ಮುಖಪುಟ /ನಮ್ಮದೇವಾಲಯಗಳು   

ಮುನೇಶ್ವರ ಬ್ಲಾಕ್ ಕಾಶಿ ಈಶ್ವರಸ್ವಾಮಿ ದೇವಾಲಯ

ಶಿವ, ಪಾರ್ವತಿ, ಆಂಜನೇಯ ಮೂರ್ತಿಗಳಿರುವ ಪುಟ್ಟ ದೇಗುಲ

*ಟಿ.ಎಂ.ಸತೀಶ್

ಮುನೇಶ್ವರಬ್ಲಾಕ್ ಕಾಶಿ ಈಶ್ವರ ದೇವಾಲಯ, kashi Eshwara Temple,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಆವಲಹಳ್ಳಿ ಬಳಿಯ ಮುನೇಶ್ವರ ಬಡಾವಣೆ  ಗಿರಿನಗರ ಹಾಗೂ ಟಿಂಬರ್ ಯಾರ್ಡ್ ಬಡಾವಣೆಗಳ ನಡುವೆ ಇರುವ ಬೆಂಗಳೂರು ನಗರದ ಒಂದು ಪ್ರದೇಶ.

50 ಅಡಿರಸ್ತೆಯಲ್ಲಿ ಬಂದು ಮುನೇಶ್ವರ ಬಡಾವಣೆಯ ಮುಖ್ಯರಸ್ತೆಯಲ್ಲಿ ಟಿಂಬರ್ ಯಾರ್ಡ್ ಕಡೆಗೆ 1 ಕಿಲೋ ಮೀಟರ್ ನಷ್ಟು ದೂರ ಬಂದರೆ ಮುಖ್ಯರಸ್ತೆಯಲ್ಲಿಯೇ ಎಡಭಾಗದಲ್ಲಿ ಶ್ರೀಕಾಶಿ ಈಶ್ವರ ಸ್ವಾಮಿ ದೇವಾಲಯ ಕಾಣಿಸುತ್ತದೆ.

ಇದು 27 ವರ್ಷಗಳ ಹಿಂದೆ ನಿರ್ಮಿಸಿದ ದೇವಾಲಯವಾಗಿದ್ದು, ಇಟ್ಟಿಗೆ, ಸಿಮೆಂಟ್ ಹಾಗೂ ಕಲ್ಲುನಿಂದ ನಿರ್ಮಿಸಲಾಗಿದೆ. ಇತ್ತೀಚೆಗೆ ದೇವಾಲಯದ ಜೀರ್ಣೋದ್ಧಾರವನ್ನೂ ಮಾಡಲಾಗಿದ್ದು, ದೇವಾಲಯದ ಮೇಲೆ 10 ಅಡಿ ಎತ್ತರದ ಸುಂದರ ಧ್ಯಾನದಲ್ಲಿರುವ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ. ಗರ್ಭಗೃಹದ ಮೇಲೆ ಸುಂದರ ಗೋಪುರವಿದೆ. ಮೂಲೆಗಳಲ್ಲಿ ಆಂಜನೇಯನ ಗಾರೆಯ ವಿಗ್ರಹ ಹಾಗೂ ಶಿವನ ಪಕ್ಕದಲ್ಲಿ ನಂದಿಯ ಮೂರ್ತಿ ಇದೆ.

 kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಪುಟ್ಟದಾದ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಮುಖಮಂಟಪ ಸಹಿತವಾದ ಪ್ರದಕ್ಷಿಣ ಪಥವನ್ನು ಒಳಗೊಂಡ ಈ ದೇವಾಲಯದ  ಪ್ರವೇಶ ದ್ವಾರಕ್ಕೆ ನೇರವಾಗಿ ಇರುವ ಪ್ರಧಾನ ಗರ್ಭಗುಡಿಯಲ್ಲಿ ಸುಂದರವಾದ ಶಿವಲಿಂಗ ಹಾಗೂ ಅದರ ಎಡಭಾಗದಲ್ಲಿ ತಾಯಿ ಪಾರ್ವತಿಯ ಸುಂದರವಾದ ಕೃಷ್ಣಶಿಲಾ ಮೂರ್ತಿಯಿದೆ. ಶಿವನ ಎದುರು ಸುಂದರವಾದ ನಂದಿಯ ವಿಗ್ರಹ ಇದೆ.

ಶಿವಪಾರ್ವತಿಯರ ಬಲಭಾಗದಲ್ಲಿ ವಿಘ್ನನಿವಾರಕ ಗಣಪತಿಯ ವಿಗ್ರಹ ಹಾಗೂ  ಎಡ ಭಾಗದಲ್ಲಿ ಆಂಜನೇಯನ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. 1990ರಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಸೋಮವಾರಗಳಂದು ಶಿವನ ದರ್ಶನಕ್ಕೂ ಮತ್ತು ಶನಿವಾರಗಳಂದು ಆಂಜನೇಯನ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ಹರಕೆ ಹೊತ್ತವರು ತಮ್ಮ ಬೇಡಿಕೆ ಈಡೇರಿದ ತರುವಾಯ ಶಿವನಿಗೆ ರುದ್ರಾಭಿಷೇಕವನ್ನೂ ಆಂಜನೇಯಸ್ವಾಮಿಗೆ ವಿಳ್ಳೆದೆಲೆ ಅಲಂಕಾರ, ವಡೆ ಸರದ ಅಲಂಕಾರ, ಬೆಣ್ಣೆ ಅಲಂಕಾರಗಳನ್ನು ಮಾಡಿಸುತ್ತಾರೆ. ಪಾರ್ವತೀ ಸಹಿತನಾದ ಈ ಕಾಶಿ ಈಶ್ವರ ಸ್ವಾಮಿ ಬೇಡಿ ಬರುವ ಭಕ್ತರ ಅಭಿಷ್ಠಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

Muneshwara block sri kashi Eshwara templeಪ್ರತಿ ತಿಂಗಳು ಸಂಕಷ್ಟ ಹರ ಚತುರ್ಥಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಪೂರ್ಣಿಮಿಯ ದಿನ ಇಲ್ಲಿ ಶ್ರೀಸತ್ಯನಾರಾಯಣ ಪೂಜೆ ವಿಜೃಂಭಣೆಯಿಂದ ಜರುಗುತ್ತದೆ. ಭಾದ್ರಪದ ಶುಕ್ಲ ಚೌತಿಯಂದು ಗಣಪನಿಗೆ ವಿಶೇಷ ಪೂಜೆ ನಡೆದರೆ, ಶಿವರಾತ್ರಿ ಹಾಗೂ ಕಾರ್ತೀಕ ಮಾಸದಲ್ಲಿ ಇಲ್ಲಿ ರಾತ್ರಿಯಿಡೀ ನಾಲ್ಕೂ ಯಾಮದ  ಪೂಜೆ ಪುನಸ್ಕಾರಗಳು ಜರುಗುತ್ತವೆ. ದೇವಾಲಯದ ಈಶಾನ್ಯ ಮೂಲೆಯಲ್ಲಿ ನವಗ್ರಹ ಪ್ರತಿಷ್ಠಾಪಿಸಲಾಗಿದೆ.

 ಶ್ರೀ. ಸೂರ್ಯನಾರಾಯಣ ಭಟ್ ಅವರು ಈ ದೇವಾಲಯದ ಪ್ರಧಾನ ಅರ್ಚಕರಾದ ಬಳಿಕ ದೇವಾಲಯ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಭಕ್ತರು ಇವರ ಬಳಿ ತಮ್ಮ ಮಕ್ಕಳ ಜಾತಕ ಬರೆಸುತ್ತಾರೆ. ಸಂಕಷ್ಟ ಪರಿಹಾರಕ್ಕೆ ಮಾರ್ಗೋಪಾಯಗಳನ್ನೂ ಕೇಳಿ ಪಡೆಯುತ್ತಾರೆ.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ - 9448954863 ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು