ಮುಖಪುಟ /ನಮ್ಮದೇವಾಲಯಗಳು 

'ಪುತ್ತೂರಿನ ಮುತ್ತು' ಮಹತೋಭಾರ ಮಹಾಲಿಂಗೇಶ್ವರ

Puttur Mahalingeswara, Puttur, dakshina Kannada, ಪುತ್ತೂರು, ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.*ಟಿ.ಎಂ.ಸತೀಶ್

ಪ್ರಕೃತಿ ರಮಣೀಯವಾದ ಹಚ್ಚಹಸುರಿನಿಂದ ಕೂಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ನೆಲೆಸಿಹ ಪುಣ್ಯಭೂಮಿಯೂ ಹೌದು. ಇಲ್ಲಿ ಶಿವ ಮಹಾಲಿಂಗೇಶ್ವರನೆಂಬ ಹೆಸರಿನಿಂದ ನೆಲೆನಿಂತಿರುವ ಬಗ್ಗೆ ಹಾಗೂ ಊರಿಗೆ ಪುತ್ತೂರು ಎಂಬ ಹೆಸರು ಬಂದ ಬಗ್ಗೆ ಸ್ಥಳ ಪುರಾಣವೇ ಇದೆ..

ಸ್ಥಳಪುರಾಣ : ಹಿಂದೊಮ್ಮೆ ಕಾಶಿಯಿಂದ ದಕ್ಷಿಣ ಪಥಕ್ಕೆ ಬಂದಿದ್ದ ತೇಜೋವಂತರಾದ ವಿಪ್ರರೊಬ್ಬರು, ಉಪ್ಪಿನಂಗಡಿಗೆ ಬಂದರಂತೆ. ಅಲ್ಲಿ ಗೋವಿಂದಭಟ್ಟರೆಂಬ ವಿಪ್ರರ ಸ್ನೇಹ ಬೆಳೆಯಿತಂತೆ. ನಿತ್ಯವೂ ಮಧ್ಯಾಹ್ನ ಭೋಜನಕ್ಕೆ ಮುನ್ನ ತಮ್ಮ ಸಂಪುಟದಲ್ಲಿದ್ದ ಶಿವಲಿಂಗವನ್ನು ಪೂಜಿಸುತ್ತಿದ್ದ ಅವರು, ಒಂದು ದಿನ ಆ ಲಿಂಗವನ್ನು ಗೋವಿಂದಭಟ್ಟರಿಗೆ ನೀಡಿ, ಈ ಲಿಂಗವನ್ನು ಕೈಯಲ್ಲಿ ಹಿಡಿದೇ ಪೂಜಿಸಬೇಕು. ಭೂಸ್ಪರ್ಶ ಮಾಡಬಾರದು ಎಂದು ಹೇಳಿ, ಸ್ನಾನಕ್ಕೆ ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ. ಕಾದು ಕಾದು ಸಾಕಾದ ಭಟ್ಟರು, ಮುಂದಿನ ಊರಿಗೆ ಪ್ರಯಾಣ ಬೆಳೆಸಿ, ಲಿಂಗದೊಂದಿಗೆ ರಾತ್ರಿ ಪುತ್ತೂರಿಗೆ ಬಂದರಂತೆ. ಬೆಳಗಾದ ಮೇಲೆ ಲಿಂಗಪೂಜಿಸಲು ಅದಕ್ಕೆ ಅಗತ್ಯವಾದ ಪರಿಕರ ತರಲು, ರಾಜ ಬಂಗರಾಯನ ಆಸ್ಥಾನಕ್ಕೆ ಹೋದರು. ಆ ಹೊತ್ತಿನಲ್ಲಿ ರಾಜನ ಸೋದರಿ, ಪ್ರಸವದ ನೋವಿನಿಂದ ಬಳಲುತ್ತಿದ್ದಳು. ರಾಜ ಭಟ್ಟರ ಮೊರೆಗೆ ಸ್ಪಂದಿಸಲಿಲ್ಲ. ಆದರೆ, ಮಂತ್ರಿ ರಾಜನ Puttur Mahalingeswara, Puttur, dakshina Kannada, ಪುತ್ತೂರು, ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ನೋವನ್ನು ಭಟ್ಟರಿಗೆ ತಿಳಿಸಿದಾಗ, ಭಟ್ಟರು, ತಮ್ಮ ಬಳಿ ಇದ್ದು ಲಿಂಗಕ್ಕೆ ಪೂಜಿಸಿ, ಎಲ್ಲವೂ ನಿನ್ನೆಚ್ಚೆ ಎಂದರಂತೆ, ತತ್ ಕ್ಷಣವೇ ಆಕೆಗೆ ಸುಖ ಪ್ರಸವವಾಗಿ ಪುತ್ರವತಿಯಾದಳು. ರಾಜ ಆಗ ಅವರಿಗೆ ಪೂಜೆಗೆ ಬೇಕಾದ ಎಲ್ಲ ಅಗತ್ಯ ವಸ್ತು ನೀಡಿದನಂತೆ.

