ಮುಖಪುಟ /ನಮ್ಮದೇವಾಲಯಗಳು 

ಪುತ್ತೂರು ವೆಂಕಟೇಶ್ವರ ದೇವಾಲಯ

Puttur Venkataramana, Puttur, dakshina Kannada, ಪುತ್ತೂರು,ವೆಂಕಟರಮಣ,  ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಪ್ರಮುಖ ವಾಣಿಜ್ಯ ಕೇಂದ್ರವೂ ಆದ ಪುತ್ತೂರು ಹಚ್ಚಹಸುರಿನಿಂದ ಕೂಡಿದ ಪ್ರಕೃತಿ ರಮಣೀಯ ತಾಣ. ಈ ಊರಿನ ದೊಡ್ಡ ಕೆರೆಯಲ್ಲಿ ಮುತ್ತುಗಳು ದೊರಕುತ್ತಿದ್ದ ಕಾರಣ ಇದನ್ನು ಮುತ್ತೂರು ಎಂದು ಕರೆಯುತ್ತಿದ್ದರಂತೆ. ಕಾಲಾನಂತರದಲ್ಲಿ ಇದು ಪುತ್ತೂರಾಯಿತು ಎಂದು ಹೇಳಲಾಗುತ್ತದೆ. ಸ್ಥಳ ಪುರಾಣದ ರೀತ್ಯ ಶಿವ ಹೂತ ಈ ಊರು ಹೂತೂರಾಗಿ ನಂತರ ಪುತ್ತೂರಾಯಿತು ಎಂದೂ ಹೇಳಲಾಗುತ್ತದೆ.

ಈ ಪುಣ್ಯ ಭೂಮಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಾಶಿ ಮಠ ಸಂಸ್ಥಾನದ ಆಡಳಿತಕ್ಕೊಳಪಟ್ಟ ವೆಂಕಟರಮಣಸ್ವಾಮಿ ದೇವಾಲಯವಿದೆ. ಈಗ್ಗೆ 100 ವರ್ಷಗಳ ಹಿಂದೆ ಅಂದರೆ 1899ರಲ್ಲಿ ಮಾಳಪ್ಪ ಪೈ ಎನ್ನುವ ಧರ್ಮಾತ್ಮರು ಮಂಜೇಶ್ವರದಿಂದ ವಿಗ್ರಹ ತರಿಸಿ ಪ್ರತಿಷ್ಠಾಪಿಸಿದರು.

ಈಗಿರುವ ದೇವಾಲಯದ ಪ್ರದಕ್ಷಿಣ ಪಥದಲ್ಲಿ ಇರುವ ಪುಟ್ಟ ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿದರು. ಕುಟುಂಬದ ದೇವಾಲಯವಾಗಿದ್ದ ಇದನ್ನು ಹತ್ತೂ ಸಮಸ್ತರಿಗೆ ಒಪ್ಪಿಸಿದರು. ಈಗ ಈ ದೇವಾಲಯ ಗೌಡಸಾರಸ್ವತ ಸಮಾಜದ ಕಾಶೀಮಠ ಸಂಸ್ಥಾನದ ಆಡಳಿತಕ್ಕೊಳಟ್ಟು ಅಭಿವೃದ್ಧಿಯನ್ನು ಕಂಡಿದೆ.

Puttur Venkataramana, Puttur, dakshina Kannada, ಪುತ್ತೂರು,ವೆಂಕಟರಮಣ,  ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.1963ರಲ್ಲಿ ಶ್ರೀವೆಂಕಟರಮಣಸ್ವಾಮಿಗೆ ಬೃಹತ್ ದೇವಾಲಯ ನಿರ್ಮಿಸಿ, ದೇವರ ಮರುಪ್ರತಿಷ್ಠಾಪನೆ ಮಾಡಲಾಗಿದೆ. ವಿಶಾಲ ಪ್ರಾಕಾರ, ಪ್ರದಕ್ಷಿಣ ಪಥವಿರುವ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಶ್ರೀವೆಂಕಟರಮಣನ ಸುಂದರ ಕೃಷ್ಣ ಶಿಲಾ ವಿಗ್ರಹವಿದೆ.

