ಮುಖಪುಟ /ನಮ್ಮದೇವಾಲಯಗಳು   

ಮುಳಬಾಗಲು ಪ್ರಸನ್ನ ವಿಠ್ಠಲ ನಾರಾಯಣಸ್ವಾಮಿ ದೇವಾಲಯ

ದ್ವಾಪರದಲ್ಲಿ ಮುಚಕುಂದ ಮಹಾಮುನಿಗಳು ಪ್ರತಿಷ್ಠಾಪಿಸಿದ  ದ್ವಿಭುಜ ನಾರಾಯಣ ಕ್ಷೇತ್ರ

 

*ಟಿ.ಎಂ.ಸತೀಶ್

 

ourtemples.com   mulabagilu prasanna Vittala Narayana Temple, Mulabagilu Anjaneya temple, Mulabagalu Anjaneya temple, temples of Karnataka, temples in and around Bangalore, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಮುಳಬಾಗಲು ವಿಠ್ಠಲ ನಾರಾಯಣ ದೇವಾಲಯಆಂಧ್ರಪ್ರದೇಶದ ಕಡೆಯಿಂದ ಕರ್ನಾಟಕಕ್ಕೆ  ಮೂಡಣ  (ಪೂರ್ವ) ದ ಪ್ರವೇಶ ದ್ವಾರವಾದ ಮುಳಬಾಗಲು,  ಸಾಹಿತ್ಯ,  ಕಲೆ,  ಸಂಸ್ಕೃತಿಯಿಂದಲೂ  ಶ್ರೀಮಂತವಾಗಿದೆ.  ಮುಳಬಾಗಿಲು  ಕನ್ನಡದ  ಹೆಸರಾಂತ ಚಿಂತಕ,  ಕಗ್ಗದ ಕವಿ, ಡಿ.ವಿ. ಗುಂಡಪ್ಪನವರ ಸ್ಪೂರ್ತಿಯ ಸೆಲೆ ಸಹ.

ಮುಳಬಾಗಲು  ಪೂರ್ವದಲ್ಲಿ  ಬಾಣ ದೊರೆಗಳ ಆಡಳಿಕ್ಕೆ ಒಳಪಟ್ಟಿತ್ತು, 10ನೆ ಶತಮಾನದ ಕೊನೆಯಲ್ಲಿ ಪಲ್ಲವರು, ನಂತರ ವಿಜಯನಗರದ ಅರಸರು ಮುಳಬಾಗಿಲನ್ನು ಆಳಿದರು ಎಂದು ಇತಿಹಾಸ ಸಾರುತ್ತದೆ. ಈ ಅರಸರ ಕಾಲದಲ್ಲಿ ಮುಳಬಾಗಿಲು ಸುತ್ತಮುತ್ತ ಹಲವು ದೇವಾಲಯಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ವಿಠಲೇಶ್ವರ ಪಾಳ್ಯದ ಪ್ರಾಚೀನ ದೇವಾಲಯಗಳ ಪೈಕಿ ಪ್ರಸನ್ನ ವಿಠ್ಠಲ ನಾರಾಯಣ ದೇವಾಲಯವೂ ಒಂದು.

ಮುಳಬಾಗಿಲ ಈ ಪ್ರದೇಶಕ್ಕೆ ವಿಠಲೇಶ್ವರ ಪಾಳ್ಯ ಎಂದು ಹೆಸರು ಬರಲು ಇಲ್ಲಿರುವ ವಿಠ್ಠಲನಾರಾಯಣ ದೇವಾಲಯವೇ ಕಾರಣ ಎಂದು ತಿಳಿದುಬರುತ್ತದೆ. ವಿವಿಧ ಹಂತದಲ್ಲಿ ಅಭಿವೃದ್ಧಿಯನ್ನು ಕಂಡಿದೆ. ಸುಮಾರು 15 ಅಡಿಗಳಷ್ಟು ಎತ್ತರದ ಕಲ್ಲಿನ ಮಹಾದ್ವಾರದ ಮೇಲೆ ಭವ್ಯವೂ ಸುಂದರವೂ ಆದ ಮೂರು ಅಂತಸ್ತಿನ ರಾಜಗೋಪುರವನ್ನು ನಿರ್ಮಿಸಲಾಗಿದೆ. ದ್ವಾರದಲ್ಲಿ ಮೊದಲಿಗೆ ಆಂಜನೇಯನ ದರ್ಶನ ಆಗುತ್ತದೆ.