ಗೋವಿಂದ ಭಟ್ಟರು, ಆಗ ಭಂಡಾರಿ ಹಿತ್ತಿಲು ಎಂದು ಕರೆಸಿಕೊಳ್ಳುತ್ತಿದ್ದ ಈಗ ದೇವಾಲಯವಿರುವ ಜಾಗದಲ್ಲಿ ಮರೆತು ತಾವು ತಂದಿದ್ದ ಶಿವಲಿಂಗವನ್ನಿಟ್ಟು ಪೂಜಿಸಿದರಂತೆ. ಲಿಂಗ ಭೂಸ್ಪರ್ಶವಾಗಿತ್ತು. ಬೆಳಗ್ಗೆ ಲಿಂಗ ತೆಗೆಯಲು ಪ್ರಯತ್ನಿಸಿದಾಗ ಆಗಲಿಲ್ಲ. ಕೊನೆಗೆ ರಾಜನ ನೆರವು ಪಡೆದು ಲಿಂಗಕ್ಕೆ ಹಗ್ಗ ಕಟ್ಟಿ, ಪಟ್ಟದಾನೆಯಿಂದ ಎಳೆಸಿದರಂತೆ. ಲಿಂಗ ಬೆಳೆದು ಬೃಹದಾಕಾರವಾಯಿತು. ಮಹಾಲಿಂಗವಾಯ್ತು. ಲಿಂಗ ಎಳೆದ ಆನೆಯ ಅಂಗಾಂಗ ಛಿದ್ರ, ಛಿದ್ರವಾಗಿ ದೂರ ದೂರ ಎಸೆಯಲ್ಪಟ್ಟಿತು. ಹೀಗೆ ಆನೆಯ ದವಡೆ ಅಂದರೆ ಕೊಂಬು ಕೊಂಬೆಟ್ಟು, ಕಾಲು ತಾರ್ಜಾಲು, ಕರಿ ಬಿದ್ದಿಲ್ಲ ಕರಿಯಾಲ, ತಲೆ ಬಿದ್ದಲ್ಲಿ  ತಾಳೆಪಾಡಿ, ಕೈ ಬಿದ್ದಲ್ಲಿ ಕೇಪಳ, ಬಾಲ ಬಿದ್ದಲ್ಲಿ ಬೀದಿಮಜಲು ಎಂದು ಹೆಸರಾಯಿತು. ಈ ಪವಾಡ ಕಂಡ ರಾಜ ಮಹಾಲಿಂಗೇಶ್ವರನಿಗೆ ಗುಡಿ ಕಟ್ಟಿಸಿದನಂತೆ. ಹೀಗೆ ಶಿವಲಿಂಗ ಹೂತ ಊರು ಹೂತೂರಾಯಿತು. ನಂತರ ಇದು ಪುತ್ತೂರಾಯಿತೆಂದು ಹೇಳಲಾಗುತ್ತದೆ.

Puttur Mahalingeswara, Puttur, dakshina Kannada, ಪುತ್ತೂರು, ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಮಹಲಿಂಗೇಶ್ವರ ದೇವಾಲಯದ ಪೂರ್ವಾಭಿಮುಖವಾಗಿದೆ. ಪಶ್ಚಿಮಕ್ಕೆ ದೊಡ್ಡ ಕೆರೆ ಇದೆ. ಎದುರು ಭಾಗದಲ್ಲಿ ರುಧ್ರಭೂಮಿ ಇದೆ. ವಿಶ್ವೇಶ್ವರ ನೆಲೆಸಿಹ ಕಾಶಿಯನ್ನು ಬಿಟ್ಟರೆ, ಶಿವದೇವಾಲಯದ ಬಳಿ ರುದ್ರಭೂಮಿ ಇರುವುದು ಪುತ್ತೂರಿನಲ್ಲಿ ಮಾತ್ರ.  

