ಮುಖಪುಟ /ನಮ್ಮದೇವಾಲಯಗಳು 

ಉಪ್ಪಿನಂಗಡಿಯ ಸಹಸ್ರಲಿಂಗ ದೇವಳ

ಮಧ್ಯಮ ಪಾಂಡವ ಭೀಮನಿಗೆ ಗರ್ವಭಂಗವಾದ ಸ್ಥಳ 

*ಟಿ.ಎಂ. ಸತೀಶ್

Gayapada, Sahasralinga temple, Uppinangadi, Mangalore, South canara, Dakshinakannada, Kumara Dhara, Netravati, kannadaratna.com, ourtemples.in, T.M.Satish, Journalist, ಪುತ್ತೂರು - ಬೆಳ್ತಂಗಡಿ ರಸ್ತೆಯಲ್ಲಿ ಕುಮಾರಧಾರ - ನೇತ್ರಾವತಿ ಸಂಗಮ ಸ್ಥಳದಲ್ಲಿರುವ ಕ್ಷೇತ್ರವೇ ಉಪ್ಪಿನಂಗಡಿ. ದಕ್ಷಿಣ ಕಾಶಿ, ಗಯಾಪದ ಕ್ಷೇತ್ರ ಎಂದೂ ಖ್ಯಾತವಾದ ಉಪ್ಪಿನಂಗಡಿ ಪುರಾಣ ಪ್ರಸಿದ್ಧ ಕ್ಷೇತ್ರ. ಇಲ್ಲಿರುವ ಸಹಸ್ರ ಲಿಂಗ ದೇವಾಲಯದೊಂದಿಗೆ ಮಹಾಭಾರತದ ನಂಟೂ ಇದೆ.

ದ್ವಾಪರಯುಗದ ಪಾಂಡವರಲ್ಲಿ ಮಧ್ಯಮ ಎಂದೇ ಖ್ಯಾತನಾಗಿದ್ದ ಬಲಭೀಮನ ಗರ್ವಭಂಗವಾಗಿದ್ದೇ ಇಲ್ಲಿ ಎಂದು ಸ್ಥಳ ಪುರಾಣ ಹೇಳುತ್ತದೆ. ಇದಕ್ಕೆ ಮೋಕ್ಷ ಕ್ಷೇತ್ರ ಎಂಬ ಹೆಸರೂ ಇದೆ. ವಾರಾಣಸಿ (ಕಾಶಿ)ಯಲ್ಲಿ ಇರುವಂತೆ ಇಲ್ಲಿ ಕೂಡ ಶಿವ, ಕಾಳಿ ಹಾಗೂ ವಿರಭದ್ರರ ದೇವಾಲಯಗಳಿವೆ. ಅಲ್ಲಿ ಗಂಗೆ ಯಮುನಾ ನದಿಗಳು ಸಂಗಮವಾಗಿ ಕಾಶಿ ಪ್ರಯಾಗ ಎನಿಸಿದರೆ, ಇಲ್ಲಿ ಕುಮಾರಧಾರ ಮತ್ತು ನೇತ್ರಾವತಿ ಸಂಗಮವಾಗಿ ಗಯಾಪದ ಎನಿಸಿಕೊಂಡಿದೆ. ಕಾಶಿ ಮೋಕ್ಷ ಕ್ಷೇತ್ರದ ಶಿರವಾದರೆ, ಉಪ್ಪಿನಂಗಡಿ ಮೋಕ್ಷ ಕ್ಷೇತ್ರದ ಪಾದವಂತೆ. ಹೀಗಾಗಿ ಇದಕ್ಕೆ ಗಯಾಪದ ಎಂಬ ಹೆಸರು. ಇಲ್ಲಿ ಬಂದು ಹಿರಿಯರಿಗೆ ಪಿಂಡ ಪ್ರದಾನ ಮಾಡಿದರೆ ಸದ್ಗತಿ ದೊರಕುತ್ತದೆ ಎಂಬ ನಂಬಿಕೆ ಇದೆ.  

Gayapada, Sahasralinga temple, Uppinangadi, Mangalore, South canara, Dakshinakannada, Kumara Dhara, Netravati, kannadaratna.com, ourtemples.in, T.M.Satish, Journalist, ಇಲ್ಲಿ, ಕೇರಳ, ದಕ್ಷಿಣ ಕನ್ನಡದ ಪ್ರಾಚೀನ ದೇವಾಲಯ ವಾಸ್ತುವಿನ ರೀತ್ಯ ನಿರ್ಮಾಣಗೊಂಡಿರುವ ಈ ದೇವಾಲಯ, ಪ್ರಕೃತಿ ರಮಣೀಯ ಬೆಟ್ಟಗುಡ್ಡಗಳ ಸಾಲಿನಲ್ಲಿ ಹಾಗೂ ನದಿಯ ತಟದಲ್ಲಿರುವ ವಿಶಾಲವಾದ ಪ್ರದೇಶದಲ್ಲಿರುವ ಮನೋಹರ ದೇವಾಲಯ.

