ಮುಖಪುಟ /ನಮ್ಮ ದೇವಾಲಯಗಳು  

ಕುಂಡಿನಿ - ಕಪಿಲೆ ಸಂಗಮ ಸ್ಥಳದ ಗರಳಪುರಿಯೆಂಬ ಶ್ರೀಕಂಠನ ನೆಲೆವೀಡು
ಲೋಕವನ್ನು ರಕ್ಷಿಸಲು ಪರಶಿವನು ಹಾಲಾಹಲವನ್ನೇ ಕುಡಿದು ನಂಜುಂಡನಾದ ಕಥೆ

*ಟಿ.ಎಂ.ಸತೀಶ್

Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಕುಂಡಿನಿ (ಕೌಂಡಿನ್ಯ) ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಶಿವ ಕ್ಷೇತ್ರ ಹಾಗೂ ಪುಣ್ಯ ಭೂಮಿ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ ಎಂದರೆ ವಿಷ ಅರ್ಥಾತ್ ಹಾಲಾಹಲ.  ಹಾಲಾಹಲವನ್ನೇ ಕುಡಿದ ನಂಜುಂಡ ನೆಲೆಸಿಹ ಪುಣ್ಯ ಭೂಮಿಯೇ ನಂಜನಗೂಡು ಕ್ಷೇತ್ರ.

ಪುರಾಣ -ಪುಣ್ಯಕಥೆಗಳ ರೀತ್ಯ ಅಮೃತವನ್ನು ಪಡೆಯಲೋಸುಗ ದೇವ-ದಾನವರು, ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ, ವಾಸುಕಿ ಎಂಬ ಮಹಾ ಸರ್ಪವನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ಕ್ಷೀರ ಸಮುದ್ರವನ್ನು ಕಡೆದಾಗ, ಲಕ್ಷ್ಮೀಯೂ, ಕಲ್ಪವೃಕ್ಷವೂ, ಕಾಮಧೇನುವೂ, ಅಮೃತವೂ ಬಂತಂತೆ. ಅದರ  ಜೊತೆಗೆ ಭಯಂಕರ ವಿಶ್ವವನ್ನೇ ವಿನಾಶ ಮಾಡಬಲ್ಲ ಭಯಂಕರ ಹಾಲಾಹಲವೂ ವಾಸುಕಿನಯ ಬಾಯಿಂದ ಹೊರ ಹೊಮ್ಮಿತಂತೆ.

ಈ ಮಹಾ ಹಾಲಾಹಲವು ಇಡೀ ಭೂಮಂಡಲವನ್ನೇ ಆವರಿಸಿ ಸಕಲ ಜೀವರಾಶಿಗಳನ್ನೂ ಬಲಿತೆಗೆದುಕೊಳ್ಳುವುದೆಂಬ ಭೀತಿಯಿಂದ ದೇವಾನು ದೇವತೆಗಳು, ರಾಕ್ಷಸರಾದಿಯಾಗಿ ಎಲ್ಲರೂ ಥರಥರ ನಡುಗುತ್ತಲಿರುವಾಗ, ಲೋಕರಕ್ಷಕನಾದ ಮಹಾಶಿವನು ಆ ಕಾರ್ಕೋಟಕ ವಿಷವನ್ನು ಏಕಾಪೋಷನ ಅಂದರೆ ಒಂದು ಗುಟುಕು ಮಾಡಿ ನುಂಗಿದನಂತೆ. ಇದನ್ನು ನೋಡಿದ ಪಾರ್ವತಿ, ಭಯಂಕರ ವಿಷವು ಶಿವನ ಉದರ ಸೇರದಂತೆ Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಗಂಟಲಲ್ಲೇ ತಡೆದಳಂತೆ. ಹೀಗಾಗೇ ಶಿವ ನೀಲಕಂಠನಾದ. ನಂಜುಂಡನಾದ ಎನ್ನುತ್ತದೆ ಶಿವ ಪುರಾಣ.

ಲೋಕರಕ್ಷಕನಾದ ನಂಜುಂಡ ಶ್ರೀಕಂಠೇಶ್ವರನಾಗಿ ನೆಲೆಸಿರುವ ಊರೇ ಗರಳಪುರಿ ಅರ್ಥಾತ್ ನಂಜನಗೂಡು. ಕೃತಯುಗದಲ್ಲಿ ಪರಶುರಾಮರಾಗಿ ಅವತಾರವೆತ್ತಿದ ಶ್ರೀಮನ್ನಾರಾಯಣನಿಂದ ಪ್ರಕಾಶಿಸಲ್ಪಟ್ಟ ಈಶ್ವರನು ಇಲ್ಲಿ ತಾಂಡವೇಶ್ವರನಾಗಿ, ನಂಜುಂಡೇಶ್ವರನಾಗಿ ಭಕ್ತ ಜನಕೋಟಿಯನ್ನು ಕಾಯುತಿಹನು ಎನ್ನುತ್ತದೆ ಸ್ಥಳಪುರಾಣ. ಮೈಸೂರು ನಗರಕ್ಕೆ ಕೇವಲ 21 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯ ಕ್ಷೇತ್ರದ ಮಹಿಮೆಯ ಬಗ್ಗೆ ಹಲವು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಸ್ಕಂದ ಪುರಾಣದಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ.

ನಂಜನಗೂಡಿನ ಐತಿಹ್ಯದ ರೀತ್ಯ  ಒಮ್ಮೆ ಪಾರ್ವತೀ ಪರಮೇಶ್ವರರು ನಂದಿಯ ಮೇಲೆ ಕುಳಿತು ಲೋಕ  ಸಂಚಾರಮಾಡುತ್ತಿದ್ದಾಗ, ಪಾರ್ವತಿ ದೇವಿಯು ಭೂ ಲೋಕದಲ್ಲಿ ಪರಶಿವನನ್ನು  ಪರಮಪವಿತ್ರವಾದ  ಕ್ಷೇತ್ರ ಯಾವುದೆಂದು ಕೇಳಿದರಂತೆ. ಆಗ ಶಿವ  ಕಪಿಲಾ -ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮ ಪಾವನವಾದ ಕ್ಷೇತ್ರ ಎಂದು ಹೇಳಿದರಂತೆ.

Nanjanagud subramanaya, ನಂಜನಗೂಡು ದೇವಾಲಯ, ಸುಬ್ರಹ್ಮಣ್ಯ ದೇವಾಲಯ.Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಬಹಳ ಹಿಂದೆ ಕ್ಷೇತ್ರದಲ್ಲಿ ತ್ರಿಯಂಬಕ ಎಂಬ ರಾಕ್ಷಸನ ಮಗನಾದ ಕೇಶೀಯೆಂಬ ರಾಕ್ಷಸನು ಮಹಾಗರ್ವಿಯಾಗಿ ದೇವತೆಗಳನ್ನು ಋಷಿಗಳನ್ನು ಪೀಡಿಸುತ್ತಿರುತ್ತಾನೆ. ಆಗ ಋಷಿಗಳು ಹಾಗೂ ದೇವತೆಗಳು ಬ್ರಹ, ವಿಷ್ಣುವಿನ ಮೊರೆ ಇಡುತ್ತಾರೆ. ಆಗ ಬ್ರಹ್ಮ ಹಾಗೂ ವಿಷ್ಣು ಈತನ ಸಂಹಾರ ಪರಶಿವ ಮಾಡುತ್ತಾನೆ ಎಂದು ಹೇಳುತ್ತಾರೆ. ಎಲ್ಲರೂ ಪರಶಿವನನ್ನು ಪ್ರಾರ್ಥಿಸಿದಾಗ, ಪರಮೇಶ್ವರನು ಕಪಿಲಾ ಕೌಂಡಿನ್ಯ ನದಿಗಳ ಸಂಗಮದಲ್ಲಿ ಯಜ್ಞವನ್ನು ನೆರವೇರಿಸುವಂತೆ ಹೇಳುತ್ತಾನೆ.   ಯಜ್ಞವನ್ನು ಕೆಡಿಸುವುದಕ್ಕೆ ಬಂದ  ಕೇಶೀ ರಾಕ್ಷಸನನ್ನು ಪರಮೇಶ್ವರನು ಆ ಯಜ್ಞಕುಂಡದಲ್ಲಿಯೇ ಹಾಕಿ ಕೊಲ್ಲುತ್ತಾನೆ. ರಾಕ್ಷಸನ ವಿಷಜ್ವಾಲೆ ಅಲ್ಲಿ ಹಬ್ಬಿ ಎಲ್ಲರೂ ಉಸಿರಾಡಲೂ ಆಗದೆ ನರಳುತ್ತಾರೆ, ಆಗ ಪರಶಿವ ಆ ನಂಜನ್ನು ನುಂಗಿ ನಂಜುಂಡ, ಶ್ರೀ ಕಂಠ ನಾಗುತ್ತಾನೆ.