ದೇವಾಲಯದ ಪ್ರಾಕಾರದಲ್ಲಿ ಗಣಪತಿ, ಹನುಮಂತ, ಮಹಾಲಕ್ಷ್ಮೀ, ಗರುಡ ಹಾಗೂ ನಾಗರ ಗುಡಿಗಳಿವೆ. ಪ್ರತಿ ನಿತ್ಯ ಇಲ್ಲಿ ಪ್ರಾತಃಕಾಲದಲ್ಲಿ ದೇವರಿಗೆ ಅಭಿಷೇಕ, ಅಲಂಕಾರ ಪೂಜೆ ನಡೆಯುತ್ತದೆ. ಚಾಂದ್ರಮಾನ ಯುಗಾದಿಯ ದಿನ ಪ್ರತಿಷ್ಠಾಪನಾ ವರ್ಧಂತಿ ನಡೆಯುತ್ತದೆ.

ಕಾರ್ತೀಕ ಮಾಸದಲ್ಲಿ 10 ದಿನಗಳ ಕಾಲ ದೀಪೋತ್ಸವ, ಅವಭೃತೋತ್ಸವ, ಜಾಗರಣ ಪೂಜೆ, ದೇವರ ಪಟೆ ಸವಾರಿ ಉತ್ಸವ,Puttur Venkataramana, Puttur, dakshina Kannada, ಪುತ್ತೂರು,ವೆಂಕಟರಮಣ,  ಮಹಾಲಿಂಗೇಶ್ವರ ದೇವಾಲಯ, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು. ಕಲ್ಯಾಣೋತ್ಸವ, ಮೃಗಬೇಟೆ ಉತ್ಸವ, ಕಟ್ಟೆಪೂಜೆ, ಪೇಟೆ ಸವಾರಿ ಮೊದಲಾದ ಉತ್ಸವಗಳು ಜರುಗುತ್ತವೆ. ದೇವಾಲಯದಲ್ಲಿ ಭಕ್ತಾದಿಗಳಿಗೆ ತೀರ್ಥ, ಮುಡಿಗಂಧ ಪ್ರಸಾದ ನೀಡಲಾಗುತ್ತದೆ.

100 ವರ್ಷಗಳ ಹಿಂದೆ ಇಲ್ಲಿ ಮಾಳಪ್ಪ ಪೈ ಅವರು ನಿರ್ಮಿಸಿದ್ದ ಪುಟ್ಟ ದೇವಾಲಯದಲ್ಲಿ ಶ್ರೀರಾಮಚಂದ್ರ ಹಾಗೂ ವರದೇಂದ್ರ ಸ್ವಾಮೀಜಿ ಚಿತ್ರಪಟಗಳನ್ನು ಇಡಲಾಗಿದೆ.

ನಿತ್ಯ ಪಾಂಚರಾತ್ರ ಪದ್ಮಸಂಹಿತೆಯ ರೀತ್ಯ ಪೂಜೆ ನಡೆಯುವ ದೇವಾಲಯದಲ್ಲಿ ಶ್ರೀರಾಮನವಿ, ಹನುಮಜಯಂತಿ, ನಾಗರಪಂಚಮಿ, ನೂಲಹುಣ್ಣಿಮೆ, ಮಹಾಲಯ ಅಮಾವಾಸ್ಯೆ ಹಾಗೂ ನವರಾತ್ರಿಯಲ್ಲಿ ವಿಶೇಷ ಪೂಜೆ ಅಲಂಕಾರಗಳು ನಡೆಯುತ್ತವೆ.

ಮೈಸೂರು, ಬೆಂಗಳೂರು, ಮಂಗಳೂರು, ಮಡಿಕೇರಿ, ಹಾಸನಗಳಿಂದ ಪುತ್ತೂರಿಗೆ ನೇರ ಬಸ್ ಸೌಲಭ್ಯವಿದೆ.

ಮುಖಪುಟ /ನಮ್ಮದೇವಾಲಯಗಳು