶ್ರೀವೈಖಾನಸಾಗಮದ ರೀತ್ಯ ನಿತ್ಯ ಪೂಜೆ, ಅರ್ಚನಾದಿಗಳು ನಡೆಯುತ್ತವೆ. ನಿತ್ಯವೂ ಮುಳಬಾಗಿಲು ಆಂಜನೇಯನಿಗೆ ತಾಳೆ ಹೂವಿನ ಪೂಜೆ ನಡೆಯುವುದು ವಿಶೇಷ,

ಗರ್ಭಗೃಹದ ಎದುರು ಇರುವ ಮುಖ ಮಂಟಪದಲ್ಲಿ ಮತ್ತೂ ಒಂದು ಆರು ಅಡಿ ಎತ್ತರದ ಆಂಜನೇಯನ ಮೂರ್ತಿ ಇದೆ. ಈ ಪ್ರಾಣ ದೇವರ ದರ್ಶನವನ್ನೂ ಮಾಡಿ, ಮೆಟ್ಟಿಲು ಇಳಿದು ದೇವಾಲಯದ ಒಳ ಪ್ರಾಕಾರದಿಂದ ಹೊರ ಬಂದರೆ, ಪ್ರಾಕಾರದಲ್ಲಿರುವ ಇತರ ದೇವರುಗಳ ದರ್ಶನಕ್ಕೆ ಪ್ರದಕ್ಷಿಣ ಪಥ ಮಾಡಲಾಗಿದೆ. ಇದರಲ್ಲಿ ಸಾಗಿದರೆ, ಮೊದಲಿಗೆ ಸೀತಾ ಲಕ್ಷ್ಮಣ ಸಹಿತರಾದ ಶ್ರೀರಾಮದೇವರು, ಲಕ್ಷ್ಮೀ ಹಾಗೂ ಶ್ರೀನಿವಾಸ ದೇವರ Mulabagalu Anjaneya, Mulabagilu Anjaneya, kolar, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಕರ್ನಾಟಕದ ದೇವಾಲಯಗಳು, temples of karnataka, karnataka temples, ourtemple.comದರ್ಶನ ಆಗುತ್ತದೆ. ಹೊರ ಬರುತ್ತಿದ್ದಂತೆ ಶ್ರೀನಿವಾಸ ದೇವರ ಗುಡಿಯ ಭಿತ್ತಿಯಲ್ಲಿ ಹಲ್ಲಿಯ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ. ಅದಕ್ಕೆ ಹಿತ್ತಾಳೆಯ ಕವಚ ತೊಡಿಸಲಾಗಿದೆ. ಈ ಹಲ್ಲಿಯನ್ನು ಮುಟ್ಟಿ ನಮಸ್ಕರಿಸಿದರೆ ಹಲ್ಲಿ ಬಿದ್ದ ಶಕುನ ದೋಷ ನಾಶವಾಗುತ್ತದೆ ಎಂಬುದು ನಂಬಿಕೆ. ಅಷ್ಟೇಕೆ ಹಲ್ಲಿ ಬಿದ್ದವರು ಈ ಹಲ್ಲಿ ಮುಟ್ಟಿ ಬಂದವರ ಕಾಲಿಗೆ ಬಿದ್ದು ನಮಸ್ಕರಿಸಿದರೂ ಸಾಕು ದೋಷ ಪರಿಹಾರವಾಗುತ್ತದೆ ಎನ್ನುತ್ತಾರೆ ಹಿರಿಯರು.

ದೇವಾಲಯದ ಪ್ರಕಾರದಲ್ಲಿ ವರದರಾಜಸ್ವಾಮಿ ಮತ್ತು ರಂಗನಾಥ ಸ್ವಾಮಿಯ ಗುಡಿಗಳೂ ಇವೆ. ಮುಳಬಾಗಿಲಿನ ವಿಠಲೇಶ್ವರ ಪಾಳ್ಯದಲ್ಲಿ ಪ್ರಾಚೀನ ವಿಠ್ಠಲ ನಾರಾಯಣ ದೇವಾಲಯವೂ ಇದೆ. ಮುಳಬಾಗಿಲ ಸಮೀಪದಲ್ಲೇ ಕೊಲದೇವಿ ಎಂಬ ಗ್ರಾಮವಿದ್ದು ಇಲ್ಲಿ ಏಕೈಕ ಗರುಡ ದೇವಾಲಯವೂ ಇದೆ, ಸನಿಹದಲ್ಲೇ ಅವನಿ ಬಳಿಯಿರುವ ಬೆಟ್ಟಗಳ ಸಾಲು ಅತಿ ದೊಡ್ಡದಾಗಿದ್ದು ನೋಡಲು ಸುಂದರವಾಗಿದೆ. ಇಲ್ಲಿ ರಾಮಲಿಂಗೇಶ್ವರನ ಪುರಾತನ ದೇವಾಲಯ ಹಾಗೂ ಆವನಿ ಶೃಂಗೇರಿ ಮಠದಲ್ಲಿ ತಾಯಿ ಶಾರದೆಯ ದೇವಾಲಯವೂ ಇದೆ. ಬೆಂಗಳೂರು-ಹಳೆ ಮದರಾಸು ರಸ್ತೆಯಲ್ಲಿ ಇರುವ ಮುಳಬಾಗಿಲು, ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರು ತಿರುಪತಿ ಹೆದ್ದಾರಿಯಲ್ಲಿ ಸಾಗಿದರೆ ಮುಳಬಾಗಿಲು ರಸ್ತೆಯಲ್ಲಿ ಎಡಕ್ಕೆ ತಿರುಗಬೇಕು. ಇಲ್ಲಿ ಮುಳಬಾಗಿಲ ಕಡೆಗೆ ಎಂಬ ಫಲಕವೂ ಇದೆ.

 ಮುಖಪುಟ /ನಮ್ಮದೇವಾಲಯಗಳು