ಮುಖಪುಟ /ನಮ್ಮದೇವಾಲಯಗಳು   

ಒರಳಕಲ್ಲು ತೀರ್ಥ ಅಥವಾ ನಾಮದ ಚಿಲುಮೆ

*ಟಿ.ಎಂ.ಸತೀಶ್

Namadachilume, ನಾಮದ ಚಿಲುಮೆ, ಒರಳುಕಲ್ಲು ತೀರ್ಥ.ದೇವರಾಯನ ದುರ್ಗದ ತಪ್ಪಲಲ್ಲಿರುವ ಮತ್ತೊಂದು ಪುಣ್ಯಧಾಮ ಒರಳಕಲ್ಲು ತೀರ್ಥ ಅಥವಾ ನಾಮದ ಚಿಲುಮೆ. ಈ ಕ್ಷೇತ್ರದಲ್ಲಿ ಒರಳುಕಲ್ಲಿನಲ್ಲಿನಂತಿರುವ ಗುಂಡಿಯಿಂದ ವರ್ಷವಿಡೀ ನಿರಂತರವಾಗಿ ಪಾವನ ತೀರ್ಥ ಉಕ್ಕುತ್ತದೆ.

ತ್ರೇತಾಯುಗದಲ್ಲಿ ವನವಾಸಿಯಾಗಿದ್ದ ಶ್ರೀರಾಮಚಂದ್ರ ದೇವರು ಈ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರಂತೆ. ನಾಮಧಾರಣೆಗಾಗಿ ನೀರು ಬೇಕೆಂದು ಅವರು ಈ ಬಂಡೆಗೆ ಬಾಣ ಬಿಟ್ಟು ನೀರು ತರಿಸಿ ನಾಮಧರಿಸಿದರಂತೆ, ಶ್ರೀರಾಮದೇವರು ನಾಮಧಾರಣೆಗಾಗಿ ನೀರು ತರಿಸಿದ ಈ ಕ್ಷೇತ್ರ ನಾಮದ ಚಿಲುಮೆ ಎಂದು ಕರೆಸಿಕೊಂಡಿದೆ.

ಒರಳುಕಲ್ಲಿನಂತಿರುವ ಸ್ಥಳದಲ್ಲಿ ನೀರು ಬರುವ ಕಾರಣ ಸ್ಥಳೀಯರು ಇದನ್ನು ನಾಮದ ಚಿಲುಮೆ ಎನ್ನುತ್ತಾರೆ. ದೇವರಾಯನದುರ್ಗಕ್ಕೆ ಹೋಗಿಬರುವ ಭಕ್ತರು ಇಲ್ಲಿಗೂ ಬಂದು ತೀರ್ಥಕ್ಕೆ ಹರಿದ್ರಾ ಕುಂಕುಮದಿಂದ ಪೂಜೆ ಸಲ್ಲಿಸಿ, ತೀರ್ಥ ಸೇವಿಸಿ ಪುನೀತರಾಗುತ್ತಾರೆ. ತೀರ್ಥದ ಕುಂಡಿಕೆಗೆ ನಾಣ್ಯಗಳನ್ನೂ ಎಸೆಯುತ್ತಾರೆ.

Namadachilume, ನಾಮದ ಚಿಲುಮೆ, ಒರಳುಕಲ್ಲು ತೀರ್ಥ. ಜಿಂಕೆವನಇಲ್ಲಿಗೆ ಬರುತ್ತಿದ್ದ ಪ್ರವಾಸಿಗರ ಪೈಕಿ ಕೆಲವರು ಇಲ್ಲಿನ ಒರಳುಕಲ್ಲು ತೀರ್ಥಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಒರಳುಕಲ್ಲು ತೀರ್ಥದ ಸುತ್ತಲೂ ಈಗ ಕಬ್ಬಿಣದ ಸರಳುಗಳಿಂದ ರಕ್ಷಣಾ ವರ್ತುಲ ನಿರ್ಮಿಸಲಾಗಿದೆ.

ನಾಮದ ಚಿಲುಮೆಯ ಹೊರ ಭಾಗದಲ್ಲಿ ಜಿಂಕೆಗಳ ಸಂರಕ್ಷಿತ ವನವೂ ಇದ್ದು, ಇದು ಪ್ರವಾಸಿತಾಣವೂ ಆಗಿದೆ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮದೇವಾಲಯಗಳು