ಮುಖಪುಟ /ನಮ್ಮದೇವಾಲಯಗಳು   

ನಗರ್ತಪೇಟೆಯ ರಾಮಲಿಂಗೇಶ್ವರ ದೇವಾಲಯ

*ಟಿ.ಎಂ.ಸತೀಶ್

ನಗರ್ತಪೇಟೆ ರಾಮಲಿಂಗೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು,

ನಗರ್ತಪೇಟೆಯ ಮಕ್ಕಳ ಬಸವಣ್ಣ ಬೀದಿಯಲ್ಲಿರುವ ಪುರಾತನ ದೇಗುಲವೇ ರಾಮಲಿಂಗೇಶ್ವರಸ್ವಾಮಿ ದೇವಾಲಯ. ಈ ದೇವಾಲಯ ಹಲವು ವೈಶಿಷ್ಟ್ಯಗಳಿಂದ ಕೂಡಿದ ಪವಿತ್ರ ಪುಣ್ಯತಾಣ. ಹಿಂದೆ ಬಸೆಟ್ಟಿ ಪೇಟೆ ಎಂದು ಖ್ಯಾತವಾಗಿದ್ದ ಇಲ್ಲಿ ಸುಮಾರು ೨೫೦ ವರ್ಷಗಳ ಹಿಂದೆ ರಾಮಲಿಂಗೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ.

ನಂತರ ೧೯೩೬ರಲ್ಲಿ  ದೇವಾಲಯವನ್ನು ಶ್ರೀ ಲಿಂಗಣ್ಣ ಮತ್ತು ಗೊರಪ್ಪ ಅವರು ಜೀರ್ಣೋದ್ಧಾರ ಮಾಡಿದರೆಂದು ದಾಖಲೆಗಳಿಂದ ತಿಳಿದುಬರುತ್ತದೆ. ವಿಶಾಲವಾದ ಈ ದೇವಾಲಯಕ್ಕೆ ವಿಜಯನಗರ ಶೈಲಿಯ ಮಹಾದ್ವಾರವಿದೆ. ದೇವಾಲಯದ ಮೆಟ್ಟಿಲು ಏರುತ್ತಿದ್ದಂತೆಯೇ ಎಡ ಭಾಗದಲ್ಲಿ ರಾಮಲಿಂಗಸ್ವಾಮಿಗಳ ಕಂಚಿನ ಪುತ್ಥಳಿ ಹಾಗೂ ಬಲ ಭಾಗದಲ್ಲಿ ನವಗ್ರಹಗಳ ದೇವಾಲಯ ಕಾಣಿಸುತ್ತದೆ.

ದ್ವಾರಕ್ಕೆ ಎದುರು ಭಾಗದಲ್ಲಿ ಮೂರು ಗರ್ಭಗೃಹಗಳಿದ್ದು ಪ್ರಧಾನ ಗರ್ಭಗುಡಿಯಲ್ಲಿ ರಾಮಲಿಂಗೇಶ್ವರನ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಲಿಂಗದ ಎದುರು ನಂದಿಯ ಮೂರ್ತಿಯಿದೆ. ಶಿವನ ಎಡ ಭಾಗದಲ್ಲಿ ತಾಯಿ ಪಾರ್ವತಿ ಹಾಗೂ ಬಲ ಭಾಗದಲ್ಲಿ ವಿನಾಯಕನ ಮೂರ್ತಿಯಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಹಾಗೂ ಗರ್ಭಗೃಹದ ಪ್ರವೇಶದಲ್ಲಿ ದ್ವಾರಪಾಲಕರ ಮೂರ್ತಿಗಳಿವೆ.

ನಗರ್ತಪೇಟೆ ರಾಮಲಿಂಗೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ದೇವಾಲಯದ ಪ್ರಾಕಾರದಲ್ಲಿ ರಾಮಲಿಂಗೇಶ್ವರನ ಹೊರತಾಗಿ ಇತರ ನಾಲ್ಕು ಲಿಂಗಗಳಿದ್ದು ಇದನ್ನು ಪಂಚಲಿಂಗ ದೇವಾಲಯವೆಂದೂ ಜನ ಹೇಳುತ್ತಾರೆ.