ಈ ದೇವಾಲಯವನ್ನು ಕಲ್ಲು, ಮರದ ಹಲಗೆ, ಇಟ್ಟಿಗೆ, ಸಿಮೆಂಟ್ ಹಾಗೂ ಹೆಂಚಿನಿಂದ ನಿರ್ಮಿಸಲಾಗಿದೆ. ಗರ್ಭಗೃಹದ ಮೇಲೆ ಭವ್ಯವಾದ ಗೋಪುರವಿದೆ. ಕಳಶಗಳೂ ಇವೆ. ದೇವಾಲಯದ ಪ್ರವೇಶ ದ್ವಾರದಿಂದ ಒಳ ಹೋದರೆ ದೂರದೂರದ ಊರುಗಳಿಂದ ಹಿಂದೆ ನಡೆದೇ ಬರುತ್ತಿದ್ದ ಯಾತ್ರಿಕರು ವಿಶ್ರಾಂತಿ ತೆಗೆದುಕೊಳ್ಳಲೆಂದೇ ನಿರ್ಮಿಸಿದ ಸುಂದರ ಕೆತ್ತನೆಗಳ ಕಲ್ಲಿನ ಕಂಬಗಳಿಂದ ಕೂಡಿದ ಜಗಲಿ ಮಂಟಪ ಇದೆ. ಕಂಬಗಳಲ್ಲಿ ಗಣಪ, ಸುಬ್ರಹ್ಮಣ್ಯ, ನಂದಿ, ಋಷಿಮುನಿಗಳ, ದೇವತೆಗಳ ಪ್ರತಿಮೆಗಳಿವೆ. ಇಲ್ಲಿರುವ ಎತ್ತರವಾದ ನಂದಿಕಂಬ ಮನೋಹರವಾಗಿದೆ. ಮಂಟಪದ ಮೆಟ್ಟಿಲು ಇಳಿದರೆ, ಎದುರುಗಡೆ ಕೋನಾಕಾರದ ಛಾವಣಿಯ ಕಲ್ಲಿನ  ಮಂಟಪವಿದೆ. Gayapada, Sahasralinga temple, Uppinangadi, Mangalore, South canara, Dakshinakannada, Kumara Dhara, Netravati, kannadaratna.com, ourtemples.in, T.M.Satish, Journalist, ಹೊಯ್ಸಳರ ದೇವಾಲಯಗಳಲ್ಲಿನ ಭುವೇಶ್ವರಿಯ ಛಾವಣಿಗಳಲ್ಲಿ ನವಗ್ರಹಗಳ ಕಲ್ಲಿನ ಕೆತ್ತನೆ ಇರುವ ರೀತಿಯಲ್ಲೇ ಇಲ್ಲಿನ ಛಾವಣಿಯಲ್ಲಿ ಮರದ ಹಲಗೆಗಳಲ್ಲೇ ಕೆತ್ತಲಾಗಿರುವ ಸುಂದರ ನವಗ್ರಹಗಳ ಹಾಗೂ ಅಲಂಕಾರಿಕ ಕೆತ್ತನೆಯೂ ಇದೆ.

ಇನ್ನು ಪ್ರಧಾನ ಪ್ರವೇಶ ದ್ವಾರಕ್ಕೆ ನೇರವಾಗಿ ಎದುರುಗಡೆ ಕಲ್ಲಿನಿಂದ ನಿರ್ಮಿಸಿರುವ ಸುಂದರ ಗರ್ಭಗೃಹದ ಎಡಬಲದಲ್ಲಿ ದ್ವಾರಪಾಲಕರ ಪುಟ್ಟ ಕೃಷ್ಣವರ್ಣದ ವಿಗ್ರಹಗಳಿವೆ. ಗರ್ಭಗೃಹದ ದ್ವಾರದ ಮುಂದೆ ನಂದಿಯ ವಿಗ್ರಹವಿದೆ. ಗರ್ಭಗೃಹದಲ್ಲಿ ಸಹಸ್ರಲಿಂಗನ ಶಿವಲಿಂಗವಿದೆ. ಈ ಲಿಂಗಕ್ಕೆ ದಕ್ಷಿಣ ಕನ್ನಡ ದೇವವಾಸ್ತು ಶೈಲಿಯ ಮುಖವಾಡವಿದೆ. ಪುಷ್ಪಾಲಂಕಾರದಲ್ಲಿ ಈ ದೇವರ ಸೊಬಗು ನೂರ್ಮಡಿಯಾಗುತ್ತದೆ. ಭಕ್ತಿಭಾವ ಉಕ್ಕುತ್ತದೆ.

ದೇವಾಲಯಕ್ಕೆ ವಿಶಾಲ ಪ್ರದಕ್ಷಿಣ ಪಥವೂ ಇದೆ. ಈ ಪ್ರದಕ್ಷಿಣಾ ಪಥದಲ್ಲಿ ಸಾಗಿದರೆ ಪರಿವಾರ ದೇವತೆಗಳನ್ನು ನೋಡಬಹುದು. ಮಹಾಕಾಳಿ ಮತ್ತು ಕಾಲಬೈರವನ ಗುಡಿಗಳೂ ಇವೆ. ಮಹಾಕಾಳಿ ದೇವಾಲಯದ ಮುಂದೆ ಗದೆ ಹಿಡಿದ ದ್ವಾರ ಪಾಲಿಕೆಯರ ವಿಗ್ರಹಗಳಿವೆ. ಈ ಗುಡಿಯಲ್ಲಿರುವ ಮಹಾಕಾಳಿಯ ವಿಗ್ರಹ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ಆಕರ್ಷಕವಾಗಿದೆ.

ಹೆಚ್ಚಿನ ಗದ್ದಲ, ಗೌಜು ಇಲ್ಲದ ಪ್ರಶಾಂತ ಸ್ಥಳದಲ್ಲಿರುವ ಈ ದೇವಾಲಯದಲ್ಲಿ ಕೆಲಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ.

ಉಪ್ಪಿನಂಗಡಿಯಿಂದ ಪಕ್ಕದಲ್ಲೇ ಸೌತಡ್ಕ ಬಯಲು ಗಣಪತಿ, ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ಹಾಗೂ ಕುಕ್ಕೆಯ ಸುಬ್ರಹ್ಮಣ್ಯ ದೇವರನ್ನೂ ನೋಡಿ ಬರಬಹುದು.  

ಮುಖಪುಟ /ನಮ್ಮದೇವಾಲಯಗಳು