ಮುಖಪುಟ /ನಮ್ಮದೇವಾಲಯಗಳು 

ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಾಲಯ

sri Rajarajeswari temple, Rajeswarinagar, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರು- ಮೈಸೂರು ರಸ್ತೆಯಲ್ಲಿ ನಾಯಿಂಡ ಹಳ್ಳಿ ದಾಟುತ್ತಿದ್ದಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಮುನ್ನ ರಸ್ತೆಯ ಅಂಚಿನಲ್ಲಿ ಭವ್ಯವಾದ ಸ್ವಾಗತ ಕಮಾನು ಎಲ್ಲರ ಗಮನ ಸೆಳೆಯುತ್ತದೆ. ಇದುವೇ ರಾಜರಾಜೇಶ್ವರಿ ಹೆಬ್ಬಾಗಿಲು. ಈ ಮೂಲಕ ಪ್ರವೇಶಿಸಿದರೆ 2 ಕಿಲೋ ಮೀಟರ್ ದೂರದಲ್ಲಿ ಭವ್ಯವಾದ ಶ್ರೀರಾಜರಾಜೇಶ್ವರಿ ದೇವಾಲಯವಿದೆ.

ಶ್ರೀ ತಿರುಚ್ಚಿ ಮಹಾಸ್ವಾಮೀಜಿಗಳ ಸಂಕಲ್ಪದ ಫಲವಾಗಿ ಕಳೆದ 30 ವರ್ಷಗಳ ಹಿಂದೆ ಸ್ಥಾಪನೆಯಾದ ಈ ದೇವಾಲಯ 103 ಅಡಿ ಎತ್ತರದ ದ್ರಾವಿಡ ಶೈಲಿಯ ಭವ್ಯ ಗೋಪುರ ಹಾಗೂ ವಿಶಾಲವಾದ ಪ್ರಾಕಾರವನ್ನು ಒಳಗೊಂಡಿದೆ.

ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಾಲಯದ ಮಹಾದ್ವಾರ ಪ್ರವೇಶಿಸುತ್ತಿದ್ದಂತೆಯೇ ಗರುಡಗಂಭಕ್ಕೆ ನೇರವಾಗಿರುವ ಗರ್ಭಗೃಹದಲ್ಲಿ ವಿರಾಜಮಾನಳಾದ ರಾಜೇಶ್ವರಿಯ ದರ್ಶನವಾಗುತ್ತದೆ. ವಿಶಾಲವಾದ ಪ್ರಾಕಾರದಲ್ಲಿ ಹಲವು ಕಲಾತ್ಮಕ ಕೆತ್ತನೆಯ ಕಂಬಗಳಿದ್ದು, ಕೆಲವು ಕಂಬಗಳಲ್ಲಿ ಗಣೇಶ, ಸುಬ್ರಹ್ಮಣ್ಯ, ಹನುಮ ತಾಂಡವೇಶ್ವರ, ಸರಸ್ವತಿ ಮೊದಲದ ದೇವಾನು ದೇವತೆಗಳ ಉಬ್ಬುಶಿಲ್ಪಗಳಿವೆ. ಜೊತೆಗೆ ಆನೆ, ಕುದುರೆ, ಸಿಂಹ, ಬಾಗಿದ ಬಾಳೆಯ ಗೊನೆಯಾಕಾರದ ಶಿಲ್ಪಗಳೂ ಇವೆ.

Sri Rajarajeswari Templeದೇವಾಲಯ ಇತ್ತೀಚಿನ ಕಟ್ಟಡವಾದರೂ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿದೆ. ಗರ್ಭಗೃಹದ ಬಳಿ ದ್ವಾರಪಾಲಕರ ಶಿಲ್ಪಗಳಿವೆ. ಗರ್ಭಗೃಹದ ಹಿಂಭಾಗದಲ್ಲಿ ಗಣೇಶ, ಸುಬ್ರಹ್ಮಣ್ಯ, ರಾಜೇಶ್ವರಿಯ ಬೆಳ್ಳಿ ಹಾಗೂ ಕಂಚಿನ ಪ್ರತಿಮೆಗಳ ಗುಡಿಗಳಿವೆ. ದೇವಾಲಯ ಪ್ರಾಕಾರದಲ್ಲಿ ನವಗ್ರಹ ಗುಡಿಯೂ ಇದೆ.

ರಾಜ ರಾಜೇಶ್ವರಿ ದೇವಾಲಯದ ಪಕ್ಕದಲ್ಲಿ ಶ್ರೀ ಚಕ್ರೇಶ್ವರಿ ಮಹಾಮೇರು ದೇವಾಲಯವಿದೆ. ಕೃಷ್ಣವರ್ಣದ ಕಲ್ಲಿನ ಗರ್ಭಗೃಹ ಸುಂದರವಾಗಿದೆ. ಒಳಗೆ ಶ್ರೀಚಕ್ರವನ್ನು ಸ್ಥಾಪಿಸಲಾಗಿದೆ. ಗರ್ಭಗೃಹದ ಮೇಲ್ಭಾಗದಲ್ಲಿ ಗಜಲಕ್ಷ್ಮಿಯ ವಿಗ್ರಹವಿದೆ. ಇಲ್ಲಿಯೂ ದ್ವಾರಪಾಲಕರ ಸ್ತ್ರೀ ವಿಗ್ರಹಗಳಿವೆ.

ದೇವಾಲಯದ ಮುಂಭಾಗದಲ್ಲಿ ರಥಮಂಟಪವೂ ಇದೆ. ರಾಜ ಗೋಪುರದ ಮುಂಭಾಗದಲ್ಲಿ ಯಾಗಶಾಲೆಯಿದೆ. ಗರ್ಭಗೃಹದ ಮೇಲೆ ಸುವರ್ಣಲೇಪಿತ ಶಿಖರವಿದೆ. ದೇವಾಲಯದ ಹಿಂಭಾಗದಲ್ಲಿ ಶ್ರೀ ಕೈಲಾಸ ಆಶ್ರಮವಿದೆ. ಆಶ್ರಮದ ಎದುರು ನವಿಲು, ಜಿಂಕೆ, ಹಂಸವೇ ಮೊದಲಾದ ಪ್ರಾಣಿಗಳ ಸಂಗ್ರಹಾಲಯವೂ ಇದೆ. ನವರಾತ್ರಿಯ ಸಮಯದಲ್ಲಿ ಇಲ್ಲಿ ಹತ್ತೂ ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 12-30ರವರೆಗೆ ಹಾಗೂ ಸಂಜೆ 4ರಿಂದ 8-30ರವರೆಗೆ ದೇವಾಲಯ ತೆರೆದಿರುತ್ತದೆ.

ಮುಖಪುಟ /ನಮ್ಮದೇವಾಲಯಗಳು