ಈ ದೇವಾಲಯಕ್ಕೆ ಮಕ್ಕಳ ಬಸವಣ್ಣ ದೇವಾಲಯ ಎಂಬ ಮತ್ತೊಂದು ಹೆಸರಿದೆ. ಇದಕ್ಕೆ ಈ ಹೆಸರು ಬಂದಿದ್ದು ಹೇಗೆ ಗೊತ್ತೆ. ಹಿಂದೆ ಈ ದೇವಾಲಯ ಬಸವನ ದೇವಾಲಯವಾಗಿತ್ತು. ಈ ಪ್ರದೇಶದಲ್ಲಿ ಯಾರದೇ ಮನೆಯಲ್ಲಿ ಮಕ್ಕಳು ತಂಟಾಟ ಮಾಡಿದರೆ, ಗಲಾಟೆ ಮಾಡಿದರೆ, ರಚ್ಚೆ ಹಿಡಿದರೆ, ಹಸು ಕಂದಮ್ಮಗಳು ಅಳು ನಿಲ್ಲಿಸದಿದ್ದರೆ ಅಂಥ ಮಕ್ಕಳನ್ನು ತಂದು ಈ ಬಸವಣ್ಣನ ದೇವಾಲಯದಲ್ಲಿ ಬಿಡುತ್ತಿದ್ದರಂತೆ. ಆಗ ಮಕ್ಕಳು ತಮ್ಮ ರಚ್ಚೆ, ಅಳು ನಿಲ್ಲಿಸುತ್ತಿದ್ದರು. ಮಕ್ಕಳನ್ನು ಸಲಹುತ್ತಿದ್ದ ದೇಗುಲ ಮಕ್ಕಳ ಬಸವನ ಗುಡಿಯಾಗಿದೆ.

ನಂತರ ತಮಿಳುನಾಡು ಮೂಲದ ರಾಮಲಿಂಗೇಶ್ವರ ಸ್ವಾಮಿಗಳು ಇಲ್ಲಿ ರಾಮಲಿಂಗೇಶ್ವರ ದೇವಾಲಯ ಸ್ಥಾಪಿಸಿದರೆಂದು ಹೇಳಲಾಗುತ್ತದೆ. ದೇವಾಲಯದ ಪ್ರಾಕಾರದಲ್ಲಿ ಶ್ರೀವಲ್ಲಿ ಮತ್ತು ಸಮೇತನಾದನಗರ್ತಪೇಟೆ ರಾಮಲಿಂಗೇಶ್ವರ ದೇವಾಲಯ, kannadaratna.com, our temples, ourtemples.in, sharadhe, ನಮ್ಮ ದೇವಾಲಯಗಳು, ಕರ್ನಾಟಕದ ದೇವಾಲಯಗಳು, ಸುಬ್ರಹ್ಮಣ್ಯಸ್ವಾಮಿ ಗುಡಿ ಇದೆ. ದೇವಾಲಯದ ಪ್ರಾಕಾರದಲ್ಲಿ ಸುಂದರಮೂರ್ತಿ ಮತ್ತ  ಶ್ರೀ ಅಪ್ಪರ್ ಅವರ ಕೃಷ್ಣ ಶಿಲೆಯ ಮೂರ್ತಿಗಳಿವೆ.

ನವಗ್ರಹಗಳ ಎದುರು ಶ್ರೀಶನೇಶ್ಚರ ಸ್ವಾಮಿಯ ವಾಹನ ಕಾಗೆಯ ವಿಗ್ರಹವಿದ್ದು, ಅದರ ಮುಂದೆ ಎಳ್ಳಿನ ದೀಪ ಹಚ್ಚಲು ಒರಳಿನಂತೆ ಕಲ್ಲನ್ನು ಕಡೆಯಲಾಗಿದೆ. ಇದರ ಎದುರು ಅಪರೂಪದ ಆನೆಯ ವಿಗ್ರಹವಿದೆ. ಆನೆಯ ಹೆಗಲ ಮೇಲೆ ದೀಪ ಹಚ್ಚಲು ಸ್ತಂಭ ನಿರ್ಮಿಸಲಾಗಿದೆ. ನಿತ್ಯ ದೇವಾಲಯದಲ್ಲಿ ಶೈವಾಗಮ ಸೂತ್ರದಂತೆ ಪೂಜೆ ಪುನಸ್ಕಾರ ನಡೆಯುತ್ತದೆ. ಪ್ರತಿ ತಿಂಗಳು ಪೌರ್ಣಿಮೆಯ ದಿನ ಸತ್ಯನಾರಾಯಣ ಪೂಜೆ ಹಾಗೂ ಸಂಕಷ್ಟ ಚತುರ್ಥಿಯಂದು ಸಂಕಷ್ಟ ಹರ ಗಣಪತಿ ಪೂಜೆ ನಡೆಯುತ್ತದೆ.

ಪ್ರತಿ ವರ್ಷ ಭಾರತ ಪೌರ್ಣಿಮೆಯ ದಿನ ಇಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ಹಾಗೂ ಧನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನವರಾತ್ರಿಯಲ್ಲಿ ಹತ್ತೂ ದಿನಗಳ ಕಾಲ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ೧೯೮೮ರಲ್ಲಿ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೇವಾಲಯ ಟ್ರಸ್ಟ್‌ನ ಗೌರಿ ಶಂಕರ್ ಅವರನ್ನು ೯೮೮೦೭೪೭೪೭೫ ಮೂಲಕ ಸಂಪರ್ಕಿಸಬಹುದು.

ಮುಖಪುಟ; /ನಮ್ಮದೇವಾಲಯಗಳು