ourtemples.com   mulabagilu prasanna Vittala Narayana Temple, Mulabagilu Anjaneya temple, Mulabagalu Anjaneya temple, temples of Karnataka, temples in and around Bangalore, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಮುಳಬಾಗಲು ವಿಠ್ಠಲ ನಾರಾಯಣ ದೇವಾಲಯಗೋಪುರದಲ್ಲಿ ಹಲವು ದೇವಾನು ದೇವತೆಗಳ, ದ್ವಾರಪಾಲಕರ ಗಾರೆಗಚ್ಚಿನ ಶಿಲ್ಪಗಳಿದ್ದು, ಇದರಲ್ಲಿ ಗೀತೋಪದೇಶದ ಸುಂದರ ಕಲಾಕೃತಿ ಗಮನ ಸೆಳೆಯುತ್ತದೆ. ತುತ್ತತುದಿಯಲ್ಲಿ ಕಳಶಗಳ ಕೆಳಗೆ ವಿಘ್ನನಿವಾರಕನಾದ ಗಣಪತಿಯ ಗಾರೆ ಮೂರ್ತಿಯಿದೆ. ಐದು ಕಳಶಗಳನ್ನೊಳಗೊಂಡ ಈ ಪುರಾತನ ರಾಜ ಗೋಪುರ ಭಕ್ತರನ್ನು ಸೆಳೆಯುತ್ತದೆ.

ಒಳ ಪ್ರವೇಶಿಸುತ್ತಿದ್ದಂತೆ ಸಾಧಾರಣ ಕಲ್ಲಿನ ಕಂಬಗಳ ಮಂಟಪ, ಗರುಡಗಂಬ, ಧ್ವಜಸ್ತಂಭಗಳು ಕಾಣುತ್ತದೆ. ಸುತ್ತಲೂ ವಿಶಾಲವಾದ ಪ್ರದಕ್ಷಿಣ ಪಥವಿದೆ. ಒಳಗೆ ಮುಖಮಂಟಪ, ಸುಖನಾಸಿ, ಗರ್ಭಗೃಹ ಒಳಗೊಂಡ ಭವ್ಯ ದೇವಾಲಯವಿದೆ. ಮಂಟಪದಲ್ಲಿರುವ ಕಡುಗಲ್ಲಿನ ಕಂಬಗಳಲ್ಲಿ ವಿವಿಧ ದೇವಾನು ದೇವತೆಗಳ ಕೆತ್ತನೆಗಳಿವೆ. ಇದರಲ್ಲಿ ಬಹುತೇಕ ಶಿಲ್ಪಗಳಲ್ಲಿ ಕೃಷ್ಣನ ಪವಾಡಗಳನ್ನು ಬಿಂಬಿಸಲಾಗಿದೆ. ಬಕ ಸಂಹಾರ ಮಾಡುತ್ತಿರುವ ಕೃಷ್ಣ, ಕಾಳಿಂಗ ಮರ್ದನ ಮೊದಲಾದ ಶಿಲ್ಪಗಳು ಸುಂದರವಾಗಿವೆ. ಜೊತೆಗೆ ಹಿರಣ್ಯಕಶಿಪುವಿನ ಸಂಹಾರ ಮಾಡುತ್ತಿರುವ ಉಗ್ರ ನರಸಿಂಹ, ಲಕ್ಷ್ಮೀ ನರಸಿಂಹನ ಕೆತ್ತನೆಗಳೂ ಇವೆ. ಆದರೆ ಈ ಎಲ್ಲ ಕಂಬಗಳಿಗೆ ಬಣ್ಣ ಹಚ್ಚಿರುವ ಹಿನ್ನೆಲೆಯಲ್ಲಿ ಅದು ತನ್ನ ನೈಜತೆ ಮತ್ತು ಪ್ರಾಚೀನತೆಯ ಸೊಬಗನ್ನು ಕಳೆದುಕೊಂಡಿದೆ.

ourtemples.com   mulabagilu prasanna Vittala Narayana Temple, Mulabagilu Anjaneya temple, Mulabagalu Anjaneya temple, temples of Karnataka, temples in and around Bangalore, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಮುಳಬಾಗಲು ವಿಠ್ಠಲ ನಾರಾಯಣ ದೇವಾಲಯಇನ್ನು ಗರ್ಭಗೃಹದಲ್ಲಿ ಆರು ಅಡಿ ಎತ್ತರದ ಭವ್ಯ ಕೃಷ್ಣಶಿಲೆಯ ನಿಂತಿರುವ ಭಂಗಿಯ ದ್ವಿಭುಜ ವಿಠ್ಠಲ ನಾರಾಯಣನ ಮೂರ್ತಿ ಇದೆ. ಎಡ ಬಲದಲ್ಲಿ 5 ಅಡಿ ಎತ್ತರದ ನಿಂತಿರುವ ಭಂಗಿಯಲ್ಲಿರುವ ಭೂದೇವಿ ಮತ್ತು ಶ್ರೀದೇವಿಯ ವಿಗ್ರಹಗಳಿವೆ. ನಾರಾಯಣ ಇಲ್ಲಿ ಒಂದು ಕೈಯಲ್ಲಿ ಶಂಖವನ್ನು ಹಿಡಿದಿದ್ದು, ಮತ್ತೊಂದು ಅಭಯ ಮುದ್ರೆಯಲ್ಲಿದೆ. ಈ ಮೂರ್ತಿಯನ್ನು ದ್ವಾಪರ ಯುಗದಲ್ಲಿ ಮುಚಕುಂದ ಮಹಾ ಮುನಿಗಳು ಪ್ರತಿಷ್ಠಾಪಿಸಿ ಪೂಜಿಸಿದ್ದೆಂದು ದೇವಾಲಯದ ಅರ್ಚಕರು ತಿಳಿಸುತ್ತಾರೆ. 

ಪ್ರತಿವರ್ಷ ದೇವಾಲಯವದಲ್ಲಿ ಶ್ರೀರಾಮನವಮಿಯಿಂದ 8 ದಿನಗಳ ಕಾಲ ಉತ್ಸವಾದಿಗಳು ನೆರವೇರುತ್ತವೆ. ಚೈತ್ರ ಶುದ್ಧ ಹುಣ್ಣಿಮೆಯಂದು ಇಲ್ಲಿ ಬ್ರಹ್ಮರಥೋತ್ಸವವೂ ಜರುಗುತ್ತದೆ. ಇದು ನಾರಾಯಣನ ದೇವಾಲಯವಾದ ಕಾರಣ ಸಹಜವಾಗಿಯೇ ಇಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ourtemples.com   mulabagilu prasanna Vittala Narayana Temple, Mulabagilu Anjaneya temple, Mulabagalu Anjaneya temple, temples of Karnataka, temples in and around Bangalore, ಮುಳಬಾಗಲು ಆಂಜನೇಯ, ಮುಳಬಾಗಿಲು ಆಂಜನೇಯ, ಮುಳಬಾಗಲು ವಿಠ್ಠಲ ನಾರಾಯಣ ದೇವಾಲಯಶ್ರಾವಣ ಶನಿವಾರ ಮತ್ತು ವೈಕುಂಠ ಏಕಾದಶಿಯಂದು ವಿಶೇಷ ಪೂಜೆ, ಅಭಿಷೇಕ, ಅಲಂಕಾರಗಳೂ ಜರುಗುತ್ತವೆ. ಈ ದೇವಾಲಯದಲ್ಲಿ ಮತ್ತೂ ಒಂದು ವಿಶೇಷ ಇದೆ. ಇಲ್ಲಿ ಶಿವನಿಗೆ ವಿಶೇಷವಾದ ಕಾರ್ತೀಕ ಮಾಸದ ಕೊನೆಯ ಸೋಮವಾರ ಲಕ್ಷ್ಮ ದೀಪೋತ್ಸವವೂ ಜರುಗುತ್ತದೆ.

ದೇವಾಲಯದಲ್ಲಿ ಅತ್ಯಂತ ಸುಂದರವಾದ ಉತ್ಸವ ಮೂರ್ತಿಯೂ ಇದೆ. ರಥೋತ್ಸವದ ಕಾಲದಲ್ಲಿ ಈ ಮೂರ್ತಿಯನ್ನು ಭವ್ಯ ರಥದಲ್ಲಿ ಕೂರಿಸಿ ಊರಿನ ಮುಖ್ಯಬೀದಿಗಳಲ್ಲಿ ರಥೋತ್ಸವ ನಡೆಸಲಾಗುತ್ತದೆ. ರಥದಲ್ಲಿ ಕೇಶವನ ನೋಡಿದರೆ ಮತ್ತೆ ಜನ್ಮ (ಪುನರ್ಜನ್ಮ) ಇರುವುದಿಲ್ಲ ಎಂಬ ಮಾತೂ ಇಲ್ಲಿದೆ.

ಬೆಂಗಳೂರು-ತಿರುಪತಿ ಹೆದ್ದಾರಿ (ಹಳೆ ಮದರಾಸು ರಸ್ತೆ)ಯಲ್ಲಿ ಸಾಗಿದರೆ ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿ ಮುಳಬಾಗಿಲು ಇದೆ. ಹೆದ್ದಾರಿಯಿಂದ ಮುಳಬಾಗಿಲು ರಸ್ತೆಗೆ ಎಡಕ್ಕೆ ತಿರುಗಿದರೆ 11 ಕಿ.ಮೀ. ಸಾಗಬೇಕು. 

 ಮುಖಪುಟ /ನಮ್ಮದೇವಾಲಯಗಳು