ಸುಂದರವಾದ ಈ ದೇವಾಲಯದ ಪ್ರವೇಶಿಸುವ ಮುನ್ನವೇ 16 ಅಡಿ ಎತ್ತರದ ಶಿವನ ಪ್ರತಿಮೆ ಭಕ್ತರನ್ನು ಆಕರ್ಷಿಸುತ್ತದೆ. ಪ್ರವೇಶ ದ್ವಾರ ದಾಟಿ ಒಳ ಪ್ರವೇಶಿಸಿದರೆ, ಪ್ರದಕ್ಷಿಣ ಪಥದಲ್ಲಿ ಪಾರ್ವತಿ, ಸುಬ್ರಹ್ಮಣ್ಯ, ಗಣಪತಿ ಮೊದಲಾದ ಪರಿವಾರ ದೇವತೆಗಳ ಗುಡಿಗಳಿವೆ. ಪ್ರಧಾನ ಗರ್ಭಗೃಹದಲ್ಲಿ ಎತ್ತರವಾದ ಸುಂದರ ಶಿವಲಿಂಗವಿದೆ. 

ದೇವಾಲಯದಲ್ಲಿ 3 ಶಿಲಾಶಾಸನಗಳಿವೆ. 13ನೇ ಶತಮಾನದ್ದೆಂದು ಹೇಳಲಾಗುವ ಈ ಶಾಸನದಲ್ಲಿ ಮುತ್ತು ಬೆಳೆಯುವ ಕೆರೆಯಲ್ಲಿ ಮೀನು ಹಿಡಿಯಬಾರದು ಎಂಬ ಉಲ್ಲೇಖವಿದೆ. ಅಂದರೆ ಈ ದೇವಾಲಯವನ್ನು 13ನೇ ಶತಮಾನಕ್ಕೂ ಮೊದಲೇ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ.

Puttur Mahalingeswara, Puttur, dakshina Kannada, ಪುತ್ತೂರು, ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಪ್ರತಿ ವರ್ಷ ಮೀನ ಮಾಸದಲ್ಲಿ ಅಂದರೆ  ಏಪ್ರಿಲ್ 1 ರಂದು ಗೊನೆ ಕಡಿದು, 10 ರಂದು ಧ್ವಜಾರೋಹಣ ಮಾಡಿ 16ರಂದು ರಥೋತ್ಸವ ನಡೆಸಲಾಗುತ್ತದೆ. ಮಹಾರಥೋತ್ಸವದ ಹಿಂದಿನ ರಾತ್ರಿ ಉತ್ಸವ, ಸಣ್ಣ ರಥೋತ್ಸವ, ತೆಪ್ಪೋತ್ಸವಗಳೂ ನಡೆಯುತ್ತವೆ. ರಥೋತ್ಸವಕ್ಕೆ ಮುನ್ನ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ನಡೆಯುತ್ತದೆ. ನಂತರ ವೈಭವದ ದಿವ್ಯ ರಥೋತ್ಸವ ನಡೆಯುತ್ತದೆ. ರಥದಲ್ಲಿ ಶಿವನನ್ನು ಕಾಣಲು ಜನ ಸಾಗರವೇ ಸೇರುತ್ತದೆ. ಪಲ್ಲಕ್ಕಿ ಉತ್ಸವ. ಯಕ್ಷಗಾನ, ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ.

ಇತರ ದೈವಗಳೊಂದಿಗೆ ಕಟ್ಟೆ ಸವಾರಿ ನಡೆದು, ಕಟ್ಟೆ ಉತ್ಸವ ನಡೆಸುವುದು ಇಲ್ಲಿನ ಮತ್ತೊಂದು ವಿಶೇಷ.  ಉಲ್ಲಾಳ್ತಿ ದಂಡನಾಯಕ ದೈವಗಳ ಪೂಜೆ, ರಾತ್ರಿ ವಿವಿಧ ಉತ್ಸವ ಜರುಗುತ್ತವೆ. ಅಂಗಳತ್ತಾಯ ಎಂಬ ದೈವವನ್ನು ಕರೆದು, ದೇವಾಲಯದ ರಕ್ಷಣೆ ವಹಿಸಿ ವೀರಮಂಗಲಕ್ಕೆ ಹೋಗಿ ದೇವರಿಗೆ ಅವಭೃತ ಸ್ನಾನ ಮಾಡಿಸುವ ವಿಶೇಷ ಸಂಪ್ರದಾಯವೂ ಇಲ್ಲಿದೆ.

