ಮುಖಪುಟ /ನಮ್ಮದೇವಾಲಯಗಳು   

ಬಸವನಗುಡಿಯ ವಿಶೇಷ ನವಗ್ರಹ ದೇವಾಲ

*ಟಿ.ಎಂ.ಸತೀಶ್

Mallikarjunaswamy temple, Sannidi Road, ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಬೆಂಗಳೂರು. ಕನ್ನಡರತ್ನ.ಕಾಂ, ಕರ್ನಾಟಕದ ದೇವಾಲಯಗಳು, ನಮ್ಮ ದೇವಾಲಯಗಳು, our templesಬೆಂಗಳೂರಿನ ಬಸವನಗುಡಿಯ ಸನ್ನಿಧಿ ರಸ್ತೆಯಲ್ಲಿರುವ ಪುರಾತನ ಮಲ್ಲಿಕಾರ್ಜುನ ದೇವಾಲಯ ಹಾಗೂ ಕಹಳೆ ಬಂಡೆ ಉದ್ಯಾನವನದ ನಡುವೆ ಇರುವ  ವಿಶಾಲ ಪ್ರದೇಶದಲ್ಲಿ 2009ರಲ್ಲಿ ಸ್ಥಾಪನೆಯಾದ ವಿನೂತನ ವಿಶೇಷ ನವಗ್ರಹ ದೇವಾಲಯ ಆಸ್ತಿಕರನ್ನು ಕೈಬೀಸಿ ಕರೆಯುತ್ತಿದೆ.

ಹೆಸರೇ ವಿಶೇಷ ನವಗ್ರಹ ದೇವಾಲಯ ಎಂದ ಮೇಲೆ ಇಲ್ಲಿ ವಿಶೇಷ ಇರಲೇ ಬೇಕಲ್ಲವೇ. ಇಲ್ಲಿ ನಿಜಕ್ಕೂ ವಿಶೇಷವಿದೆ. ಒಂದೇ ಪ್ರದೇಶದಲ್ಲಿ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಗ್ರಹಗಳಿಗೆ ಪ್ರತ್ಯೇಕವಾದ ಪುಟ್ಟ ಪುಟ್ಟ ದೇವಾಲಯ ನಿರ್ಮಿಸಲಾಗಿದೆ. ಜೊತೆಗೆ ದಕ್ಷಿಣಾಮೂರ್ತಿ ಹಾಗೂ ಹನುಮಂತನ ಆಲಯವೂ ಇಲ್ಲಿದೆ.

ಒಂದೇ ಸಂಕೀರ್ಣದಲ್ಲಿ 11 ಪುಟ್ಟ ದೇವಾಲಯಗಳು ಇರುವುದು ಇಲ್ಲಿನ ವಿಶೇಷ. ಇದರ ಎದುರು ಬೃಹದಾಕಾರದ ಅಶ್ವತ್ಥವೃಕ್ಷವಿದೆ. ಅಶ್ವತ್ಥ ವೃಕ್ಷದ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲೇ ಇರುವ ಇಲ್ಲಿ ಮೊದಲಿಗೆ ದಕ್ಷಿಣಾಮೂರ್ತಿಯ ದರ್ಶನವಾಗುತ್ತದೆ. ಅದರ ಪಕ್ಕದಲ್ಲಿ ಪೂರ್ವಾಭಿಮುಖವಾಗಿ ಶುಕ್ರ, ಆಂಜನೇಯ ದೇವಾಲಯಗಳಿದ್ದರೆ, ದಕ್ಷಿಣಾಭಿಮುಖವಾಗಿ ದಕ್ಷಿಣಾಮೂರ್ತಿ, ಮಂಗಳ, Mallikarjunaswamy temple, Sannidi Road, ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಬೆಂಗಳೂರು. ಕನ್ನಡರತ್ನ.ಕಾಂ, ಕರ್ನಾಟಕದ ದೇವಾಲಯಗಳು, ನಮ್ಮ ದೇವಾಲಯಗಳು, our templesಕೇತು ದೇವಾಲಯಗಳಿವೆ.

ಪಶ್ಚಿಮಾಭಿಮುಖವಾಗಿ ಚಂದ್ರ, ಶನಿ ದೇವಾಲಯಗಳಿವೆ. ಇನ್ನು ಉತ್ತರಾಭಿಮುಖವಾಗಿ ಗುರು ಹಾಗೂ ಬುಧ ದೇವಾಲಯಗಳಿವೆ. ಶನಿದೇವರ ಗುಡಿಯ ಎದುರು ನೇರವಾಗಿ ಹನುಮಂತನ ಗುಡಿಯಿದೆ. ಇಲ್ಲಿ ಎಲ್ಲ ನವಗ್ರಹಗಳೂ ಸಪತ್ನೀಕರಾಗಿರುವ ಸುಂದರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ತಮಿಳುನಾಡಿನಲ್ಲಿರುವ ನವಗ್ರಹ ದೇವಾಲಯಗಳನ್ನು ನೋಡಲು ಶಕ್ತಿ ಇಲ್ಲದವರು ಇಲ್ಲಿಗೆ ಆಗಮಿಸಿ ನವಗ್ರಹ ಮೂರ್ತಿಗಳ ದರ್ಶನ ಪಡೆಯುತ್ತಿದ್ದಾರೆ.Mallikarjunaswamy temple, Sannidi Road, ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಬೆಂಗಳೂರು. ಕನ್ನಡರತ್ನ.ಕಾಂ, ಕರ್ನಾಟಕದ ದೇವಾಲಯಗಳು, ನಮ್ಮ ದೇವಾಲಯಗಳು, our temples

 

 

 

 

ಮುಖಪುಟ; /ನಮ್ಮದೇವಾಲಯಗಳು