ಮುಖಪುಟ /ನಮ್ಮದೇವಾಲಯಗಳು  

ನಾಗಮಂಗಲ ಯೋಗಾನರಸಿಂಹಸ್ವಾಮಿ ದೇವಾಲಯ

Nagamangala Yoganarasimha temple, Mandya, kannadaratna.com our temples.in, temples of karnataka, hassan, namma devalayagalu, ಮಂಡ್ಯ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ನಾಗಮಂಗಲ. ಮೈಸೂರಿನಿಂದ 65 ಕಿಲೋ ಮೀಟರ್ ದೂರದಲ್ಲಿರುವ ಈ ಊರಿಗೆ ನಾಗಮಂಗಲ ಎಂಬ ಹೆಸರು ಬಂದ ಬಗ್ಗೆ ಒಂದು ಕಥೆ ಇದೆ.

ಲೋಹಿತ ವಂಶದವನೊಬ್ಬನಿಗೆ ದೇವರು ಕನಸಿನಲ್ಲಿ ಬಂದು ತಾನು ಹುತ್ತದಲ್ಲಿ ಇರುವುದಾಗಿ ತಿಳಿಸಿದನಂತೆ. ಆ ಹುತ್ತವನ್ನು ಹುಡುಕುತ್ತಾ ಬಂದ  ಆತ ಈ ಸ್ಥಳದಲ್ಲಿ ನರಸಿಂಹದೇವರು ಆವಿರ್ಭವಿಸಿರುವುದನ್ನು ನೋಡಿನಂತೆ. ಈ ಹುತ್ತಕ್ಕೆ ನಾಗರ ಹಾವು ಸುತ್ತಿಕೊಂಡಿದ್ದನ್ನು ನೋಡಿ ವಿಸ್ಮಯಗೊಂಡನಂತೆ. ಇಲ್ಲಿ ದೇವಾಲಯ ನಿರ್ಮಿಸಿದರಂತೆ.

ನಾಗರಹಾವು ಮಂಡಲಾಕಾರವಾಗಿ ಸುತ್ತಿದ್ದ ಈ ಊರು ನಾಗಮಂಡಲವಾಯಿತು. ಕಾಲಾನಂತರದಲ್ಲಿ ಇದು ನಾಗಮಂಗಲ ಎಂದು ಕರೆಸಿಕೊಂಡಿತೆನ್ನುತ್ತಾರೆ ಊರ ಹಿರಿಯರು. ಒಂದು ಕಾಲದಲ್ಲಿ ಇಲ್ಲಿ ನಾಲ್ಕು ವೇದಗಳನ್ನು ಓದುವ ಹಲವು ಋತ್ವಿಕರಿದ್ದರಂತೆ. ಹೀಗಾಗಿ ಈ ಊರಿಗೆ ಚತುರ್ವೇದ ಭಟ್ಟಾರಕ ರತ್ನ ಅಗ್ರಹಾರವೆಂಬ ಹೆಸರೂ ಇತ್ತು ಎಂದು ತಿಳಿದುಬರುತ್ತದೆ.

Nagamangala Yoganarasimha temple, Mandya, kannadaratna.com our temples.in, temples of karnataka, hassan, namma devalayagalu, ಊರಿನ ಇತಿಹಾಸ ಮಹಾಭಾರತ ಕಾಲಕ್ಕೂ ಚಾಚಿದ್ದು, ಅರ್ಜುನನನ್ನೇ ಕೊಂದ ಆತನ ಪುತ್ರ ಬಭ್ರುವಾಹನನ ಊರು ಮಣಿಪುರವೇ ಇದೆಂದೂ ಹೇಳಲಾಗುತ್ತದೆ. ಇಲ್ಲಿ ಗಂಗರ ಕಾಲದ ಶಾಸನವೊಂದು ದೊರಕಿದೆ. 1135ರಲ್ಲಿ ವಿಷ್ಣುವರ್ಧನನ ರಾಣಿ ಬೊಮ್ಮಲದೇವಿ ಅಗ್ರಹಾರ ಜೀರ್ಣೋದ್ಧಾರ ಮಾಡಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆಗಳಿವೆ.