ಇಲ್ಲಿ ಪವಿತ್ರವಾದ ಕಪಿಲಾ ನದಿ ಹರಿಯುವುದಕ್ಕೂ ಒಂದು ಐತಿಹ್ಯವಿದೆ.  ಪಾತಾಳದಲ್ಲಿ ಕಪಿಲ ಋಷಿಗಳು ತಪಸ್ಸು ಮಾಡುವಾಗ ಸಗರ ಚಕ್ರವರ್ತಿಯ 64 ಸಾವಿರ ಮಕ್ಕಳು ಅವರ ತಪ್ಪಸಿಗೆ ವಿಘ್ನಮಾಡಿದುದಕ್ಕಾಗಿ ಸುಟ್ಟು ಬೂದಿಯಾಗುತ್ತಾರೆ. ಕಪಿಲ ಋಷಿಗಳು ತಪೋಭಂಗವಾದುದರಿಂದ ಅಲ್ಲಿಂದ  ನೀಲಾಚಲಕ್ಕೆ ಹೋಗುತ್ತಾರೆ. ಅಲ್ಲಿ, ಪರಮೇಶ್ವರನು ಪ್ರತ್ಯಕ್ಷನಾಗಿ ನಿನ್ನ ಬ್ರಹ್ಮರಂಧ್ರದಿಂದ ಕಪಿಲಾ ನದಿ ಹುಟ್ಟಿ Nanjanagud subramanaya, ನಂಜನಗೂಡು ದೇವಾಲಯ, ಸುಬ್ರಹ್ಮಣ್ಯ ದೇವಾಲಯ.Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಜಗದ ಕೊಳೆ ತೊಳೆಯುತ್ತಾಳೆ ಎಂದು ಹರಸುತ್ತಾರೆ. ಕಪಿಲ ಮಹರ್ಷಿಗಳ ಬ್ರಹ್ಮರಂಧ್ರದಿಂದ ಹುಟ್ಟಿದ ನದಿ ಕಪಿಲಾ ನದಿಯಾಗಿದೆ.ಈ ನದಿಯಲ್ಲಿ ವೃಶ್ಚಿಕ ಸಂಕ್ರಮಣದಲ್ಲಿ ಒಂದು ತಿಂಗಳು ಸ್ನಾನ ಮಾಡಿ ಶಿವ ದರ್ಶನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಕಾರ್ತೀಕ ಸೋಮವಾರ ಪೌರ್ಣಮಿ ದಿನ  ಅರುಣೋದಯದಲ್ಲಿ ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ.

ಶ್ರೀರಾಮನು ಸೀತೆಯನ್ನು ಹುಡುಕುತ್ತಾ ದಕ್ಷಿಣ ಭಾರತಕ್ಕೆ ಬಂದಾಗ, ಈ ಕಪಿಲಾ ನದಿಯಲ್ಲಿ ಸ್ನಾನಮಾಡಿದನೆಂದೂ ಹೇಳಲಾಗುತ್ತದೆ.   ಈ ಕ್ಷೇತ್ರ ಕೇಶೀ ರಾಕ್ಷಸನ ಸಂಹಾರದ ಸ್ಥಳವಾದ್ದರಿಂದ ಹಾಗೂ ಈ ಭೂಮಿಯಲ್ಲಿದ್ದ  ಎಲ್ಲ ನಂಜನ್ನೂ ಶಿವ ಕುಡಿದ ಕಾರಣ ಇಲ್ಲಿನ ಮಣ್ಣು ಮೃತ್ತಿಕೆಯಾಗಿದೆ. ಈ ಮೃತ್ತಿಕೆಯನ್ನು ನೀರಲ್ಲಿ ಕದರಿ ಕುಡಿಯುವುದರಿಂದ ಹಾಗೂ ಮೈಗೆ ಹಚ್ಚಿಕೊಳ್ಳುವುದರಿಂದ ರೋಗಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

ಶ್ರೀಕಂಠಮುಡಿ : ಮೈಸೂರಿಗೆ ಸಮೀಪದಲ್ಲೇ ಇರುವ ಈ ದೇವಾಲಯವನ್ನು ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರು ಜೀರ್ಣೋದ್ಧಾರಗೊಳಿಸಿದರು. ಶ್ರೀಕಂಠಮುಡಿಯನ್ನೂ ನೀಡಿದರು.

Nanjanagud subramanaya, ನಂಜನಗೂಡು ದೇವಾಲಯ, ಸುಬ್ರಹ್ಮಣ್ಯ ದೇವಾಲಯ.Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ನಂಜನಗೂಡು ಶ್ರೀಕಂಠೇಶ್ವರನ ದೇವಾಲಯ ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಷ್ಟೇ ಅಲ್ಲ, ರಾಜ್ಯದ ಅತಿ ದೊಡ್ಡ ದೇವಾಲಯವೂ ಹೌದು.  ದ್ರಾವಿಡ ಶೈಲಿಯಲ್ಲಿರುವ ದೇಗುಲ 117 ಮೀಟರ್ ಉದ್ದ ಹಾಗೂ 48 ಮೀಟರ್ ಅಗಲ ಇದೆ. 147 ಕಂಬಗಳಿಂದ ಕೂಡಿದ ದೇವಾಲಯದ ಒಟ್ಟು ವಿಸ್ತೀರ್ಣ 4,831 ಚ.ಮೀ ಎಂದರೆ ಇದರ ವಿಸ್ತಾರದ ಅರಿವಾಗುತ್ತದೆ. ದೇವಾಲಯದ ಹೊರ ಗೋಡೆ ಸುಮಾರು 3.7 ಮೀಟರ್ ಎತ್ತರ ಇದ್ದು, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಅಧಿಷ್ಠಾನ, ಕಂಬಸಾಲಿನ ಕೈಸಾಲೆ, ಮೇಲೆ ಸುತ್ತಲೂ ದೇವತೆಗಳ ಶಿಲ್ಪಗಳ ಕೂಟ ಮತ್ತು ಶಿಖರ ಗೆಜ್ಜೆಹಾರವಿದೆ. ದೇವಾಲಯದ ಮಹಾದ್ವಾರ ಬೃಹತ್ ರಚನೆಯಿಂದ ಕೂಡಿದ್ದು, ಬಾಗಿಲವಾಡದಲ್ಲಿ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಇನ್ನು ಇದರ ಮೇಲಿರುವ ಗೋಪುರ ಏಳು ಅಂತಸ್ತುಗಳಿಂದ ಕೂಡಿದ್ದು, ಸುಮಾರು 37 ಮೀಟರ್ ಎತ್ತರ ಇದೆ. ಅದರ ಮೇಲೆ 7 ಸುವರ್ಣ ಲೇಪಿತ ಕಳಶಗಳಿವೆ. ಅಕ್ಕ ಪಕ್ಕದಲ್ಲಿ ಕೊಂಬುಗಳಿವೆ.

ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ವಿಶಾಲವಾದ ತೆರೆದ ಅಂಗಳವಿದೆ. ಮಧ್ಯದಲ್ಲಿ ವಸಂತಮಂಟಪವಿದೆ. ಬಲ ಭಾಗದಲ್ಲಿ ಬಸವನ ಗುಡಿಯಿದೆ. ದ್ವಾರದ ಎದುರು ಕಂಬಗಳ ಮಂಟಪವೂ ಇದೆ. ಈ ಮಂಟಪದಲ್ಲಿ ನೂರಾರು ಲಿಂಗಗಳು, ವೃಷಭಾರೂಢ ಶಿವಪಾರ್ವತಿ, ಗಿರಿಜಾ ಕಲ್ಯಾಣ, ಮಾರ್ಕಾಂಡೇಶ್ವರ, ಸುಬ್ರಹ್ಮಣ್ಯ, ವಲ್ಲಿ, ದೇವಸೇನಾ ಮೊದಲಾದ ಹಲವು ದೇವಾನು ದೇವತೆಗಳ, ಪರಿವಾರ ದೇವತೆಗಳ ಸುಮಾರು 200 ವಿಗ್ರಹಗಳಿವೆ. ಪ್ರಧಾನಗರ್ಭಗೃಹದ ಮುಂದೆ 76 ಮೀಟರ್ ಎತ್ತರದ ಮರದ ಯಷ್ಟಿ ಇರುವ ಧ್ವಜಸ್ತಂಭವಿದೆ.

Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ,  Nanjanagudu ratha, ನಂಜನಗೂಡು ರಥ, ಕನ್ನಡರತ್ನ.ಕಾಂ, kannadaratna.com, vಪ್ರಧಾನಗರ್ಭಗೃಹದಲ್ಲಿ ಶ್ರೀಕಂಠೇಶ್ವರ ಲಿಂಗವಿದ್ದು, ಪ್ರಸ್ತುತ ಪ್ರಧಾನ ಅರ್ಚಕರಾಗಿರುವ ನಾಗಚಂದ್ರ ದೀಕ್ಷಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಇಲ್ಲಿ ಶಿವನಿಗೆ ಹಾಲು, ತುಪ್ಪ, ಮೊಸರು, ಸಕ್ಕರೆ, ಜೇನುತುಪ್ಪದಿಂದ ಪಂಚಾಮೃತಾಭಿಷೇಕ, ಜಲಾಭಿಷೇಕ, ಬೆಣ್ಣೆ, ಶಾಲ್ಯಾನ್ನ ಇತ್ಯಾದಿ ಅಭಿಷೇಕ ನಡೆಯುತ್ತದೆ. ಪ್ರಾತಃಪೂಜೆ ಮತ್ತು ಪ್ರದೋಷ ಪೂಜೆ ನೋಡಲು ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಸರ್ಕಾರಿ ರಜಾ ದಿನ ಹಾಗೂ ಭಾನುವಾರಗಳಂದು ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಧನ್ಯರಾಗುತ್ತಾರೆ. ಷಟ್ಕಾಲ ಅಭಿಷೇಕ ನಡೆಯುವ ಏಕೈಕ ಸ್ಥಳವೆಂಬ ಹೆಗ್ಗಳಿಕೆಯೂ ನಂಜನಗೂಡಿಗಿದೆ.

ಶ್ರೀಕಂಠೇಶ್ವರನ ಗರ್ಭಗುಡಿಗೆ ಪ್ರದಕ್ಷಿಣ ಪಥವಿದ್ದು, ಉತ್ಸವ ಮೂರ್ತಿಯ ಗುಡಿ, ಗಣಪನ ಗೂಡು, ಶಾರದೆಯ ಗುಡಿ, ಪಾರ್ವತಿ ಅಮ್ಮನವರ ಪ್ರತ್ಯೇಕ ಗುಡಿ, ಚಂಡಿಕೇಶ್ವರ ಗುಡಿ, ನವಗ್ರಹ ಮಂಟಪ, ಉದ್ಭವ ಗಣಪತಿ ಸ್ತಂಭ, ತಾಂಡವೇಶ್ವರ ದೇವಾಲಯವೇ ಮೊದಲಾದ ಗುಡಿಗಳಿವೆ. ಹರಿ ಮತ್ತು ಹರನಲ್ಲಿ ಭೇದವಿಲ್ಲ ಎಂದು ನಿರೂಪಿಸಲು ಇಲ್ಲಿ ನಾರಾಯಣನ ಗುಡಿಯೂ ಇದೆ.

ಪಾರ್ವತಿ ಅಮ್ಮನವರ ಗುಡಿಯಲ್ಲಿ ಮೈಸೂರು ಹುಲಿ ಟಿಪ್ಪು ಕೊಟ್ಟ ಸ್ಪಟಿಕ ಲಿಂಗವಿದೆ.  ಟಿಪ್ಪೂಸುಲ್ತಾನ್ ಕೂಡ ನಂಜುಂಡನ ಪರಮಭಕ್ತರಲ್ಲೊಬ್ಬರಾಗಿದ್ದರಂತೆ. ಒಮ್ಮೆ ಟಿಪ್ಪೂವಿನ ಪಟ್ಟದಾನೆಗೆ ಭಯಂಕರ ಕಾಯಿಲೆ ಬಂದೆರಗಿತು. ಔಷದೋಪಚಾರದಿಂದ ಈ ಕಾಯಿಲೆ ಗುಣವಾಗಲಿಲ್ಲ. ಆಗ ಟಿಪ್ಪೂ ನಂಜುಂಡೇಶ್ವರನಿಗೆ ಹರಕೆ ಹೊತ್ತರಂತೆ. ಪಟ್ಟದಾನೆ ಆರೋಗ್ಯ ಸುಧಾರಿಸಿತು. ಈ ಪವಾಡದಿಂದ ಅಚ್ಚರಿಗೊಂಡ ಟಿಪ್ಪೂ ಈ ದೇವಾಲಯದಲ್ಲಿ ಸ್ಪಟಿಕ ಲಿಂಗವೊಂದನ್ನು ಪ್ರತಿಷ್ಠಾಪಿಸಿಹರು. ಆನೆಯ ರೋಗ ಗುಣಪಡಿಸಿದ ಈ ಶಿವನಿಗೆ ಹಕೀಮ ನಂಜುಂಡ ಎಂಬ ಹೆಸರು ಬಂದಿದೆ.

