ಮುಖಪುಟ /ನಮ್ಮದೇವಾಲಯಗಳು

ನೊಣವಿನಕೆರೆ ವೇಣುಗೋಪಾಲ ದೇವಾಲಯ

*ಟಿ.ಎಂ.ಸತೀಶ್

kannadaratna.com, ourtemples.in, ನಮ್ಮ ದೇವಾಲಯಗಳು, ಕನ್ನಡರತ್ನ.ಕಾಂ, ವೇಣುಗೋಪಾಲಸ್ವಾಮಿತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ನೊಣವಿನಕೆರೆ ಹಿಂದೆ ಹೆಬ್ಬಾರ್ ಶ್ರೀ ವೈಷ್ಣವರ ಪಂಚಗ್ರಾಮಗಳಲ್ಲೊಂದಾಗಿತ್ತು. ಇಲ್ಲಿ ನೊಣಬೇಶ್ವರ, ಶಾಂತೇಶ್ವರ, ಗರಿಗೇಶ್ವರ, ಚೋಳೇಶ್ವರ, ಮತ್ತು ಕಲ್ಲೇಶ್ವರ ದೇವಾಲಯಗಳಿವೆ. ಇಲ್ಲಿ ಹೊಯ್ಸಳ, ವಿಜಯನಗರದ ಅರಸರ ಕಾಲದಲ್ಲಿ ವೇಣುಗೋಪಾಲ, ಬೇಟೆರಾಯ ದೇವಾಲಯ ನಿರ್ಮಿಸಲಾಗಿದೆ.

ಈ ದೇವಾಲಯಗಳ ಪೈಕಿ ಗೋಪಾಲಸ್ವಾಮಿ ದೇವಾಲಯ ಪ್ರಮುಖವಾದದ್ದು. ಹೊಯ್ಸಳರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿತವಾದ ಈ ದೇವಾಲಯ ತ್ರಿಕೂಟಾಚಲ ವಿನ್ಯಾಸ ಒಳಗೊಂಡಿದೆ. ಮಹಾದ್ವಾರ,  ಮುಖಮಂಟಪ, ನವರಂಗವನ್ನು ಇದು ಒಳಗೊಂಡಿದೆ.

ಈ ದೇವಸ್ಧಾನದಲ್ಲಿರುವ ಮೂರು ಗರ್ಭಗುಡಿಗಳಲ್ಲಿ ಕೇಶವ, ಯೋಗಾನರಸಿಂಹ ಮತ್ತು ವೇಣುಗೋಪಾಲ ವಿಗ್ರಹಗಳಿವೆ.

ನೊಣವಿನಕೆರೆ ಬೇಟೆರಾಯಸ್ವಾಮಿ ದೇವಸ್ಧಾನ ಮತ್ತೊಂದು ಪ್ರಮುಖ ಮಂದಿರ. 16ನೆಯ ಶತಮಾನದಲ್ಲಿ ಈ ದೇವಾಲಯವನ್ನು ಕೊನೇರಿ ಅಯ್ಯಂಗಾರ್ಯರು ಕಟ್ಟಿಸಿದರೆಂದು ತಿಳಿದುಬಂದಿದೆ. ನವರಂಗದ ಕಂಬದ ಮೇಲೆ ಇವರ ಭಕ್ತವಿಗ್ರಹವಿದೆ. ಈ ದೇವಸ್ಧಾನಕ್ಕೂ ಗೋಪುರವಿಲ್ಲದ ಮಹಾದ್ವಾರವಿದೆ.

ಗರ್ಭಗೃಹ, ಸುಕನಾಸಿ ಮತ್ತು ನವರಂಗ ಇದೆ. ಗರ್ಭಗೃಹದಲ್ಲಿ ಕಪ್ಪುಕಲ್ಲಿನಲ್ಲಿ ಕೆತ್ತಿದ ಸುಂದರವಾದ ಬೇಟೆರಾಯನ ವಿಗ್ರಹವಿದೆ.

ತುರುವೇಕೆರೆಯಂತೆಯೇ ಇಲ್ಲಿಯೂ ಬೇಟೆರಾಯ, ಈಶ್ವರ ಹಾಗೂ ಗ್ರಾಮದೇವತೆ ಉಡುಸುಲಮ್ಮ ದೇವಾಲಯ ಇದೆ. ನೊಣವಿನಕೆರೆಯ ಗ್ರಾಮದೇವತೆಯೂ ಉಡುಸಲಮ್ಮ. ಪ್ರತಿವರ್ಷ ಮೇ ತಿಂಗಳಲ್ಲಿ ಬೇಟೆರಾಯಸ್ವಾಮಿ ರಥೋತ್ಸವ ನಡೆಯುತ್ತದೆ

ಪ್ರವಾಸ ಮಾಹಿತಿ:  ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಸಂಪರ್ಕಿಸಬಹುದು.

ಮುಖಪುಟ /ನಮ್ಮದೇವಾಲಯಗಳು