ಲೋಹಿತವಂಶದ ಪಾಳೆಯಗಾರರು ಇಲ್ಲಿ 17ನೆಯ ಶತಮಾನದವರೆಗೂ ಆಳುತ್ತಿದ್ದರು. ಅವರ ಕಾಲದಲ್ಲಿ ಇಲ್ಲಿ ಕೋಟೆ ಹಾಗೂ ದೇವಾಲಯದ ಜೀರ್ಣೋದ್ಧಾರ ಮಾಡಿದ ದಾಖಲೆ ದೊರಕುತ್ತದೆ.

ಇಲ್ಲಿರುವ ಯೋಗಾನರಸಿಂಹ ದೇವರ ದೇವಾಲಯ ಅತ್ಯಂತ ಪ್ರಾಚೀನವಾದ್ದು. ವಿಶಾಲವಾದ ಪ್ರಾಕಾರವನ್ನು ಒಳಗೊಂಡ ದೇವಾಲಯದ ಗರ್ಭಗೃಹದಲ್ಲಿ ಯೋಗಮುದ್ರೆಯಲ್ಲಿರುವ ನರಸಿಂಹದೇವರ ಸುಂದರ ವಿಗ್ರಹವಿದೆ. ನರಸಿಂಹನಾಯಕನೆಂಬ Nagamangala Yoganarasimha temple, Mandya, kannadaratna.com our temples.in, temples of karnataka, hassan, namma devalayagalu, ಪಾಳೇಗಾರರು ದೇವಾಲಯದ ಮುಂದೆ ಗರುಡಗಂಭ, ಹೊರ ಪ್ರಾಕಾರ ಕಟ್ಟಿಸಿದರೆಂದೂ, ನಂತರ ಕೃಷ್ಣದೇವರಾಯರ ಕಾಲದಲ್ಲಿ ದೇವಾಲಯ ಅಭಿವೃದ್ಧಿ ಹೊಂದಿರುವುದು ತಿಳಿದುಬರುತ್ತದೆ.

ದೇವಾಲಯದಲ್ಲಿ ಲಕ್ಷ್ಮೀ, ಆಂಜನೇಯ ಹಾಗೂ ನವಗ್ರಹಗಳ ಗುಡಿ ಇದೆ. ವೈಖಾನಸಾಗಮದ ರೀತ್ಯ ಇಲ್ಲಿ ನಿತ್ಯ ಪೂಜೆ, ಮಾಸೋತ್ಸವ, ಬ್ರಹ್ಮೋತ್ಸವ ನಡೆಯುತ್ತದೆ. ವಂಶಪಾರಂಪರ್ಯವಾಗಿ ಇಲ್ಲಿನ ಅರ್ಚಕರು ನರಸಿಂಹದೇವರ ಸೇವೆ ಮಾಡುತ್ತಾ ಬಂದಿದ್ದಾರೆ. ವೈಶಾಖ ಶುದ್ಧ ಪೌರ್ಣಿಮೆಯ ದಿನ ಇಲ್ಲಿ ಬ್ರಹ್ಮೋತ್ಸವ ಜರುಗುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ಗರುಡೋತ್ಸವ, ಗಜಾರೋಹಣೋತ್ಸವ ಇತ್ಯಾದಿಗಳು ನಡೆಯುತ್ತವೆ. ವಿಜಯದಶಮಿ, ಆಯುಧಪೂಜೆಯ ದಿನಗಳಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕಲ್ಯಾಣೋತ್ಸವ, ಸುದರ್ಶನ ಹೋಮ ಇತ್ಯಾದಿ ಕೈಂಕರ್ಯಗಳೂ ದೇವಾಲಯದಲ್ಲಿ ನಡೆಯುತ್ತವೆ.    

ಮುಖಪುಟ /ನಮ್ಮದೇವಾಲಯಗಳು