Nanjanagudu Srikanteswara, temples of Karnataka, temples in and around Bangalore and mysore, T.M. Satish, kannadaratna.com, ourtemples.in,  ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ,  ನಂದೀಶ್ವರ ನಂಜನಗೂಡು, Nandi Nanjanagud, ಕನ್ನಡರತ್ನ.ಕಾಂ, kannadaratna.com, kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ಜಾತ್ರೆ: ಪ್ರತಿವರ್ಷ ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಇಲ್ಲಿ ಪಂಚರಥೋತ್ಸವ ಜರುಗುತ್ತದೆ. ನಂಜನಗೂಡಿನಲ್ಲಿ ಶ್ರೀಕಂಠಮುಡಿ, ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ, ತಮ್ಮ ಮುಡಿಯನ್ನು ನೀಡಿ, ಕಪಿಲೆಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಪ್ರತಿವರ್ಷ ಕಾರ್ತೀಕದಲ್ಲಿ ಚಿಕ್ಕ ರಥೋತ್ಸವ ಜರುಗುತ್ತದೆ, ಪ್ರತಿ ಹುಣ್ಣಿಮೆಯ ದಿನ ಇಲ್ಲಿ ರಥೋತ್ಸವ ಜರುಗುತ್ತದೆ.

ಪ್ರತಿ ಸೋಮವಾರ, ಮಹಾಶಿವರಾತ್ರಿ, ಮಾಸ ಶಿವರಾತ್ರಿ, ಹಬ್ಬ ಹರಿದಿನಗಳು ಹಾಗೂ ಆಷಾಢದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನಂಜನಗೂಡಿನ ಶ್ರೀಕಂಠನ ದೇಗುಲದಲ್ಲಿ ಶಿವನ ಎದುರು ಮುಖ ಮಾಡಿರುವ ನಂದಿಯ ವಿಗ್ರಹವೂ ಇದೆ.  ಜೊತೆಗೆ ಪ್ರವೇಶದ್ವಾರದೆಡೆಗೆ ಮುಖ ಮಾಡಿರುವ ಸುಂದರವಾದ ನಂದೀಶ್ವರ ಮೂರ್ತಿ ಗಮನ ಸೆಳೆಯುತ್ತದೆ. ನಂದಿಯ ಕೊರಳಿನಲ್ಲಿ ಮೂರು ಸುಂದರ ಗಂಟೆಯ ಸರಗಳಿವೆ. ನಂದಿಕೇಶ್ವರನ ಪಾದಕ್ಕೆ ಯಂತ್ರ ಮುಟ್ಟಿಸಿ ಮಕ್ಕಳ ಕೊರಳಿಗೆ ಕಟ್ಟುತ್ತಾರೆ. ಪಕ್ಕದಲ್ಲಿ ತುಲಾಭಾರದ ಮಂಟಪವಿದೆ. ಹರಕೆ ಹೊತ್ತವರು ಅಲ್ಲಿ ತುಲಾಭಾರ ಮಾಡಿಸಿ, ತೂಕದಷ್ಟು ಬೆಲ್ಲ, ಅಕ್ಕಿ ಇತ್ಯಾದಿಯನ್ನು ದೇವಾಲಯಕ್ಕೆ ದಾನ ಮಾಡುತ್ತಾರೆ. 

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಿಂದ ನೇರ್ ಬಸ್ ಸೌಲಭ್ಯವಿದೆ. ಮೈಸೂರಿಗೆ ಬಂದು ಅಲ್ಲಿಂದ ನಂಜನಗೂಡಿಗೆ ಹೋಗಬಹುದು. ರೈಲು ಸೌಲಭ್ಯವೂ ಉಂಟು.

ಮುಖಪುಟ /ನಮ್ಮ ದೇವಾಲಯಗಳು

M.V.Shankaranarayan