ಮುಖಪುಟ /ನಮ್ಮದೇವಾಲಯಗಳು 

ಶೃಂಗಗಿರಿ ಶ್ರೀಷಣ್ಮುಖ ದೇವಸ್ಥಾನ

Rajarajeswarinagar, Subramanya temple,   Rajeswarinagar, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಬೆಂಗಳೂರಿನ ರಾಜರಾಜೇಶ್ವರಿನಗರದ 5ನೇ ಹಂತದಲ್ಲಿರುವ  ಬೆಟ್ಟದ ಮೇಲೆ ನಿರ್ಮಾಣವಾಗಿರುವ ಭವ್ಯವಾದ ಹಾಗೂ ಅಪರೂಪದ ವಾಸ್ತು ವೈಭವದಿಂದ ಕೂಡಿದ ದೇವಾಲಯವೇ ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನ. ಈ ದೇವಾಲಯ ಹಲವು ವಿಶೇಷಗಳಿಂದ ಕೂಡಿದ ಪವಿತ್ರ ಕ್ಷೇತ್ರ.

ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ದೇವಾಲಯದ ಗೋಪುರದಲ್ಲೇ ಷಣ್ಮುಖನ ಆರುತಲೆಗಳ ಗಾರೆಯ ಶಿಲ್ಪವಿದೆ. ಆರೂ ಮುಖಗಳು ಒಂದೇ ರೂಪ, ಆಕಾರ ಅಳತೆಯನ್ನು ಹೊಂದಿದ್ದು, ಮೇಲ್ಭಾಗದಲ್ಲಿ ವರ್ಣರಂಜಿತವಾದ ದೀಪಾಲಂಕಾರ ಮಾಡುವ ಕಾರ್ಯ ನಡೆದಿದೆ. ದೂರದವರೆಗೆ ಗೋಚರಿಸುವ ಈ ಷಣ್ಮುಖ ಗೋಪುರ ನೋಡುಗರ ಮನಸೆಳೆಯುತ್ತದೆ.

ದೇವಾಲಯದ ಮೆಟ್ಟಿಲೇರುತ್ತಿದ್ದಂತೆ ಮುಂಭಾಗದಲ್ಲಿಯೇ ನಾಲ್ಕು ದಿಕ್ಕಿಗೆ ಮುಖಮಾಡಿ ಶಿರದ ಮೇಲೆ ಮತ್ತೊಂದು ಗಜಶಿರ ಹೊಂದಿರುವ ಪಂಚಮುಖಿ ಗಣಪತಿಯ ಮಂದಿರವಿದೆ. ಎಂಟುಕೈಗಳ ಗಣಪ ಇಲ್ಲಿ ಸಿಂಹವಾಹನನಾಗಿ ವಿಶೇಷ ಆಕರ್ಷಣೆಯನ್ನು ಹೊಂದಿದ್ದಾನೆ. ಗಣಪನ ಎದುರು ಬಲಿ ಪೀಠ ಹಾಗೂ ಇಲಿಯ ವಿಗ್ರಹಗಳೂ ಇವೆ.

Rajarajeswarinagar, Subramanya temple,   Rajeswarinagar, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.ಆದಿ ವಂದಿಪನಾದ ಗಣಪನಿಗೆ ವಂದಿಸಿ ಬೆಟ್ಟದ ಮೇಲೆರುವ ಸುಬ್ರಹ್ಮಣ್ಯನ ದರ್ಶನಕ್ಕೆ ಮೆಟ್ಟಿಲೇರಿದರೆ, ದಕ್ಷಿಣ ಬೆಂಗಳೂರಿನ ಭವ್ಯದರ್ಶನವಾಗುತ್ತದೆ. ಮೆಟ್ಟಿಲಿರಿದ ಆಯಾಸವನ್ನೂ ಸುತ್ತಲ ಭವ್ಯ ನೋಟ ಮರೆಸುತ್ತದೆ. ಮೇಲೆ ಮತ್ತೆ ಪ್ರಥಮ ಪೂಜಿತ ಗಣಪನ ದೇವಾಲಯವಿದೆ. ಗಣೇಶನಿಗೆ ವಂದಿಸಿ ಮತ್ತೆ ನಾಲ್ಕು ಮೆಟ್ಟಿಲೇರಿದರೆ, ಸುವರ್ಣವರ್ಣದ ಭವ್ಯವಾದ ಗರ್ಭಗೃಹದಲ್ಲಿ ದೇವಸೇನಾ, ವಲ್ಲಿ ಸಹಿತನಾದ ಮಯೂರವಾಹನ ಷಣ್ಮುಖನ ಸುಂದರ ವಿಗ್ರಹವಿದೆ.

Rajarajeswarinagar, Subramanya temple,   Rajeswarinagar, our temples, ourtemples.in, Karnataka temples,  kannadaratna.com kannada, temples of Karnataka, ಕನ್ನಡರತ್ನ.ಕಾಂ, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು.1995ರಲ್ಲಿ ದಕ್ಷಿಣಾಮ್ನೇಯ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥರಿಂದ ಶಿಲಾನ್ಯಾಸ ನಡೆದ ಈ ದೇವಾಲಯ ನಿರ್ಮಾಣಕಾರ್ಯ 2007ರಲ್ಲಿ ಪೂರ್ಣಗೊಂಡು, ಮೇ 13ರಂದು ಭಾರತೀ ತೀರ್ಥರ ಅಮೃತ ಹಸ್ತದಿಂದಲೇ ಪ್ರತಿಷ್ಠಾಪನೆ ಕಾರ್ಯವೂ ನೆರವೇರಿತು.

ಇಲ್ಲಿ ಶೈವಾಗಮದ ರೀತ್ಯ ಪೂಜೆ ನಡೆಯುತ್ತದೆ. ಸುಬ್ರಹ್ಮಣ್ಯ ಷಷ್ಟಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ಈ ಸುಂದರವಾದ ದೇವಾಲಯದ ಕಲ್ಪನೆ, ಸೃಷ್ಟಿ ಹಾಗೂ ಕಾರ್ಯರೂಪಕ್ಕೆ ತಂದ ಹಿರಿಮೆ ಡಾ. ಆರ್. ಅರುಣಾಚಲಂ ಅವರಿಗೆ ಸಲ್ಲುತ್ತದೆ.

ಮಾರ್ಗ: ರಾಜರಾಜೇಶ್ವರಿ ದೇವಾಲಯದಿಂದ ಅನತಿ ದೂರದಲ್ಲೇ ಈ ದೇವಾಲಯವಿದೆ. ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಸಾಗಿ, ಎಡಕ್ಕೆ ತಿರುಗಿದರೆ ಸುಬ್ರಹ್ಮಣ್ಯ ದೇವಾಲಯ ಕಾಣಿಸುತ್ತದೆ.

ಮುಖಪುಟ /ನಮ್ಮದೇವಾಲಯಗಳು