Puttur Mahalingeswara, Puttur, dakshina Kannada, ಪುತ್ತೂರು, ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ನಿತ್ಯ ಶಿವನಿಗೆ ಮಂತ್ರಜಲಾಭಿಷೇಕ ಮಾಡಿ, ತುಂಬೆ, ಕರವೀರ ಪುಷ್ಪಗಳಿಂದ, ನಾರಿಕೇಳ, ರಂಬಾದಿ ಫಲಗಳಿಂದ, ಕರ್ಪೂರ, ಚಂದನಾದಿ ದ್ರವ್ಯಗಳಿಂದ ಆಗಮ ರೀತ್ಯ ಪೂಜಿಸಲಾಗುತ್ತದೆ. ಹತ್ತೂರು ಒಡೆಯ, ಪುತ್ತೂರು ಮುತ್ತು ಎಂದೇ ಖ್ಯಾತನಾಗಿ, ಬೇಡಿ ಬರುವ ಭಕ್ತರ ಕಷ್ಟ ತೀರಿಸುತ್ತಿರುವ ಮಹಾಲಿಂಗೇಶ್ವರನಿಗೆ ನಿತ್ಯವೂ ರುದ್ರಾಭಿಷೇಕ ನಡೆಯುತ್ತದೆ.  ಪ್ರತಿ  ಸೋಮವಾರ ವಿಶೇಷ ಅಲಂಕಾರ ಪೂಜೆ ಜರುಗುತ್ತದೆ. 

ಪ್ರಕೃತಿ ರಮಣೀಯ ಸ್ಥಳದಲ್ಲಿರುವ ದೇವಾಲಯದ ಎದುರು ನಾಗದೇವರ ಗುಡಿ, ಅಯ್ಯಪ್ಪದೇವ ಗುಡಿ ಹಾಗೂ ನವಗ್ರಹ ದೇವಾಲಯಗಳಿವೆ. ಬೆಂಗಳೂರಿನಿಂದ ಹಾಗೂ ಮೈಸೂರಿನಿಂದ ಮತ್ತು ಮಂಗಳೂರಿನಿಂದ ನೇರ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ಮೈಸೂರು, ಹುಣಸೂರು, ಮಡಿಕೇರಿ, ಸುಳ್ಯ ಮಾರ್ಗವಾಗಿ ಇಲ್ಲವೇ ಹಾಸನ ರಸ್ತೆ, ಸಕಲೇಶಪುರ ಮಾರ್ಗವಾಗಿ ಪುತ್ತೂರಿಗೆ ಹೋಗಬಹುದು. ರಾತ್ರಿ ತಂಗಲು ಉತ್ತಮವಾದ ಹೊಟೆಲ್ ಸೌಕರ್ಯ ಇದೆ. ಪುತ್ತೂರಿನಲ್ಲಿ ಶ್ರೀವೆಂಕಟರಮಣ ದೇವಾಲಯ ಹಾಗೂ ಮಹಾಮಾಯಿ ಮತ್ತು ರಾಧಾಕೃಷ್ಣ ದೇವಾಲಯಗಳೂ ಇವೆ.

60 ವರ್ಷಗಳ ಬಳಿಕ ಚಕ್ರವರ್ತಿ ದೇವರೆಂದೂ ಖ್ಯಾತನಾದ ಮಹಾಲಿಂಗೇಶ್ವರನಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನೆರವೇರಿಸಲು ತೀರ್ಮಾನಿಸಲಾಗಿದೆ.

(ಚಿತ್ರಗಳನ್ನು ನೀಡಿದ ಹಾಗೂ ದೇವಾಲಯದ ಮಾಹಿತಿ ತಿಳಿಸಿದ ಅರ್ಚಕ ವರ್ಗಕ್ಕೆ ನಾವು ಆಭಾರಿಗಳು)

ಮುಖಪುಟ /ನಮ್ಮದೇವಾಲಯಗಳು